ಗುವಾಹಟಿ: ನಿಷೇಧಿತ ಸಂಘಟನೆಯ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ವಿದ್ಯಾರ್ಥಿ ಸಂಘಟನೆಯ ನಾಯಕನೊಬ್ಬನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಮ್ ಪೊಲೀಸರ ತಂಡವು ಅಮಿರ್ ಹಮ್ಜಾ ಅವರನ್ನು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ನಾಯಕನನ್ನು ಪೊಲೀಸ್ ತಂಡವು ಬಂಧಿಸಿದೆ ಎಂದು ಅಸ್ಸಾಮ್ ಪೊಲೀಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬಂಧಿತ ವಿದ್ಯಾರ್ಥಿ ನಾಯಕನನ್ನು ಗುವಾಹಟಿಯ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ನಾಳೆ ಹಾಜರುಪಡಿಸಲಾಗುತ್ತಿದೆ.
ಹಮ್ಜಾ ಅಸ್ಸಾಮ್‌ನ ಬಕ್ಸಾ ಜಿಲ್ಲೆಯ ವಾಸಿ. ಕೇಂದ್ರ ಸರ್ಕಾರವು ಪಿಎಫ್ಐ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿದ ಬೆನ್ನಲ್ಲೇ, ಹಮ್ಜಾ ಅಸ್ಸಾಮ್‌ನಿಂದ ತಲೆಮರೆಸಿಕೊಂಡಿದ್ದ. ಈ ವೇಳೆ, ಪೊಲೀಸರು ಹಮ್ಜಾ ಮನೆಯನ್ನು ಶೋಧಿಸಿದಾಗ ಸಾಕಷ್ಟು ನಿಷೇಧಿತ ಸಾಹಿತ್ಯ ಹಾಗೂ ಪೋಸ್ಟರ್‌ಗಳು ಲಭ್ಯವಾಗಿವೆ. ಇದರಲ್ಲಿ ನಾಗರಿಕ ಕಾಯ್ದೆ ವಿರೋಧಿ ಬ್ಯಾನರ್, ಬಿಜೆಪಿ ಮತ್ತು ಆರೆಸ್ಸೆಸ್, ಎಬಿವಿಪಿ ವಿರೋಧಿಸುವ ಹಾಗೂ ಹಿಜಾಬ್ ಬೆಂಬಲಿಸುವ ಪೋಸ್ಟರ್‌ಗಳಿವೆ.
ಕೇಂದ್ರ ಸರ್ಕಾರ ಪಿಎಫ್ಐ ನಿಷೇಧಿಸಿದ ಬೆನ್ನಲ್ಲೇ ಅಸ್ಸಾಮ್‌ನಲ್ಲಿ ಈವರೆಗೆ ಸುಮಾರು 40 ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪಿಎಫ್ಐ ಸಂಘಟನೆ ಚಾಚಿಕೊಂಡಿತ್ತು.
ಇದನ್ನೂ ಓದಿ | PFI Banned | ಭಯೋತ್ಪಾದನೆ, ದೇಶದ್ರೋಹ, ಸೌಹಾರ್ದಕ್ಕೆ ಧಕ್ಕೆ ಪಿಎಫ್ಐ ನಿಷೇಧಕ್ಕೆ ಕಾರಣ! ಗೆಜೆಟ್ ಡಿಟೇಲ್ಸ್ ಓದಿ