Site icon Vistara News

Sushant Singh Rajput case: ನಟಿ ರಿಯಾ ಚಕ್ರವರ್ತಿಗೆ ಬಿಗ್ ರಿಲೀಫ್! ಬೇಲ್ ಪ್ರಶ್ನಿಸಲ್ಲ ಎಂದ ಕೇಂದ್ರ ಸರ್ಕಾರ

Rhea Chakraborty and Sushant Singh Rajput

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ (Sushant Singh Rajput case) ಸಂಬಂಧ ನಟಿ ರಿಯಾ ಚಕ್ರವರ್ತಿಗೆ (Rhea Chakraborty) ಬಾಂಬೆ ಹೈಕೋರ್ಟ್ (Bombay High Court) ನೀಡಿರುವ ಜಾಮೀನು (Bail) ಪ್ರಶ್ನಿಸುವುದಿಲ್ಲ ಎಂದು ಕೇಂದ್ರ ಸರ್ಕಾರವು (Central Government) ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಮಂಗಳವಾರ ಹೇಳಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್ ಸಿಂಗ್ ಅವರ ಸ್ನೇಹಿತೆಯಾಗಿದ್ದ ನಟಿ ರಿಯಾ ಚಕ್ರವರ್ತಿ ಅವರ ವಿರುದ್ಧ ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (NDPS) ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಅಡಿಷನಲ್ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದ್ರೇಶ್ ಅವರಿದ್ದ ಪೀಠಕ್ಕೆ ಈ ಮಾಹಿತಿಯನ್ನು ನೀಡಿದೆ. ರಿಜಾ ಚಕ್ರವರ್ತಿಯ ಜಾಮೀನು ಮಂಜೂರಾತಿಗೆ ಸಂಬಂಧಿಸಿದಂತೆ ಸರ್ಕಾರವು ತನ್ನ ಮೇಲ್ಮನವಿಯನ್ನು ಮುಂದುವರಿಸುವುದಿಲ್ಲ. ಆದರೆ ಬಾಂಬೆ ಹೈಕೋರ್ಟ್‌ನ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 27 ಎ ವ್ಯಾಖ್ಯಾನವನ್ನು ಸವಾಲಿಗೆ ಮುಕ್ತವಾಗಿ ಇಡಬೇಕು ಎಂದು ಹೇಳಿದರು.

ನಾವೇವೂ ಜಾಮೀನು ಪ್ರಶ್ನಿಸುವುದಿಲ್ಲ. ಆದರೆ, ಸೆಕ್ಷನ್ 27ಎ ವ್ಯಾಖ್ಯಾನವನ್ನು ಪರಿಗಣನೆಗೆ ಮುಕ್ತವಾಗಿಡಿ. ಹಾಗಾಗಿ, ಯಾವುದೇ ಆದೇಶವು ಪೂರ್ವನಿದರ್ಶನವಾಗದಿರಲಿ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Drugs case: ನಟ ಸುಶಾಂತ್ ಸಿಂಗ್‌ ಡ್ರಗ್ಸ್‌ ವ್ಯಸನಕ್ಕೆ ಕುಮ್ಮಕ್ಕು ನೀಡಿದ್ದೇ ರಿಯಾ ಚಕ್ರವರ್ತಿ ಎಂದ ಎನ್‌ಸಿಬಿ

ಎನ್‌ಡಿಪಿಎಸ್‌ ಕಾಯ್ದೆಯ ಸೆಕ್ಷನ್ 27ಎ ಪ್ರಕಾರ ಅಕ್ರಮಕ್ಕೆ ಹಣ ಒದಗಿಸುವುದು ಮತ್ತು ಅಪರಾಧಿಗಳಿಗೆ ಆಶ್ರಯ ನೀಡುವು ಅಪರಾಧಕ್ಕೆ ಗರಿಷ್ಠ 20 ವರ್ಷಗಳ ಜೈಲು ಶಿಕ್ಷೆಯನ್ನು ಸೂಚಿಸುತ್ತದೆ. ಕೇಂದ್ರ ಸರ್ಕಾರದ ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಮನವಿಯಂತೆ ಬಾಂಬೆ ಹೈಕೋರ್ಟ್ ಆದೇಶವನ್ನು ಪೂರ್ವನಿದರ್ಶನವೆಂದು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ ಮಾಡಿ.

Exit mobile version