Site icon Vistara News

ಬಿಹಾರ ಸಂಪುಟ ರಚನೆ; ಗೃಹ ಖಾತೆ ಉಳಿಸಿಕೊಂಡ ನಿತೀಶ್, ಲಾಲು ಪುತ್ರರಿಗೆ ಸಿಕ್ಕಿದ್ದು ಯಾವ ಖಾತೆ?

Bihar Cabinet portfolio allocation Here is List

ಪಟನಾ: ಬಿಹಾರ ಮಹಾ ವಿಕಾಸ ಅಘಾಡಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಇಂದು ಸಂಪುಟ ರಚನೆಯೂ ಆಗಿದೆ. ಆರ್​ಜೆಡಿ ಪಕ್ಷದ 16, ಜೆಡಿಯುದ 11, ಕಾಂಗ್ರೆಸ್​​ನ ಇಬ್ಬರು ಮತ್ತು ಹಿಂದುಸ್ಥಾನಿ ಆವಂ ಮೋರ್ಚಾ (ಎಚ್​ಎಎಂ)ದ ಒಬ್ಬರು ಮತ್ತು ಒಬ್ಬ ಸ್ವತಂತ್ರ್ಯ ಶಾಸಕ ಸೇರಿ, ಒಟ್ಟ 31 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ. ಮತ್ತೊಂದು ಪ್ರಮುಖ ವಿಷಯವೆಂದರೆ, ಈ ಬಾರಿ ಬಿಹಾರ ಕ್ಯಾಬಿನೆಟ್​​ನಲ್ಲಿ ಐವರು ಮುಸ್ಲಿಮರಿಗೆ ಅವಕಾಶ ನೀಡಲಾಗಿದೆ. ಕಳೆದ, ಎನ್​ಡಿಎ-ಜೆಡಿಯು ಮೈತ್ರಿ ಸರ್ಕಾರದ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಒಬ್ಬ ಸಚಿವ ಮಾತ್ರ ಇದ್ದರು. ಹಾಗೇ, ಯಾದವ ಸಮುದಾಯಕ್ಕೆ ಒಟ್ಟು ಏಳು ಸಚಿವ ಸ್ಥಾನ ಕೊಡಲಾಗಿದೆ.

ಆರ್​ಜೆಡಿ-ಜೆಡಿಯು-ಕಾಂಗ್ರೆಸ್​ ಮೈತ್ರಿ ಮಹಾ ಘಟ್​ ಬಂಧನ್​​ ಸರ್ಕಾರದಲ್ಲಿ ಇಂದು ಮೊದಲನೇ ಹಂತದ ಸಂಪುಟ ರಚನೆಯಾಗಿದ್ದು, ಮುಂದಿನ ಹಂತದಲ್ಲಿ ಇನ್ನೂ ನಾಲ್ವರು ಸೇರ್ಪಡೆಯಾಗುವ ಸಾಧ್ಯತೆ ಇದೆ. ಇಂದು 31 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ಖಾತೆ ಹಂಚಿಕೆಯೂ ಆಗಿದೆ. ಅತ್ಯಂತ ಪ್ರಮುಖ ಎಂದೇ ಪರಿಗಣಿತವಾಗಿರುವ ಗೃಹ ಇಲಾಖೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್​ ಅವರೇ ಇಟ್ಟುಕೊಂಡಿದ್ದಾರೆ. ಗೃಹ ಇಲಾಖೆ ಬೇಕೆಂದು ಆರ್​ಜೆಡಿಯ ತೇಜಸ್ವಿ ಯಾದವ್​ ಬೇಡಿಕೆ ಇಟ್ಟಿದ್ದರೂ ಅವರಿಗೆ ಅದು ದಕ್ಕಲಿಲ್ಲ.

ಉಪಮುಖ್ಯಮಂತ್ರಿಯಾಗಿರುವ ತೇಜಸ್ವಿ ಯಾದವ್​​ರಿಗೆ ಆರೋಗ್ಯ, ಹೆದ್ದಾರಿ ನಿರ್ಮಾಣ, ನಗರಾಭಿವೃದ್ಧಿ, ವಸತಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಉಸ್ತುವಾರಿ ಕೊಡಲಾಗಿದೆ. ಮತ್ತೊಂದು ಪ್ರಮುಖ ಇಲಾಖೆಯೆನಿಸಿರುವ ಹಣಕಾಸು ಖಾತೆಯೂ ಜೆಡಿಯು ಪಾಲಿಗೇ ಹೋಗಿದ್ದು, ಆ ಪಕ್ಷದ ವಿಜಯ್​ಕುಮಾರ್ ಚೌಧರಿ ಹಣಕಾಸು ಸಚಿವರಾಗಿದ್ದಾರೆ. ಇನ್ನು ಕಂದಾಯ ಇಲಾಖೆಯನ್ನು ಆರ್​ಜೆಡಿ ನಾಯಕ ಅಲೋಕ್​ ಮೆಹ್ತಾ ಸುಪರ್ದಿಗೆ ನೀಡಲಾಗಿದೆ. ಲಾಲೂ ಪ್ರಸಾದ್​ ಯಾದವ್​ ಇನ್ನೊಬ್ಬ ಪುತ್ರ, ಆರ್​ಜೆಡಿ ನಾಯಕ ತೇಜ್​ ಪ್ರತಾಪ್​ ಯಾದವ್​​ಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ನೀಡಲಾಗಿದೆ.

ಇಂದು ಮಂತ್ರಿ ಸ್ಥಾನ ಪಡೆದವರ ಪಟ್ಟಿ ಇಲ್ಲಿದೆ:
ಜನತಾ ದಳ (ಸಂಯುಕ್ತ)-ನಿತೀಶ್​ ಕುಮಾರ್​ ಪಕ್ಷದ ಸಚಿವರು..
1. ಬಿಜೇಂದರ್​ ಯಾದವ್​, 2. ವಿಜಯ್​ ಚೌಧರಿ, 3. ಶ್ರವಣ್​ ಕುಮಾರ್​, 4. ಜಯಂತ್​ ರಾಜ್​, 5. ಅಶೋಕ್​ ಚೌಧರಿ, 6. ಮದನ್​ ಸಹ್ನಿ, 7. ಸುನೀಲ್​ ಕುಮಾರ್​, 8. ಸಂಜಯ್​ ಝಾ, 9. ಜಮಾ ಖಾನ್​, 10. ಸುಮಿತ್​ ಕುಮಾರ್ ಸಿಂಗ್​ 11. ಲೇಸಿ ಸಿಂಗ್​.

ರಾಷ್ಟ್ರೀಯ ಜನತಾ ದಳ (ಆರ್​ಜೆಡಿ)
1. ತೇಜ್​ ಪ್ರತಾಪ್​ ಯಾದವ್​, 2. ಸುರೇಂದ್ರ ಯಾದವ್​, 3. ಚಂದ್ರಶೇಖರ್​, 4. ರಮಾನಂದ ಯಾದವ್​, 5. ಲಲಿತ್​ ಯಾದವ್​, 6. ಕುಮಾರ್​ ಸರಬ್​​ಜಿತ್​, 7.ಕುಮಾರ್​ ಸರ್ವಜಿತ್​, 8. ಕಾರ್ತೀಕ್​ ಶರ್ಮಾ, 9.ಶಹನವಾಜ್, 10. ಸಮೀರ್​ ಮಹಾಸೇಠ್​, 11. ಅನಿತಾ ದೇವ್​, 12. ಅಲೋಕ್​ ಮೆಹ್ತಾ, 13. ಭರತ್​ ಭೂಷಣ್​ ಮಂಡಲ್​, 14. ಸುಧಾಕರ್​ ಸಿಂಗ್​, 15. ಶಮೀಮ್​ ಅಹ್ಮದ್​, 16. ಜಿತೇಂದ್ರ ರೈ.

ಕಾಂಗ್ರೆಸ್​: 1. ಮುರಳೀಲಾಲ್​ ಗೌತಮ್​, 2. ಅಫಾಕ್​ ಅಲಾಂ

ಎಚ್​ಎಎಂ : ಸಂತೋಷ್​ ಮಾಂಝಿ.

ಸ್ವತಂತ್ರ ಶಾಸಕ: ಸುಮಿತ್​ ಕುಮಾರ್ ಸಿಂಗ್​

ಇದನ್ನೂ ಓದಿ: Bihar Politics | ಸಿಎಂ ನಿತೀಶ್​ ಕುಮಾರ್​ ಬಹುಮತ ಸಾಬೀತು ಆಗಸ್ಟ್​ 24ಕ್ಕೆ; ಯಾಕಿಷ್ಟು ವಿಳಂಬ?

Exit mobile version