Site icon Vistara News

ಭಾರತ್‌ಪೇ ಮಾಜಿ ಎಂಡಿ ಅಶ್ನೀರ್, ಅವರ ಪತ್ನಿ ಮಾಧುರಿ ವಿದೇಶಕ್ಕೆ ಹೋಗದಂತೆ ನಿರ್ಬಂಧ

Ashneer Grover and Madhuri Jain

ನವದೆಹಲಿ: ನ್ಯೂಯಾರ್ಕ್‌ಗೆ(New York) ತೆರಳುತ್ತಿದ್ದ ಭಾರತ್‌ಪೇ (BharatPe Former MD) ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ (Ashneer Grover) ಮತ್ತು ಅವರ ಪತ್ನಿ ಮಾಧುರಿ ಜೈನ್ (Madhuri Jain)ಅವರನ್ನು ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi International Airport) ತಡೆಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಜೆಗಾಗಿ ಅಶ್ನೀರ್ ಗ್ರೋವರ್ ಮತ್ತು ಅವರ ಪತ್ನಿ ಮಾಧುರಿ ಜೈನ್ ಅವರು ನ್ಯೂಯಾರ್ಕ್‌ಗೆ ತೆರಳುತ್ತಿದ್ದರು. ಆದರೆ, ಅವರನ್ನು ದಿಲ್ಲಿ ಪೊಲೀಸ್‌ನ (Delhi Police) ಆರ್ಥಿಕ ಅಪರಾಧ ವಿಭಾಗದ (Economic Offences Wing) ಅಧಿಕಾರಿಗಳು ಹೋಗದಂತೆ ತಡೆದಿದ್ದಾರೆ ಎಂದು ಈ ಘಟನೆ ಬಲ್ಲ ವ್ಯಕ್ತಿಯ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ(BharatPe Scam).

ಭಾರತ್‌ಪೇ‌ ಕಂಪನಿಯಲ್ಲಾದ ಅಕ್ರಮಕ್ಕೆ ಸಂಬಂಧಿಸದಂತೆ ತನಿಖೆ ನಡೆಯುತ್ತಿದ್ದು, ಅಶ್ನೀರ್ ಗ್ರೋವರ್ ಮತ್ತು ಮಾಧುರಿ ಜೈನ್ ವಿರುದ್ಧ ಕಳೆದ ವಾರವಷ್ಟೇ ಲುಕೌಟ್‌ ಸರ್ಕ್ಯೂಲರ್ ಅನ್ನು ದಿಲ್ಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗವು ಹೊರಡಿಸಿತ್ತು.

ಆರ್ಥಿಕ ಅಪರಾಧ ವಿಂಗ್‌ನ ಜಂಟಿ ಆಯುಕ್ತೆ ಸಿಂಧು ಪಿಳ್ಳೈ ಅವರು, ಅಶ್ನೀರ್ ಗ್ರೋವರ್ ಮತ್ತು ಮಾಧುರಿ ಜೈನ್ ಅವರು ನ್ಯೂಯಾರ್ಕ್‌ಗೆ ತೆರಳುತ್ತಿದ್ದರು. ಸೆಕ್ಯುರಿಟಿ ಚೆಕ್‌ ಮಾಡುವುದಕ್ಕೆ ಮುಂಚೆಯೇ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಮತ್ತು ವಾಪಸ್‌ ದೆಹಲಿಯ ತಮ್ಮ ಮನೆಗೆ ತೆರಳುವಂತೆ ಸೂಚಿಸಲಾಯಿತು. ಅಲ್ಲದೇ, ಮುಂದಿನ ವಾರ ಮಂದಿರ ಮಾರ್ಗದಲ್ಲಿರುವ ಆರ್ಥಿಕ ಅಪರಾಧ ವಿಂಗ್‌ ಕಚೇರಿಯಲ್ಲಿ ತನಿಖೆಗೆ ಹಾಜರಾಗುವಂತೆ ಸೂಚಿಸಲಾಯಿತು ಎಂದು ಹೇಳಿದ್ದಾರೆ. ಆಪಾದಿತರು ಹೊರ ದೇಶಕ್ಕೆ ಹೋಗದಂತೆ ತಡೆಯಲು ಮಾತ್ರವೇ ಲುಕೌಟ್‌ ಸರ್ಕೂಲರ್ ಹೊರಡಿಸಲಾಗಿತ್ತು. ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಸಿಂಧು ಪಿಳ್ಳೈ ಅವರು ಸ್ಪಷ್ಟಪಡಿಸಿದರು.

ಆದರೆ, ಅಶ್ನೀರ್ ಗ್ರೋವರ್ ಅವರು ಮಾತ್ರ ಪೊಲೀಸ್ ಹೇಳಿಕೆಗೆ ವಿರುದ್ಧವಾದ ವಾದವನ್ನು ಮುಂದಿಟ್ಟಿದ್ದಾರೆ. ಈ ಕುರಿತಾದ ಮಾಹಿತಿಯನ್ನು ಅವರು ಎಕ್ಸ್‌ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಮೇ ತಿಂಗಳಲ್ಲಿ ಎಫ್ಐಆರ್ ‌ದಾಖಲಾದ ಬಳಿಕ ನವೆಂಬರ್ 17 ಬೆಳಗ್ಗೆ 8 ಗಂಟೆಯವರೆಗೆ ಯಾವುದೇ ನೋಟಿಸ್ ಅಥವಾ ಫೋನ್ ಕರೆ ಬಂದಿಲ್ಲ. ಆದರೆ, ವಿಮಾನ ನಿಲ್ದಾಣಕ್ಕೆ ತೆರಳಿದ ಬಳಿಕವಷ್ಟೇ ಈ ಬಗ್ಗೆ ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ.

ನವೆಂಬರ್ 17ರ ಬೆಳಗ್ಗೆ ನಾನು ಆರ್ಥಿಕ ಅಪರಾಧ ವಿಂಗ್‌ನಿಂದ ಸಮನ್ಸ್ ಬಂದಿದೆ. ತನಿಖೆಗೆ ಸಹಕರಿಸುವುದಾಗಿ ಅಶ್ನೀರ್ ಗ್ರೋವರ್ ಅವರು ಹೇಳಿದ್ದಾರೆ. ದಿಲ್ಲಿ ಆರ್ಥಿಕ ಅಪರಾಧ ವಿಂಗ್ ತನಿಖೆಯ ಪ್ರಕಾರ ಭಾರತ್‌ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಸಂಬಂಧ ಹೊಂದಿರುವ ನೇಮಕಾತಿ ಸಂಸ್ಥೆಗಳು ಫಿನ್‌ಟೆಕ್ ಯುನಿಕಾರ್ನ್‌ಗಾಗಿ ಮಾಡದ ಕೆಲಸಕ್ಕೆ ಹಣವನ್ನು ಪಡೆಯಲು ಬ್ಯಾಕ್‌ಡೇಟ್ ಇನ್‌ವಾಯ್ಸ್‌ಗಳನ್ನು ಬಳಸಿದ್ದವು.

ಈ ಸುದ್ದಿಯನ್ನೂ ಓದಿ: Ashneer Grover : ಉದ್ಯಮಿ ಅಶ್ನೀರ್‌ ಗ್ರೋವರ್‌, ಕುಟುಂಬದ ವಿರುದ್ಧ 81 ಕೋಟಿ ರೂ. ವಂಚನೆಯ ಎಫ್‌ಐಆರ್‌

Exit mobile version