Site icon Vistara News

Lok Sabha Election 2024: ಬಿಜೆಪಿ ಸೇರುವ ನಾಯಕರಿಗೂ ಇನ್ನು ಸ್ಕ್ರೀನಿಂಗ್! ಸಮಿತಿ ರಚನೆ

modi Shah Nadda

ಹೊಸದಿಲ್ಲಿ: ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ (Lok Sabha Election 2024) ಮುನ್ನ ಬಿಜೆಪಿಗೆ ಸೇರಲು ಮುಂದಾಗುವ ಇತರ ಪಕ್ಷಗಳ ನಾಯಕರ ಸಾಮರ್ಥ್ಯ, ಕ್ರಿಯಾಶೀಲತೆ ಇತ್ಯಾದಿಗಳನ್ನು ಪರಿಶೀಲಿಸಲು ಬಿಜೆಪಿ ಹೊಸದೊಂದು ಫಿಲ್ಟರ್ ಸೇರಿಸಲು ಮುಂದಾಗಿದೆ. ಇದಕ್ಕಾಗಿ ಹೊಸ ಸಮಿತಿಯನ್ನು (bjp screening committee) ರಚಿಸಲಾಗುತ್ತಿದ್ದು, ಅದರ ಪರಿಶೀಲನೆಯ ಬಳಿಕ ನಾಯಕರ ಸೇರುವಿಕೆ ನಿರ್ಧಾರವಾಗಲಿದೆಯಂತೆ.

ಪಕ್ಷಕ್ಕೆ ಸೇರಲು ಬಯಸುವ ಬೇರೆ ಪಕ್ಷಗಳ ನಾಯಕರಿಗೆ ಅವಕಾಶ ನೀಡಬೇಕೆ ಅಥವಾ ತಿರಸ್ಕರಿಸಬೇಕೆ ಎಂದು ನಿರ್ಧರಿಸಲು ಬಿಜೆಪಿಯ ಹೊಸ ಸಮಿತಿಯನ್ನು ರಚಿಸಲಾಗುತ್ತಿದೆ. ಪಕ್ಷಕ್ಕೆ ನಿಷ್ಠರಾಗಿರದ, ಪಕ್ಷದ ತಾತ್ವಿಕತೆಗೆ ಹೊಂದಿಕೊಳ್ಳದ ನಾಯಕರನ್ನು ಸೇರಿಸಿಕೊಳ್ಳುವ ಅಪಾಯವನ್ನು ಕಡಿಮೆ ಮಾಡಲು ಬಿಜೆಪಿ ಬಯಸಿದೆ. ಹಾಗೆಯೇ ಈ ನಾಯಕರು ಎಷ್ಟು ಮತಗಳನ್ನು ತರಬಲ್ಲರು, ಎಷ್ಟು ಸೀಟುಗಳನ್ನು ಗೆಲ್ಲಿಸಿಕೊಡಬಲ್ಲರು ಎಂಬುದು ಕೂಡ ಈ ಸಮಿತಿಯಲ್ಲಿ ಪರಿಶೀಲನೆಗೆ ಒಳಗಾಗಲಿದೆ.

ಸಮಿತಿ ಹಸಿರು ನಿಶಾನೆ ತೋರಿದ ನಂತರವೇ ಇತರೆ ಪಕ್ಷಗಳ ನಾಯಕರನ್ನು ಬಿಜೆಪಿಗೆ ಸ್ವಾಗತಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಸಮಿತಿಯು ಜನವರಿ 6ರಂದು ಮೊದಲ ಬಾರಿಗೆ ಸಭೆ ಸೇರಲಿದೆ ಎಂದು ಮೂಲಗಳು ತಿಳಿಸಿವೆ.

ಅಸೆಂಬ್ಲಿ ಚುನಾವಣೆಯ ಬೆನ್ನಲ್ಲೇ ಬಿಜೆಪಿ ಮುಂದಿನ ಲೋಕಸಭೆ ಚುನಾವಣೆಯತ್ತ ಗಮನ ಹರಿಸಿದೆ. ಇತ್ತೀಚೆಗೆ ಕೊನೆಗೊಂಡ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರಕ್ಕೆ ಸಜ್ಜಾಗುವಂತೆ ಕಾರ್ಯಕರ್ತರನ್ನು ಹುರಿದುಂಬಿಸಿದ್ದರು. 2024ರ ಚುನಾವಣೆಯಲ್ಲಿ ಪಕ್ಷವು 35 ಕೋಟಿ ಮತಗಳನ್ನು ಗಳಿಸುವ ಗುರಿಯನ್ನು ಹೊಂದಿದೆ.

“ಲೋಕಸಭಾ ಚುನಾವಣೆಗೆ ಮಿಷನ್ ಮೋಡ್‌ನಲ್ಲಿ ಸಿದ್ಧರಾಗಿʼʼ ಎಂದು ಹೈಕಮಾಂಡ್‌ ಕಾರ್ಯಕರ್ತರನ್ನು ಕೇಳಿಕೊಂಡಿದೆ. ರಾಮಮಂದಿರದ ಬಗ್ಗೆ ಜನತೆಗೆ ಸಾಧ್ಯವಾದಷ್ಟು ಹೆಚ್ಚಿನ ಮಾಹಿತಿಯನ್ನು ನೀಡಲು ಮತ್ತು ಅದರ ಬಗ್ಗೆ ಚರ್ಚೆಗಳನ್ನು ನಡೆಸಲು ಕಾರ್ಯಕರ್ತರಿಗೆ ತಿಳಿಸಲಾಗಿದೆ.

ಇದನ್ನೂ ಓದಿ: Ram Janmabhoomi: ಅಯೋಧ್ಯೆ ಕೇಸ್‌ ರಿಓಪನ್‌; ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ

Exit mobile version