Site icon Vistara News

Bihar Floor Test: ವಿಶ್ವಾಸಮತ ಗೆದ್ದ ಬಿಹಾರ ಸಿಎಂ ನಿತೀಶ್ ಕುಮಾರ್

Bihar Floor Test, Bihar CM Nitish Kumar wins vote of confidence

ಪಾಟ್ನಾ: ಬಿಹಾರ ಅಸೆಂಬ್ಲಿಯಲ್ಲಿ (Bihar Assembly Assembly) ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಶ್ವಾಸಮತವನ್ನು ಗೆದ್ದಿದ್ದಾರೆ(vote of confidence). ಸರ್ಕಾರದ ಪರ 125 ಮತಗಳು ಚಲಾವಣೆಯಾದರೆ, ವಿರೋಧದಲ್ಲಿ 112 ಮತಗಳು ಚಲಾವಣೆಯಾದವು. ಈ ನಡುವೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಅವರ ವಿರೋಧಿ ಬಣದಲ್ಲಿರುವ ತೇಜಸ್ವಿ ಯಾದವ್‌ (Tejaswi Yadav) ನಿವಾಸಕ್ಕೆ ಭಾರಿ ಪೊಲೀಸ್‌ ಸರ್ಪಕಾವಲು ಹಾಕಲಾಗಿತ್ತು. 243 ಸದಸ್ಯರ ವಿಧಾನಸಭೆ ಬಲದಲ್ಲಿ ಸರಳ ಬಹುಮತಕ್ಕೆ 122 ಸದಸ್ಯರ ಬೆಂಬಲ ಬೇಕು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ʼಮಹಾಘಟಬಂಧನ್’ನಿಂದ ಪ್ರತ್ಯೇಕಗೊಂಡು ಎನ್‌ಡಿಎಯೊಂದಿಗೆ ಸೇರಿ ಹೊಸ ಸರ್ಕಾರವನ್ನು ರಚಿಸಿದ ಬಳಿಕ ಇದೀಗ ಬಿಹಾರ ವಿಧಾನಸಭೆಯಲ್ಲಿ ನಿರ್ಣಾಯಕ ವಿಶ್ವಾಸಮತ ನಡೆಯಿತು. ವಿಶ್ವಾಸಮತದ ಮುನ್ನ, ಆಡಳಿತಾರೂಢ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ತನ್ನ ಶಾಸಕರನ್ನು ಸೋಮವಾರ ಬೆಳಗ್ಗೆ ಪಾಟ್ನಾದ ಚಾಣಕ್ಯ ಹೋಟೆಲ್‌ಗೆ ಸ್ಥಳಾಂತರಿಸಿತು.

ಇದರ ನಡುವೆ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರ ನಿವಾಸವನ್ನು ಭಾನುವಾರ ರಾತ್ರಿಯಿಂದಲೇ ಪೊಲೀಸ್‌ ಪಡೆ ಸುತ್ತುವರೆದಿದೆ. ಆರ್‌ಜೆಡಿ ಶಾಸಕರಲ್ಲೊಬ್ಬರಾದ ಚೇತನ್ ಯಾದವ್ ಅವರನ್ನು ಅದೇ ಪಕ್ಷದವರು ʼಅಪಹರಿಸಿದ್ದಾರೆʼ ಎಂದು ಅವರ ಕುಟುಂಬ ಸದಸ್ಯರು ಆಪಾದಿಸಿದ ಬಳಿಕ ಇಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.

ನಿತೀಶ್‌ ಅವರು ಜನವರಿ 28ರಂದು ದಾಖಲೆಯ ಒಂಬತ್ತನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದರು. ಪ್ರಸ್ತುತ ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು 243 ಸದಸ್ಯರ ವಿಧಾನಸಭೆಯಲ್ಲಿ ಒಟ್ಟು 128 ಶಾಸಕರನ್ನು ಹೊಂದಿದೆ – 45 ಜೆಡಿ(ಯು), 79 ಬಿಜೆಪಿ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ-ಸೆಕ್ಯುಲರ್ (ಎಚ್‌ಎಎಂ-ಎಸ್) ಒಕ್ಕೂಟದಿಂದ ಮತ್ತು ಇನ್ನೊಬ್ಬ ಸ್ವತಂತ್ರ ಶಾಸಕ. ಏತನ್ಮಧ್ಯೆ, ‘ಮಹಾಘಟಬಂಧನ್’ ಒಟ್ಟು 115 ಶಾಸಕರನ್ನು ಹೊಂದಿದೆ. ಸರ್ಕಾರ ರಚಿಸಲು ಸದನದಲ್ಲಿ 122 ಶಾಸಕರ ಬಹುಮತದ ಅಗತ್ಯವಿರುತ್ತದೆ.

ಈ ಸುದ್ದಿಯನ್ನೂ ಓದಿ: INDIA Bloc: ನಿತೀಶ್ ಕುಮಾರ್ ಇಂಡಿಯಾ ಕೂಟ ತೊರೆಯಲು ಅಸಲಿ ಕಾರಣ ಇದು!

Exit mobile version