Site icon Vistara News

Bank of Baroda: ಬ್ಯಾಂಕ್ ಆಫ್ ಬರೋಡಾ ಗ್ರಾಹಕರ ದುಡ್ಡು ಎತ್ತಿದ ಏಜೆಂಟರು! ನಿಮ್ಮ ಖಾತೆ ಚೆಕ್ ಮಾಡ್ಕೊಳ್ಳಿ

Bank of Baroda

ನವದೆಹಲಿ: ಬ್ಯಾಂಕ್ ಆಫ್ ಬರೋಡಾ (Bank of Baroda) ಸಹವರ್ತಿಗಳು, ತಮ್ಮ ಸ್ವಂತ ಮೊಬೈಲ್ ಸಂಖ್ಯೆಯನ್ನು (Mobile Numbers) ಗ್ರಾಹಕರ ಖಾತೆಗಳಿಗೆ ಲಿಂಕ್ ಮಾಡುವ ಮೂಲಕ, ಅವರ ಖಾತೆಗಳಿಂದ ಹಣವನ್ನು ಲಪಟಾಯಿಸಿದ ಘಟನೆಗಳು ವರದಿಯಾಗಿವೆ ಎಂದು ಮಾಧ್ಯಮಗಳು ಸುದ್ದಿ ಮಾಡಿವೆ. ಮೊನ್ನೆಯಷ್ಟೇ, ಆರ್‌ಬಿಐ(Reserve Bank of India), ಆ್ಯಪ್‌ಗೆ (mobile app) ಹೊಸ ಗ್ರಾಹಕರನ್ನು ಸೇರಿಸದಂತೆ ಸೂಚಿಸಿತ್ತು. ಈಗ, ಬ್ಯಾಂಕ್‌ ಸಹವರ್ತಿಗಳೇ ತಮ್ಮ ನಂಬರ್ ಮೂಲಕ ಗ್ರಾಹಕರ ಹಣವನ್ನು ದುರ್ಬಳಕೆ (Fund Stole) ಮಾಡಿಕೊಳ್ಳುತ್ತಿರುವುದು ಬಯಲಾಗಿದೆ.

ಗ್ರಾಹಕರ ಖಾತೆಗಳನ್ನು ತಮ್ಮ ಫೋನ್ ಸಂಖ್ಯೆಗಳಿಗೆ ಸಂಪರ್ಕಿಸಲು ಬ್ಯಾಂಕ್‌ನ ಐಟಿ ವ್ಯವಸ್ಥೆಯಲ್ಲಿನ ಲೋಪಗಳನ್ನು ಬ್ಯಾಂಕ್ ಉದ್ಯೋಗಿಗಳು ಬಳಸಿಕೊಂಡಿದ್ದಾರೆ ಎಂದು ಎರಡು ಮಾಧ್ಯಮ ಸಂಸ್ಥೆಗಳು ವರದಿ ಮಾಡಿದ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಇಂಡಿಯಾ ಮೂರು ತಿಂಗಳ ಹಿಂದೆ ಲೆಕ್ಕಪರಿಶೋಧನೆಗೆ ಆದೇಶಿಸಿತ್ತು. ಬ್ಯಾಂಕ್‌ನಲ್ಲಿ ವ್ಯಾಪಕವಾಗಿರುವ ಈ ಪದ್ಧತಿಯು ಉದ್ಯೋಗಿಗಳು ಮತ್ತು ಬ್ಯಾಂಕ್ ಸಹವರ್ತಿಗಳಿಗೆ ಮೊಬೈಲ್ ಬ್ಯಾಂಕಿಂಗ್ ಮೂಲಕ ಗ್ರಾಹಕರ ಖಾತೆಯಿಂದ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ ಎಂದು ವರದಿಗಳು ಎಚ್ಚರಿಸಿದೆ.

ಬ್ಯಾಂಕ್ ಈಗಾಗಲೇ ತನ್ನ ಆಂತರಿಕ ಲೆಕ್ಕಪರಿಶೋಧನೆಯನ್ನು ಪೂರ್ಣಗೊಳಿಸಿದ್ದು, ತಪ್ಪಾದ ಮೊಬೈಲ್‌ ನಂಬರ್‌ಗಳನ್ನು ಅಟ್ಯಾಚ್ ಮಾಡುವ ಮೂಲಕ ನೂರಾರು ಖಾತೆಗಳಿಂದ ಹಣವನ್ನು ಕದ್ದಿರುವ ಅನೇಕ ಉದಾಹರಣೆಗಳನ್ನು ಕಂಡುಕೊಂಡಿದೆ. ಬ್ಯಾಂಕ್ ಆಫ್ ಬರೋಡದ ಏಳು ಸಾವಿರ ಶಾಖೆಗಳಿಂದ ಸುಮಾರು 4.2 ಲಕ್ಷ ಖಾತೆಗಳಿವೆ. ಬ್ಯಾಂಕ್ ಆ್ಯಪ್‌ ಮೂಲಕ, ಬ್ಯಾಂಕಿನ ಕೆಲವರು ತಮ್ಮ ಮೊಬೈಲ್‌ ನಂಬರ್‌ಗಳನ್ನು ಗ್ರಾಹಕರ ಖಾತೆಗೆ ಅಟ್ಯಾಚ್ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Bank of Baroda: ಮೊಬೈಲ್ ಆಪ್‌ಗೆ ಹೊಸ ಗ್ರಾಹಕರನ್ನು ಸೇರಿಸಬೇಡಿ! ಬ್ಯಾಂಕ್ ಆಫ್‌ ಬರೋಡಾಗೆ ಆರ್‌ಬಿಐ ಆದೇಶ

ಭಾರತದ ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರ ಖಾತೆಗಳಿಂದ ಹಣವನ್ನು ಕದಿಯಲು ತನ್ನ ಏಜೆಂಟ್‌ಗಳಿಗೆ ಸರಳ ಮತ್ತು ಸುಲಭಗೊಳಿಸಿದೆ. ಈ ಪೈಕಿ ಕೆಲವರು 362 ಗ್ರಾಹಕರಿಂದ 22 ಲಕ್ಷ ರೂಪಾಯಿಗಳನ್ನು ಕದ್ದಿದ್ದಾರೆ ಎಂದು ಆಂತರಿಕ ಲೆಕ್ಕಪರಿಶೋಧನಾ ವರದಿಗಳು ಮತ್ತು ಬ್ಯಾಂಕ್‌ನ ದಾಖಲೆಗಳು ಬಹಿರಂಗಪಡಿಸಿವೆ ಎಂದು ಮಾಧ್ಯಮಗಳ ವರದಿಯಲ್ಲಿ ತಿಳಿಸಲಾಗಿದೆ.

6 ಗ್ರಾಹಕರು ತಲಾ 110,000 ರೂಪಾಯಿ ಕಳೆದುಕೊಂಡಿದ್ದಾರೆ. ಮತ್ತೆ ಒಬ್ಬರು 177,000 ರೂ. ನಷ್ಟ ಮಾಡಿಕೊಂಡಿದ್ದಾರೆ. ಒಬ್ಬ ಏಜೆಂಟ್ 390,000 ರೂಪಾಯಿ ಎಗರಿಸಿದದಾರೆ. ಅಲ್ಲದೇ, ಬ್ಯಾಂಕ್ ಏಜೆಂಟ್‌ಗಳು ಆ್ಯಪ್ ಮೂಲಕ ನೋಂದಣಿ ಮಾಡಿದ ಒಟ್ಟು ಖಾತೆಗಳ ಪೈಕ 422,000 ಖಾತೆಗಳನ್ನು ತಪ್ಪು ಮಾಹಿತಿಯ ಮೂಲಕ ರಿಜಿಸ್ಟರ್ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version