ನವದೆಹಲಿ: ಅಮೆರಿಕದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾರತದಲ್ಲಿನ ಮುಸ್ಲಿಮರ (indian Muslim) ಕುರಿತು ನೀಡಿರುವ ಉತ್ತರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಸಮರ್ಥಿಸಿಕೊಂಡಿದ್ದಾರೆ. ಈ ಮಧ್ಯೆ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ (barack obama) ಅವರು ಭಾರತದಲ್ಲಿ ಮುಸ್ಲಿಮರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ಅವರ ಈ ಆರೋಪಕ್ಕೆ ತಿರುಗೇಟು ನೀಡಿರುವ ನಿರ್ಮಲಾ ಸೀತಾರಾಮಾನ್ ಅವರು, ಬರಾಕ್ ಒಬಾಮಾ ಅವರು ಅಧ್ಯಕ್ಷರಾಗಿದ್ದಾಗ 6 ಮುಸ್ಲಿಮ್ ದೇಶಗಳ ಮೇಲೆ ಬಾಂಬ್ ಹಾಕಿದ್ದರು ಎಂದು ಹೇಳಿದರು.
ಹಲವು ಚುನಾವಣೆಗಳ ಸೋಲಿನ ಹೊರತಾಗಿಯೂ ಯಾವುದೇ ಆಧಾರಗಳಿಲ್ಲದೇ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಸಮಸ್ಯೆಗಳಲ್ಲದ ವಿಷಯಗಳನ್ನು ಎತ್ತುತ್ತಿವೆ ಎಂದು ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದರು. ಪ್ರಧಾನ ಮಂತ್ರಿಗಳು ಸ್ವತಃ ಅಮೆರಿಕದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸರ್ಕಾರವು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ತತ್ವದ ಮೇಲೆ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ಸಮುದಾಯದ ವಿರುದ್ಧ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಇಲ್ಲಿ ಜನರು ಈ ಚರ್ಚೆಯಲ್ಲಿ ಪಾಲ್ಗೊಂಡಾಗ ಸಮಸ್ಯೆಗಳಲ್ಲದ ವಿಷಯಗಳನ್ನು ಹೈಲೆಟ್ ಮಾಡುತ್ತಾರೆ ಎಂದು ವಿತ್ತ ಸಚಿವೆ ಸೀತಾರಾಮನ್ ಅವರು ಹೇಳಿದರು.
ಈವರೆಗೆ ಸುಮಾರು 13 ರಾಷ್ಟ್ರಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿವೆ. ಈ ಪೈಕಿ ಆರು ರಾಷ್ಟ್ರಗಳು ಮುಸ್ಲಿಮ್ ಬಾಹುಳ್ಯದ ರಾಷ್ಟ್ರಗಳಾಗಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ರಾಜ್ಯ ಮಟ್ಟದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳಾಗಿವೆ. ಅದನ್ನು ನೋಡಿಕೊಳ್ಳುವ ಜನರಿದ್ದಾರೆ. ಕೈಯಲ್ಲಿ ಡೇಟಾ ಇಲ್ಲದೆ ಕೇವಲ ಆರೋಪ ಮಾಡುವುದು ಇವು ಸಂಘಟಿತ ಪ್ರಚಾರಗಳಾಗಿವೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: PM Modi Visit US: ಧಾರ್ಮಿಕ ಬಹುತ್ವವು ಭಾರತ, ಅಮೆರಿಕಕ್ಕೆ ಪ್ರಮುಖ ತತ್ವ; ಮೋದಿಗೆ ಹೇಳಿದ ಬೈಡೆನ್
ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪರವಾಗಿ ಮಾತನಾಡುತ್ತಿರುವಾಗ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತೀಯ ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದರು. ಈ ಬಗ್ಗೆ ನಾನು ಬಹಳ ಸಯಮಂದಿಂದ ಹೇಳುತ್ತಿದ್ದೇನೆ. ಯಾಕೆಂದರೆ, ಇದು ಬೇರೆ ದೇಶಕ್ಕೆ ಸಂಬಂಧಿಸಿದ್ದು. ನಮಗೆ ಅಮೆರಿಕದೊಂದಿಗೆ ಸ್ನೇಹ ಬೇಕು. ಆದರೆ, ಧಾರ್ಮಿಕ ಸ್ವಾತಂತ್ರ್ಯ ಕುರಿತು ನಮ್ಮನ್ನು ಟೀಕಿಸಲಾಗುತ್ತದೆ. ಮಾಜಿ ಅಧ್ಯಕ್ಷರು(ಬರಾಕ್ ಒಬಾಮಾ) ತಮ್ಮ ಅವರ ಆಳ್ವಿಕೆಯಲ್ಲಿ ಆರು ಮುಸ್ಲಿಂ ಬಹುಸಂಖ್ಯಾತ ದೇಶಗಳ ಮೇಲೆ 26,000 ಕ್ಕೂ ಹೆಚ್ಚು ಬಾಂಬ್ ಮಾಡಿದ್ದಾರೆ. ಹಾಗಾಗಿ, ಅವರ ಆರೋಪಗಳನ್ನು ಜನರು ಹೇಗೆ ನಂಬುತ್ತಾರೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಶ್ನಿಸಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.