Connect with us

ದೇಶ

6 ಮುಸ್ಲಿಮ್ ದೇಶಗಳ ಮೇಲೆ 26000 ಬಾಂಬ್ ದಾಳಿ ಮಾಡಿದ ನಾಯಕ! ಒಬಾಮಾಗೆ ನಿರ್ಮಲಾ ಸೀತಾರಾಮನ್ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮುಸ್ಲಿಮರ ಬಗ್ಗೆ ತಾರತಮ್ಯ ನೀತಿ ಅನುಸರಿಸಬಾರದು ಎಂದು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದರು. ಅವರ ಹೇಳಿಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿರುಗೇಟು ನೀಡಿದ್ದಾರೆ.

Published

on

Nirmala Sitaraman

ನವದೆಹಲಿ: ಅಮೆರಿಕದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾರತದಲ್ಲಿನ ಮುಸ್ಲಿಮರ (indian Muslim) ಕುರಿತು ನೀಡಿರುವ ಉತ್ತರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಸಮರ್ಥಿಸಿಕೊಂಡಿದ್ದಾರೆ. ಈ ಮಧ್ಯೆ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ (barack obama) ಅವರು ಭಾರತದಲ್ಲಿ ಮುಸ್ಲಿಮರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ಅವರ ಈ ಆರೋಪಕ್ಕೆ ತಿರುಗೇಟು ನೀಡಿರುವ ನಿರ್ಮಲಾ ಸೀತಾರಾಮಾನ್ ಅವರು, ಬರಾಕ್ ಒಬಾಮಾ ಅವರು ಅಧ್ಯಕ್ಷರಾಗಿದ್ದಾಗ 6 ಮುಸ್ಲಿಮ್ ದೇಶಗಳ ಮೇಲೆ ಬಾಂಬ್ ಹಾಕಿದ್ದರು ಎಂದು ಹೇಳಿದರು.

ಹಲವು ಚುನಾವಣೆಗಳ ಸೋಲಿನ ಹೊರತಾಗಿಯೂ ಯಾವುದೇ ಆಧಾರಗಳಿಲ್ಲದೇ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಸಮಸ್ಯೆಗಳಲ್ಲದ ವಿಷಯಗಳನ್ನು ಎತ್ತುತ್ತಿವೆ ಎಂದು ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದರು. ಪ್ರಧಾನ ಮಂತ್ರಿಗಳು ಸ್ವತಃ ಅಮೆರಿಕದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸರ್ಕಾರವು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ತತ್ವದ ಮೇಲೆ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ಸಮುದಾಯದ ವಿರುದ್ಧ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಇಲ್ಲಿ ಜನರು ಈ ಚರ್ಚೆಯಲ್ಲಿ ಪಾಲ್ಗೊಂಡಾಗ ಸಮಸ್ಯೆಗಳಲ್ಲದ ವಿಷಯಗಳನ್ನು ಹೈಲೆಟ್‌ ಮಾಡುತ್ತಾರೆ ಎಂದು ವಿತ್ತ ಸಚಿವೆ ಸೀತಾರಾಮನ್ ಅವರು ಹೇಳಿದರು.

ಈವರೆಗೆ ಸುಮಾರು 13 ರಾಷ್ಟ್ರಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿವೆ. ಈ ಪೈಕಿ ಆರು ರಾಷ್ಟ್ರಗಳು ಮುಸ್ಲಿಮ್ ಬಾಹುಳ್ಯದ ರಾಷ್ಟ್ರಗಳಾಗಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ರಾಜ್ಯ ಮಟ್ಟದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳಾಗಿವೆ. ಅದನ್ನು ನೋಡಿಕೊಳ್ಳುವ ಜನರಿದ್ದಾರೆ. ಕೈಯಲ್ಲಿ ಡೇಟಾ ಇಲ್ಲದೆ ಕೇವಲ ಆರೋಪ ಮಾಡುವುದು ಇವು ಸಂಘಟಿತ ಪ್ರಚಾರಗಳಾಗಿವೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: PM Modi Visit US: ಧಾರ್ಮಿಕ ಬಹುತ್ವವು ಭಾರತ, ಅಮೆರಿಕಕ್ಕೆ ಪ್ರಮುಖ ತತ್ವ; ಮೋದಿಗೆ ಹೇಳಿದ ಬೈಡೆನ್

ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪರವಾಗಿ ಮಾತನಾಡುತ್ತಿರುವಾಗ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತೀಯ ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದರು. ಈ ಬಗ್ಗೆ ನಾನು ಬಹಳ ಸಯಮಂದಿಂದ ಹೇಳುತ್ತಿದ್ದೇನೆ. ಯಾಕೆಂದರೆ, ಇದು ಬೇರೆ ದೇಶಕ್ಕೆ ಸಂಬಂಧಿಸಿದ್ದು. ನಮಗೆ ಅಮೆರಿಕದೊಂದಿಗೆ ಸ್ನೇಹ ಬೇಕು. ಆದರೆ, ಧಾರ್ಮಿಕ ಸ್ವಾತಂತ್ರ್ಯ ಕುರಿತು ನಮ್ಮನ್ನು ಟೀಕಿಸಲಾಗುತ್ತದೆ. ಮಾಜಿ ಅಧ್ಯಕ್ಷರು(ಬರಾಕ್ ಒಬಾಮಾ) ತಮ್ಮ ಅವರ ಆಳ್ವಿಕೆಯಲ್ಲಿ ಆರು ಮುಸ್ಲಿಂ ಬಹುಸಂಖ್ಯಾತ ದೇಶಗಳ ಮೇಲೆ 26,000 ಕ್ಕೂ ಹೆಚ್ಚು ಬಾಂಬ್ ಮಾಡಿದ್ದಾರೆ. ಹಾಗಾಗಿ, ಅವರ ಆರೋಪಗಳನ್ನು ಜನರು ಹೇಗೆ ನಂಬುತ್ತಾರೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಶ್ನಿಸಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ದೇಶ

India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

India Canada Row: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿದೆ.

Published

on

Justin Trudeau

ಟೊರೊಂಟೊ, ಕೆನಡಾ: ಸದ್ಯ ಕೆನಡಾವು ಭಾರತದೊಂದಿಗೆ (Canada and India Relations) ಅತ್ಯಂತ ಸವಾಲಿನ ಸಮಯವನ್ನು ಎದುರಿಸುತ್ತಿದೆ. ಹಾಗಿದ್ದೂ, ರಚನಾತ್ಮಕ ಸಂಬಂಧವನ್ನು (Constructive Relations) ಮುಂದುರಿಸುತ್ತಿರುವುದಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ (Canada PM Justin Trudeau) ಅವರು ಮಂಗಳವಾರ ಹೇಳಿದ್ದಾರೆ. ಖಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಟ್ರೂಡೊ ಅವರ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ(India Canada Row).

ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು, ಭಾರತದಲ್ಲಿ ಕೆನಾಡ ರಾಜತಾಂತ್ರಿಕರನ್ನು ಹೊಂದಿರುವುದು ಮಹತ್ವದ್ದಾಗಿದೆ ಎಂದು ಹೇಳಿದರು. ದಿಲ್ಲಿಯ ಕೆನಡಾ ರಾಜತಾಂತ್ರಿಕ ಕಚೇರಿಯಲ್ಲಿರುವ 62 ಸಿಬ್ಬಂದಿಯ ಪೈಕಿ 41 ಜನರನ್ನು ವಾಪಸ್ ಕೆನಡಾಗೆ ಕರೆಯಿಸಿಕೊಳ್ಳುವಂತೆ ಭಾರತ ಸರ್ಕಾರವು ಹೇಳಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಟ್ರೂಡೋ ಅವರು ಹೇಳಿಕೆಯನ್ನು ನೀಡಿದ್ದಾರೆ.

ನಿಸ್ಸಂಶಯವಾಗಿ, ನಾವು ಇದೀಗ ಭಾರತದೊಂದಿಗೆ ಅತ್ಯಂತ ಸವಾಲಿನ ಸಮಯವನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ ಪ್ರಧಾನಿ ಟ್ರೂಡೋ ಅವರು, ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿಮೆ ಮಾಡುವಂತೆ ದಿಲ್ಲಿ ಹೇಳಿದೆ ಎಂಬ ಮಾಧ್ಯಮ ವರದಿಯ ಬಗ್ಗೆ ಯಾವುದೇ ಟಿಪ್ಪಣಿಯನ್ನು ಅವರು ಮಾಡಲಿಲ್ಲ.

ಈ ಸುದ್ದಿಯನ್ನೂ ಓದಿ: India Canada Row: ʼಇಷ್ಟು ರಾಜತಾಂತ್ರಿಕರು ಇಲ್ಲಿ ಬೇಕಿಲ್ಲ, ವಾಪಸ್‌ ಕರೆಸಿಕೊಳ್ಳಿ!ʼ ಕೆನಡಾಕ್ಕೆ ಮತ್ತೆ ಭಾರತ ತಪರಾಕಿ

ದಿಲ್ಲಿಯ ಕ್ರಮಕ್ಕೆ ಪ್ರತಿಯಾಗಿ ಕೆನಡಾ ಸರ್ಕಾರವು, ಭಾರತೀಯ ರಾಜತಾಂತ್ರಿಕರನ್ನು ಕಿತ್ತು ಹಾಕಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗಾಗಲೇ ಹೇಳಿದಂತೆ ನಾವು ಸಮಸ್ಯೆಯನ್ನು ಹೆಚ್ಚಿಸಲು ಹೋಗುವುದಿಲ್ಲ. ಈ ಅತ್ಯಂತ ಕಷ್ಟದ ಸಮಯದಲ್ಲಿ ಭಾರತದೊಂದಿಗೆ ರಚನಾತ್ಮಕ ಸಂಬಂಧವನ್ನು ಮುಂದುವರಿಸುವಲ್ಲಿ ನಾವು ಮುಖ್ಯವಾದ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು.

ಜೂನ್ 18ರಂದು ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಕಳೆದ ತಿಂಗಳು ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಭಾರತ ಮತ್ತು ಕೆನಡಾ ಮಧ್ಯೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿತ್ತು. ಭಾರತವು ಟ್ರೂಡೋ ಆರೋಪಕ್ಕೆ ಪ್ರತಿಕ್ರಿಯಿಸಿ, ಇದೊಂದು ಆಧಾರ ರಹಿತ ಆರೋಪ ಎಂದು ಹೇಳಿತ್ತು. ಅಲ್ಲದೇ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದ್ದವು.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ದೇಶ

ಎನ್‌ಡಿಎಗೆ ಸೇರಿಸಿಕೊಳ್ಳಿ ಎಂದಿದ್ದ ಕೆಸಿಆರ್; ಮೋದಿ! ಬಿಜೆಪಿ ಜತೆ ಹೋಗಲು ನಮಗೇನು ಹುಚ್ಚು ನಾಯಿ ಕಚ್ಚಿದೆಯಾ; ಕೆಟಿಆರ್

PM Narendra Modi: 2020ರ ಡಿಸೆಂಬರ್‌ನಲ್ಲಿ ಕೆಸಿಆರ್‌ ಅವರು ಎನ್‌ಡಿಎ ಕೂಟಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Published

on

Modi and KTR

ನಿಜಮಾಬಾದ್: ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣ (Telangana Assembly Election) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಭಾರತ್ ರಾಷ್ಟ್ರ ಸಮಿತಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ (CM KCR) ಅವರು 2020ರ ಡಿಸೆಂಬರ್‌ನಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ (NDA) ಸೇರುವ ಮನವಿ ಮಾಡಿಕೊಂಡಿದ್ದರು. ಆದರೆ, ನಾನು ಅವರ ಮನವಿಯನ್ನು ತಿರಸ್ಕರಿಸಿದೆ. ಎನ್‌ಡಿಎಗೆ ಬಿಆರ್‌ಎಸ್ (BRS) ಸೇರಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಈ ಮಧ್ಯೆ, ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೆಸಿಆರ್ ಅವರ ಪುತ್ರರೂ ಆಗಿರುವ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮ ರಾವ್ (KT Rama Rao) ಅವರು, ಎನ್‌ಡಿಎ ಸೇರಲು ನಮಗೇನೂ ಹುಚ್ಚು ನಾಯಿ ಕಚ್ಚಿಲ್ಲ (Mad Dog) ಎಂದು ತಿರುಗೇಟು ನೀಡಿದ್ದಾರೆ.

ನಿಜಮಾಬಾದ್‌ನ ಗಿರಿರಾಜ್ ಕಾಲೇಜ್‌ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇವತ್ತು ಮಹತ್ವದ ರಹಸ್ಯವೊಂದನ್ನು ಬಿಚ್ಚಿಡುತ್ತೇನೆ ಎಂದು ಹೇಳಿದರು. 2020ರ ಡಿಸೆಂಬರ್ ನಡೆದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್ಎಂಸಿ) ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದಿತ್ತು ಮತ್ತು ಯಾವುದೇ ಪಕ್ಷವು ನಿಗಮವನ್ನು ವಶಪಡಿಸಿಕೊಳ್ಳಲು ಸಂಪೂರ್ಣ ಬಹುಮತವನ್ನು ಪಡೆದಿದಿರಲಿಲ್ಲ. ಆಗ ಚುನಾವಣೆ ಮುಗಿದ ಕೂಡಲೇ ಕೆಸಿಆರ್ ನಮ್ಮ ಬೆಂಬಲ ಪಡೆಯಲು ದೆಹಲಿಗೆ ಬಂದಿದ್ದರು ಎಂದು ಹೇಳಿದರು.

ಕೆಸಿಆರ್ ಅವರ ನನಗೆ ಹೂಗುಚ್ಛಗಳನ್ನು ಮತ್ತು ಶಾಲುಗಳನ್ನು ನೀಡಿ ಅಭಿನಂದಿಸಿದರು. ಅವರು ನನ್ನ ಮೇಲೆ ತುಂಬಾ ಪ್ರೀತಿಯನ್ನು ತೋರಿಸಿದರು, ವಾಸ್ತವದಲ್ಲಿ ಅದು ಅವರ ವ್ಯಕ್ತಿತ್ವಕ್ಕೆ ವಿರುದ್ಧವಾದ ನಡವಳಿಕೆಯಾಗಿತ್ತು. ನನ್ನ ನಾಯಕತ್ವದಲ್ಲಿ ದೇಶವು ತ್ವರಿತ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಅವರು ಹೇಳಿದರು. ನಂತರ, ಅವರ ಪಕ್ಷವೂ(ಬಿಆರ್‌ಎಸ್) ಎನ್‌ಡಿಎ ಭಾಗವಾಗಲು ಬಯಸಿದೆ ಎಂದು ಹೇಳಿದರು. ”ಸರ್, ದಯವಿಟ್ಟು ನಮ್ಮನ್ನು ಎನ್‌ಡಿಎಗೆ ತೆಗೆದುಕೊಳ್ಳಿ ಅಂದ್ರು. ನನಗೆ ಆಶ್ಚರ್ಯವಾಯಿತು ಮತ್ತು ಕಾರಣವನ್ನು ಕೇಳಿದೆ. ಜಿಎಚ್‌ಎಂಸಿಯಲ್ಲಿ ಬಿಜೆಪಿಯ ಬೆಂಬಲವನ್ನು ಬಯಸುವುದಾಗಿ ಅವರು ಹೇಳಿದರು” ಪ್ರಧಾನಿ ತಿಳಿಸಿದ್ದಾರೆ.

ಆದರೆ, ನಾನು ಕೆಸಿಆರ್ ಅವರ ಮನವಿಯನ್ನು ತಿರಸ್ಕರಿಸಿದೆ. ಭಾರತೀಯ ಜನತಾ ಪಾರ್ಟಿ ಎಂದಿಗೂ ಬಿಆರ್‌ಎಸ್‌ನೊಂದಿಗೆ ಕೈ ಜೋಡಿಸುವುದಿಲ್ಲ. ಬಿಜೆಪಿ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುವುದರಲ್ಲಿ ಹಿಂಜರಿಕೆ ಇಲ್ಲ. ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಕಿರುಕುಳವನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ನಾವು ತೆಲಂಗಾಣ ಜನರಿಗೆ ಮೋಸ ಮಾಡುವುದಿಲ್ಲ. ಆ 48 ಸ್ಥಾನಗಳೊಂದಿಗೆ ನಾವು ನಮ್ಮ ಪ್ರಯಾಣವನ್ನು ಮುಂದುವರಿಸುತ್ತೇವೆ. ಬಿಆರ್‌ಎಸ್‌ಗೆ ಎನ್‌ಡಿಎಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಮತ್ತು ನಾವು ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈ ಸುದ್ದಿಯನ್ನೂ ಓದಿ: PM Narendra Modi: ಸ್ವಾಮಿ ವಿವೇಕಾನಂದರು ತಂಗಿದ್ದ ಆಶ್ರಮದಲ್ಲಿ ಪ್ರಧಾನಿ ಮೋದಿ ವಾಸ್ತವ್ಯ!

ನಮಗೇನೂ ಹುಚ್ಚು ನಾಯಿ ಕಚ್ಚಿಲ್ಲ; ಕೆಟಿಆರ್

ಬಿಆರ್‌ಎಸ್ ಎನ್‌ಡಿಎ ಭಾಗವಾಗಲು ಮುಂದಾಗಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಅವರು, ಎನ್‌ಡಿಎ ಸೇರಲು ನಮಗೇನು ಹಚ್ಚು ನಾಯಿ ಕಚ್ಚಿದೆಯೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಅತಿ ದೊಡ್ಡ ಸುಳ್ಳಿನ ಪಕ್ಷ ಎಂದು ಹೇಳಿದ ಕೆಟಿಆರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಾಟ್ಸಾಪ್‌ ವಿಶ್ವವಿದ್ಯಾಲಯ ಕುಲಪತಿಯಾಗಿದ್ದಾರೆ. ಪ್ರಧಾನಿ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು.

ಇದಕ್ಕೂ ಮೊದಲು ಪ್ರದಾನಿ ನರೇಂದ್ರ ಮೋದಿ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಿಆರ್‌ಎಸ್ ಹಣ ನೀಡಿತ್ತು ಎಂದು ಹೇಳಿದ್ದರು. ಈ ವಿಷಯವನ್ನು ಪ್ರಸ್ತಾಪಿಸಿದ ಕೆಟಿಆರ್ ಅವರು, ಆ ಹೇಳಿಕೆಯಂತೆ ಕೆಸಿಆರ್ ಅವರು ಎನ್‌ಡಿಎ ಸೇರಲು ಮುಂದಾಗಿದ್ದರು ಎಂಬುದು ಸಂಪೂರ್ಣ ಸುಳ್ಳು ಎಂದು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಟಾಪ್ 10 ನ್ಯೂಸ್

VISTARA TOP 10 NEWS : ಜಾತಿ ಗಣತಿಗೆ ಮೋದಿ ವಿರೋಧ, ಶಿವಮೊಗ್ಗದಲ್ಲಿ ಪೊಲೀಸರಿಗೇ ಬೆದರಿಕೆ ಹಾಕಿದ್ದ ಕಿಡಿಗೇಡಿಗಳು ಮತ್ತಿತರ ದಿನದ ಪ್ರಮುಖ ಸುದ್ದಿಗಳು

VISTARA TOP 10 NEWS: ದೇಶ, ವಿದೇಶಗಳ ಸುದ್ದಿಗಳು, ದಿನವಿಡೀ ನಡೆದ ಪ್ರಮುಖ ಬೆಳವಣಿಗೆಗಳ ಸುತ್ತುನೋಟವೇ Vistara Top10 News

Published

on

Top 10 news

1. ಜಾತಿ ಗಣತಿಯಿಂದ ಹಿಂದೂಗಳಲ್ಲಿ ಒಡಕು ಮೂಡಿಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ
ಜಗದಲ್‌ಪುರ, ಛತ್ತೀಸ್‌ಗಢ: ಜಾತಿ ಗಣತಿಯ (caste census) ಮೂಲಕ ಕಾಂಗ್ರೆಸ್ ಪಕ್ಷವು (Congress Party) ಹಿಂದೂಗಳಲ್ಲಿ ಒಡಕು ಮೂಡಿಸುತ್ತಿದೆ (Dividing Hindus) ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದ್ದಾರೆ. ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ(Chhattisgarh Assembly Election) ನಡೆಯಲಿರುವ ಛತ್ತೀಸ್‌ಗಢ ಜಗದಲ್‌ಪುರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ಸಂಪನ್ಮೂಲಗಳ ಮೇಲಿನ ಹಕ್ಕನ್ನು ಬಡವರು ಹೊಂದಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ನಿನ್ನೆ ರಾಜಸ್ಥಾನದಲ್ಲಿ ಮಾತನಾಡಿದ್ದ ಪ್ರಧಾನಿ ಅವರು, ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಜಾತಿ ಗಣತಿಯ ಮೂಲಕ ಪ್ರತಿಪಕ್ಷಗಳು ದೇಶವನ್ನು ಒಡೆಯುವ ಸಂಚು ರೂಪಿಸಿವೆ ಎಂದು ಹೇಳಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

2. ಮೋದಿ ಅಸಮಾಧಾನದ ಮಧ್ಯೆ ರಾಜ್ಯದಲ್ಲಿ ಮಂಡನೆಯಾಗುತ್ತಾ ಜಾತಿಗಣತಿ ವರದಿ?
ಬೆಂಗಳೂರು: ಕಾಂತರಾಜು ನೇತೃತ್ವದ ಸಮಿತಿಯಿಂದ (Committee headed by Kantharaju) 2018ರಲ್ಲಿ ಸಿದ್ಧವಾಗಿರುವ ಜಾತಿಗಣತಿ ವರದಿಯು (Caste Census Report) ರಾಜ್ಯದಲ್ಲಿ ಜಾರಿಯಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಬಿಹಾರದಲ್ಲಿ ಈಗಾಗಲೇ ಜಾತಿಗಣತಿ ವರದಿಯನ್ನು ಅಂಗೀಕಾರ ಮಾಡಲಾಗಿದೆ. ಇದಕ್ಕೆ ವ್ಯಾಪಕ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಹ ವರದಿ ಬಗ್ಗೆ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Backward Classes Commission Chairman Jayaprakash Hegde) ಅವರು, ನವೆಂಬರ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ನಡುವೆ ಕಾಂಗ್ರೆಸ್‌ ಹಿರಿಯ ಮುಖಂಡರಿಂದಲೇ ವರದಿ ಅಂಗೀಕಾರಕ್ಕೆ ಒತ್ತಡಗಳು ಕೇಳಿಬಂದಿವೆ. ಆದರೆ, ಸಿಎಂ ಸಿದ್ದರಾಮಯ್ಯ (CM Siddaramaiah) ಇದರ ಬಗ್ಗೆ ಜಾಣ್ಮೆಯ ಉತ್ತರವನ್ನು ನೀಡಿದ್ದು, ಮೊದಲು ತಮ್ಮ ಬಳಿ ವರದಿ ಬರಲಿ ಎಂದು ಹೇಳಿದ್ದಾರೆ. ಹಾಗಾದರೆ, ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಮಂಡನೆಯಾಗಲಿದೆಯೇ? ಅಥವಾ ರಾಜ್ಯ ಸರ್ಕಾರ ಸಬೂಬು ಹೇಳುತ್ತಾ ಮುಂದೂಡಲಿದೆಯೇ ಎಂಬ ಕುತೂಹಲ ಮೂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

3. ನಾವು ಎಂಥಾ ನನ್ಮಕ್ಕಳು ಗೊತ್ತಲ್ವ? ; ಇನ್ಸ್‌ಪೆಕ್ಟರ್‌ಗೇ ಆವಾಜ್‌ ಹಾಕಿದ ಖತರ್ನಾಕ್‌ ಖಲೀಂ
ಶಿವಮೊಗ್ಗ: ಭಾನುವಾರ ಈದ್‌ ಮಿಲಾದ್‌ ಮೆರವಣಿಗೆಯ (Eid Milad Procession) ವೇಳೆ ಉಂಟಾದ ಗಲಭೆಯ (Shivamogga Violence) ಸಂದರ್ಭದಲ್ಲಿ ಕೆಲವೊಂದು ಮುಸ್ಲಿಂ ಯುವಕರು (Muslim Youths) ವಸ್ತುಶಃ ರಾಕ್ಷಸರಂತೆಯೇ ಅಟ್ಟಹಾಸ ಮೆರೆದಿರುವುದನ್ನು ಅಲ್ಲಿನ ಮನೆಯವರು ಕಣ್ಣೀರು ಹಾಕುತ್ತಾರೆ ವಿವರಿಸುತ್ತಿದ್ದಾರೆ. ಇವರು ಮನೆಗಳಿಗೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ಪೊಲೀಸರಿಗೂ ಆವಾಜ್‌ (Threatening to Police) ಹಾಕಿರುವ ದೃಶ್ಯಗಳು ಲಭ್ಯವಾಗಿದ್ದು ಆತಂಕ ಹುಟ್ಟಿಸುವಂತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಕೋಮು ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮ; ಸಿದ್ದರಾಮಯ್ಯ ಎಚ್ಚರಿಕೆ

4. ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ ಕೈಬಿಡಲು ಸರ್ಕಾರ ಸಂಚು? ಡಿಕೆಶಿ ಸೂತ್ರಧಾರ
ಬೆಂಗಳೂರು: 2022ರ ಏಪ್ರಿಲ್‌ 16ರಂದು ನಡೆದ ಹಳೆ ಹುಬ್ಬಳ್ಳಿ ಗಲಭೆ (Hubballi Riots) ಪ್ರಕರಣವನ್ನೇ ಕೈಬಿಡಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಅಂದು ವಾಟ್ಸ್‌ ಆಪ್‌ ಸ್ಟೇಟಸ್‌ (Whatsapp Status) ಮುಂದಿಟ್ಟುಕೊಂಡು ಮುಸ್ಲಿಂ ಗುಂಪುಗಳು (Muslim groups) ಹಳೆ ಹುಬ್ಬಳ್ಳಿಯ ಪೊಲೀಸ್‌ ಠಾಣೆ ಮೇಲೆ ದಾಳಿ (Muslims attack on Hale hubballi police station) ಮಾಡಿದ್ದವು. ಪೊಲೀಸರೇ ಭಯದಿಂದ ನಡುಗುವಂತಾದ ಈ ಪ್ರಕರಣದಲ್ಲಿ ಸುಮಾರು 40 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಈ ಪ್ರಕರಣವನ್ನು ಕೈಬಿಡುವ ಬಗ್ಗೆ ಪ್ರಕ್ರಿಯೆಗಳು ನಡೆಯತ್ತಿರುವುದು ಬೆಳಕಿಗೆ ಬಂದಿದೆ. ಶಿವಮೊಗ್ಗದಲ್ಲಿ ದೊಡ್ಡ ಮಟ್ಟದ ಗಲಭೆ ನಡೆದು ಅದರ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬ ಬೇಡಿಕೆ ಜೋರಾಗಿರುವ ನಡುವೆಯೇ ಈ ವಿದ್ಯಮಾನ ನಡೆಯುತ್ತಿರುವುದು ಪೊಲೀಸರ ನೈತಿಕ ಬಲವನ್ನು ಕುಸಿಯುವಂತೆ ಮಾಡಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

5. ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಪದಕಗಳ ಸಂಖ್ಯೆ ಎಷ್ಟಾಯಿತು? ಇಲ್ಲಿದೆ ವಿವರ
ಹ್ಯಾಂಗ್ಝೌ: ಚೀನಾದಲ್ಲಿ ನಡೆಯತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಅಥ್ಲೀಟ್​ಗಳು ಪದಕಗಳ ಬೇಟೆಯನ್ನು ಮುಂದುವರಿಸಿದ್ದಾರೆ. ಮಂಗಳವಾರ (ಅಕ್ಟೋಬರ್​ 3ರಂದು) ಭಾರತಕ್ಕೆ ಎರಡು ಚಿನ್ನದ ಪದಕ, ಎರಡು ಬೆಳ್ಳಿಯ ಪದಕ ಹಾಗೂ ಐದು ಕಂಚಿನ ಪದಕಗಳು ಲಭಿಸಿವೆ. ಇದರೊಂದಿಗೆ ಭಾರತ 15 ಚಿನ್ನ, 26 ಬೆಳ್ಳಿ ಹಾಗೂ 28 ಕಂಚಿನ ಪದಕದೊಂದಿಗೆ ಒಟ್ಟಾರೆ 69 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತ ಖಂಡಾಂತರ ಕ್ರೀಡಾಕೂಟದಲ್ಲಿ ಅತಿದೊಡ್ಡ ಪದಕ ಗಳಿಕೆಯ ಹಾದಿಯಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

6. ಇಲ್ಲಿದೆ ವಿಶ್ವಕಪ್ ವೇಳಾಪಟ್ಟಿ;​ ಭಾರತದ ಪಂದ್ಯಗಳ ಡೇಟ್​ ಮಾರ್ಕ್​ ಮಾಡಿಕೊಳ್ಳಿ

7. Nobel Prize 2023: ಅಗೋಸ್ಟಿನಿ, ಕ್ರೌಸ್ಟ್, ಎಲ್‌’ಹುಲ್ಲಿಯರ್‌ಗೆ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆ

8. ಬಿಜೆಪಿಗೆ ಚಿಲುಮೆ ತಂದ ಸಂಕಟ! ರಾಜ್ಯ ಸರ್ಕಾರದಿಂದ ಮತ್ತೊಂದು ತನಿಖಾಸ್ತ್ರ

9. BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

10. Bed Bugs: ಪ್ಯಾರಿಸ್‌ನಲ್ಲಿ ಸಿಕ್ಕಾಪಟ್ಟೆ ತಿಗಣೆ ಕಾಟ! ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಂಟ್ರಿ ಕೊಟ್ಟ ಫ್ರಾನ್ಸ್ ಸರ್ಕಾರ
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Continue Reading

ದೇಶ

PM Narendra Modi: ಸ್ವಾಮಿ ವಿವೇಕಾನಂದರು ತಂಗಿದ್ದ ಆಶ್ರಮದಲ್ಲಿ ಪ್ರಧಾನಿ ಮೋದಿ ವಾಸ್ತವ್ಯ!

PM Narendra Modi: 1901ರಲ್ಲಿ ಸ್ವಾಮಿ ವಿವೇಕಾನಂದ ಅವರು ಉತ್ತರಾಖಂಡದ ಅದ್ವೈತ ಆಶ್ರಮದಲ್ಲಿ 15 ದಿನಗಳ ಕಾಲ ತಂಗಿದ್ದರು. ಈಗ ಅದೇ ಆಶ್ರಮದಲ್ಲಿ ಪ್ರಧಾನಿ ಉಳಿದುಕೊಳ್ಳಲಿದ್ದಾರೆ.

Published

on

PM Narenra Modi will stay advaita Ashram where Swami vivekand stayed in 1901

ನವದೆಹಲಿ: 1901ರಲ್ಲಿ ಸ್ವಾಮಿ ವಿವೇಕಾನಂದ (Swami Vivekananda) ಅವರು ತಂಗಿದ್ದ ಉತ್ತರಾಖಂಡದ (Uttarakhand) ಚಂಪಾವತ್ ಜಿಲ್ಲೆಯ (Champawat district) ಲೋಹಾಘಾಟ್ ಪ್ರದೇಶದ ಅದ್ವೈತ ಆಶ್ರಮದ (Advaita Ashram) ಮುಖ್ಯ ಆಶ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಂಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಕ್ಟೋಬರ್ 11 ಮತ್ತು 12ರಂದು ಪ್ರಧಾನಿ ಮೋದಿ ಅವರು ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದಾರೆ, ಈ ವೇಳೆ ಅವರು ಅಕ್ಟೋಬರ್ 12ರ ರಾತ್ರಿ ಈ ಆಶ್ರಮದಲ್ಲಿ ತಂಗಲಿದ್ದಾರೆ ಎಂದು ಹೇಳಲಾಗುತ್ತದೆ.

ಮಾಯಾವತಿ ಆಶ್ರಮ ಎಂದು ಸಾಮಾನ್ಯವಾಗಿ ಕರೆಯಲಾಗುವ ಅದ್ವೈತ ಆಶ್ರಮವನ್ನು 1899ರಲ್ಲಿ ಅದ್ವೈತ ವೇದಾಂತದ ಅಭ್ಯಾಸ ಮತ್ತು ಬೋಧನೆಗಾಗಿ ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ಸ್ಥಾಪಿಸಲಾಯಿತು. ಚಂಪಾವತ್ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿಮೀ ದೂರದಲ್ಲಿರುವ ಆಶ್ರಮವು 6,400 ಅಡಿ ಎತ್ತರದಲ್ಲಿದೆ ಮತ್ತು ಹಚ್ಚ ಹಸಿರಿನ ಕಾಡುಗಳಿಂದ ಆವೃತವಾಗಿದೆ. ಸ್ವಾಮಿ ವಿವೇಕಾನಂದರು 1901ರಲ್ಲಿ ಇಲ್ಲಿಗೆ ಭೇಟಿ ನೀಡಿ, ಹದಿನೈದು ದಿನಗಳ ಕಾಲ ಇಲ್ಲಿಯೇ ತಂಗಿದ್ದರು.

ಪ್ರಧಾನಿ ಮೋದಿ ಅಕ್ಟೋಬರ್ 11ರಿಂದ ಎರಡು ದಿನಗಳ ಕಾಲ ಪಿಥೋರಗಢ್ ಜಿಲ್ಲೆಗೆ ಆಗಮಿಸಲಿದ್ದಾರೆ. ಅವರ ತಾತ್ಕಾಲಿಕ ಕಾರ್ಯಕ್ರಮದ ಪ್ರಕಾರ, ಅವರು ಪಿಥೋರಗಢ ಜಿಲ್ಲೆಯಲ್ಲಿ ಮೊದಲ ದಿನ ಚೀನಾ ಗಡಿಯ ಸಮೀಪವಿರುವ ನಾರಾಯಣ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಆ ರಾತ್ರಿ ಆಶ್ರಮದಲ್ಲಿ ತಂಗಲಿರುವ ಪ್ರಧಾನಿ ಮೋದಿ, ಮರುದಿನ ಅವರು ಕೈಲಾಸ ಪರ್ವತದ ದರ್ಶನಕ್ಕಾಗಿ ಪಿಥೋರಗಢ್‌ನಲ್ಲಿರುವ ಜೋಲಿಂಗ್‌ಕಾಂಗ್ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಕೈಲಾಸ ದರ್ಶನದ ನಂತರ ಪಿಥೋರಗಢ ಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಚಂಪಾವತ್ ಜಿಲ್ಲೆಯ ಮಾಯಾವತಿ ಆಶ್ರಮಕ್ಕೆ ಭೇಟಿ ನೀಡಿ ಅಕ್ಟೋಬರ್ 12ರಂದು ರಾತ್ರಿ ಅಲ್ಲಿಯೇ ತಂಗಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: PM Narendra Modi: ಜಾತಿ ಗಣತಿಯಿಂದ ಹಿಂದೂಗಳಲ್ಲಿ ಒಡಕು ಮೂಡಿಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ

ಜಿಲ್ಲಾಧಿಕಾರಿ ನವನೀದ್ ಪಾಂಡೆ ಅವರು ಈಗಾಗಲೇ ಎರಡು ಬಾರಿ ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಧಾನಿ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಮಾಯಾವತಿ ಆಶ್ರಮದ ಸ್ವಾಮಿ ಶುದ್ಧಿದಾನಂದ, “ಮೋದಿ ಅವರು ತಮ್ಮ ಭೇಟಿಯ ಸಮಯದಲ್ಲಿ ನಮ್ಮ ಮುಖ್ಯ ಆಶ್ರಮದಲ್ಲಿ ಉಳಿದುಕೊಳ್ಳಲಿದ್ದಾರೆ. 1901ರಲ್ಲಿ ಸ್ವಾಮಿ ವಿವೇಕಾನಂದರು ತಂಗಿದ್ದ ನಮ್ಮ ಮುಖ್ಯ ಆಶ್ರಮ ಕಟ್ಟಡದಲ್ಲಿ ನಾವು ಆತಿಥ್ಯ ನೀಡುತ್ತಿರುವ ಮೊದಲ ಅತಿ ಪ್ರಮುಖ ಗಣ್ಯ ವ್ಯಕ್ತಿಯಾಗಿದ್ದಾರೆ. ನಮ್ಮ ಆಶ್ರಮಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಅವರು ಆದ್ದರಿಂದ ಆಶ್ರಮದ ಆಡಳಿತವು ಅವರಿಗೆ ಈ ಗೌರವವನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಕಾಂಗ್ರೆಸ್ ಶಾಸಕ ಕುಶಾಲ್ ಶಿಂಗ್ ಅಧಿಕಾರಿ ಅವರು ಪ್ರಧಾನಿ ಭೇಟಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರು ನಮ್ಮ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದು ನಮ್ಮ ಅದೃಷ್ಟ. ಅವರು ದೇಶದ ಪ್ರಧಾನಿಯಾಗಿರುವುದರಿಂದ ನಾವು ಅವರಿಗೆ ಆತ್ಮೀಯ ಸ್ವಾಗತ ನೀಡುತ್ತೇವೆ. ಮೋದಿ ಇಲ್ಲಿಗೆ ಬಂದರೆ ಖಂಡಿತ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಕಾಣೆಕೆ ಕೊಡುತ್ತಾರೆ ಎಂದು ಅಧಿಕಾರಿ ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
Vivek Ramaswamy offering rs 80 lakh to nanny Says media report
ಪ್ರಮುಖ ಸುದ್ದಿ5 hours ago

ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸಕ್ಕೆ 80 ಲಕ್ಷ ರೂ. ಸ್ಯಾಲರಿ ಆಫರ್!

MLC TA Sharavana
ಬೆಂಗಳೂರು5 hours ago

TA Sharavana: ಅನಾಮಿಕರಾಗಿದ್ದ ಜಮೀರ್‌ಗೆ ರಾಜಕೀಯ ಬದುಕು ಕೊಟ್ಟಿದ್ದೇ ಜೆಡಿಎಸ್: ಟಿ.ಎ.ಶರವಣ

Justin Trudeau
ದೇಶ5 hours ago

India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

Netherlands cricket team
ಕ್ರಿಕೆಟ್6 hours ago

ICC World Cup 2023 : ವಿಶ್ವ ಕಪ್​ನಲ್ಲಿ ಆಡಲಿರುವ ನೆದರ್ಲ್ಯಾಂಡ್ಸ್​​ ತಂಡದ ಬಲವೇನು? ದೌರ್ಬಲ್ಯವೇನು?

Modi and KTR
ದೇಶ6 hours ago

ಎನ್‌ಡಿಎಗೆ ಸೇರಿಸಿಕೊಳ್ಳಿ ಎಂದಿದ್ದ ಕೆಸಿಆರ್; ಮೋದಿ! ಬಿಜೆಪಿ ಜತೆ ಹೋಗಲು ನಮಗೇನು ಹುಚ್ಚು ನಾಯಿ ಕಚ್ಚಿದೆಯಾ; ಕೆಟಿಆರ್

Child dies
ಕರ್ನಾಟಕ6 hours ago

Anekal News: ಮಹಡಿ ಮೇಲಿಂದ ಬಿದ್ದು 2 ವರ್ಷದ ಮಗು ಸಾವು

MB Patil visits america
ಕರ್ನಾಟಕ7 hours ago

MB Patil : ಬೆಂಗಳೂರಿನಲ್ಲಿ 800 ಕೋಟಿ ರೂ. ಹೂಡಲು ಕ್ರಿಪ್ಟನ್ ಸೊಲ್ಯೂಷನ್ಸ್ ಒಲವು: ಎಂ.ಬಿ. ಪಾಟೀಲ್

Top 10 news
ಟಾಪ್ 10 ನ್ಯೂಸ್7 hours ago

VISTARA TOP 10 NEWS : ಜಾತಿ ಗಣತಿಗೆ ಮೋದಿ ವಿರೋಧ, ಶಿವಮೊಗ್ಗದಲ್ಲಿ ಪೊಲೀಸರಿಗೇ ಬೆದರಿಕೆ ಹಾಕಿದ್ದ ಕಿಡಿಗೇಡಿಗಳು ಮತ್ತಿತರ ದಿನದ ಪ್ರಮುಖ ಸುದ್ದಿಗಳು

Agriculture Minister N Cheluvarayaswamy latest pressmeet at Kalaburagi
ಕರ್ನಾಟಕ7 hours ago

Kalaburagi News: ಮುಂದಿನ ವಾರ ರಾಜ್ಯಕ್ಕೆ ಬರ ಅಧ್ಯಯನ ತಂಡ : ಕೃಷಿ ಸಚಿವ ಚೆಲುವರಾಯಸ್ವಾಮಿ

PM Narenra Modi will stay advaita Ashram where Swami vivekand stayed in 1901
ದೇಶ7 hours ago

PM Narendra Modi: ಸ್ವಾಮಿ ವಿವೇಕಾನಂದರು ತಂಗಿದ್ದ ಆಶ್ರಮದಲ್ಲಿ ಪ್ರಧಾನಿ ಮೋದಿ ವಾಸ್ತವ್ಯ!

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

The maintenance train finally lifted Metro services as usual
ಕರ್ನಾಟಕ13 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ14 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ24 hours ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ2 days ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ2 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಮನೆಯಲ್ಲೂ ಕಿರಿಕಿರಿ, ಆಫೀಸ್‌ನಲ್ಲೂ ಕಿರಿಕ್‌!

ಟ್ರೆಂಡಿಂಗ್‌