Site icon Vistara News

Bhavya Narasimhamurthy: ಕಾಂಗ್ರೆಸ್‌ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಈಗ ಸೇನಾಧಿಕಾರಿ!

Bhavya Narasimhamurthy

ಅಖಿಲ ಭಾರತ ಕಾಂಗ್ರೆಸ್ ಸಮಿತಿ (All India Congress Committee) ರಾಷ್ಟ್ರೀಯ ಸಂಯೋಜಕಿ ಹಾಗೂ ಕರ್ನಾಟಕ ಕಾಂಗ್ರೆಸ್ (congress) ವಕ್ತಾರರಾದ ಭವ್ಯಾ ನರಸಿಂಹಮೂರ್ತಿ (Bhavya Narasimhamurthy) ಅವರು ದಕ್ಷಿಣ ಭಾರತದಿಂದ (south india) ಪ್ರಾದೇಶಿಕ ಸೇನೆಗೆ (Territorial Army officer) ಆಯ್ಕೆಯಾದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡೈರೆಕ್ಟರೇಟ್ ಜನರಲ್ ಟೆರಿಟೋರಿಯಲ್ ಆರ್ಮಿ 2022ರಲ್ಲಿ ನಡೆಸಿದ ಟೆರಿಟೋರಿಯಲ್ ಆರ್ಮಿ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಏಕೈಕ ಮಹಿಳಾ ಅಭ್ಯರ್ಥಿಯಾದ ಭವ್ಯಾ ಅವರ ಮಿಲಿಟರಿ ವೃತ್ತಿ ಜೀವನದ ಪ್ರಯಾಣ ಇದರೊಂದಿಗೆ ಪ್ರಾರಂಭವಾಯಿತು.

2024ರ ಮೇನಲ್ಲಿ ಭವ್ಯಾ ಅವರನ್ನು ಇಂಡೋ-ಪಾಕ್ ನಿಯಂತ್ರಣ ರೇಖೆಯ (LOC) ಬಳಿ ಇರುವ ಸೇನಾ ಘಟಕಕ್ಕೆ ನಿಯೋಜಿಸಲಾಯಿತು. ಅವರ ಪೋಸ್ಟಿಂಗ್ ಸಮಯದಲ್ಲಿ ಅವರು ಕಠಿಣ ತರಬೇತಿಯನ್ನು ಪಡೆದರು ಮತ್ತು ಅನಂತರ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಅವರ ಸೇರ್ಪಡೆಯು ಒಂದು ಅದ್ಭುತ ಕ್ಷಣವನ್ನು ಸೂಚಿಸುತ್ತದೆ. ಯಾಕೆಂದರೆ ಅವರು ಪ್ರಾದೇಶಿಕ ಸೈನ್ಯದಲ್ಲಿ ಈ ಶ್ರೇಣಿಯನ್ನು ಪಡೆದ ದಕ್ಷಿಣ ಭಾರತದ ಮೊದಲ ಮಹಿಳೆಯಾಗಿದ್ದಾರೆ.


ಪ್ರಾದೇಶಿಕ ಸೇನೆಯಲ್ಲಿ ಭಾರತೀಯ ನಾಗರಿಕರು ತಮ್ಮ ನಾಗರಿಕ ವೃತ್ತಿಯೊಂದಿಗೆ ಭಾರತೀಯ ಸೇನೆಯ ಭಾಗವಾಗಿ ತಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶವಿದೆ. ಪ್ರಸ್ತುತ ಟೆರಿಟೋರಿಯಲ್ ಆರ್ಮಿಯಲ್ಲಿರುವ ಕೆಲವು ಪ್ರಮುಖ ವ್ಯಕ್ತಿಗಳಲ್ಲಿ ಕ್ರಿಕೆಟಿಗ ಎಂ.ಎಸ್. ಧೋನಿ, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿದ್ದಾರೆ.


ಪ್ರಾದೇಶಿಕ ಸೇನೆಯಲ್ಲಿ ಕಮಿಷನ್ಡ್‌ ಆಫೀಸರ್ ಆಗಿ ನಿಯೋಜನೆಯಾಗಿರುವ ಭವ್ಯಾ ನರಸಿಂಹಮೂರ್ತಿ ಅವರು ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯ ಸೇನೆ ಸಮವಸ್ತ್ರದಲ್ಲಿ ತರಬೇತಿ ಪಡೆಯುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಅವರು ಇದು ನನ್ನ ಜೀವನದ ಹೆಮ್ಮೆಯ ಸಂದರ್ಭ ಎಂದು ಹೇಳಿದ್ದಾರೆ. ರಾಜಕಾರಣಿಯಾಗಿ ಮತ್ತು ಸೇನಾ ಅಧಿಕಾರಿಯಾಗಿ ನಾನು ಈ ಮೂಲಕ ನನ್ನ ದೇಶಕ್ಕೆ ಸೇವೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Education News : ನೀಟ್ ಪರೀಕ್ಷೆ ಬಳಿಕ ಎಂಜಿನಿಯರ್ ಸೀಟು ಹಂಚಿಕೆ; 1.24 ಲಕ್ಷ ಸೀಟುಗಳು ಲಭ್ಯ, ಆನ್ ಲೈನ್ ಪ್ರಕ್ರಿಯೆ

ಏನಿದು ಪ್ರಾದೇಶಿಕ ಸೇನೆ?

ಪ್ರಾದೇಶಿಕ ಸೇನೆ ಎನ್ನುವುದು ನಿರಂತರ ಸೇವೆಯಲ್ಲಿರುವ ಸೈನ್ಯವಲ್ಲ. ಭಾರತದ ನಾಗರಿಕರಿಗೆ ತಮ್ಮ ವೃತ್ತಿಯೊಂದಿಗೆ ಭಾರತೀಯ ಸೇನೆಯ ಭಾಗವಾಗಿ ದೇಶ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಲಾಗುತ್ತದೆ. ವರ್ಷದಲ್ಲಿ ಎರಡು ತಿಂಗಳ ಕಾಲ ಪ್ರಾದೇಶಿಕ ಸೇನೆಯಲ್ಲಿ ಆಯ್ಕೆಯಾದವರು ಕಾರ್ಯ ನಿರ್ವಹಿಸಬೇಕಾಗುತ್ತದೆ.

Exit mobile version