Site icon Vistara News

Lok Sabha Election: ಬಿಜೆಪಿಗೆ 350 ಸೀಟು ಖಚಿತ ಎಂದ ಖ್ಯಾತ ಅರ್ಥಶಾಸ್ತ್ರಜ್ಞ; ಅವರ ಪ್ರಿಡಿಕ್ಷನ್‌ ಹೀಗಿದೆ

Phalody Satta Bazar

Lok Sabha Election 2024: Phalodi Satta Pazar prediction suggests BJP's Win; Here Is State Wise Seat

ನವದೆಹಲಿ: ದೇಶಾದ್ಯಂತ ಲೋಕಸಭೆ ಚುನಾವಣೆ (Lok Sabha Election 2024) ಭರಾಟೆ ಜೋರಾಗಿದೆ. ನರೇಂದ್ರ ಮೋದಿ (Narendra Modi) ಹ್ಯಾಟ್ರಿಕ್‌ ಸಾಧಿಸುವ ವಿಶ್ವಾಸದಲ್ಲಿದ್ದರೆ, ಕೇಂದ್ರದಲ್ಲಿ ಬಿಜೆಪಿಯನ್ನು (BJP) ಕಾಂಗ್ರೆಸ್‌ ಸೇರಿ ಇಂಡಿಯಾ ಒಕ್ಕೂಟದ ಎಲ್ಲ‌ ಪಕ್ಷಗಳು ಸಜ್ಜಾಗಿವೆ. ಇದರ ಬೆನ್ನಲ್ಲೇ, ಚುನಾವಣೆ ಪೂರ್ವ ಸಮೀಕ್ಷೆಗಳು ಪ್ರಕಟವಾಗುತ್ತಿದ್ದು, ದೇಶದಲ್ಲಿ ಮೋದಿ ಅಲೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ದೇಶದ ಖ್ಯಾತ ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕರೂ ಆದ ಸುರ್ಜಿತ್‌ ಭಲ್ಲಾ (Surjit Bhalla) ಅವರು ಕೂಡ ಈ ಬಾರಿಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. ಅದರಲ್ಲೂ, ಬಿಜೆಪಿಯೊಂದೇ 330-350 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.

ಸುರ್ಜಿತ್‌ ಭಲ್ಲಾ ಅವರು ಹೌ ವಿ ವೋಟ್‌ (How We Vote) ಎಂಬ ಪುಸ್ತಕ ರಚಿಸಿದ್ದು, ಎನ್‌ಡಿಟಿವಿಗೆ ನೀಡಿದ ಸಂದರ್ಶನದ ವೇಳೆ ಪುಸ್ತಕ, ಲೋಕಸಭೆ ಚುನಾವಣೆ ಫಲಿತಾಂಶ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. “ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಎನ್‌ಡಿಎ ಮೈತ್ರಿಕೂಟ ಅಲ್ಲ, ಬಿಜೆಪಿಯೊಂದೇ 330-350 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಕ್ಷೇತ್ರವಾರು ಲೆಕ್ಕದಲ್ಲಿಯೇ ಬಿಜೆಪಿಯ ಕ್ಷೇತ್ರಗಳ ಸಂಖ್ಯೆ ಈ ಬಾರಿ ಶೇ.5-7ರಷ್ಟು ಹೆಚ್ಚಾಗಲಿವೆ” ಎಂದು ಹೇಳಿದ್ದಾರೆ.

ಕಾಂಗ್ರೆಸ್‌ಗೆ ಬರೀ 44 ಕ್ಷೇತ್ರ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ 44 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದಾಗಿ ಸುರ್ಜಿತ್‌ ಭಲ್ಲಾ ಹೇಳಿದ್ದಾರೆ. ಪ್ರತಿಪಕ್ಷಗಳ ಒಕ್ಕೂಟದಲ್ಲಿ ನಾಯಕತ್ವದ ಸಮಸ್ಯೆ ಇದೆ. ಆರ್ಥಿಕ ಸ್ಥಿತಿ ಮೊದಲನೆಯದ್ದಾದರೆ, ಎರಡನೆಯದ್ದಾಗಿ ನಾಯಕತ್ವವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದರೆ, ಎರಡೂ ಸಂಗತಿಗಳು ಬಿಜೆಪಿ ಪರವಾಗಿವೆ. ಪ್ರತಿಪಕ್ಷಗಳ ಒಕ್ಕೂಟವು ಒಬ್ಬ ಮಾಸ್‌ ಲೀಡರ್‌ನನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದರೆ, ನಿಜವಾಗಿಯೂ ಬಿಜೆಪಿಗೆ ಸ್ಪರ್ಧೆಯೊಡ್ಡಬಹುದಾಗಿತ್ತು” ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿಗೆ ಬಲ

ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಬಿಜೆಪಿಯು ಬೇರೆ ರಾಜ್ಯಗಳಲ್ಲಿ ಬಲಿಷ್ಠವಾಗಿಲ್ಲ. ಆದರೆ, ಈ ಬಾರಿ ಬಿಜೆಪಿಯು ತಮಿಳುನಾಡಿನಲ್ಲಿ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದಾಗಿ ಅರ್ಥಶಾಸ್ತ್ರಜ್ಞ ತಿಳಿಸಿದ್ದಾರೆ. “ತಮಿಳುನಾಡಿನಲ್ಲಿ ಬಿಜೆಪಿ ನೆಲೆಯೂರಲಿದೆ. ಸುಮಾರು 5 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬುದು ನನ್ನ ಲೆಕ್ಕಾಚಾರವಾಗಿದೆ. ಇನ್ನು ಕೇರಳದಲ್ಲೂ ಬಿಜೆಪಿಯ ಒಬ್ಬ ಅಥವಾ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಬಹುದು. ದೇಶವು ಏಳಿಗೆಯತ್ತ ಸಾಗುತ್ತಿದೆ. ತಲಾದಾಯ ಜಾಸ್ತಿಯಾಗಿದೆ. ಜನ ಬಡತನ ರೇಖೆಯಿಂದ ಹೊರಬರುತ್ತಿದ್ದಾರೆ. ಇಂತಹ ಹತ್ತಾರು ವಿಷಯಗಳು ಬಿಜೆಪಿ ಗೆಲುವಿಗೆ ಕಾರಣವಾಗಲಿವೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Trust Of The Nation 2024 : ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತ; ಡೈಲಿಹಂಟ್ ಸಮೀಕ್ಷೆ

Exit mobile version