ಬಿಹಾರದಲ್ಲಿ ಇಂದು ಸಚಿವ ಸಂಪುಟ ವಿಸ್ತರಣೆಯಾಗಿದೆ. ಸಂಪುಟದಲ್ಲಿ ಸಿಂಹಪಾಲು ಸಿಕ್ಕಿದ್ದು, ಆರ್ಜೆಡಿಗೇ ಆದರೂ, ಗೃಹ, ಹಣಕಾಸು ಇಲಾಖೆಗಳನ್ನೆಲ್ಲ ಜೆಡಿಯು ಉಳಿಸಿಕೊಂಡಿದೆ.
ಬಿಹಾರದಲ್ಲಿ ಆಗಸ್ಟ್ 10ರಂದು ರಚನೆಯಾದ ಮಹಾ ಘಟ್ ಬಂಧನ್ ಸರ್ಕಾರದ ಸಂಪುಟ ರಚನೆ ಇಂದು ನಡೆಯಿತು. ಮೊದಲೇ ಮಾತಾದಂತೆ ಆರ್ಜೆಡಿ ಪಕ್ಷಕ್ಕೇ ದೊಡ್ಡಪಾಲು ನೀಡಲಾಗಿದೆ.
ಪವನ್ ವರ್ಮಾ, ಭಾರತೀಯ ವಿದೇಶಾಂಗ ಸೇವೆ ಮಾಜಿ ಅಧಿಕಾರಿಯಾಗಿದ್ದು, 2009ರಿಂದ 2013ರವರೆಗೆ ಭೂತಾನ್ನಲ್ಲಿ ಭಾರತದ ರಾಯಭಾರಿಯಾಗಿದ್ದರು.
ಬಿಹಾರ ಮಹಾ ಘಟ್ ಬಂಧನ್ ಸರ್ಕಾರದ ಸಂಪುಟ ವಿಸ್ತರಣೆ ಆಗಸ್ಟ್ 16ರಂದು ನಡೆಯಲಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಕೇವಲ 19 ಶಾಸಕರನ್ನು ಹೊಂದಿರುವ ಕಾರಣ, ಆ ಪಕ್ಷಕ್ಕೆ ನಾಲ್ಕು ಮಂತ್ರಿ ಸ್ಥಾನ ಮೀಸಲಿಡಲಾಗಿದೆ.
ಲೋಕಸಭೆ ಚುನಾವಣೆ ಇನ್ನೆರಡು ವರ್ಷ ಬಾಕಿ ಇರುವಾಗ ನಿತೀಶ್ ಕುಮಾರ್ ಆರ್ಜೆಡಿಯೊಟ್ಟಿಗೆ ಮೈತ್ರಿ ಮಾಡಿಕೊಂಡಿದ್ದೇಕೆ ಎಂಬ ಕುತೂಹಲಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಮಾಧ್ಯಮದವರ ಎದುರು ಮಾತನಾಡಿದ ನಿತೀಶ್ ಕುಮಾರ್, ‘ಬಿಜೆಪಿಯವರು ನನ್ನ ಬಗ್ಗೆ ಎಷ್ಟಾದರೂ ಮಾತಾಡಲಿ ಬಿಡಿ‘ ಎಂದು ಹೇಳಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಕುಟುಂಬದ ಭ್ರಷ್ಟಾಚಾರವನ್ನು ಬಹಿರಂಗಗೊಳಿಸಿ, ಮಹಾ ಘಟ್ ಬಂಧನ್ ಸರ್ಕಾರ ಉರುಳಿ ಬೀಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಶೀಲ್ ಮೋದಿಯನ್ನು ನಿರ್ಲಕ್ಷ್ಯ ಮಾಡಿದ್ದೇ ಬಿಜೆಪಿಗೆ ಮುಳ್ಳಾಯಿತಾ?