Viral Video: ಇಂಗ್ಲಿಷ್‌ನಲ್ಲಿ ಮಾತನಾಡಿದ ರೈತನನ್ನು ತರಾಟೆಗೆ ತೆಗೆದುಕೊಂಡ ಬಿಹಾರ ಸಿಎಂ ನಿತೀಶ್ ಕುಮಾರ್ - Vistara News

ದೇಶ

Viral Video: ಇಂಗ್ಲಿಷ್‌ನಲ್ಲಿ ಮಾತನಾಡಿದ ರೈತನನ್ನು ತರಾಟೆಗೆ ತೆಗೆದುಕೊಂಡ ಬಿಹಾರ ಸಿಎಂ ನಿತೀಶ್ ಕುಮಾರ್

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾರ್ಯಕ್ರಮವೊಂದರಲ್ಲಿ ಇಂಗ್ಲಿಷ್ ಪದ ಬಳಕೆ ಮಾಡಿಕೊಂಡು ಮಾತನಾಡಿದ ರೈತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರ ವಿಡಿಯೊ ವೈರಲ್ (Viral Video) ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಾಟ್ನಾ: ಮಾತೃಭಾಷೆ ವರ್ಸಸ್ ಇಂಗ್ಲಿಷ್ ಸಮರ ಯಾವಾಗಲೂ ನಡೆಯುತ್ತಲೇ ಇರುತ್ತದೆ. ಇದೀಗ ಇಂಗ್ಲಿಷ್‌ನಲ್ಲಿ ಮಾತನಾಡಿದ ರೈತನೊಬ್ಬನಿಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ತರಾಟೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ ಕೂಡ.

ಇದನ್ನೂ ಓದಿ: Nitish Kumar | ಹೆಂಗಸರು ಅಶಿಕ್ಷಿತರು, ಗಂಡಸರು ಸುಮ್ಮನಿರಲ್ಲ, ಹೀಗಾದ್ರೆ ಜನಸಂಖ್ಯೆ ನಿಯಂತ್ರಣ ಆಗಲ್ಲ ಎಂದ ನಿತೀಶ್ ಕುಮಾರ್!

ಇತ್ತೀಚೆಗೆ ಪಾಟ್ನಾ ಬಾಪು ಸಭಾಗರ್ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ನಾಲ್ಕನೇ ಕೃಷಿ ಮಾರ್ಗಸೂಚಿ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಲಖಿಸರಾಯ್‌ ಮೂಲದ ರೈತ ಅಮಿತ್ ಕುಮಾರ್ ಸರ್ಕಾರದ ಕೃಷಿ ಯೋಜನೆಗಳಿಂದ ಪಡೆದ ಲಾಭದ ಬಗ್ಗೆ ಮಾತನಾಡುತ್ತಿದ್ದರು. ಸಿಎಂ ಅವರನ್ನು ಹೊಗಳುತ್ತಲೇ ಭಾಷಣ ಆರಂಭಿಸಿದ ಅವರು ತಾವೊಬ್ಬ ಎಂಬಿಎ ಪದವೀಧರರಾಗಿದ್ದು, ಪುಣೆಯಲ್ಲಿ ಸಿಕ್ಕಿದ್ದ ಕೆಲಸವನ್ನು ಬಿಟ್ಟು ತಮ್ಮ ತವರು ಜಿಲ್ಲೆಯಲ್ಲಿ ಅಣಬೆ ಕೃಷಿ ಮಾಡುತ್ತಿರುವ ಬಗ್ಗೆ ವಿವರಿಸಿದ್ದಾರೆ. ಅದಕ್ಕೆ ಧೈರ್ಯ ತುಂಬುವ ವಾತಾವರಣವನ್ನು ಸೃಷ್ಟಿಸಿದ್ದಕ್ಕಾಗಿ ಸಿಎಂ ಅವರಿಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ.

ಅಮಿತ್ ಮಾತನಾಡುವಾಗ ಹೆಚ್ಚಾಗಿ ಇಂಗ್ಲಿಷ್ ಪದಗಳನ್ನು ಬಳಸಿದ್ದಾರೆ. ಇದರಿಂದಾಗಿ ಅಸಮಾಧಾನಗೊಂಡ ಸಿಎಂ ನಿತೀಶ್ ಕುಮಾರ್, “ಇದೇನು ಇಂಗ್ಲೆಂಡ್ ದೇಶವೇ? ಇಲ್ಲೇಕೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಿದ್ದೀರಿ? ನೀವು ಬಿಹಾರದಲ್ಲಿದ್ದೀರಿ. ಸಾಮಾನ್ಯ ಜನರ ವೃತ್ತಿಯಾದ ಕೃಷಿಯನ್ನು ಅಭ್ಯಾಸ ಮಾಡುತ್ತಿದ್ದೀರಿ” ಎಂದು ಅಮಿತ್ ಅವರಿಗೆ ನೆನಪಿಸಿದ್ದಾರೆ.

ಹಾಗೆಯೇ ಕೊರೊನಾ ಲಾಕ್‌ಡೌನ್‌ಗಳ ಸಮಯದಲ್ಲಿ ಸ್ಮಾರ್ಟ್‌ಫೋನ್ ಚಟವು ಅನೇಕ ಜನರು ತಮ್ಮ ಸ್ವಂತ ಭಾಷೆಗಳನ್ನು ಮರೆತುಬಿಡಲು ಕಾರಣವಾಯಿತು ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: Tejashwi Yadav: ನಟಿ ಜತೆ ಬ್ಯಾಡ್ಮಿಂಟನ್ ಆಡಿ ಕ್ರೀಡೆಯ ಮಹತ್ವ ಸಾರಿದ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್
ಇದಾದ ನಂತರ ಮಾತು ಮುಂದುವರಿಸಿದ ಅಮಿತ್, “government schemes” ಎಂದು ಇಂಗ್ಲಿಷ್ ಅಲ್ಲಿ ನುಡಿದಿದ್ದಾರೆ. ತಕ್ಷಣ ಅವರ ಮಾತನ್ನು ತಡೆಹಿಡಿದ ನಿತೀಶ್, “ಇದು ಏನು? ನಿಮಗೆ ಸರ್ಕಾರಿ ಯೋಜನೆ ಎಂದು ಹೇಳಲು ಆಗುವುದಿಲ್ಲವೇ? ನಾನು ತರಬೇತಿಯಿಂದ ಇಂಜಿನಿಯರ್ ಆಗಿದ್ದೇನೆ. ಹಾಗೆಯೇ ನನ್ನ ಬೋಧನಾ ಮಾಧ್ಯಮ ಕೂಡ ಇಂಗ್ಲಿಷ್ ಆಗಿತ್ತು. ಆ ಭಾಷೆಯನ್ನು ಶೈಕ್ಷಣಿಕ ಅನ್ವೇಷಣೆಗಳಿಗೆ ಬಳಸುವುದು ಬೇರೆ ವಿಷಯ. ನೀವು ದಿನನಿತ್ಯದ ಬಳಕೆಗೇ ಬಳಸಿಕೊಂಡರೆ ಹೇಗೆ?” ಎಂದು ಕೇಳಿದ್ದಾರೆ. ಈ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Vande Bharat Metro: ಮೊದಲ ವಂದೇ ಭಾರತ್‌ ಮೆಟ್ರೋ ಸಂಚಾರಕ್ಕೆ ಸಿದ್ಧ; ಇಲ್ಲಿದೆ ವಿಡಿಯೊ

Vande Bharat Metro: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸದ್ಯ ಭಾರತದಲ್ಲಿ ಸಂಪರ್ಕ ಕ್ರಾಂತಿಯನ್ನೇ ಉಂಟು ಮಾಡಿದೆ. ಇದೀಗ ವಂದೇ ಭಾರತ್‌ ಮೆಟ್ರೋ ಸರದಿ. ಹೌದು ದೇಶೀಯವಾಗಿ ನಿರ್ಮಿಸಲಾಗುತ್ತಿರುವ ವಂದೇ ಭಾರತ್‌ ಮೆಟ್ರೋದ ಬೋಗಿಗಳನ್ನು ಪಂಜಾಬ್‌ನ ಕಪುರ್ಥಾಲಾ ದ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಿಸಲಾಗುತ್ತಿದೆ. ಜುಲೈಯಲ್ಲಿ ಈ ಮೆಟ್ರೋಸ ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಈ ಮೆಟ್ರೋದ ವಿಡಿಯೊ ಹೊರ ಬಿಡಲಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮೆಟ್ರೋ ಹೇಗಿದೆ? ನೀವೂ ನೋಡಿ.

VISTARANEWS.COM


on

Vande Bharat Metro
Koo

ನವದೆಹಲಿ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು-ಇದು ಸದ್ಯ ಭಾರತದಲ್ಲಿ ಸಂಪರ್ಕ ಕ್ರಾಂತಿಯನ್ನೇ ಉಂಟು ಮಾಡಿದೆ. ಆರಂಭವಾಗಿ ಕೆಲವೇ ದಿನಗಳಲ್ಲಿ ಜನ ಮನ ಗೆದ್ದಿದೆ. ಇದೇ ಯಶಸ್ಸಿನಿಂದ ಸ್ಫೂರ್ತಿ ಪಡೆದು ವಂದೇ ಭಾರತ್‌ ಮೆಟ್ರೋ (Vande Bharat Metro) ಸಿದ್ಧಪಡಿಸಲಾಗುತ್ತಿದ್ದು, ಜುಲೈ ವೇಳೆಗೆ ಪರೀಕ್ಷಾರ್ಥ ಓಡಾಟ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಪಂಜಾಬ್‌ನ ಕಪುರ್ಥಾಲಾ (Punjab’s Kapurthala)ದ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ವಂದೇ ಭಾರತ್ ಮೆಟ್ರೋದ ಬೋಗಿಗಳನ್ನು ನಿರ್ಮಿಸಲಾಗುತ್ತದೆ. ಸದ್ಯ ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಗಮನ ಸೆಳೆಯುತ್ತಿದೆ (Viral Video).

ಮೊದಲ ಹಂತದಲ್ಲಿ 50 ವಂದೇ ಭಾರತ್ ಮೆಟ್ರೋ ರೈಲುಗಳನ್ನು ನಿರ್ಮಾಣ ಮಾಡಲಾಗುತ್ತದೆ ಮತ್ತು ಕ್ರಮೇಣ ಸಂಖ್ಯೆಯನ್ನು 400ಕ್ಕೆ ಏರಿಸಲಾಗುವುದು ಎಂದು ರೈಲ್ವೆ ಮೂಲಗಳು ತಿಳಿಸಿವೆ. ಭಾರತದಲ್ಲೇ ನಿರ್ಮಾಣವಾಗುತ್ತಿರುವ ಮೆಟ್ರೋ ರೈಲು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಇದು ದೊಡ್ಡ ನಗರಗಳಲ್ಲಿ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಲು ಸಹಾಯ ಮಾಡಲಿದೆ. ಅಲ್ಲದ ಮಹಾನಗರಗಳ ಅಕ್ಕಪಕ್ಕದ ನಗರಗಳಿಗೂ ಮೆಟ್ರೋ ಸೇವೆ ವಿಸ್ತರಿಸುವ ಯೋಜನೆಗೆ ಇದು ಉತ್ತೇಜನ ನೀಡಲಿದೆ.

ವಂದೇ ಭಾರತ್ ಮೆಟ್ರೋ 100 ಕಿ.ಮೀ.ನಿಂದ 250 ಕಿ.ಮೀ.ವರೆಗೆ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಇದು 12 ಬೋಗಿಗಳನ್ನು ಹೊಂದಿದೆ. ಬೇಕಾದರೆ 16 ಬೋಗಿಗಳವರೆಗೆ ವಿಸ್ತರಿಸಬಹುದು ಎಂದು ಅವರು ಹೇಳಿದ್ದಾರೆ.

ಇರಲಿದೆ ಹಲವು ವೈಶಿಷ್ಟ್ಯ

ವಂದೇ ಭಾರತ್‌ ಮೆಟ್ರೋ ಅಸ್ತಿತ್ವದಲ್ಲಿರುವ ಹಳಿಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಲಕ್ನೋ-ಕಾನ್ಪುರ, ಆಗ್ರಾ-ಮಥುರಾ ಮತ್ತು ತಿರುಪತಿ-ಚೆನ್ನೈನಂತಹ ಮಾರ್ಗಗಳಲ್ಲಿ ಸಂಚರಿಸಲಿದೆ. ಇದು ವಿಶಾಲವಾದ ಒಳಾಂಗಣ ಮತ್ತು ದೊಡ್ಡ ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿದೆ. ಜತೆಗೆ ಪ್ರಸ್ತುತ ಚಾಲನೆಯಲ್ಲಿರುವ ಮೆಟ್ರೋ ರೈಲುಗಳಲ್ಲಿ ಲಭ್ಯವಿಲ್ಲದ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.‌ ಅಧಿಕಾರಿಗಳು ಈ ವರ್ಷವೇ ರೈಲು ಓಡಾಟ ಆರಂಭಿಸಲು ಸಾಧ್ಯವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2019ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಪ್ರಾರಂಭವಾದಾಗಿನಿಂದ ಭಾರತದ ಸೆಮಿ-ಹೈಸ್ಪೀಡ್ ರೈಲು ಪ್ರಯಾಣದಲ್ಲಿ ಹಲವು ಸುಧಾರಣೆ ಕಂಡು ಬಂದಿದೆ. ಸದ್ಯ ವಂದೇ ಭಾರತ್‌ ಮೆಟ್ರೋ ಕೂಡ ಈ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎನ್ನುವ ನಿರೀಕ್ಷೆ ಇದೆ.

ಇದನ್ನೂ ಓದಿ: PM Narendra Modi: ಬೆಂಗಳೂರು- ಕಲಬುರಗಿ, ಮೈಸೂರು- ಚೆನ್ನೈ ಸೇರಿ 10 ವಂದೇ ಭಾರತ್‌ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಲು ಪ್ರಧಾನಿ ಸೂಚನೆ

ರೈಲು ಪ್ರಯಾಣದಲ್ಲಿನ ಸುರಕ್ಷತೆಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 2014ರಿಂದ ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಸುರಕ್ಷತೆಗೆ ಸಂಬಂಧಿಸಿದ ಕೆಲಸಗಳಿಗಾಗಿ ಮೀಸಲಾದ ನಿಧಿಯನ್ನು ರಚಿಸುವುದು, ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದು ಹಾಕುವುದು, ಹಳಿಗಳ ನವೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದು ಮತ್ತು ಸುರಕ್ಷಿತ ಪ್ರಯಾಣಿಕರ ಬೋಗಿಗಳ ಟ್ರ್ಯಾಕ್ ರೋಲ್ ಔಟ್ ಅನ್ನು ಹೆಚ್ಚಿನ ವೇಗದಲ್ಲಿ ಆಧುನೀಕರಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.

Continue Reading

ದೇಶ

Hindu Marriage: ವಿಧಿಬದ್ಧವಾಗಿ ನಡೆಯದ ಮದುವೆಗೆ ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್‌

Hindu Marriage: ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಅಂದರೆ ಕೇವಲ ಸಂಗೀತ, ನೃತ್ಯ ಸಂಭ್ರಮ ಅಲ್ಲ ಅಥವಾ ವ್ಯವಹಾರ ಅಲ್ಲ. ಕೆಲವು ವಿಧಿ ವಿಧಾನಗಳು, ಸಂಪ್ರದಾಯಗಳ ಮೂಲಕ ನಡೆದರೆ ಮಾತ್ರ ವಿವಾಹಕ್ಕೆ ಮಾನ್ಯತೆ ಇರುತ್ತದೆ. ಹಿಂದೂ ವಿವಾಹ ಕಾಯ್ದೆ ಪ್ರಕಾರ ಈ ವಿಧಿವಿಧಾನಗಳು, ಸಂಪ್ರದಾಯಗಳು ನಡೆದರೆ ಮಾತ್ರ ಮದುವೆಗೆ ಮಾನ್ಯತೆ ದೊರೆಯುತ್ತದೆ ಎಂದು ಕೋರ್ಟ್‌ ಹೇಳಿದೆ.

VISTARANEWS.COM


on

Hindu Marriage
Koo

ನವದೆಹಲಿ:ಹಿಂದೂ ವಿವಾಹ(Hindu Marriage) ಶಾಸ್ತ್ರಬದ್ಧವಾಗಿ ಅಥವಾ ವಿಧಿಬದ್ಧವಾಗಿ(Requisite Ceremonies) ನಡೆಯದೇ ಇದ್ದಲ್ಲಿ ಅದಕ್ಕೆ ಮಾನ್ಯತೆ ಇಲ್ಲ ಎಂದು ಸುಪ್ರೀಂಕೋರ್ಟ್‌(Supreme Court) ಸ್ಪಷ್ಟಪಡಿಸಿದೆ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಅಂದರೆ ಕೇವಲ ಸಂಗೀತ, ನೃತ್ಯ ಸಂಭ್ರಮ ಅಲ್ಲ ಅಥವಾ ವ್ಯವಹಾರ ಅಲ್ಲ. ಕೆಲವು ವಿಧಿ ವಿಧಾನಗಳು, ಸಂಪ್ರದಾಯಗಳ ಮೂಲಕ ನಡೆದರೆ ಮಾತ್ರ ವಿವಾಹಕ್ಕೆ ಮಾನ್ಯತೆ ಇರುತ್ತದೆ. ಹಿಂದೂ ವಿವಾಹ ಕಾಯ್ದೆ(Hindu Marriage Act) ಪ್ರಕಾರ ಈ ವಿಧಿವಿಧಾನಗಳು, ಸಂಪ್ರದಾಯಗಳು ನಡೆದರೆ ಮಾತ್ರ ಮದುವೆಗೆ ಮಾನ್ಯತೆ ದೊರೆಯುತ್ತದೆ ಎಂದು ಕೋರ್ಟ್‌ ಹೇಳಿದೆ.

ಇತ್ತೀಚೆಗೆ ಇಬ್ಬರು ಪೈಲಟ್‌ ಆಗಿ ಕೆಲಸ ಮಾಡುತ್ತಿದ್ದ ದಂಪತಿ ಸಲ್ಲಿಸಿದ್ದ ವಿಚ್ಛೇದನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗರತ್ನ ಮತ್ತು ಅಗಸ್ಟಿನ್‌ ಜಾರ್ಜ್‌ ಮಸಿಹ್‌ ಇದ್ದ ಪೀಠ, ಹಿಂದೂ ವಿವಾಹವು ಸೂಕ್ತವಾದ ಆಚರಣೆಗಳು ಇಲ್ಲದೆಯೇ ಆಗಿದ್ದಲ್ಲಿ, ಅಂತಹ ವಿವಾಹವನ್ನು ‘ಹಿಂದೂ ವಿವಾಹವೆಂದು ಪರಿಗಣಿಸಲಾಗದು’ ಎಂದು ಏಪ್ರಿಲ್‌ 19ರ ಆದೇಶದಲ್ಲಿ ಹೇಳಿತ್ತು. ‘ಹಿಂದೂ ವಿವಾಹದಲ್ಲಿ ಸಪ್ತಪದಿ ಅಂದರೆ ಋಗ್ವೇದದ ಪ್ರಕಾರ, ಏಳನೆಯ ಹೆಜ್ಜೆಯನ್ನು ಪೂರ್ಣಗೊಳಿಸಿದ ನಂತರ ವರನು ವಧುವಿಗೆ ‘ಏಳು ಹೆಜ್ಜೆಗಳ ಮೂಲಕ ನಾವು ಸಖರಾಗಿದ್ದೇವೆ. ಹೀಗಾಗಿ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ಚೆನ್ನಾಗಿ ಯೋಚಿಸಿ ನಿರ್ಧಾರಕ್ಕೆ ಬರಬೇಕು. ಹಿಂದೂ ವಿವಾಹ ಅಂದರೆ ಅದೊಂದು ಸಂಸ್ಕಾರ. ಭಾರತೀಯ ಸಮಾಜದಲ್ಲಿ ಮದುವೆಗೆ ಅದರದ್ದೇ ಆದ ಮೌಲ್ಯಗಳಿವೆ ಎಂದು ಹೇಳಿದೆ.

ಮದುವೆ ಎಂಬುದು ಕೇವಲ ನೃತ್ಯ, ಸಂಗೀತ, ಮನೋರಂಜನೆಗಾಗಿ ನಡೆಯುವ ಕಾರ್ಯಕ್ರಮ ಅಲ್ಲ. ಇದು ಭಾರತೀಯ ಕುಟುಂಬ ವ್ಯವಸ್ಥೆಗೆ ಅಡಿಪಾಯ ಹಾಕುವ ವಿಚಾರವಾಗಿದೆ. ಇದು ಒಬ್ಬ ಪುರುಷ ಮತ್ತು ಮಹಿಳೆಗೆ ಗಂಡ-ಹೆಂಡತಿ ಎಂಬ ಸ್ಥಾನಮಾನವನ್ನು ನೀಡುವ ವ್ಯವಸ್ಥೆ. ಅದು ಬಹಳ ಪವಿತ್ರವಾದ ವಿಚಾರವಾಗಿದ್ದು, ಅದು ಒಬ್ಬ ವ್ಯಕ್ತಿಗೆ ಜೀವನ ಪರ್ಯಾಂತ ಗೌರವ, ಸಮಾನತೆ, ಒಮ್ಮತದ ಮತ್ತು ಆರೋಗ್ಯಯುತ ಸಂಬಂಧವನ್ನು ನೀಡುತ್ತದೆ. ಇದು ಪುರುಷ ಮತ್ತು ಮಹಿಳೆಯ ನಡುವೆ ಸಂಬಂಧವನ್ನು ಬೆಸೆಯಲು ಆಚರಿಸುವ ವಿಧ್ಯುಕ್ತ ಕಾರ್ಯಕ್ರಮವಾಗಿದೆ. ಪತಿ ಪತ್ನಿಯ ಸ್ಥಾನವನ್ನು ಪಡೆಯಲು ಯುವಕ-ಯುವತಿಯರು ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಮಾನ್ಯವಾದ ವಿವಾಹ ಆಚರಣೆ ಇಲ್ಲದಿದ್ದರೂ ವಿವಾಹ ಆಗಿದೆ ಎಂಬಂತೆ ತೋರಿಸಿಕೊಳ್ಳುವ ಕ್ರಮವನ್ನು ನಾವು ಒಪ್ಪುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ: Lok Sabha Election 2024: 60 ವರ್ಷ ದೇಶವಾಳಿದ ನಕಲಿ ಗಾಂಧಿ ಕಂಪನಿಯಲ್ಲಿ ಪ್ರಧಾನಿ ಅಭ್ಯರ್ಥಿಗೆ ಬರ: ಜೋಶಿ ಲೇವಡಿ

ಹಿಂದೂ ವಿವಾಹ ಕಾಯ್ದೆ ಜಾರಿಗೊಳಿಸಿದ ನಂತರದಲ್ಲಿ ಪತಿ ಮತ್ತು ಪತ್ನಿಯ ನಡುವೆ ಕಾನೂನಿನ ಮಾನ್ಯತೆ ಇರುವ ಸಂಬಂಧ ಎಂದರೆ ಅದು ಏಕಸಾಂಗತ್ಯ ಮಾತ್ರ. ಈ ಕಾಯ್ದೆ ಬಹುಪತ್ನಿತ್ವವನ್ನು ಒಪ್ಪುವುದಿಲ್ಲ. ಅಗತ್ಯವಿರುವ ಶಾಸ್ತ್ರ ಸಂಪ್ರದಾಯ ಕೈಗೊಳ್ಳದೇ ಇದ್ದಾಗ ಪ್ರಾಧಿಕಾರ ನೀಡುವ ಮದುವೆಯ ಪ್ರಮಾಣ ಪತ್ರವನ್ನು ನೀಡಿದೆ ಎಂದ ಮಾತ್ರಕ್ಕೆ ಮದುವೆ ಆಗಿದೆ ಎನ್ನಲಾಗದು. ಕಾಯ್ದೆಯ ಸೆಕ್ಷನ್‌ 7ರ ಪ್ರಕಾರ ಹಿಂದೂ ವಿವಾಹ ವಿಧಿಬದ್ಧವಾಗಿ ನಡೆದಿರಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.

Continue Reading

ಪ್ರಮುಖ ಸುದ್ದಿ

PM Narendra Modi: ಉಗ್ರರನ್ನು ಅವರ ತಾಯ್ನೆಲದಲ್ಲೇ ಕೊಲ್ಲುತ್ತೇವೆ: ಗುಡುಗಿದ ಪಿಎಂ ನರೇಂದ್ರ ಮೋದಿ

PM Narendra Modi: ನಮ್ಮ ಮುಸ್ಲಿಂ ಸಹೋದರಿಯರು ವೋಟ್ ಬ್ಯಾಂಕ್ ರಾಜಕಾರಣದ ಅತಿ ದೊಡ್ಡ ಬಲಿಪಶುಗಳು. ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ಕಾಂಗ್ರೆಸ್ ಮುಸ್ಲಿಂ ಸಹೋದರಿಯರಿಗೆ ಭದ್ರತೆಯನ್ನು ನೀಡಲಿಲ್ಲ. ತ್ರಿವಳಿ ತಲಾಖ್ ರದ್ದತಿಯು ಮಹಿಳೆಯರಿಗೆ ಮಾತ್ರವಲ್ಲದೆ ಕುಟುಂಬಗಳಿಗೆ ಭದ್ರತೆಯನ್ನು ಒದಗಿಸಿದೆ ಎಂದಿದ್ದಾರೆ ಮೋದಿ.

VISTARANEWS.COM


on

pm Narendra Modi
Koo

ಹೊಸದಿಲ್ಲಿ: ಕೇಂದ್ರದದಲ್ಲಿದ್ದ ಹಿಂದಿನ ಕಾಂಗ್ರೆಸ್‌ ಸರ್ಕಾರಗಳ ವಿರುದ್ಧ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ನವ ಭಾರತವು (India) ಇತರ ದೇಶಗಳಿಗೆ ಭಯೋತ್ಪಾದಕರ (terrorists) ಬಗ್ಗೆ ದಾಖಲೆಗಳನ್ನು (dossiers)‌ ಕಳುಹಿಸುವುದಿಲ್ಲ. ಬದಲಾಗಿ ಅವರಿಗೆ “ಡೋಸ್” ನೀಡಿ ಅವರ ತವರು ನೆಲದಲ್ಲೇ (Home turf) ಅವರನ್ನು ಕೊಲ್ಲುತ್ತದೆ ಎಂದು ಹೇಳಿದ್ದಾರೆ.

“ಹತ್ತು ವರ್ಷಗಳ ಹಿಂದೆ ದೇಶವು ಭಯೋತ್ಪಾದನೆಯಿಂದ ಬಳಲುತ್ತಿತ್ತು. ಆದರೆ ಕಾಂಗ್ರೆಸ್, ಭಯೋತ್ಪಾದನೆಯ ಮೂಲವನ್ನು ತಿಳಿದಿದ್ದರೂ, ಪಾಕಿಸ್ತಾನಕ್ಕೆ ದಸ್ತಾವೇಜನ್ನು ಕಳುಹಿಸುತ್ತಿತ್ತು” ಎಂದು ಗುಜರಾತ್‌ನ ಸಬರ್ಕಾಂತ ಜಿಲ್ಲೆಯ ಹಿಮತ್‌ನಗರ ನಗರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಹೇಳಿದರು. “ಇಂದು, ಭಾರತವು ಭಯೋತ್ಪಾದನೆಯ ನೇತಾರರಿಗೆ ದಾಖಲೆಗಳನ್ನು ಕಳುಹಿಸುವುದಿಲ್ಲ. ಆದರೆ ಅವರಿಗೆ ಡೋಸ್ ನೀಡಿ ಅವರ ಮನೆಯ ಒಳಗೇ ಕೊಲ್ಲುತ್ತದೆ” ಎಂದಿದ್ದಾರೆ.

ತಮ್ಮ ಭಾಷಣದಲ್ಲಿ ಪ್ರಧಾನಿ ಕಾಂಗ್ರೆಸ್ ಅನ್ನು ಗುರಿಯಾಗಿಟ್ಟುಕೊಂಡು, ಭಾರತದಲ್ಲಿ ಮುಸ್ಲಿಂ ಮಹಿಳೆಯರು ವೋಟ್ ಬ್ಯಾಂಕ್ ರಾಜಕಾರಣದ ದೊಡ್ಡ ಬಲಿಪಶುಗಳು ಎಂದು ಹೇಳಿದರು. “ನಮ್ಮ ಮುಸ್ಲಿಂ ಸಹೋದರಿಯರು ವೋಟ್ ಬ್ಯಾಂಕ್ ರಾಜಕಾರಣದ ಅತಿ ದೊಡ್ಡ ಬಲಿಪಶುಗಳು. ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ಕಾಂಗ್ರೆಸ್ ಮುಸ್ಲಿಂ ಸಹೋದರಿಯರಿಗೆ ಭದ್ರತೆಯನ್ನು ನೀಡಲಿಲ್ಲ. ತ್ರಿವಳಿ ತಲಾಖ್ ರದ್ದತಿಯು ಮಹಿಳೆಯರಿಗೆ ಮಾತ್ರವಲ್ಲದೆ ಕುಟುಂಬಗಳಿಗೆ ಭದ್ರತೆಯನ್ನು ಒದಗಿಸಿದೆ. ಅವರು (ಕಾಂಗ್ರೆಸ್) ವೋಟ್ ಬ್ಯಾಂಕ್‌ಗಾಗಿ ತ್ರಿವಳಿ ತಲಾಖ್ ಪದ್ಧತಿಯನ್ನು ನಿಲ್ಲಿಸಲಿಲ್ಲ…” ಎಂದು ಪ್ರಧಾನಿ ಪ್ರತಿಪಾದಿಸಿದರು.

“ನಾನು ಮತ ಬ್ಯಾಂಕ್ ಬಗ್ಗೆ ಚಿಂತಿಸುವುದಿಲ್ಲ. ನಾನು ಚುನಾವಣೆಯಲ್ಲಿ ಗೆಲ್ಲಲು ಕೆಲಸ ಮಾಡುವುದಿಲ್ಲ. ನಾವು ಮುಸ್ಲಿಂ ಮಹಿಳೆಯರ ಜೀವನವನ್ನು ಸುಲಭಗೊಳಿಸಲು ಬಯಸಿದ್ದು, ತ್ರಿವಳಿ ತಲಾಖ್ ಅನ್ನು ಕಾನೂನುಬಾಹಿರಗೊಳಿಸಿದ್ದೇವೆ…” ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಪುನರಾಯ್ಕೆಯಾದರೆ ದೇಶದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಕಾಂಗ್ರೆಸ್ ನಾಯಕರು ಎಚ್ಚರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ (Rahul Gandhi) ವಿರುದ್ಧ ವ್ಯಂಗ್ಯವಾಡಿದರು. “ಕಾಂಗ್ರೆಸ್‌ನ ʻಶೆಹಜಾದಾʼ ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ದೇಶದಲ್ಲಿ ಬೆಂಕಿ ಬೀಳುತ್ತದೆ ಎಂದು ಹೇಳುತ್ತಿದ್ದಾರೆ. ವಾಸ್ತವ ಏನೆಂದರೆ, ಕಾಂಗ್ರೆಸ್‌ನ ಕನಸುಗಳು ಸುಟ್ಟು ಬೂದಿಯಾಗಿವೆ…” ಎಂದು ಮೋದಿ ಹೇಳಿದರು.

“ಕಾಂಗ್ರೆಸ್ ನಾಯಕರು ಈಗ ಸಂವಿಧಾನವು ಅಪಾಯದಲ್ಲಿದೆ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲಾಗುವುದು ಎಂದು ಹೇಳುತ್ತಿದ್ದಾರೆ. ವಾಸ್ತವದಲ್ಲಿ, ಕಾಂಗ್ರೆಸ್ ತನ್ನ 70 ವರ್ಷಗಳ ಆಡಳಿತದಲ್ಲಿ ಇಡೀ ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ನಮ್ಮ ಸಂವಿಧಾನವನ್ನು ಕಾಶ್ಮೀರದಲ್ಲಿ ಜಾರಿಗೊಳಿಸಿರಲಿಲ್ಲ. ನಾನು ಸಂವಿಧಾನಕ್ಕೆ ಬದ್ಧನಾಗಿರುವ ಕಾರಣ ಅದನ್ನು ಮಾಡಿದೆ” ಎಂದು ಅವರು ಒತ್ತಿ ಹೇಳಿದರು.

ಇದನ್ನೂ ಓದಿ: Shyam Rangeela: ಮೋದಿಯನ್ನು ಮಿಮಿಕ್ರಿ ಮಾಡಿ ಖ್ಯಾತಿಯಾದ ಕಲಾವಿದ ಈಗ ಪ್ರಧಾನಿ ವಿರುದ್ಧವೇ ಕಣಕ್ಕೆ!

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಕ್ಷಿಪಣಿ ಬಲದಿಂದ ನಮ್ಮ ನೌಕಾಪಡೆ ‘ಸ್ಮಾರ್ಟ್‌’ ಜತೆಗೆ ಇನ್ನಷ್ಟು ಬಲಿಷ್ಠ

ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಸ್ಮಾರ್ಟ್‌ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಜಲಾಂತರ್ಗಾಮಿ ನೌಕೆಗಳನ್ನು ನಿಗ್ರಹಿಸುವ, ವೈರಿಗಳ ಮೇಲೆ ಹದ್ದಿನ ಕಣ್ಣಿಡುವ ಇದು ಗೇಮ್‌ ಚೇಂಜರ್‌ ಎಂದೇ ಹೇಳಲಾಗುತ್ತಿದೆ.

VISTARANEWS.COM


on

SMART Missile
Koo

ಭಾರತದ ರಕ್ಷಣಾ ಕ್ಷೇತ್ರಕ್ಕೆ ಬಲ ನೀಡುವ, ಜಲಾಂತರ್ಗಾಮಿ ನೌಕೆಗಳನ್ನು ನಿಗ್ರಹಿಸುವ (Anti-Submarine Missile System) ಸಾಮರ್ಥ್ಯದ ಸೂಪರ್‌ಸಾನಿಕ್‌ ಮಿಸೈಲ್‌ ಅಸಿಸ್ಟೆಡ್‌ ರಿಲೀಸ್‌ ಆಫ್‌ ಟಾರ್ಪೆಡೊ (SMART Missile) ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಇದು ಭಾರತದ ನೌಕಾಪಡೆಯ ಬಲವನ್ನು ಇನ್ನಷ್ಟು ಹೆಚ್ಚಿಸಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ದೇಶೀಯವಾಗಿ ಸ್ಮಾರ್ಟ್‌ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಸಾಗರ ಪ್ರದೇಶದಲ್ಲಿ ನೌಕಾಪಡೆಯು ವೈರಿಗಳ ಮೇಲೆ ಇನ್ನಷ್ಟು ನಿಗಾ ಇರಿಸಲು, ಕ್ಷಿಪ್ರವಾಗಿ ಕಾರ್ಯಾಚರಣೆ ಕೈಗೊಳ್ಳಲು, ಪ್ರತಿದಾಳಿ ನಡೆಸಲು ನೆರವಾಗಲಿದೆ. ಇದು ಎರಡನೇ ಪರೀಕ್ಷಾರ್ಥ ಉಡಾವಣೆ. ಇದು ಕ್ಯಾನಿಸ್ಟರ್‌ ಆಧಾರಿತ, 643 ಕಿ.ಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದ್ದು, ಸಾಗರ ಪ್ರದೇಶದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದಾಗ ಕ್ಷಿಪ್ರ ಕಾರ್ಯಾಚರಣೆ ನಡೆಸಲಿದೆ. ಆಗಸದಲ್ಲಿಯೇ ಶತ್ರುನೌಕೆಗಳನ್ನು ಡಿಟೆಕ್ಟ್‌ ಮಾಡುವ ತಂತ್ರಜ್ಞಾನ ಹೊಂದಿದೆ.

ಭಾರತದ ವಾಯುಪಡೆ, ನೌಕಾಪಡೆ ಹಾಗೂ ಭೂಸೇನೆಗಳು ಮೂರೂ ಕಳೆದ ಒಂದು ದಶಕದಲ್ಲಿ ಸಾಕಷ್ಟು ಹೊಸ ಶಸ್ತ್ರಾಸ್ತ್ರಗಳನ್ನು ಪಡೆದಿವೆ. ಭಾರತದ ನೌಕಾಪಡೆ ಈಗ ಸಾಕಷ್ಟು ಯುದ್ಧನೌಕೆಗಳು, ಐಎನ್‌ಎಸ್‌ ವಿಕ್ರಮಾದಿತ್ಯದಂಥ ಜೆಟ್‌ಫೈಟರ್‌ ಕ್ಯಾರಿಯರ್‌ಗಳು, ಅರಿಹಂತ್‌ನಂತ ಸಬ್‌ಮರೀನ್‌ಗಳನ್ನು ಹೊಂದಿದೆ. ಪ್ರಸ್ತುತ ಇದು ಜಗತ್ತಿನ 7ನೇ ಅತಿ ಪ್ರಬಲ ನೌಕಾಪಡೆಯೆನಿಸಿದೆ. ಈ ಪ್ರಾಬಲ್ಯ ಭಾರತವನ್ನು ಸುತ್ತುವರಿದ ಸಾಗರ ಪ್ರದೇಶವನ್ನು ರಕ್ಷಿಸುವುದಷ್ಟೇ ಅಲ್ಲ, ಇಲ್ಲ ಓಡಾಡುವ ಮಿತ್ರದೇಶಗಳ ನೌಕೆಗಳ ರಕ್ಷಣೆಗೂ ನೆರವಾಗಿದೆ ಎನ್ನುವುದು ನಮ್ಮ ಹೆಮ್ಮೆ. ಇತ್ತೀಚೆಗೆ ನಮ್ಮ ನೌಕಾದಳ ಬಲ್ಗೇರಿಯಾ ಹಾಗೂ ಇರಾನ್‌ನ ಹಡಗುಗಳನ್ನು ಕಡಲ್ಗಳ್ಳರಿಂದ ರಕ್ಷಿಸಿದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇತ್ತೀಚೆಗೆ ಬಂಗಾಳ ಕೊಲ್ಲಿಯಲ್ಲಿ ನಮ್ಮ ಸ್ವಾಮ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ನೆಲೆಯಿಂದ ಲಕ್ಷದ್ವೀಪದಲ್ಲಿ ನೌಕಾಪಡೆಯು ʼಐಎನ್‌ಎಸ್‌ಜಟಾಯುʼ ಹೆಸರಿನ ಮತ್ತೊಂದು ನೆಲೆಯನ್ನು ನಿರ್ಮಿಸುವ ವ್ಯೂಹಾತ್ಮಕ ಹಾಗೂ ರಕ್ಷಣಾತ್ಮಕ ಹೆಜ್ಜೆ ಇರಿಸಿದೆ. ಈಗಾಗಲೇ ಅಂಡಮಾನ್‌ನಲ್ಲಿ ಐಎನ್‌ಎಸ್‌ ಬಾಜ್‌ ಎಂಬ ನೌಕಾನೆಲೆ ಇದೆ. ಲಕ್ಷದ್ವೀಪದ ಕವರಟ್ಟಿಯಲ್ಲೇ ದ್ವೀಪ್ರಕಾಶಕ ಎಂಬ ನೌಕಾನೆಲೆ ಇದೆ. ಪಶ್ಚಿಮ ಅರಬ್ಬೀ ಸಮುದ್ರದಲ್ಲಿ ವೈರಿಗಳ ಮೇಲೆ ಹೆಚ್ಚಿನ ನಿಗಾ ಇರಿಸುವುದು, ಸಾಗರ ಪ್ರದೇಶದಲ್ಲಿ ಭಯೋತ್ಪಾದನೆ- ಅಪರಾಧ ತಡೆಗಟ್ಟುವುದು, ಸಮುದ್ರ ಪ್ರದೇಶದಲ್ಲಿ ಮಾದಕವಸ್ತು ಅಕ್ರಮ ಸಾಗಣೆ ನಿಯಂತ್ರಣ ಸಾಧ್ಯ. ಹೊಸ ಟಾರ್ಪೆಡೊ (SMART Missile) ಕ್ಷಿಪಣಿ ಕೂಡ ಇದಕ್ಕೆ ಪೂರಕ.

ಇತ್ತೀಚೆಗೆ ನಮ್ಮ ಕ್ಷಿಪಣಿ ಬಲ ಇನ್ನಷ್ಟು ಮೈದುಂಬಿಕೊಳ್ಳುತ್ತಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ, ಹಲವು ಪರಮಾಣು ಬಾಂಬ್‌ಗಳನ್ನು (Nuclear warhead) ಏಕಕಾಲಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯದ ಅಗ್ನಿ-ವಿ (Agni-V) ಬಹು ಸಿಡಿತಲೆ ಕ್ಷಿಪಣಿಯ ಇತ್ತೀಚಿನ ಹಾರಾಟ ಪರೀಕ್ಷೆ ಇಲ್ಲಿ ಉಲ್ಲೇಖನೀಯ. ಇದೊಂದು ಬಹು ಸ್ವತಂತ್ರವಾಗಿ ಕಾರ್ಯಾಚರಿಸಬಲ್ಲ, ರೀ-ಎಂಟ್ರಿ ತಂತ್ರಜ್ಞಾನ ಹೊಂದಿರುವ ಕ್ಷಿಪಣಿ. ಇದರ ಸಿಡಿತಲೆಯು ಬಾಹ್ಯಾಕಾಶದಲ್ಲಿ ಬೇರ್ಪಟ್ಟು, ಬೆಂಕಿಯ ಚೆಂಡುಗಳು ವಾತಾವರಣವನ್ನು ಮರು ಪ್ರವೇಶಿಸುತ್ತವೆ. ಪ್ರತಿಯೊಂದು ಸಿಡಿತಲೆಯೂ ವಿಭಿನ್ನ ವೇಗದಲ್ಲಿ ಕೆಳಗಿಳಿದು ನೆಲಕ್ಕೆ ಅಪ್ಪಳಿಸುತ್ತದೆ. MIRVಯ ಮುಖ್ಯ ಸಾಮರ್ಥ್ಯವೇ ಮರು-ಪ್ರವೇಶ. ಪ್ರತಿ ಸಿಡಿತಲೆಯೂ ವಿಭಿನ್ನ ವೇಗಗಳು ಮತ್ತು ಪ್ರತ್ಯೇಕ ಗುರಿಗಳನ್ನು ಹೊಂದಿರುವುದರಿಂದ, ಕ್ಷಿಪಣಿ ವಿರೋಧಿ ಗುರಾಣಿಗಳಿಂದ ಅಗ್ನಿ-V ಅನ್ನು ಪ್ರತಿಬಂಧಿಸಲು ಸಾಧ್ಯವಿಲ್ಲ. ಇದನ್ನು ʼಮಿಷನ್‌ ದಿವ್ಯಾಸ್ತ್ರʼ ಎಂದು ಕರೆಯಲಾಗಿದೆ.

ಏಷ್ಯಾ ಉಪಖಂಡದಲ್ಲಿ ಆ ಮೂಲಕ ಶಸ್ತ್ರಾಸ್ತ್ರ ಪೈಪೋಟಿ ಸೃಷ್ಟಿಸುವುದು ನಮ್ಮ ಉದ್ದೇಶವಲ್ಲ. ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಪ್ರಜಾಪ್ರಭುತ್ವ ದೇಶದ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಉದ್ದೇಶ. ನಾವು ಬಲಿಷ್ಟರಾದಾಗ ನಮ್‌ ಮಸುತ್ತಮುತ್ತಲಿನವರೂ ನಮ್ಮನ್ನು ಗೌರವದಿಂದ ಕಾಣುತ್ತಾರೆ. ಅಮೆರಿಕದಂಥ ಬಲಿಷ್ಠ ರಾಷ್ಟ್ರಗಳೂ ʼಭಾರತ ನಮ್ಮ ಮಿತ್ರʼ ಎಂದು ಹಾಡಿ ಹೊಗಳುತ್ತವೆ. ಇಸ್ರೇಲ್‌, ಆಸ್ಟ್ರೇಲಿಯದಂಥ ದೇಶಗಳು ನಮ್ಮೊಂದಿಗೆ ರಕ್ಷಣಾ ಕೊಡುಕೊಳ್ಳುವಿಕೆಗಳನ್ನು ನಡೆಸುತ್ತವೆ. ಫ್ರಾನ್ಸ್‌ನಂಥ ದೇಶಗಳೇ ರಫೇಲ್‌ನಂಥ ಅದ್ಭುತ ಯುದ್ಧಸಾಮರ್ಥ್ಯವನ್ನು ಹೊಂದಿರುವ ಫೈಟರ್‌ ಜೆಟ್‌ಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತವೆ. ʼಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಶಾಶ್ವತ ಸ್ಥಾನಮಾನ ನೀಡಬೇಕುʼ ಎಂದು ಬ್ರಿಟನ್‌ ಪ್ರತಿಪಾದಿಸುತ್ತದೆ. ಇದೆಲ್ಲವೂ ಸ್ವಸಾಮರ್ಥ್ಯ ಇದ್ದಾಗ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಭಾರತ ನಡೆ ಬಲಿಷ್ಠತೆಯತ್ತ ಸಹಜವಾಗಿ ಮುಂದುವರಿದಿದೆ.

ಇದನ್ನೂ ಓದಿ: SMART Missile: ನೌಕೆಗಳನ್ನು ಧ್ವಂಸ ಮಾಡುವ ಸ್ಮಾರ್ಟ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ; ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ

Continue Reading
Advertisement
Vande Bharat Metro
ದೇಶ9 mins ago

Vande Bharat Metro: ಮೊದಲ ವಂದೇ ಭಾರತ್‌ ಮೆಟ್ರೋ ಸಂಚಾರಕ್ಕೆ ಸಿದ್ಧ; ಇಲ್ಲಿದೆ ವಿಡಿಯೊ

Hindu Marriage
ದೇಶ17 mins ago

Hindu Marriage: ವಿಧಿಬದ್ಧವಾಗಿ ನಡೆಯದ ಮದುವೆಗೆ ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್‌

pm Narendra Modi
ಪ್ರಮುಖ ಸುದ್ದಿ38 mins ago

PM Narendra Modi: ಉಗ್ರರನ್ನು ಅವರ ತಾಯ್ನೆಲದಲ್ಲೇ ಕೊಲ್ಲುತ್ತೇವೆ: ಗುಡುಗಿದ ಪಿಎಂ ನರೇಂದ್ರ ಮೋದಿ

karnataka Weather Forecast
ಮಳೆ1 hour ago

Karnataka Weather : ಇಂದು ಮೂರು ಹೊತ್ತು ಒಂದೊಂದು ವಾತಾವರಣ

Vastu Tips
ಲೈಫ್‌ಸ್ಟೈಲ್2 hours ago

Vastu Tips: ಮನೆ ಹೊರಗಿನ ಉದ್ಯಾನದಲ್ಲಿ ವಾಸ್ತು ಪಾಲಿಸಿ; ಮನೆಯೊಳಗಿನ ನೆಮ್ಮದಿ ವೃದ್ಧಿಸಿ

SMART Missile
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಕ್ಷಿಪಣಿ ಬಲದಿಂದ ನಮ್ಮ ನೌಕಾಪಡೆ ‘ಸ್ಮಾರ್ಟ್‌’ ಜತೆಗೆ ಇನ್ನಷ್ಟು ಬಲಿಷ್ಠ

Aloe Vera face mask
ಆರೋಗ್ಯ2 hours ago

Aloe Vera Benefits: ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿಸಲು ಲೋಳೆಸರದ ಮಾಸ್ಕ್‌ ಬಳಸಿ

Dina Bhavishya
ಭವಿಷ್ಯ3 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

Benefits of Tender Coconut
ಆರೋಗ್ಯ3 hours ago

Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

Bhajanotsava
ಬೆಂಗಳೂರು6 hours ago

Bhajanotsava: ಓಂಕಾರ ಆಶ್ರಮದಲ್ಲಿ ನಿರಂತರ ಭಜನೋತ್ಸವ ಸಂಪನ್ನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌