Site icon Vistara News

Bihar Cabinet Expansion | ಮಹಾ ಘಟ್ ಬಂಧನ್ ಸರ್ಕಾರ ಸಂಪುಟ ರಚನೆ; ನೂತನ ಸಚಿವರ ಪಟ್ಟಿ ಇಲ್ಲಿದೆ

Bihar

ಪಟನಾ: ಬಿಹಾರದಲ್ಲಿ ಮಹಾ ಘಟ್ ಬಂಧನ್ ಸರ್ಕಾರದ (Bihar Cabinet Expansion)ಸಂಪುಟ ವಿಸ್ತರಣೆ ಇಂದು ನಡೆಯಿತು. ಆಗಸ್ಟ್​ 9ರಂದು ಬಿಜೆಪಿಯೊಂದಿಗೆ ಮೈತ್ರಿಯನ್ನು ಅಧಿಕೃತವಾಗಿ ಕಳಚಿಕೊಂಡ ನಿತೀಶ್​ ಕುಮಾರ್, ಆಗಸ್ಟ್​ 10ರಂದು ಆರ್​ಜೆಡಿ ಮತ್ತು ಜೆಡಿಯು ಜತೆಗಿನ ಮೈತ್ರಿ ಸರ್ಕಾರ ರಚಿಸಿದರು. ಬಿಹಾರದಲ್ಲಿ ಮುಖ್ಯಮಂತ್ರಿಯಾಗಿ 8ನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದರು. ಹಾಗೇ, ಉಪಮುಖ್ಯಮಂತ್ರಿಯಾಗಿ ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಪ್ರಮಾಣ ವಚನ ಸ್ವೀಕರಿಸಿದರು. ಈ ಸರ್ಕಾರದ ಸಚಿವ ಸಂಪುಟ ರಚನೆ ಇಂದು ನಡೆದಿದ್ದು, ಒಟ್ಟು 31 ಶಾಸಕರು ಮಂತ್ರಿಗಳಾಗಿ ಬಡ್ತಿ ಪಡೆದು, ಪ್ರಮಾಣ ವಚನ ಸ್ವೀಕಾರ ಮಾಡಿದರು.

ಮೊದಲೇ ಮಾತಾದಂತೆ ಆರ್​ಜೆಡಿಗೇ ದೊಡ್ಡ ಪಾಲು ನೀಡಲಾಗಿದೆ. ಅಂದರೆ ಈ ಪಕ್ಷದ 16 ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದ್ದರೆ, ಜೆಡಿಯುದ 11 ಮತ್ತು ಕಾಂಗ್ರೆಸ್​​ನ ಮೂವರು ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್​​ಎಎಂ)ದ ಒಬ್ಬರು ಕ್ಯಾಬಿನೆಟ್​ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್​​ಗೆ ನಾಲ್ಕು ಮಂತ್ರಿ ಸ್ಥಾನ ಎಂದು ಮೊದಲು ಹೇಳಲಾಗಿತ್ತು, ಆದರೀಗ ಒಂದು ಕಡಿಮೆಯಾಗಿದೆ. ಅದರಲ್ಲೂ ಇಬ್ಬರು ಮಾತ್ರ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಇನ್ನೊಬ್ಬರು ಮುಂದಿನ ಹಂತದ ಕ್ಯಾಬಿನೆಟ್​ ವಿಸ್ತರಣೆಯಲ್ಲಿ ಸೇರ್ಪಡೆಯಾಗಲಿದ್ದಾರೆ ಎಂದು ಕಾಂಗ್ರೆಸ್​​ನ ಬಿಹಾರ ರಾಜ್ಯ ಉಸ್ತುವಾರಿ ಭಕ್ತ ಚರಣ್​ ದಾಸ್​​ ತಿಳಿಸಿದ್ದಾರೆ.

ಇಂದು ಮಂತ್ರಿ ಸ್ಥಾನ ಪಡೆದವರ ಪಟ್ಟಿ ಇಲ್ಲಿದೆ:
ಜನತಾ ದಳ (ಸಂಯುಕ್ತ)-ನಿತೀಶ್​ ಕುಮಾರ್​ ಪಕ್ಷದ ಸಚಿವರು..
1. ಬಿಜೇಂದರ್​ ಯಾದವ್​, 2. ವಿಜಯ್​ ಚೌಧರಿ, 3. ಶ್ರವಣ್​ ಕುಮಾರ್​, 4. ಜಯಂತ್​ ರಾಜ್​, 5. ಅಶೋಕ್​ ಚೌಧರಿ, 6. ಮದನ್​ ಸಹ್ನಿ, 7. ಸುನೀಲ್​ ಕುಮಾರ್​, 8. ಸಂಜಯ್​ ಝಾ, 9. ಜಮಾ ಖಾನ್​, 10. ಸುಮಿತ್​ ಕುಮಾರ್ ಸಿಂಗ್​ 11. ಲೇಸಿ ಸಿಂಗ್​.

ರಾಷ್ಟ್ರೀಯ ಜನತಾ ದಳ (ಆರ್​ಜೆಡಿ)
1. ತೇಜ್​ ಪ್ರತಾಪ್​ ಯಾದವ್​, 2. ಸುರೇಂದ್ರ ಯಾದವ್​, 3. ಚಂದ್ರಶೇಖರ್​, 4. ರಮಾನಂದ ಯಾದವ್​, 5. ಲಲಿತ್​ ಯಾದವ್​, 6. ಕುಮಾರ್​ ಸರಬ್​​ಜಿತ್​, 7.ಕುಮಾರ್​ ಸರ್ವಜಿತ್​, 8. ಕಾರ್ತೀಕ್​ ಶರ್ಮಾ, 9.ಶಹನವಾಜ್, 10. ಸಮೀರ್​ ಮಹಾಸೇಠ್​, 11. ಅನಿತಾ ದೇವ್​, 12. ಅಲೋಕ್​ ಮೆಹ್ತಾ, 13. ಭರತ್​ ಭೂಷಣ್​ ಮಂಡಲ್​, 14. ಸುಧಾಕರ್​ ಸಿಂಗ್​, 15. ಶಮೀಮ್​ ಅಹ್ಮದ್​, 16. ಜಿತೇಂದ್ರ ರೈ.

ಕಾಂಗ್ರೆಸ್​: 1. ಮುರಳೀಲಾಲ್​ ಗೌತಮ್​, 2. ಅಫಾಕ್​ ಅಲಾಂ

ಎಚ್​ಎಎಂ : ಸಂತೋಷ್​ ಮಾಂಝಿ.

ಸ್ವತಂತ್ರ ಶಾಸಕ: ಸುಮಿತ್​ ಕುಮಾರ್ ಸಿಂಗ್​

ಇದನ್ನೂ ಓದಿ: ಬಿಜೆಪಿ vs ಕಾಂಗ್ರೆಸ್‌ ನಾಯಕರ ಕ್ರೆಡಿಟ್‌ ಪಾಲಿಟಿಕ್ಸ್‌‌, ರಾರಾಜಿಸುತ್ತಿದೆ ಪ್ರತ್ಯೇಕ ಬ್ಯಾನರ್‌

Exit mobile version