Site icon Vistara News

BBC documentary: ಮೋದಿ ಕುರಿತ ಸಾಕ್ಷ್ಯಚಿತ್ರಕ್ಕಾಗಿ ಬಿಬಿಸಿಗೆ ದಿಲ್ಲಿ ಹೈಕೋರ್ಟ್‌ ಮಾನನಷ್ಟ ಮೊಕದ್ದಮೆ ನೋಟಿಸ್‌

Supreme Court agrees to hear plea challenging Centre's decision to ban BBC documentary on modi

ಹೊಸದಿಲ್ಲಿ: ಬ್ರಿಟನ್‌ನ ಮಾಧ್ಯಮ ಸಂಸ್ಥೆ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (BBC) ಗೆ ದೆಹಲಿ ಹೈಕೋರ್ಟ್ ಸೋಮವಾರ ಸಮನ್ಸ್ ಜಾರಿ ಮಾಡಿದೆ. ಗುಜರಾತ್ ಗಲಭೆಗಳ ಕುರಿತು ಅದು ಇತ್ತೀಚೆಗೆ ಬಿಡುಗಡೆ ಮಾಡಿದ 2 ಭಾಗಗಳ ಸಾಕ್ಷ್ಯಚಿತ್ರವು (BBC documentary) ಭಾರತ, ಇಲ್ಲಿನ ನ್ಯಾಯಾಂಗ ಮತ್ತು ಪ್ರಧಾನಿಯ (Narendra Modi) ಪ್ರತಿಷ್ಠೆಗೆ ಮಸಿ ಬಳಿದಿದೆ ಎಂದು ಹೂಡಲಾಗಿರುವ ಮಾನನಷ್ಟ ಮೊಕದ್ದಮೆಯ ಹಿನ್ನೆಲೆಯಲ್ಲಿ ಈ ಸಮನ್ಸ್‌ ಹೋಗಿದೆ.

ಬಿಬಿಸಿ (ಯುಕೆ) ಜೊತೆಗೆ, ಬಿಬಿಸಿ (ಭಾರತ)ಕ್ಕೂ ನ್ಯಾಯಮೂರ್ತಿ ಸಚಿನ್ ದತ್ತಾ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಗುಜರಾತ್ ಮೂಲದ ಎನ್‌ಜಿಒ ʼಜಸ್ಟಿಸ್ ಫಾರ್ ಟ್ರಯಲ್ʼ ಈ ಮೊಕದ್ದಮೆ ದಾಖಲಿಸಿದೆ. ಹಿರಿಯ ವಕೀಲ ಹರೀಶ್ ಸಾಳ್ವೆ ಎನ್‌ಜಿಒ ಪರ ವಾದ ಮಂಡಿಸಿದ್ದಾರೆ. ಈ ಡಾಕ್ಯುಮೆಂಟರಿ ಭಾರತದ ನ್ಯಾಯಾಂಗ ಸೇರಿದಂತೆ ಇಡೀ ವ್ಯವಸ್ಥೆಗೆ ಮಾನಹಾನಿ ಮಾಡಿದೆ. ಸಾಕ್ಷ್ಯಚಿತ್ರವು ಪ್ರಧಾನಿ ವಿರುದ್ಧವೂ ದ್ವೇಷಪ್ರಚೋದನೆ ನೀಡುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಬಿಬಿಸಿ (ಯುಕೆ) ಸಾಕ್ಷ್ಯಚಿತ್ರ ʼಇಂಡಿಯಾ: ದಿ ಮೋದಿ ಕ್ವೆಶ್ಚನ್ʼ ಎಂಬ ಎರಡು ಭಾಗಗಳ ಸಾಕ್ಷ್ಯಚಿತ್ರವನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದರಲ್ಲಿ, 2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಗಳಲ್ಲಿ ಮೋದಿ ಪಾತ್ರವಿದೆ ಎಂದು ಹೇಳಲಾಗಿತ್ತು. ಆಗ ನರೇಂದ್ರ ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು.

ಇದನ್ನೂ ಓದಿ: BBC Documentary : ‌ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ ನಿಷೇಧ, ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ನೋಟಿಸ್

Exit mobile version