Site icon Vistara News

Ayodhya Ram Mandir: ಕಾಶಿಯ ಭಿಕ್ಷುಕರಿಂದ ಅಯೋಧ್ಯೆ ರಾಮ ಮಂದಿರಕ್ಕೆ ರೂ.4 ಲಕ್ಷ ದೇಣಿಗೆ!

ayodhya ram mandir construction

ಲಖನೌ: ಪವಿತ್ರ ನಗರ ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ನಿರ್ಮಾಣದ ನಿಧಿಗೆ ವಿಶ್ವಾದ್ಯಂತ ಭಕ್ತರಿಂದ ಅಪಾರ ಬೆಂಬಲ ವ್ಯಕ್ತವಾಗಿದೆ. ಕಾಶಿ ಮತ್ತು ಪ್ರಯಾಗ್‌ರಾಜ್‌ನ ಭಿಕ್ಷುಕರು ಕೂಡ ದೇವಾಲಯದ ನಿರ್ಮಾಣಕ್ಕೆ 4 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದೆ!

ಶ್ರೀರಾಮ ಮಂದಿರ ತೀರ್ಥ ಟ್ರಸ್ಟ್‌ಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ನಿಧಿ ಅಭಿಯಾನದಲ್ಲಿ ಪ್ರಯಾಗರಾಜ್ ಮತ್ತು ಕಾಶಿಯಿಂದ 300ಕ್ಕೂ ಹೆಚ್ಚು ಭಿಕ್ಷುಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಇವರು ಕೂಡಿಟ್ಟ ನಿಧಿಯನ್ನು ಟ್ರಸ್ಟ್‌ಗೆ ನೀಡಿದರು. ಇವರಿಗೆ ಶ್ಲಾಘನಾರ್ಥವಾಗಿ ಮುಂಬರುವ ರಾಮಲಲಾ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರನ್ನು ಆಹ್ವಾನಿಸಲಾಗುತ್ತಿದೆ.

ಜನವರಿ 22ರಂದು ಅಯೋಧ್ಯೆಯಲ್ಲಿ ಭಗವಾನ್ ರಾಮನ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದ್ದು, ಭಕ್ತರು ಈ ಸಂದರ್ಭವನ್ನು ಬಹಳ ಉತ್ಸಾಹದಿಂದ ಎದುರು ನೋಡುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ ಪಟ್ಟಣಕ್ಕೆ ಭೇಟಿ ನೀಡಲಿದ್ದು, ಹೊಸದಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣ ಟರ್ಮಿನಲ್ ಮತ್ತು ರೈಲು ನಿಲ್ದಾಣ ಸೇರಿದಂತೆ ಹಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 1ರಿಂದ 12ನೇ ತರಗತಿವರೆಗಿನ ಎಲ್ಲಾ ಶಾಲೆಗಳು ಡಿಸೆಂಬರ್ 30ರ ಶನಿವಾರದಂದು ಮುಚ್ಚಲ್ಪಡುತ್ತವೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.

ಇಂದು ರಾಮ್‌ಲಲ್ಲಾ ವಿಗ್ರಹ ಆಯ್ಕೆಗೆ ಮತದಾನ

ಭವ್ಯವಾದ ರಾಮ ಮಂದಿರದ ಗರ್ಭಗುಡಿಗೆ ಭಗವಾನ್ ರಾಮಲಲ್ಲಾನ ವಿಗ್ರಹವನ್ನು ಆಯ್ಕೆ ಮಾಡುವ ಮತದಾನವು ಡಿಸೆಂಬರ್ 29ರಂದು ಶುಕ್ರವಾರ ನಡೆಯಲಿದೆ. ಈ ನಿರ್ಧಾರವು ಜನವರಿ 22ರಂದು ನಿಗದಿಯಾಗಿರುವ ದೇವಾಲಯದ ಪ್ರಾಣ ಪ್ರತಿಷ್ಠಾಪನೆಯಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಪ್ರತ್ಯೇಕ ಶಿಲ್ಪಿಗಳಿಂದ ರಚಿಸಲಾದ ಮೂರು ವಿಭಿನ್ನ ವಿನ್ಯಾಸಗಳನ್ನು ಆಯ್ಕೆ ಸಮಿತಿಯ ಮುಂದೆ ಪ್ರಸ್ತುತಪಡಿಸಲಾಗುತ್ತದೆ. ಅತಿ ಹೆಚ್ಚು ಮತ ಪಡೆದ ಮೂರ್ತಿಯನ್ನು ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಗರ್ಭಗುಡಿಯೊಳಗೆ ಪ್ರತಿಷ್ಠಾಪಿಸಲಾಗುತ್ತದೆ.

ರಾಮಮಂದಿರ ಉದ್ಘಾಟನಾ ಸಮಾರಂಭವು ಹೊಸ ದಾಖಲೆಗಳನ್ನು ಬರೆಯಲಿದೆ. ಮುಸ್ಲಿಂ ಮಹಿಳೆಯೊಬ್ಬರು ಮುಂಬೈನಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ಯಾತ್ರೆಯನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ.

71 ಎಕರೆ ಪ್ರದೇಶದಲ್ಲಿ ಹರಡಿರುವ ಅಯೋಧ್ಯೆ ದೇವಾಲಯದ ಸಂಕೀರ್ಣವು 2.77 ಎಕರೆ ವಿಸ್ತೀರ್ಣದಲ್ಲಿ ರಾಮಮಂದಿರವನ್ನು ಒಳಗೊಂಡಿದೆ. ಗರ್ಭಗುಡಿ ಮತ್ತು ಐದು ಮಂಟಪಗಳನ್ನು ಒಳಗೊಂಡಂತೆ ಆರು ಭಾಗಗಳಾಗಿ ವಿಂಗಡಿಸಲಾಗಿದೆ- ಧ್ಯಾನ ಮಂಟಪ, ರಂಗ ಮಂಟಪ, ನೃತ್ಯ ಮಂಟಪ, ಕೀರ್ತನ ಮಂಟಪ, ಪ್ರಾರ್ಥನಾ ಮಂಟಪ. ದೇವಾಲಯವನ್ನು 161 ಅಡಿ ಎತ್ತರಕ್ಕೆ ವಿನ್ಯಾಸಗೊಳಿಸಲಾಗಿದ್ದು, ಮೂರು ಮಹಡಿಗಳಿವೆ. ಪ್ರತಿಯೊಂದೂ 19.5 ಅಡಿ ಎತ್ತರವಿದೆ.

ಇದನ್ನೂ ಓದಿ: Ayodhya Ram Mandir: ಚಂಪತ್ ರಾಯ್; ಕೆಮಿಸ್ಟ್ರಿ ಟೀಚರ್ ಅಯೋಧ್ಯೆ ರಾಮ ಮಂದಿರದ ಶಿಲ್ಪಿಯಾದ ಕತೆಯಿದು!

Exit mobile version