Education News : ನೀಟ್ ಫಲಿತಾಂಶದ ಬಳಿಕ ಎಂಜಿನಿಯರ್ ಸೀಟು ಹಂಚಿಕೆ; 1.24 ಲಕ್ಷ ಸೀಟುಗಳು ಲಭ್ಯ, ಆನ್ ಲೈನ್ ಪ್ರಕ್ರಿಯೆ - Vistara News

ಬೆಂಗಳೂರು

Education News : ನೀಟ್ ಫಲಿತಾಂಶದ ಬಳಿಕ ಎಂಜಿನಿಯರ್ ಸೀಟು ಹಂಚಿಕೆ; 1.24 ಲಕ್ಷ ಸೀಟುಗಳು ಲಭ್ಯ, ಆನ್ ಲೈನ್ ಪ್ರಕ್ರಿಯೆ

Education News : ರಾಜ್ಯದಲ್ಲಿ 1.24 ಲಕ್ಷ ಎಂಜಿನಿಯರಿಂಗ್‌ ಸೀಟುಗಳು ಲಭ್ಯವಿದ್ದು, ರ‍್ಯಾಂಕ್‌ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಆದರೆ ನೀಟ್ ಪರೀಕ್ಷೆಯ ಫಲಿತಾಂಶದ ಬಳಿಕವೇ ಎಂಜಿನಿಯರ್ ಸೀಟು ಹಂಚಿಕೆ ಮಾಡಲಾಗುವುದು ಎಂದು ಕೆಇಎ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

VISTARANEWS.COM


on

education News
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನೀಟ್‌ ಪರೀಕ್ಷೆಯ ಫಲಿತಾಂಶದ ಬಳಿಕವೇ ಎಂಜಿನಿಯರ್‌ ಸೀಟು ಹಂಚಿಕೆ ಮಾಡಲಾಗುವುದು ಎಂದು ಕೆಇಎ ಕಾರ್ಯ ನಿವಾರ್ಹಕ ನಿರ್ದೇಶಕ ಪ್ರಸನ್ನ (Education News) ತಿಳಿಸಿದ್ದಾರೆ. ನೀಟ್ ಫಲಿತಾಂಶಕ್ಕೂ ಮುನ್ನವೇ ಎಂಜಿನಿಯರಿಂಗ್ ಸೀಟ್ ಹಂಚಿಕೆ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ ಮೊದಲು ಮೆಡಿಕಲ್ ಸೀಟ್ ಹಂಚಿಕೆ ಮಾಡಿ ನಂತರ ಎಂಜಿನಿಯರಿಂಗ್ ಸೀಟ್ ಹಂಚಿಕೆ ಮಾಡಲಾಗುವುದು ಎಂದರು.

ಬೇರೆ ಬೇರೆ ಕಾಲೇಜಿನಲ್ಲಿ ಈಗಾಗಲೇ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ ಎಂಬ ದೂರಿನ ಕುರಿತು ಪ್ರತಿಕ್ರಿಯಿಸಿದ ಅವರು, ಸಿಇಟಿ ಪರೀಕ್ಷೆಯಲ್ಲಿ ಒಳ್ಳೆಯ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತದೆ. ಸೀಟ್ ಸಿಗುವುದಿಲ್ಲ ಎಂಬ ಆತಂಕದಲ್ಲಿ ಡೋನೇಷನ್ ಕೊಟ್ಟು ಅಡ್ಮಿಶನ್ ಮಾಡಿಸಬೇಡಿ. ಒಳ್ಳೆಯ ರ‍್ಯಾಂಕ್‌ ಪಡೆದವರಿಗೆ ಒಳ್ಳೆಯ ಕಾಲೇಜು ಸಿಗುತ್ತದೆ ಎಂದರು.

ಮತ್ತೊಂದು ಅವಕಾಶ


ನೀಟ್‌ ಪರೀಕ್ಷೆ ತೆಗೆದುಕೊಂಡಿದ್ದರೂ ರಾಜ್ಯದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬೇಕಾದರೆ ಕೆಇಎಗೆ ಅರ್ಜಿ ಸಲ್ಲಿಸುವುದು ಕಡ್ಡಾಯ. ಆದರೆ, ಕೆಲವರು ಈ ರೀತಿ ಅರ್ಜಿ ಸಲ್ಲಿಸಿಲ್ಲ ಎಂದು ಹೇಳುತ್ತಿದ್ದು, ಅಂತಹವರಿಗೆ ಅನುಕೂಲ ಮಾಡಲು ನೀಟ್‌ ಫಲಿತಾಂಶದ ನಂತರ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು.

ಇದನ್ನೂ ಓದಿ: KCET Result 2024: ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡಲು ಲಿಂಕ್‌ ಇಲ್ಲಿದೆ

1.24 ಲಕ್ಷ ಎಂಜಿನಿಯರಿಂಗ್‌ ಸೀಟುಗಳು ಲಭ್ಯ

ಇನ್ನೂ ರಾಜ್ಯದಲ್ಲಿ 1.24 ಲಕ್ಷ ಎಂಜಿನಿಯರಿಂಗ್‌ ಸೀಟುಗಳು ಲಭ್ಯವಿದೆ. ರ‍್ಯಾಂಕ್‌ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಇನ್ನೂ ಕಾಲೇಜು ಶುಲ್ಕವನ್ನು ನಿಗದಿ ಮಾಡಿಲ್ಲ. ಕಳೆದ ವರ್ಷ 40,110 ರೂಪಾಯಿ ಶುಲ್ಕ ಸರ್ಕಾರಿ ಕಾಲೇಜುಗಳಿಗೆ ಇತ್ತು. ಪ್ರಸಕ್ತ ಸಾಲಿನ ಸೀಟ್ ಮ್ಯಾಟ್ರಿಕ್ ಇನ್ನೂ ಸರ್ಕಾರದಿಂದ ಬಂದಿಲ್ಲ. ಬಂದ ನಂತರ ಕಾಲೇಜು/ಕೋರ್ಸ್ ವಾರ ಸೀಟ್ ಮ್ಯಾಟ್ರಿಕ್ಸ್ ಅನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಅದೇ ರೀತಿ ಕೋರ್ಸ್ ಗಳ ಶುಲ್ಕ ನಿಗದಿ ಸಂಬಂಧ ಒಂದು ಸಭೆ ನಡೆದಿದ್ದು, ಸದ್ಯದಲ್ಲೇ ಆ ಕುರಿತು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಲಿದೆ ಎಂದರು.

ವೃತ್ತಿಪರ ಕೋರ್ಸ್‌ಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳನ್ನು ಕೆಇಎ ಮೂಲಕವೇ ಹಂಚಿಕೆ ಮಾಡಲಾಗುತ್ತದೆ. ಈ ವಿಷಯದಲ್ಲಿ ಗೊಂದಲ ಬೇಡ. ಫಲಿತಾಂಶ ತಡ ಆಯಿತು, ಹೀಗಾಗಿ ಎಲ್ಲ ಸೀಟುಗಳನ್ನು ಖಾಸಗಿ ಕಾಲೇಜು ಆಡಳಿತ ಮಂಡಳಿಗಳು ಹೆಚ್ಚಿನ ಡೊನೇಷ್‌ ಪಡೆದು ಭರ್ತಿ ಮಾಡಿಕೊಳ್ಳುತ್ತಿವೆ ಎಂದು ಕೆಲವರು ಗೊಂದಲ ಸೃಷ್ಟಿಸುತ್ತಿದ್ದು, ಅಂತಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಪ್ರಸನ್ನ ಮನವಿ ಮಾಡಿದರು. ಕೆಇಎ ಮೂಲಕವೇ ಮೆರಿಟ್‌ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ಇಂತಹ ಸುಳ್ಳುಸುದ್ದಿಗಳಿಗೆ ಪೋಷಕರಾಗಲಿ/ ವಿದ್ಯಾರ್ಥಿಗಳಾಗಲಿ ಗಮನ ನೀಡಬಾರದು ಎಂದು ಅವರು ಹೇಳಿದರು.

ಆನ್‌ಲೈನ್‌ನಲ್ಲೇ ವೆರಿಫಿಕೇಶನ್‌

ಈ ಬಾರಿ ವಿಶೇಷ ಮಕ್ಕಳ ವೈದ್ಯಕೀಯ ತಪಾಸಣೆ ಬಿಟ್ಟರೆ ಬಹುತೇಕ ಎಲ್ಲ ದಾಖಲೆಗಳ ಪರಿಶೀಲನೆ ಆನ್ ಲೈನ್ ನಲ್ಲಿ ನಡೆಯುತ್ತದೆ. ಯಾರೂ ಕೆಇಎ ಕಚೇರಿಗೆ ಬರುವ ಅಗತ್ಯ ಇರುವುದಿಲ್ಲ. ಎಲ್ಲ ಪ್ರಕ್ರಿಯೆಗಳು ಆನ್ ಲೈನ್‌ನಲ್ಲೆ ನಡೆಯಲಿದೆ. ಶೇ.100 ರಷ್ಟು ಡಾಕ್ಯುಮೆಂಟ್ ಪರಿಶೀಲನೆ ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಕೆಇಎ ಮುಂದೆ ಬಂದು ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ. ಎಲ್ಲಾ ದಾಖಲಾತಿಗಳನ್ನು ಆನ್‌ಲೈನ್‌ನಲ್ಲೇ ಪರಿಶೀಲನೆ ನಡೆಯಲಿದೆ ಎಂದರು. ನಿನ್ನೆ ಶನಿವಾರ (ಜೂ.1) ಸಂಜೆ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಹಠಾತ್ ಪ್ರಕಟಿಸಿದ ಬೆನ್ನಲ್ಲೇ ಭಾನುವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ಸುದ್ದಿಗೋಷ್ಠಿ ನಡೆಸಿ ಎಲ್ಲ ಮಾಹಿತಿಯನ್ನು ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Air Wing NCC: ಏರ್ ವಿಂಗ್ ಎನ್‌ಸಿಸಿ ಸೇರಲು ಅರ್ಜಿ ಆಹ್ವಾನ; ಜುಲೈ 9 ಕೊನೆಯ ದಿನ

Air Wing NCC: ನಂ. 2 ಕರ್ನಾಟಕ ಟೆಕ್ನಿಕಲ್ ಏರ್ ಸ್ಕ್ವಾಡ್ರನ್ ಎನ್.ಸಿ.ಸಿ. ವತಿಯಿಂದ ಏರ್ ವಿಂಗ್ ಎನ್‌ಸಿಸಿ 2024-27 ನೇ ಬ್ಯಾಚ್‌ಗೆ ಜೂ. 22ರಿಂದ ನೋಂದಣಿ ಪ್ರಾರಂಭಗೊಂಡಿದ್ದು ಜುಲೈ 09 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ ಎಂದು ಕಮಾಂಡಿಂಗ್ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ರಾಜೇಶ್ ಚಂದ್ರ ತಿಳಿಸಿದ್ದಾರೆ.

VISTARANEWS.COM


on

Application Invitation to Join Air Wing NCC July 09 is the last day for submission of application
Koo

ಬೆಂಗಳೂರು: ನಂ. 2 ಕರ್ನಾಟಕ ಟೆಕ್ನಿಕಲ್ ಏರ್ ಸ್ಕ್ವಾಡ್ರನ್ ಎನ್.ಸಿ.ಸಿ ವತಿಯಿಂದ ಏರ್ ವಿಂಗ್ ಎನ್‌ಸಿಸಿ (Air Wing NCC) 2024-27 ನೇ ಬ್ಯಾಚ್‌ಗೆ ಜೂ. 22ರಿಂದ ನೋಂದಣಿ ಪ್ರಾರಂಭಗೊಂಡಿದ್ದು, ಜುಲೈ 9 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ ಎಂದು ಕಮಾಂಡಿಂಗ್ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ರಾಜೇಶ್ ಚಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: Bengaluru Power Cut: ಬೆಂಗಳೂರು ನಿವಾಸಿಗಳೇ ಗಮನಿಸಿ; ಜೂ.29ರಂದು ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಅಭ್ಯರ್ಥಿಗಳು ಪಿಯುಸಿ ಪ್ರಥಮ ಅಥವಾ ಪ್ರಥಮ ವರ್ಷದ ಪದವಿಯಲ್ಲಿ ಬೆಂಗಳೂರಿನ ಯಾವುದಾದರೂ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಎನ್.ಸಿ.ಸಿ ಸೇರಬಯಸುವ ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಚಿತ್ರದಲ್ಲಿ ನೀಡಿರುವ ಕ್ಯೂ.ಆರ್. ಕೋಡ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Run4Research: ಬೆಂಗಳೂರಿನಲ್ಲಿ ಜೂ.30ರಂದು ʼರನ್4ರೀಸರ್ಚ್ʼ ಓಟ

ವಿಳಾಸ: ನಂ. 2 ಕರ್ನಾಟಕ ಟೆಕ್ನಿಕಲ್ ಏರ್ ಸ್ಕ್ವಾಡ್ರನ್ ಎನ್.ಸಿ.ಸಿ., ಯುವಿಸಿಇ ಕ್ಯಾಂಪಸ್, ಕೆ.ಆರ್. ಸರ್ಕಲ್ ಹತ್ತಿರ, ಬೆಂಗಳೂರು, ದೂರವಾಣಿ ಸಂಖ್ಯೆ 8788506566/9108939392 ಗೆ ಸಂಪರ್ಕಿಸಬಹುದಾಗಿದೆ.

Continue Reading

ಕರ್ನಾಟಕ

Pralhad Joshi: ಹಿಂದೂಗಳು ಅಲ್ಪಸಂಖ್ಯಾತರಾದ ದಿನ ಭಾರತ ಜಾತ್ಯತೀತವಾಗಿ ಉಳಿಯದು; ಪ್ರಲ್ಹಾದ್‌ ಜೋಶಿ ಆತಂಕ

Pralhad Joshi: ಭಾರತ ಹಿಂದೂ ರಾಷ್ಟ್ರವಲ್ಲ ಎಂಬ ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಹೇಳಿಕೆ ಸರಿಯಿದೆ. ನಾನೂ ಅದನ್ನು ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದೇವೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಹಿಂದೂಗಳು ಅಲ್ಪಸಂಖ್ಯಾತರಾದ ದಿನ ಭಾರತ ಜಾತ್ಯತೀತ ರಾಷ್ಟ್ರವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

VISTARANEWS.COM


on

India is a secular nation because Hindus are the majority says Union Minister Pralhad Joshi
Koo

ನವದೆಹಲಿ: ಹಿಂದೂಗಳು ಬಹುಸಂಖ್ಯಾತರಾಗಿ ಇರುವುದರಿಂದಲೇ ಭಾರತ ಜಾತ್ಯತೀತ ರಾಷ್ಟ್ರವಾಗಿದೆ ಎಂಬ ಕಟು ಸತ್ಯವನ್ನು ಸಿಎಂ ಸಿದ್ದರಾಮಯ್ಯ ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

“ಭಾರತ ಹಿಂದೂ ರಾಷ್ಟ್ರವಲ್ಲ” ಎಂಬ ಅಮರ್ತ್ಯ ಸೇನ್ ಹೇಳಿಕೆ ಸಮರ್ಥಿಸಿದ ಸಿಎಂ ಸಿದ್ದರಾಮಯ್ಯ ಅವರ ನಡೆಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಕ್ಷೇಪಿಸಿದ್ದು, ನವದೆಹಲಿಯಲ್ಲಿ ಶುಕ್ರವಾರ ಈ ಕುರಿತು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: R Ashok: ವಾಲ್ಮೀಕಿ ನಿಗಮ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಹೋರಾಟ; ಆರ್‌. ಅಶೋಕ್‌

ಹಿಂದೂಗಳು ಅಲ್ಪಸಂಖ್ಯಾತರಾದ ದಿನ ಭಾರತ ಜಾತ್ಯಾತೀತ ರಾಷ್ಟ್ರವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಸಚಿವ ಪ್ರಲ್ಹಾದ್‌ ಜೋಶಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: Team India : ಟೆಸ್ಟ್​​ ಕ್ರಿಕೆಟ್​ನ ಒಂದೇ ದಿನದಲ್ಲಿ ಗರಿಷ್ಠ ರನ್​; ದಾಖಲೆ ಬರೆದ ಭಾರತ ತಂಡ

ಭಾರತ ಹಿಂದೂ ರಾಷ್ಟ್ರವಲ್ಲ ಎಂಬ ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಹೇಳಿಕೆ ಸರಿಯಿದೆ. ತಾವೂ ಅದನ್ನು ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದೇವೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಚಿವ ಪ್ರಲ್ಹಾದ್‌ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.

Continue Reading

ಕರ್ನಾಟಕ

Run4Research: ಬೆಂಗಳೂರಿನಲ್ಲಿ ಜೂ.30ರಂದು ʼರನ್4ರೀಸರ್ಚ್ʼ ಓಟ

Run4Research: ಇಂಡಿಯನ್ ಸೊಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ (ಐ.ಎಸ್.ಸಿ.ಆರ್.) ವತಿಯಿಂದ ಜೂ.30ರಂದು ಭಾನುವಾರ ಬೆಳಿಗ್ಗೆ 5 ರಿಂದ 9 ರವರೆಗೆ ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ʼರನ್4ರೀಸರ್ಚ್ʼ ಕ್ಲಿನಿಕಲ್ ರೀಸರ್ಚ್ ಕುರಿತು ಅರಿವನ್ನು ಮೂಡಿಸಲು ಸವಾಲಿನ ಓಟ ಕಾರ್ಯಕ್ರಮ ಏರ್ಪಡಿಸಲಾಗಿದೆ.

VISTARANEWS.COM


on

Run4Research programme on June 30 in Bengaluru
Koo

ಬೆಂಗಳೂರು: ಇಂಡಿಯನ್ ಸೊಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ (ಐ.ಎಸ್.ಸಿ.ಆರ್.) ವತಿಯಿಂದ ಜೂ.30 ರಂದು ಭಾನುವಾರ ಬೆಳಿಗ್ಗೆ 5 ಗಂಟೆಯಿಂದ 9 ರವರೆಗೆ ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ʼರನ್4ರೀಸರ್ಚ್ʼ (Run4Research) ಕ್ಲಿನಿಕಲ್ ರೀಸರ್ಚ್ ಕುರಿತು ಅರಿವನ್ನು ಮೂಡಿಸಲು ಸವಾಲಿನ ಓಟ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಸವಾಲಿನ ಓಟವು ಭಾರತದ ಉಜ್ವಲ ಕ್ಲಿನಿಕಲ್ ರೀಸರ್ಚ್ ಸಮುದಾಯಕ್ಕೆ ಅರಿವನ್ನು ಉತ್ತೇಜಿಸುವ ಗುರಿ ಹೊಂದಿದೆ. ಅನುಷ್ಠಾನದ ಪಾಲುದಾರ ಸೆಲ್ಲುಲಾದೊಂದಿಗೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ 3ಕೆ, 5ಕೆ ಮತ್ತು 10ಕೆ ವಿಭಾಗಗಳಿದ್ದು, ಎಲ್ಲ ಫಿಟ್ನೆಸ್ ಹಂತಗಳ ಭಾಗವಹಿಸುವವರಿಗೆ ಅವಕಾಶ ನೀಡುತ್ತದೆ. ಐ.ಸಿ.ಎಸ್.ಆರ್. ಕ್ಲಿನಿಕಲ್ ರೀಸರ್ಚ್ ಕ್ಷೇತ್ರದಲ್ಲಿ ತೊಡಗಿಕೊಂಡ ಮತ್ತು ಆರೋಗ್ಯದ ಉತ್ಸಾಹಿಗಳನ್ನು ಈ ಉತ್ಸಾಹಕರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸುತ್ತಿದೆ.

ಇದನ್ನೂ ಓದಿ: Post Office: ಪೋಸ್ಟ್‌ ಆಫೀಸ್‌ ಉಳಿತಾಯ ಯೋಜನೆಗಳ ಬಡ್ಡಿದರ ಬದಲಾವಣೆ ಇಲ್ಲ; ಬಡ್ಡಿಯ ಪಟ್ಟಿ ಇಲ್ಲಿದೆ

ಇಂಡಿಯನ್ ಸೊಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ (ಐ.ಎಸ್.ಸಿ.ಆರ್.) ಭಾರತದಲ್ಲಿ ನೈತಿಕ ಮತ್ತು ಉನ್ನತ ಗುಣಮಟ್ಟದ ಕ್ಲಿನಿಕಲ್ ರೀಸರ್ಚ್ ಉತ್ತೇಜಿಸಲು ಬದ್ಧವಾದ ವೃತ್ತಿಪರ ಸಂಸ್ಥೆಯಾಗಿದೆ. ಐ.ಸಿ.ಎಸ್.ಆರ್.ನ ಉದ್ದೇಶ ಪಾಲುದಾರರೊಂದಿಗೆ ಸಹಯೋಗ ರೂಪಿಸುವುದು ಮತ್ತು ಆರೋಗ್ಯಸೇವಾ ಫಲಿತಾಂಶಗಳನ್ನು ಸುಧಾರಿಸಲು ಕ್ಲಿನಿಕಲ್ ರೀಸರ್ಚ್ ಸುಧಾರಣೆಯನ್ನು ಪ್ರತಿಪಾದಿಸುವುದು. ಹಲವಾರು ಉಪಕ್ರಮಗಳ ಮೂಲಕ ಐ.ಸಿ.ಎಸ್.ಆರ್. ದೇಶದಲ್ಲಿ ಕ್ಲಿನಿಕಲ್ ಟ್ರಯಲ್‌ಗಳ ವೈಜ್ಞಾನಿಕ, ನೈತಿಕ ಮತ್ತು ಕಾರ್ಯಾಚರಣೆಯ ಆಯಾಮಗಳನ್ನು ಹೆಚ್ಚಿಸಲು ಶ್ರಮಿಸುತ್ತದೆ.

ಇದನ್ನೂ ಓದಿ: Bengaluru Power Cut: ಬೆಂಗಳೂರು ನಿವಾಸಿಗಳೇ ಗಮನಿಸಿ; ಜೂ.29ರಂದು ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಇಂಡಿಯನ್ ಸೊಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ ಅಧ್ಯಕ್ಷ ಡಾ. ಸನಿಶ್ ಡೇವಿಸ್ ಈ ಕಾರ್ಯಕ್ರಮದ ಕುರಿತು ಮಾತನಾಡಿ, ಕ್ಲಿನಿಕಲ್ ರೀಸರ್ಚ್ ರೋಗಿಗಳಿಗೆ ಹೊಸ ಚಿಕಿತ್ಸೆಗಳನ್ನು ತರುವಲ್ಲಿ ಅತ್ಯಂತ ಮುಖ್ಯವಾಗಿದೆ. ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಕಠಿಣ ಪರೀಕ್ಷೆಗಳಿಲ್ಲದೆ ಹೊಸ ಔಷಧಗಳು, ಲಸಿಕೆಗಳು ಮತ್ತು ವೈದ್ಯಕೀಯ ಸಾಧನಗಳನ್ನು ಬಳಕೆಗೆ ಅನುಮೋದಿಸಲು ಸಾಧ್ಯವಿಲ್ಲ. ಈ ಕಾರ್ಯಕ್ರಮವು ರೋಗಿಗಳಿಗೆ ಕ್ಲಿನಿಕಲ್ ಟ್ರಯಲ್‌ಗಳ ಪ್ರಾಮುಖ್ಯತೆ ಕುರಿತು ಮತ್ತು ಹೇಗೆ ಅವರ ಭಾಗವಹಿಸುವಿಕೆಯು ಅವರಿಗೆ ಮತ್ತು ಭವಿಷ್ಯದ ತಲೆಮಾರುಗಳಿಗೆ ಪ್ರಯೋಜನವಾಗಬಲ್ಲದು ಎಂದು ಅರಿವನ್ನು ಮೂಡಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.

Continue Reading

ಬೆಂಗಳೂರು

Narayana Health: ನಾರಾಯಣ ಹೆಲ್ತ್ ಸಿಟಿಯಲ್ಲಿ 6 ತಿಂಗಳಲ್ಲಿ 300 ರೊಬೊಟಿಕ್ ಮೊಣಕಾಲಿನ ಶಸ್ತ್ರಚಿಕಿತ್ಸೆಗಳು

Narayana Health: ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಆರು ತಿಂಗಳಲ್ಲಿ 300 ರೊಬೊಟಿಕ್ ಮೊಣಕಾಲಿನ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದೆ. ನಾರಾಯಣ ಹೆಲ್ತ್ ಸಿಟಿಯಲ್ಲಿ ಆರ್ಥೊಪಿಡಿಕ್ಸ್, ಸ್ಪೈನ್ ಅಂಡ್ ಟ್ರೌಮಾದ ಸೀನಿಯರ್ ಕನ್ಸಲ್ಟೆಂಟ್ ಪ್ರೊ. ಅರುಣ್ ರಂಗನಾಥನ್ ಅವರ ನೇತೃತ್ವದ ಆರ್ಥೋಪಿಡಿಕ್ ತಂಡವು ಈ ಸಾಧನೆ ಮಾಡಿದೆ.

VISTARANEWS.COM


on

Narayana Health City Performs 300 Robotic Knee Replacements in Six Months
Koo

ಬೆಂಗಳೂರು: ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಆರು ತಿಂಗಳಲ್ಲಿ 300 ರೊಬೊಟಿಕ್ ಮೊಣಕಾಲಿನ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದೆ. ನಾರಾಯಣ ಹೆಲ್ತ್ ಸಿಟಿಯಲ್ಲಿ (Narayana Health) ಆರ್ಥೊಪಿಡಿಕ್ಸ್, ಸ್ಪೈನ್ ಅಂಡ್ ಟ್ರೌಮಾದ ಸೀನಿಯರ್ ಕನ್ಸಲ್ಟೆಂಟ್ ಪ್ರೊ. ಅರುಣ್ ರಂಗನಾಥನ್ ಅವರ ನೇತೃತ್ವದ ಆರ್ಥೋಪಿಡಿಕ್ ತಂಡವು ಈ ಸಾಧನೆ ಮಾಡಿದೆ.

ಮಹಾವೀರ ಚಕ್ರ ಪುರಸ್ಕೃತ ಪಿಟಿ ಎಸ್.ಕೆ. ಗುಪ್ತಾ ಅವರು 88 ವರ್ಷದ ರೋಗಿಯಾಗಿದ್ದು, ತೀವ್ರವಾದ ಮೊಣಕಾಲಿನ ಆರ್ಥ್ರೈಟಿಸ್‌ನಿಂದ ನಡೆಯಲು ಆಗದಷ್ಟು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಅವರಿಗೆ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಮರು ಜೀವನ ಪಡೆದಿದ್ದಾರೆ. ರೊಬೊಟಿಕ್ ಮೊಣಕಾಲ ಶಸ್ತ್ರಚಿಕಿತ್ಸೆಯು ಅವರಿಗೆ ಚಲನೆ ಹಾಗೂ ವಿಶ್ವಾಸ ತಂದುಕೊಟ್ಟಿದೆ.

ಈ ಸಾಧನೆಯು ನಾರಾಯಣ ಹೆಲ್ತ್ ಸಿಟಿಯಲ್ಲಿ ಆರ್ಥೊಪಿಡಿಕ್ಸ್, ಸ್ಪೈನ್ ಅಂಡ್ ಟ್ರೌಮಾದ ಸೀನಿಯರ್ ಕನ್ಸಲ್ಟೆಂಟ್ ಪ್ರೊಫೆಸರ್ ಅರುಣ್ ರಂಗನಾಥನ್ ಅವರ ನೇತೃತ್ವದ ಆರ್ಥೋಪಿಡಿಕ್ ತಂಡವು, ಕಳೆದ ಆರು ತಿಂಗಳಲ್ಲಿ ಪೂರ್ಣಗೊಳಿಸಿದ 300ನೇ ರೊಬೊಟಿಕ್ ಮೊಣಕಾಲು ಬದಲಾವಣೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

ಈ ಕುರಿತು ನಾರಾಯಣ ಹೆಲ್ತ್ ಸಿಟಿಯ ರೊಬೊಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್, ನೀ ರಿಪ್ಲೇಸ್ಮೆಂಟ್ ಸರ್ಜರಿಯ ಆರ್ಥೊಪಿಡಿಕ್ ಸರ್ಜನ್ ಡಾ. ಅಭಿನಂದನ್ ಎಸ್. ಪುನೀತ್ ಮಾತನಾಡಿ, ನಾರಾಯಣ ಹೆಲ್ತ್ ಸಿಟಿಯಲ್ಲಿ ನಮ್ಮ ಉದ್ದೇಶ ಸದಾ ನಮ್ಮ ರೋಗಿಗಳ ಸ್ವಾಸ್ಥ್ಯದ ಸುತ್ತಲೂ ಕೇಂದ್ರೀಕೃತವಾಗಿದೆ. ರೊಬೊಟಿಕ್ ಮೊಣಕಾಲು ಶಸ್ತ್ರಚಿಕಿತ್ಸೆಯ ತಂತ್ರಜ್ಞಾನ ಪರಿಚಯಿಸುವುದು ನಮಗೆ ಸಹಜ ಹೆಜ್ಜೆಯಾಗಿದ್ದು, ಅದು ಸರಿಸಾಟಿ ಇರದ ನಿಖರತೆ ಮತ್ತು ವೈಯಕ್ತಿಕಗೊಳಿಸಿದ ಆರೈಕೆ ನೀಡುತ್ತದೆ.

ನಾವು ನಮ್ಮ ರೋಗಿಗಳ ಜೀವನ ಉನ್ನತಗೊಳಿಸಲು ಶ್ರಮಿಸುತ್ತಿದ್ದೇವೆ ಮತ್ತು ಈ ಸುಧಾರಿತ ತಂತ್ರಜ್ಞಾನವು ನಮಗೆ ಅದನ್ನು ಸಾಧ್ಯವಾಗಿಸುತ್ತದೆ. ನಮ್ಮ ರೋಗಿಗಳು ಅವರ ಮೊಬಿಲಿಟಿ ಪಡೆಯುವುದು ಮತ್ತು ಸ್ವಾತಂತ್ರ್ಯ ಮರಳಿ ಪಡೆಯುವುದು ನಮ್ಮ ತಂಡಕ್ಕೆ ಅತ್ಯಂತ ದೊಡ್ಡ ಪುರಸ್ಕಾರವಾಗಿದೆ” ಎಂದು ತಿಳಿಸಿದರು.

ಈ ಬಗ್ಗೆ ಪ್ರೊ. ಅರುಣ್ ರಂಗನಾಥನ್ ಮಾತನಾಡಿ, “ನಮ್ಮ ಗುರಿ ರೋಗಿಗಳ ಆರ್ಥಿಕ ಹಿನ್ನೆಲೆ ಏನೇ ಇರಲಿ, ಎಲ್ಲ ರೋಗಿಗಳಿಗೂ ಅತ್ಯಾಧುನಿಕ ಮೊಣಕಾಲಿನ ಬದಲಾವಣೆ ತಂತ್ರಜ್ಞಾನ ದೊರೆಯುವಂತೆ ಮಾಡುವುದು ಎಂದ ಅವರು, ಈ ಪ್ರಕ್ರಿಯೆಯಲ್ಲಿ ರಿಯಲ್-ಟೈಮ್ ಮ್ಯಾಪಿಂಗ್ ಅನ್ನು ನಡೆಸುವ ಮೂಲಕ ರೋಗಿಯ ಮೊಣಕಾಲಿನ 3ಡಿ ಮಾಡೆಲ್ ಸೃಷ್ಟಿಸಲಾಗುತ್ತದೆ. ರೊಬೊಟಿಕ್ ಸಾಧನವು ಶಸ್ತ್ರಚಿಕಿತ್ಸೆ ನಿರ್ವಹಿಸುತ್ತದೆ, ಶಸ್ತ್ರಚಿಕಿತ್ಸಾ ತಜ್ಞರು ಅದರ ಪೂರ್ಣ ನಿಯಂತ್ರಣ ಕಾಪಾಡಿಕೊಳ್ಳುವ ಮೂಲಕ ಉತ್ತಮ ಫಲಿತಾಂಶ ಲಭ್ಯವಾಗುವಂತೆ ಮಾಡುತ್ತಾರೆ ಎಂದರು.

ಇದನ್ನೂ ಓದಿ: Bengaluru Power Cut: ಬೆಂಗಳೂರು ನಿವಾಸಿಗಳೇ ಗಮನಿಸಿ; ಜೂ.29ರಂದು ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ನಾರಾಯಣ ಹೆಲ್ತ್ ಸಿಟಿಯ ರೊಬೊಟಿಕ್ ನೀ ರೀಪ್ಲೇಸ್ಮೆಂಟ್, ನೀ ರೀಪ್ಲೇಸ್ಮೆಂಟ್ ಸರ್ಜರಿಯ ಆರ್ಥೊಪಿಡಿಕ್ ಸರ್ಜನ್ ಡಾ.ಪ್ರಶಾಂತ್ ಬಿ.ಎನ್. ಮಾತನಾಡಿ, ಜಾಯಿಂಟ್ ರೊಬೊಟ್ ಸಿಸ್ಟಂನ ಶಸ್ತ್ರಚಿಕಿತ್ಸೆಯ ನಿಖರತೆ ಹೆಚ್ಚು ಅನುಕೂಲಗಳನ್ನು ಹೊಂದಿದ್ದು ಅದರಲ್ಲಿ ಹೆಚ್ಚು ನಿಖರ ಇಂಪ್ಲಾಂಟ್ ಪ್ಲೇಸ್ಮೆಂಟ್ ಹೊಂದಿದ್ದು, ಅದು ಸಹಜವಾದ ಶಸ್ತ್ರಚಿಕಿತ್ಸೆಯ ನಂತರ ಭಾವನೆ, ಸುತ್ತಮುತ್ತಲಿನ ಜೀವಕೋಶಗಳಿಗೆ ಗಾಯದ ತೊಂದರೆ ಕಡಿಮೆ, ಸೋಂಕಿನ ತೊಂದರೆ ಕಡಿಮೆ ಮತ್ತು ಬೇಗನೆ ಪುನಶ್ಚೇತನದಿಂದ ಬಹಳ ಕಡಿಮೆ ಆಸ್ಪತ್ರೆ ವಾಸವಿರುತ್ತದೆ. ಈ ನಿಖರ ಇಂಪ್ಲಾಂಟ್ ಪ್ಲೇಸ್ಮೆಂಟ್ ಇಂಪ್ಲಾಂಟ್ ಬಾಳಿಕೆ ಹೆಚ್ಚಿಸಿ, ಭವಿಷ್ಯದ ಪುನರ್ ಪರಿಶೀಲನೆಯ ಅಗತ್ಯ ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

Continue Reading
Advertisement
UGC NET Exam
ದೇಶ2 hours ago

UGC NET Exam: ರದ್ದಾಗಿದ್ದ ಯುಜಿಸಿ ನೆಟ್‌ ಪರೀಕ್ಷೆಗೆ ಹೊಸ ದಿನಾಂಕ ಘೋಷಣೆ; ಪರೀಕ್ಷೆಗೆ ಹೊಸ ವಿಧಾನ, ಇಲ್ಲಿದೆ ವಿವರ‌

Vodafone Idea
ದೇಶ2 hours ago

Vodafone Idea: ಜಿಯೋ, ಏರ್‌ಟೆಲ್‌ ಬೆನ್ನಲ್ಲೇ ವೋಡಾಫೋನ್‌ ಐಡಿಯಾ ಪ್ಲಾನ್‌ ಬೆಲೆ ಏರಿಕೆ; ಹೀಗಿದೆ ವಿವರ

T20 World Cup 2024
ಪ್ರಮುಖ ಸುದ್ದಿ3 hours ago

T20 World Cup 2024 : ಭಾರತ ತಂಡವನ್ನು ಟೀಕಿಸಿದ ಮೈಕೆಲ್​ ವಾನ್​ಗೆ ತಿರುಗೇಟು ಕೊಟ್ಟ ಗಂಗೂಲಿ

CM SIddaramaiah
ಪ್ರಮುಖ ಸುದ್ದಿ3 hours ago

Siddaramaiah: ಅಮಿತ್‌ ಶಾ-ಸಿದ್ದರಾಮಯ್ಯ ಭೇಟಿ; ರಾಜ್ಯದ 5 ನಗರಗಳಲ್ಲಿ ಸೇಫ್‌ ಸಿಟಿ ಯೋಜನೆ ಜಾರಿಗೆ ಒತ್ತಾಯ

Religious Freedom
ದೇಶ4 hours ago

Religious Freedom: ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಹುಸಿ ಕಳವಳ; ಭಾರತ ತಿರುಗೇಟು

Virat Kohli
ಪ್ರಮುಖ ಸುದ್ದಿ4 hours ago

Virat Kohli : ಫಾರ್ಮ್​ ಕಳೆದುಕೊಂಡಿರುವ ವಿರಾಟ್​ ಕೊಹ್ಲಿಯ ಬೆಂಬಲಕ್ಕೆ ನಿಂತ ಗಂಗೂಲಿ

Application Invitation to Join Air Wing NCC July 09 is the last day for submission of application
ಕರ್ನಾಟಕ5 hours ago

Air Wing NCC: ಏರ್ ವಿಂಗ್ ಎನ್‌ಸಿಸಿ ಸೇರಲು ಅರ್ಜಿ ಆಹ್ವಾನ; ಜುಲೈ 9 ಕೊನೆಯ ದಿನ

Tulu language
ತಂತ್ರಜ್ಞಾನ5 hours ago

Tulu Translate Google: ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆ

India is a secular nation because Hindus are the majority says Union Minister Pralhad Joshi
ಕರ್ನಾಟಕ5 hours ago

Pralhad Joshi: ಹಿಂದೂಗಳು ಅಲ್ಪಸಂಖ್ಯಾತರಾದ ದಿನ ಭಾರತ ಜಾತ್ಯತೀತವಾಗಿ ಉಳಿಯದು; ಪ್ರಲ್ಹಾದ್‌ ಜೋಶಿ ಆತಂಕ

IND vs SA
ಪ್ರಮುಖ ಸುದ್ದಿ5 hours ago

IND vs SA: ದಕ್ಷಿಣ ಆಫ್ರಿಕಾದ ಬೌಲಿಂಗ್​ ಶಕ್ತಿ ಭಾರತದ ಬ್ಯಾಟಿಂಗ್​ಗೆ ಲೆಕ್ಕಕ್ಕೇ ಇಲ್ಲ; ಮಾಜಿ ಆಟಗಾರನ ಭವಿಷ್ಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ8 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ15 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು1 day ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌