ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಗಳು (Opposition Unity) ಜೋರಾಗಿ ನಡೆದಿವೆ. ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಅವರು ಭಾನುವಾರ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ (arvind kejriwal) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬೆನ್ನಲ್ಲೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಭೇಟಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಭಾನುವಾರ ಮಾತುಕತೆಯ ವೇಳೆ, ದೆಹಲಿಯಲ್ಲಿ “ಸೇವೆಗಳ” ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಮರುಸ್ಥಾಪಿಸಲು ಹೊರಡಿಸಿದ ಸುಗ್ರೀವಾಜ್ಞೆಗೆ ಸಂಸತ್ತಿನ ಅನುಮೋದನೆಯನ್ನು ತಡೆಯಲು ಕೇಜ್ರಿವಾಲ್ ಬಿಜೆಪಿಯೇತರ ಪಕ್ಷಗಳ ನಡುವೆ ಸಮನ್ವಯತೆಯನ್ನು ಬಯಸಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟತೆ ದೊರೆತಂತೆ ಕಾಣುತ್ತಿಲ್ಲ.
ಕೇಜ್ರಿವಾಲ್ ಅವರಿಗೆ ಕಾಂಗ್ರೆಸ್‌ನಿಂದ ಬೆಂಬಲ ಪಡೆಯುವುದು ಕೂಡ ಮಹತ್ವದ್ದಾಗಿದೆ ಎಂದು ಜೆಡಿಯು ನಾಯಕರೊಬ್ಬರು ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಕೇಜ್ರಿವಾಲ್ ಮಧ್ಯೆ ಜಟಾಪಟಿ ಇದ್ದರೂ ಅವರನ್ನು ಒಂದುಗೂಡಿಸುವುದು ಪ್ರಮುಖ ಸಮಸ್ಯೆಯಾಗಿದೆ. ಸುಗ್ರೀವಾಜ್ಞೆಯನ್ನು ಯಾವುದ ರಾಜಕೀಯ ಪಕ್ಷವಾಗಲೀ, ಚುನಾಯಿತ ಸರ್ಕಾರವಾಗಲೀ ಒಪ್ಪವುದಿಲ್ಲ. ಈ ವಿಷಯವೂ ಪ್ರಮುಖ ಸಂಗತಿಯಾಗಲಿದೆ. ಇದೀ ರೀತಿಯ ಅನೇಕ ಅಂಶಗಳು ಈ ಒಗ್ಗಟ್ಟಿನ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಮುಖವಾಗಲಿವೆ. ಹಾಗಾಗಿ, ಅರವಿಂದ್ ಕೇಜ್ರಿವಾಲ್ ಕೂಡ ಇತರರತ್ತ ಒಂದು ಹೆಜ್ಜೆ ಮುಂದೆ ಬರಬೇಕಾಗುತ್ತದೆ ಎಂದು ಜೆಡಿಯು ಹೆಸರು ಹೇಳಲಿಚ್ಛಿಸದ ನಾಯಕರೊಬ್ಬರು ತಿಳಿಸಿದ್ದಾರೆ.
ದಿಲ್ಲಿ ಪ್ರವಾಸದಲ್ಲಿರುವ ನಿತೀಶ್ ಕುಮಾರ್ ಅವರು ಮಂಗಳವಾರ ಪಾಟ್ನಾಗೆ ಮರಳಲಿದ್ದು, ಅದಕ್ಕೂ ಮೊದಲು ಇನ್ನೂ ಮೂರ್ನಾಲ್ಕು ನಾಯಕರ ಜತೆ ಮಾತುಕತೆಯನ್ನು ನಡೆಸಲಿದ್ದಾರೆಂದು ತಿಳಿದು ಬಂದಿದೆ. ಸಂವಿಧಾನದ ಮೌಲ್ಯಗಳನ್ನು ಕಳೆಗುಂದಿಸಿ, ಪ್ರಜಾಪ್ರಭುತ್ವವನ್ನು ಮೌಲ್ಯವನ್ನು ಕಡಿಮೆ ಮಾಡುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ತಡೆಯಲು ಪ್ರತಿಪಕ್ಷಗಳು ಒಗ್ಗಟ್ಟಾಗುವುದು ಮಹತ್ವದ್ದಾಗಿದೆ. ಹಾಗಾಗಿ ಬೆಂಬಲ ನೀಡುವಂತೆ ನಿತೀಶ್ ಕುಮಾರ್ ಅವರು ಅರವಿಂದ್ ಕೇಜ್ರಿವಾಲ್ ಅವರಿಗೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Opposition Unity: ಅರವಿಂದ್ ಕೇಜ್ರಿವಾಲ್- ನಿತೀಶ್ ಕುಮಾರ್ ಮತ್ತೆ ಮಾತುಕತೆ, ಪ್ರತಿಪಕ್ಷಗಳ ಒಗ್ಗಟ್ಟಿಗೆ ಪ್ರಯತ್ನ
ಈಗ ಮತ್ತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರನ್ನು ಭೇಟಿ ಮಾಡಲಿರುವ ನಿತೀಶ್ ಕುಮಾರ್ ಕಳೆದ ತಿಂಗಳೂ, ಇದೇ ವಿಷಯಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆಡಳಿತಾರೂಢ ಬಿಜೆಪಿಯ ವಿರುದ್ಧ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಜ ಯ ಸಾಧಿಸಿದ ಬೆನ್ನಲ್ಲೇ ರಾಷ್ಟ್ರ ಮಟ್ಟದಲ್ಲಿ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಬಲ ಬಂದಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.