ಗಾಂಧಿನಗರ: ಗುಜರಾತ್ನ ಜಾಮ್ನಗರ್ ಉತ್ತರ ಶಾಸಕಿ ರಿವಾಬಾ ಜಡೇಜಾ (Rivaba Jadeja) ಮತ್ತು ಜಾಮ್ನಗರ್ ಸಂಸದೆ ಪೂನಮ್‌ಬೆನ್ ಮಾದಮ್ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಜಗಳವಾಡಿದ ವಿಡಿಯೊ ವೈರಲ್ ಆದ ಬೆನ್ನಲ್ಲೇ ಸಂಸದೆ ಪೂನಮ್‌ಬೆನ್ ಮಾದಮ್ ಅವರು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. “ರಿವಾಬಾ ಜಡೇಜಾ ನನ್ನ ಸಹೋದರಿ ಇದ್ದಂತೆ” ಎಂದು ಅವರು ಹೇಳಿದ್ದಾರೆ.
“ಬಿಜೆಪಿಯಲ್ಲಿ ನಾವೆಲ್ಲರೂ ಒಂದೇ ಕುಟುಂಬಸ್ಥರು ಇದ್ದಹಾಗೆ. ಜಾಮ್ನಗರ ಮೇಯರ್ ಬಿನಾಬೆನ್ ಕೊಠಾರಿ ಅವರು ನನ್ನ ಅಕ್ಕನ ಹಾಗೆ. ಹಾಗೆಯೇ, ರಿವಾಬಾ ಜಡೇಜಾ ಕೂಡ ನನ್ನ ಸಹೋದರಿ ಇದ್ದ ಹಾಗೆ. ಏನೋ ಅಪಾರ್ಥದಿಂದಾಗಿ ಹಾಗಾಗಿದೆ ಅಷ್ಟೇ. ನಾವೆಲ್ಲರೂ ಪ್ರತಿಯೊಬ್ಬರಿಗೂ ಬಲ ಇದ್ದಹಾಗೆ” ಎಂದು ವಿಡಿಯೊ ವೈರಲ್ ಆಗಿ, ಜನರಿಂದ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಪೂನಮ್‌ಬೆನ್ ಮಾದಮ್ ಸ್ಪಷ್ಟನೆ ನೀಡಿದ್ದಾರೆ.
ಜಗಳದ ವಿಡಿಯೊ
ಏನಿದು ಪ್ರಕರಣ?
ವೀರ ಯೋಧರಿಗೆ ಗೌರವ ಸಲ್ಲಿಸುವಾಗ ‘ಚಪ್ಪಲಿ ಹಾಕಿಕೊಂಡಿದ್ದರು’ ಎಂಬ ವಿಚಾರಕ್ಕೆ ರಿವಾಬಾ ಜಡೇಜಾ, ಪೂನಮ್‌ಬೆನ್ ಮಾದಮ್ ಹಾಗೂ ಬಿನಾಬೆನ್ ಕೊಠಾರಿ ಮಧ್ಯೆ ವಾಕ್ಸಮರ ಆರಂಭವಾಗಿತ್ತು. ವಾಗ್ವಾದವಾದದಿಂದ ಆರಂಭಗೊಂಡ ಜಗಳ ಬಳಿಕ ತಾರಕಕ್ಕೇರಿತ್ತು. ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿಯೂ ಆಗಿರುವ ರಿವಾಬಾ ಅವರು ಬಿನಾಬೆನ್ ಕೊಠಾರಿ ಅವರಿಗೆ ‘ಮಿತಿಯೊಳಗೆ ಇರಿ’ ಎಂದು ಹೇಳುವ ಮಟ್ಟಕ್ಕೂ ಜಗಳ ತಾರಕಕ್ಕೇರಿತ್ತು
ಇದನ್ನೂ ಓದಿ: Rivaba Jadeja : ಹೆಚ್ಚು ಮಾತಾಡಿದ್ರೆ ಹುಷಾರ್! ಬಿಜೆಪಿ ಎಂಪಿಯ ಜತೆ ವಾಗ್ವಾದ ನಡೆಸಿದ ಜಡೇಜಾ ಪತ್ನಿ ರಿವಾಬಾ
ಶಾಸಕಿ ರಿವಾಬಾ ಜಡೇಜಾ ಈ ಕುರಿತು ಹೇಳಿಕೆ ಕೊಟ್ಟಿದ್ದರು. ನಾನು ಹುತಾತ್ಮರಿಗೆ ಗೌರವ ಸಲ್ಲಿಸುವ ವೇಳೆ ಚಪ್ಪಲಿ ತೆಗೆದಿದ್ದಕ್ಕೆ ‘ಓವರ್ ಸ್ಮಾರ್ಟ್’ ಎಂದು ಕರೆದರು. ಪ್ರಧಾನಿ ಮತ್ತು ರಾಷ್ಟ್ರಪತಿಗಳು ಸಹ ಇಂತಹ ಕಾರ್ಯಕ್ರಮಗಳಲ್ಲಿ ಚಪ್ಪಲಿಗಳನ್ನು ತೆಗೆಯುವುದಿಲ್ಲ. ಆದರೆ ಕೆಲವು ಅಜ್ಞಾನಿಗಳು ಅತಿ ಬುದ್ಧಿವಂತಿಕೆ ತೋರುತ್ತಾರೆ ಎಂದು ಅವರು (ಸಂಸದರು) ದೊಡ್ಡ ಧ್ವನಿಯಲ್ಲಿ ಹೇಳಿದರು. ಅವರ ಹೇಳಿಕೆ ನನಗೆ ಇಷ್ಟವಾಗಲಿಲ್ಲ, ಆದ್ದರಿಂದ ನಾನು ಸ್ವಾಭಿಮಾನದಿಂದ ಮಾತನಾಡಿದ್ದೇನೆ ಎಂದು ಅವರು ನಂತರ ಹೇಳಿದ್ದಾರೆ. ಈಗ ಸಂಸದೆಯು ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.