Rivaba Jadeja: ಬಿಜೆಪಿ ಶಾಸಕಿ ರಿವಾಬಾ ಜಡೇಜಾ, ಸಂಸದೆ ಪೂನಮ್‌ ಜಗಳ; ವಿಡಿಯೊ ವೈರಲ್‌ ಬಳಿಕ ತೇಪೆ ಹಚ್ಚಿದ ಎಂಪಿ - Vistara News

ದೇಶ

Rivaba Jadeja: ಬಿಜೆಪಿ ಶಾಸಕಿ ರಿವಾಬಾ ಜಡೇಜಾ, ಸಂಸದೆ ಪೂನಮ್‌ ಜಗಳ; ವಿಡಿಯೊ ವೈರಲ್‌ ಬಳಿಕ ತೇಪೆ ಹಚ್ಚಿದ ಎಂಪಿ

Rivaba Jadeja: ಶಾಸಕಿ ರಿವಾಬಾ ಜಡೇಜಾ ಅವರು ತಮ್ಮದೇ ಪಕ್ಷದ ಸಂಸದೆ, ಮೇಯರ್‌ ಜತೆ ಜಗಳವಾಡಿದ್ದರು. ಈ ವಿಡಿಯೊ ಭಾರಿ ವೈರಲ್‌ ಆಗಿತ್ತು. ಈಗ ಜಗಳದ ಕುರಿತು ಸಂಸದೆ ಸ್ಪಷ್ಟನೆ ನೀಡಿದ್ದಾರೆ.

VISTARANEWS.COM


on

Rivaba Jadeja Fight With Poonamben Madam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಾಂಧಿನಗರ: ಗುಜರಾತ್​ನ ಜಾಮ್​​ನಗರ್ ಉತ್ತರ ಶಾಸಕಿ ರಿವಾಬಾ ಜಡೇಜಾ (Rivaba Jadeja) ಮತ್ತು ಜಾಮ್ನಗರ್ ಸಂಸದೆ ಪೂನಮ್​ಬೆನ್​ ಮಾದಮ್ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಜಗಳವಾಡಿದ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಸಂಸದೆ ಪೂನಮ್‌ಬೆನ್‌ ಮಾದಮ್‌ ಅವರು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. “ರಿವಾಬಾ ಜಡೇಜಾ ನನ್ನ ಸಹೋದರಿ ಇದ್ದಂತೆ” ಎಂದು ಅವರು ಹೇಳಿದ್ದಾರೆ.

“ಬಿಜೆಪಿಯಲ್ಲಿ ನಾವೆಲ್ಲರೂ ಒಂದೇ ಕುಟುಂಬಸ್ಥರು ಇದ್ದಹಾಗೆ. ಜಾಮ್​ನಗರ ಮೇಯರ್ ಬಿನಾಬೆನ್ ಕೊಠಾರಿ ಅವರು ನನ್ನ ಅಕ್ಕನ ಹಾಗೆ. ಹಾಗೆಯೇ, ರಿವಾಬಾ ಜಡೇಜಾ ಕೂಡ ನನ್ನ ಸಹೋದರಿ ಇದ್ದ ಹಾಗೆ. ಏನೋ ಅಪಾರ್ಥದಿಂದಾಗಿ ಹಾಗಾಗಿದೆ ಅಷ್ಟೇ. ನಾವೆಲ್ಲರೂ ಪ್ರತಿಯೊಬ್ಬರಿಗೂ ಬಲ ಇದ್ದಹಾಗೆ” ಎಂದು ವಿಡಿಯೊ ವೈರಲ್‌ ಆಗಿ, ಜನರಿಂದ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಪೂನಮ್‌ಬೆನ್‌ ಮಾದಮ್‌ ಸ್ಪಷ್ಟನೆ ನೀಡಿದ್ದಾರೆ.

ಜಗಳದ ವಿಡಿಯೊ

ಏನಿದು ಪ್ರಕರಣ?

ವೀರ ಯೋಧರಿಗೆ ಗೌರವ ಸಲ್ಲಿಸುವಾಗ ‘ಚಪ್ಪಲಿ ಹಾಕಿಕೊಂಡಿದ್ದರು’ ಎಂಬ ವಿಚಾರಕ್ಕೆ ರಿವಾಬಾ ಜಡೇಜಾ, ಪೂನಮ್‌ಬೆನ್‌ ಮಾದಮ್‌ ಹಾಗೂ ಬಿನಾಬೆನ್‌ ಕೊಠಾರಿ ಮಧ್ಯೆ ವಾಕ್ಸಮರ ಆರಂಭವಾಗಿತ್ತು. ವಾಗ್ವಾದವಾದದಿಂದ ಆರಂಭಗೊಂಡ ಜಗಳ ಬಳಿಕ ತಾರಕಕ್ಕೇರಿತ್ತು. ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿಯೂ ಆಗಿರುವ ರಿವಾಬಾ ಅವರು ಬಿನಾಬೆನ್ ಕೊಠಾರಿ ಅವರಿಗೆ ‘ಮಿತಿಯೊಳಗೆ ಇರಿ’ ಎಂದು ಹೇಳುವ ಮಟ್ಟಕ್ಕೂ ಜಗಳ ತಾರಕಕ್ಕೇರಿತ್ತು

ಇದನ್ನೂ ಓದಿ: Rivaba Jadeja : ಹೆಚ್ಚು ಮಾತಾಡಿದ್ರೆ ಹುಷಾರ್​! ಬಿಜೆಪಿ ಎಂಪಿಯ ಜತೆ ವಾಗ್ವಾದ ನಡೆಸಿದ ಜಡೇಜಾ ಪತ್ನಿ ರಿವಾಬಾ

ಶಾಸಕಿ ರಿವಾಬಾ ಜಡೇಜಾ ಈ ಕುರಿತು ಹೇಳಿಕೆ ಕೊಟ್ಟಿದ್ದರು. ನಾನು ಹುತಾತ್ಮರಿಗೆ ಗೌರವ ಸಲ್ಲಿಸುವ ವೇಳೆ ಚಪ್ಪಲಿ ತೆಗೆದಿದ್ದಕ್ಕೆ ‘ಓವರ್ ಸ್ಮಾರ್ಟ್’ ಎಂದು ಕರೆದರು. ಪ್ರಧಾನಿ ಮತ್ತು ರಾಷ್ಟ್ರಪತಿಗಳು ಸಹ ಇಂತಹ ಕಾರ್ಯಕ್ರಮಗಳಲ್ಲಿ ಚಪ್ಪಲಿಗಳನ್ನು ತೆಗೆಯುವುದಿಲ್ಲ. ಆದರೆ ಕೆಲವು ಅಜ್ಞಾನಿಗಳು ಅತಿ ಬುದ್ಧಿವಂತಿಕೆ ತೋರುತ್ತಾರೆ ಎಂದು ಅವರು (ಸಂಸದರು) ದೊಡ್ಡ ಧ್ವನಿಯಲ್ಲಿ ಹೇಳಿದರು. ಅವರ ಹೇಳಿಕೆ ನನಗೆ ಇಷ್ಟವಾಗಲಿಲ್ಲ, ಆದ್ದರಿಂದ ನಾನು ಸ್ವಾಭಿಮಾನದಿಂದ ಮಾತನಾಡಿದ್ದೇನೆ ಎಂದು ಅವರು ನಂತರ ಹೇಳಿದ್ದಾರೆ. ಈಗ ಸಂಸದೆಯು ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Priyanka Gandhi: ರಾಹುಲ್ ಗಾಂಧಿ ತೆರವು ಮಾಡುವ ವಯನಾಡ್‌ನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?

Priyanka Gandhi: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶದ ರಾಯ್‌ ಬರೇಲಿ ಮತ್ತು ಕೇರಳದ ವಯನಾಡು ಕ್ಷೇತ್ರದಿಂದ ಜಯ ಗಳಿಸಿದ್ದು, ಒಂದು ಕ್ಷೇತ್ರವನ್ನು ಬಿಟ್ಟು ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ಅವರು ವಯನಾಡು ಕ್ಷೇತ್ರವನ್ನು ಬಿಟ್ಟು ಕೊಡಲಿದ್ದು, ಅಲ್ಲಿ ಅವರ ಸಹೋದರೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎನ್ನುವ ವದಂತಿ ಹಬ್ಬಿದೆ.

VISTARANEWS.COM


on

Priyanka Gandhi
Koo

ತಿರುವನಂತಪುರಂ: ಈ ಬಾರಿಯ ಲೋಕಸಭಾ ಚುನಾವಣೆ (Lok Sabha polls)ಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಸ್ಪರ್ಧಿಸುತ್ತಾರೆ ಎನ್ನುವ ಎನ್ನುವ ನಿರೀಕ್ಷೆ ಇತ್ತು. ಸೋನಿಯಾ ಗಾಂಧಿ ತೆರವುಗೊಳಿಸಿದ್ದ ಉತ್ತರ ಪ್ರದೇಶದ ರಾಯ್‌ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯುತ್ತಾರೆ ಎನ್ನಲಾಗಿತ್ತು. ಆದರೆ ಅವರು ಎಲ್ಲರ ನಿರೀಕ್ಷೆಯನ್ನು ತಲೆ ಕೆಳಗಾಗಿಸಿ ಪ್ರಚಾರದಲ್ಲಿ ಮತ್ರ ತೊಡಗಿಸಿಕೊಂಡಿದ್ದರು. ಇತ್ತ ಕೇರಳದ ವಯನಾಡು ಮತ್ತು ರಾಯ್‌ ಬರೇಲಿಯಿಂದ ಸ್ಪರ್ಧಿಸಿದ್ದ ರಾಹುಲ್‌ ಗಾಂಧಿ (Rahul Gandhi) ಎರಡೂ ಕಡೆ ಜಯ ಗಳಿಸಿದ್ದಾರೆ. ಇದೀಗ ಅವರು ಒಂದು ಕಡೆ ತಮ್ಮ ಸ್ಥಾನವನ್ನು ಬಿಟ್ಟು ಕೊಡಬೇಕಿದೆ. ಮೂಲಗಳ ಪ್ರಕಾರ ಅವರು ವಯನಾಡು ಕ್ಷೇತ್ರವನ್ನು ತೊರೆಯಲಿದ್ದು, ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಇಲ್ಲಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿರುವ ರಾಯ್‌ ಬರೇಲಿ ಮತ್ತು ವಯನಾಡು ಎರಡೂ ಕಡೆ ರಾಹುಲ್‌ ಗಾಂಧಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಜಯಭೇರಿ ಭಾರಿಸಿದ್ದಾರೆ. 2019ರಲ್ಲಿ ಉತ್ತರ ಪ್ರದೇಶದ ಅಮೇಥಿ ಮತ್ತು ವಯನಾಡಿನಲ್ಲಿ ಸ್ಪರ್ಧಿಸಿದ್ದ ಅವರು ಅಮೇಥಿಯಲ್ಲಿ ಬಿಜೆಪಿಯ ಸ್ಲೃತಿ ಇರಾನಿ ವಿರುದ್ಧ ಸೋತಿದ್ದರು. ವಯನಾಡಿನಲ್ಲಿ ಸತತ ಎರಡನೇ ಬಾರಿ ಜಯ ಗಳಿಸಿದ ಅವರು ಇದೀಗ ಅನಿವಾರ್ಯವಾಗಿ ಅಲ್ಲಿನ ಸ್ಥಾನವನ್ನು ತ್ಯಜಿಸಬೇಕಾಗಿದೆ. ಹೀಗಾಗಿ ಅಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಸೂಚನೆ ನೀಡಿದ ರಾಹುಲ್‌ ಗಾಂಧಿ?

ಲೋಕಸಭಾ ಚುನಾವಣೆಯ ಬಗ್ಗೆ ಮಂಗಳವಾರ (ಜೂನ್‌ 11) ಮಾತನಾಡಿದ್ದ ರಾಹುಲ್‌ ಗಾಂಧಿ, ʼʼಒಂದು ವೇಳೆ ವಾರಣಾಸಿಯಲ್ಲಿ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು 2-3 ಲಕ್ಷ ಮತಗಳ ಅಂತರಿಂದ ಸೋಲುತ್ತಿದ್ದರುʼʼ ಎಂದು ಹೇಳಿದ್ದರು. ಆ ಮೂಲಕ ಅವರು ಪ್ರಿಯಾಂಕಾ ಗಾಂಧಿ ಅವರ ಚೊಚ್ಚಲ ಸ್ಪರ್ಧೆಯ ಸುಳಿವು ನೀಡಿದ್ದರಾ ಎನ್ನುವ ಸಂಶಯ ಮೂಡಿದೆ.

ಇದೇ ಮೊದಲಲ್ಲ

ಹಾಗೆ ನೋಡಿದರೆ ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ವದಂತಿ ಹಬ್ಬುತ್ತಿರುವುದು ಇದು ಮೊದಲ ಸಲವೇನಲ್ಲ. 2019ರ ಲೋಕಸಭಾ ಚುನಾವಣೆಯಿಂದಲೂ ಅವರು ಕಣಕ್ಕಿಳಿಯುತ್ತಾರೆ ಎಂಬ ವದಂತಿ ಇದೆ. ಆಗ ಬಿಜೆಪಿ ಅಲೆಯನ್ನು ತಡೆಯಲು ಕಾಂಗ್ರೆಸ್ ವಾರಣಾಸಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಲಿದೆ ಎಂದೇ ಊಹಿಸಲಾಗಿತ್ತು. ಆದರೆ ಅವರು ಸ್ಪರ್ಧಿಸಿರಲಿಲ್ಲ.

ಬಳಿಕ 2022ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಪ್ರಿಯಾಂಕಾ ಗಾಂಧಿ ಹೆಸರು ಮತ್ತೆ ಚಾಲ್ತಿಗೆ ಬಂತು. ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿತ್ತು. ಆಗಲೂ ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿರಾಸೆಯೇ ಎದುರಾಗಿತ್ತು. ಇನ್ನು 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ರಾಯ್‌ ಬರೇಲಿ ಕ್ಷೇತ್ರವನ್ನು ತೊರೆದು ರಾಜ್ಯಸಭೆಯತ್ತ ಮುಖ ಮಾಡಿದರು. ಆಗಲಾದರೂ ರಾಯ್‌ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಜತೆಗೆ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಾರೆ ಎಂದೂ ಹೇಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ರಾಯ್‌ ಬರೇಲಿಯಿಂದ ರಾಹುಲ್‌ ಗಾಂಧಿ ಕಣಕ್ಕಿಳಿದರು. ಅಮೇಥಿಯಲ್ಲಿ ಕಾಂಗ್ರೆಸ್‌ನಿಂದ ಕಿಶೋರಿ ಲಾಲ್‌ ಶರ್ಮಾ ಸ್ಪರ್ಧಿಸಿ ಜಯ ಗಳಿಸಿದರು.

ಇದನ್ನೂ ಓದಿ: Rahul Gandhi: ನನ್ನ ಮೇಲೆ ಮೋದಿಗಿರುವಷ್ಟು ದೇವರ ಕೃಪೆ ಇಲ್ಲ ಎಂದ ರಾಹುಲ್‌ ಗಾಂಧಿ; ಏಕಿಂಥ ಮಾತು?

ಒಂದು ವೇಳೆ ರಾಹುಲ್‌ ಗಾಂಧಿ ವಯನಾಡು ಕ್ಷೇತ್ರವನ್ನು ತ್ಯಜಿಸುವುದೇ ಆಗಿದ್ದರೆ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಬೇಕು ಎಂದು ಅಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರು ಬ್ಯಾನರ್‌ ಅಳವಡಿಸಿ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಈಗಲಾದರೂ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯುತ್ತಾರಾ ಎನ್ನುವ ಪ್ರಶ್ನೆ ಮೂಡಿದ್ದು, ಸದ್ಯದಲ್ಲೇ ಉತ್ತರ ಸಿಗುವ ನಿರೀಕ್ಷೆ ಇದೆ.

Continue Reading

Latest

Yogi Adityanath: ರಸ್ತೆಯಲ್ಲಿ ನಮಾಜ್ ಮಾಡಿದರೆ ಹುಷಾರ್! ಬಕ್ರೀದ್ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಯೋಗಿ ವಾರ್ನಿಂಗ್!

Yogi Adityanath: ಬಕ್ರೀದ್ ಸಂದರ್ಭದಲ್ಲಿ ಮುಸ್ಲಿಮರು ಎಲ್ಲೆಂದರಲ್ಲಿ ಕುಳಿತು ನಮಾಜ್ ಮಾಡುವುದು ಹಾಗೂ ಪ್ರಾಣಿಗಳನ್ನು ಬಲಿ ಕೊಡುವ ಕೆಲಸ ಮಾಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ. ಹಾಗಾಗಿ ರಸ್ತೆಗಳಲ್ಲಿ ನಮಾಜ್ ಮಾಡುವಂತಿಲ್ಲ. ಅದಕ್ಕಾಗಿ ನಿಗದಿ ಪಡಿಸಿದ ಸ್ಥಳಗಳಲ್ಲಿ ಮಾತ್ರ ನಮಾಜ್ ಮಾಡಬೇಕು. ಹಾಗೇ ಗೊತ್ತುಪಡಿಸದ ಸ್ಥಳಗಳಲ್ಲಿ ಪ್ರಾಣಿ ಬಲಿ ನೀಡುವಂತಿಲ್ಲ. ನಿಷೇಧ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

Bakrid; CM Yogi gives warning to Muslims
Koo

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath ) ಅವರು ಬಕ್ರೀದ್ ಹಿನ್ನಲೆ ಮುಸ್ಲಿಂ ಸಮೂಹಕ್ಕೆ ಖಡಕ್ ಸಂದೇಶವೊಂದನ್ನು ನೀಡಿದ್ದಾರೆ. ಜೂನ್ 17ರಂದು ದೇಶದ ಎಲ್ಲೆಡೆ ಮುಸ್ಲಿಂ ಸಮೂಹದವರು ಬಕ್ರೀದ್ ಹಬ್ಬವನ್ನು ಆಚರಿಸುತ್ತಾರೆ. ಈ ವೇಳೆ ಅವರು ಎಲ್ಲೆಂದರಲ್ಲಿ ಕುಳಿತು ನಮಾಜ್ (Namaz)ಮಾಡುವುದು ಹಾಗೂ ಪ್ರಾಣಿಗಳನ್ನು ಬಲಿ ಕೊಡುವ ಕೆಲಸ ಮಾಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ. ಹಾಗಾಗಿ ಮುಸ್ಲಿಂರು ರಸ್ತೆಗಳಲ್ಲಿ ನಮಾಜ್ ಮಾಡುವಂತಿಲ್ಲ. ಅದಕ್ಕಾಗಿ ನಿಗದಿ ಪಡಿಸಿದ ಸ್ಥಳಗಳಲ್ಲಿ ಮಾತ್ರ ನಮಾಜ್ ಮಾಡಬೇಕು. ಹಾಗೇ ಗೊತ್ತುಪಡಿಸದ ಸ್ಥಳಗಳಲ್ಲಿ ಪ್ರಾಣಿ ಬಲಿ ನೀಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ನಿಷೇಧ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.‌

ಬಕ್ರೀದ್‌ನಲ್ಲಿ ಬಲಿದಾನ ಮಾಡುವ ಸ್ಥಳವನ್ನು ಮೊದಲೇ ಗುರುತಿಸಬೇಕು. ಇತರ ಸ್ಥಳಗಳಲ್ಲಿ ಬಲಿದಾನ ಮಾಡಬಾರದು ಹಾಗೂ ವಿವಾದಿತ ಸ್ಥಳಗಳಲ್ಲಿ ಬಲಿ ನೀಡಬಾರದು. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಹಾಗೇ ಬಲಿದಾನದ ನಂತರ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥಿತ ಕ್ರಿಯಾ ಯೋಜನೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಪ್ರಾರಂಭಿಸಬೇಕು ಎಂದು ಸಿಎಂ ಯೋಗಿ ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Yogi Adityanath

ಹಾಗೇ ಈ ದಿನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಯೋಗಿ ಅವರು ಆಡಳಿತ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಮುಂಬರುವ ಹಬ್ಬದ ಸಮಯದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮೇಲೆ ಬಲವಾದ ಹಿಡಿತವನ್ನಿಟ್ಟುಕೊಳ್ಳಬೇಕು. ಹಿಂದೂಗಳು ಜೂನ್ 16ರಂದು ಗಂಗಾ ದಸರವನ್ನು ಆಚರಿಸಿದರೆ, ಮುಸ್ಲಿಂರು ಜೂನ್ 17ಕ್ಕೆ ಬಕ್ರೀದ್ ಅನ್ನು ಆಚರಿಸುತ್ತಾರೆ. ಹಾಗೇ ಜೂನ್ 18ರಂದು ಬಡಾ ಮಂಗಲ್ ಹಬ್ಬವಿದೆ, ಜೂನ್ 21ಕ್ಕೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಇದೆ. ಅಲ್ಲದೇ ಜುಲೈ ತಿಂಗಳಿನಲ್ಲಿ 17ಕ್ಕೆ ಮೊಹರಂ, 22ಕ್ಕೆ ಹಿಂದೂಗಳು ಕನ್ವರ್ ಯಾತ್ರೆ ಪ್ರಾರಂಭಿಸುತ್ತಾರೆ. ಹಾಗಾಗಿ ಈ ದಿನ ಕಾನೂನು ಸುವ್ಯವಸ್ಥೆ ಕಾಪಾಡುವುದು ಅಗತ್ಯ. ಹಾಗಾಗಿ ಸರ್ಕಾರ ಮತ್ತು ಆಡಳಿತ ವರ್ಗದವರು ಪ್ರತಿದಿನ 24 ಗಂಟೆಗಳ ಕಾಲ ಸಕ್ರಿಯವಾಗಿರಬೇಕೆಂದು ಸಿಎಂ ಯೋಗಿ ತಿಳಿಸಿದ್ದಾರೆ.‌

ಇದನ್ನೂ ಓದಿ: ಹಿಂದೂ ಹುಡುಗಿಯ ಖಾಸಗಿ ಫೋಟೊ ತೆಗೆದು ಬ್ಲ್ಯಾಕ್‌ಮೇಲ್‌; ಮತಾಂತರಕ್ಕೆ ಒತ್ತಡ

ಅಲ್ಲದೇ ಗಂಗಾ ದಸರದ ಪ್ರಯುಕ್ತ ಜೂನ್ 15ರಿಂದ 22ರವರೆಗೆ ರಾಜ್ಯದಲ್ಲಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಬೇಕು. ಗಂಗಾ ನದಿಯ ಘಾಟ್‌ಗಳನ್ನು ಸ್ವಚ್ಛಗೊಳಿಸಿ ಅಲಂಕರಿಸಬೇಕು. ಸ್ನಾನ ಪ್ರದೇಶವನ್ನು ಮೊದಲೇ ಗೊತ್ತುಪಡಿಸಬೇಕು ಎಂದು ಸಿಎಂ ಯೋಗಿ ಅವರು ಸಭೆಯಲ್ಲಿ ಹೇಳಿದ್ದಾರೆ. ಹಾಗೇ ಸುರಕ್ಷತೆಗೆಗಾಗಿ ಡ್ರೈವರ್‌ಗಳು ಸಶಸ್ತ್ರಧಾರಿ ಕಾನ್ಸ್‌ಟೇನಲ್, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಅನ್ನು ನಿಯೋಜಿಸಲಾಗುವುದು. ಹಾಗೇ ಅನಗತ್ಯ ವಿದ್ಯುತ್ ಕಡಿತವನ್ನು ತಪ್ಪಿಸಬೇಕು ಎಂದು ಅವರು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

Continue Reading

ದೇಶ

Heavy Rainfall: ಸಿಕ್ಕಿಂನಲ್ಲಿ ಭಾರೀ ಮಳೆ, ಪ್ರವಾಹ: 6 ಮಂದಿ ಸಾವು, ಭೂಕುಸಿತದಿಂದ ಸಂಪರ್ಕ ಕಡಿತ

Heavy Rainfall: ಭಾರೀ ಮಳೆಯ ಹೊಡೆತಕ್ಕೆ ಸಿಲುಕಿರುವ ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಭೀಕರ ಪ್ರವಾರ ಪರಿಸ್ಥಿತಿ ತಲೆದೋರಿದ್ದು, ಸುಮಾರು 6 ಮಂದಿ ಮೃತಪಟ್ಟಿದ್ದಾರೆ. ಹಲವೆಡೆ ಭೂಕುಸಿತದಿಂದಾಗಿ ಉತ್ತರ ಸಿಕ್ಕಿಂ ಭಾಗದ ಸಂಪರ್ಕ ಕಡಿತವಾಗಿದೆ. ಜತೆಗೆ ತೀಸ್ತಾ ನದಿಯು ಉಕ್ಕಿ ಹರಿಯುತ್ತಿದೆ. ನೂರಾರು ನಿವಾಸಿಗಳನ್ನು ಸುರಕ್ಷಿತ ಕಡೆಗೆ ಸ್ಥಳಾಂತರಿಸಲಾಗಿದೆ.

VISTARANEWS.COM


on

Heavy Rainfall
Koo

ಗ್ಯಾಂಗ್ಟಾಕ್: ಭಾರೀ ಮಳೆ (Heavy Rainfall)ಯ ಹೊಡೆತಕ್ಕೆ ಸಿಲುಕಿರುವ ಸಿಕ್ಕಿಂನಲ್ಲಿ ಭೀಕರ ಪ್ರವಾರ ಪರಿಸ್ಥಿತಿ ತಲೆದೋರಿದ್ದು, ಸುಮಾರು 6 ಮಂದಿ ಮೃತಪಟ್ಟಿದ್ದಾರೆ. ಹಲವೆಡೆ ಭೂಕುಸಿತದಿಂದಾಗಿ ಉತ್ತರ ಸಿಕ್ಕಿಂ ಭಾಗದ ಸಂಪರ್ಕ ಕಡಿತವಾಗಿದೆ. ಜತೆಗೆ ತೀಸ್ತಾ ನದಿಯು ಉಕ್ಕಿ ಹರಿಯುತ್ತಿದೆ. ನೂರಾರು ನಿವಾಸಿಗಳನ್ನು ಸುರಕ್ಷಿತ ಕಡೆಗೆ ಸ್ಥಳಾಂತರಿಸಲಾಗಿದೆ.

ʼʼಉತ್ತರ ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಉಂಟಾದ ಭಾರಿ ಭೂಕುಸಿತದಿಂದಾಗಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ ಮತ್ತು 1,500ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿದ್ದಾರೆʼʼ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ʼʼಸಾಂಗ್ಕಲಾಂಗ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಬೈಲಿ ಸೇತುವೆ ಕುಸಿದಿದ್ದು, ಮಂಗನ್, ಡ್ಜೋಂಗು ಮತ್ತು ಚುಂಗ್ಥಾಂಗ್ ನಡುವಿನ ಸಂಪರ್ಕ ಕಡಿತಗೊಂಡಿದೆ. ಕೆಲವೆಡೆ ಭೂಕುಸಿತವು ಸಂಭವಿಸಿದ್ದು, ಮನೆಗಳು ಜಲಾವೃತಗೊಂಡಿವೆ. ಹಲವಾರು ವಿದ್ಯುತ್ ಕಂಬಗಳು ಕೊಚ್ಚಿಹೋಗಿವೆʼʼ ಎಂದು ಅವರು ವಿವರಿಸಿದ್ದಾರೆ.

ಗುರುಡೊಂಗ್ಮಾರ್ ಸರೋವರ ಮತ್ತು ಯುಂಥಂಗ್ ಕಣಿವೆಯಂತಹ ಜನಪ್ರಿಯ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾದ ಮಂಗನ್ ಜಿಲ್ಲೆಯ ಡ್ಜೋಂಗು, ಚುಂಗ್ಥಾಂಗ್, ಲಾಚೆನ್ ಮತ್ತು ಲಾಚುಂಗ್‌ ಮುಂತಾದ ನಗರಗಳು ಈಗ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿದುಕೊಂಡಿವೆ. “ಪಕ್ಸೆಪ್ ಮತ್ತು ಅಂಭಿಥಾಂಗ್ ಗ್ರಾಮಗಳಲ್ಲಿ ತಲಾ ಮೂವರು ಸಾವನ್ನಪ್ಪಿದ್ದಾರೆ. ಗೆಥಾಂಗ್ ಮತ್ತು ನಂಪಥಾಂಗ್‌ನಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿದೆ. ಸ್ಥಳಾಂತರಗೊಂಡ ಜನರಿಗಾಗಿ ಪಾಶೆಪ್‌ನಲ್ಲಿ ಪರಿಹಾರ ಶಿಬಿರವನ್ನು ಸ್ಥಾಪಿಸಲಾಗಿದೆʼʼ ಎಂದು ಮಂಗನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಮ್ ಕುಮಾರ್ ಚೆಟ್ರಿ ತಿಳಿಸಿದ್ದಾರೆ.

ಬುಧವಾರ ರಾತ್ರಿಯಿಂದ ಮಂಗನ್ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾದ ಪರಿಸ್ಥಿತಿಯನ್ನು ಪರಿಶೀಲಿಸಲು ಹೇಮ್ ಕುಮಾರ್ ಚೆಟ್ರಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು ಮತ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಉತ್ತರ ಸಿಕ್ಕಿಂನಲ್ಲಿ ಮೊಬೈಲ್ ನೆಟ್‌ವರ್ಕ್‌ ಸಂಪರ್ಕ ಕಡಿತಕೊಂಡಿರುವುದು ಕೂಡ ರಕ್ಷಣಾ ಕಾರ್ಯಾಚರಣೆಗೆ ತೊಡಕು ಉಂಟು ಮಾಡಿದೆ.

ಪ್ರವಾಸಿಗರಿಗೆ ಸೂಚನೆ

ವಾಹನಗಳ ಸಂಚಾರಕ್ಕೆ ಪರ್ಯಾಯ ರಸ್ತೆ ಸಂಪರ್ಕವನ್ನು ಸ್ಥಾಪಿಸುವವರೆಗೆ ಸಿಕ್ಕಿಬಿದ್ದ ಪ್ರವಾಸಿಗರು ಈಗಿರುವ ಸ್ಥಳದಲ್ಲಿಯೇ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ಪ್ರದೇಶದಲ್ಲಿನ ಸಂಪರ್ಕವನ್ನು ಪುನಃಸ್ಥಾಪಿಸಲು ಫಿಡಾಂಗ್‌ನಲ್ಲಿ ಸೇತುವೆಯನ್ನು ತ್ವರಿತವಾಗಿ ನಿರ್ಮಿಸಲು ಮಂಗನ್ ಜಿಲ್ಲಾಡಳಿತವು ಮುಂದಾಗಿದ್ದು, ಕಾಮಗಾರಿ ಆರಂಭಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: Amit Shah: ತಮಿಳಿಸೈಗೆ ಅಮಿತ್ ಶಾ ಬೈಗುಳದ ವಿಡಿಯೋ; ವಿವಾದಕ್ಕೆ ತೆರೆ ಎಳೆದ ತಮಿಳುನಾಡು ಬಿಜೆಪಿ ನಾಯಕಿ

ಸದ್ಯ ಸಿಕ್ಕಿಂ ಮುಖ್ಯಮಂತ್ರಿ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ (Sikkim Chief Minister Prem Singh Tamang) ಅವರು ಅರುಣಾಚಲ ಪ್ರದೇಶಕ್ಕೆ ತೆರಳಿದ್ದು, ಅಲ್ಲಿನ ಮುಖ್ಯಮಂತ್ರಿ ಪೇಮಾ ಖಂಡು ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಅಲ್ಲಿಂದಲೇ ಅವರು ಪರಿಹಾರ ಕಾರ್ಯ ತ್ವರಿತವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ಅವರು ಶೀಘ್ರದಲ್ಲೇ ರಾಜ್ಯಕ್ಕೆ ಮರಳಲಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಜ್ಯಕ್ಕೆ ಅಪ್ಪಳಿಸಿದ್ದ ಪ್ರವಾಹದಲ್ಲಿ ಸುಮಾರು 50 ಜನರು ಸಾವನ್ನಪ್ಪಿದ್ದರು.

Continue Reading

ಪ್ರಮುಖ ಸುದ್ದಿ

Tirupati Temple : ತಿರುಪತಿ ದೇಗುಲವನ್ನು ಹಿಂದೂ ನಂಬಿಕೆಯಂತೆ ಪವಿತ್ರಗೊಳಿಸುವೆ; ಸಿಎಂ ಚಂದ್ರಬಾಬು ನಾಯ್ಡು ಶಪಥ

Tirupati Temple : ದೇವಸ್ಥಾನದಲ್ಲಿ ಪ್ರಾರ್ಥನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ನಾಯ್ಡು, ಹಿಂದಿನ ಜಗನ್ ಮೋಹನ್ ರೆಡ್ಡಿ ಆಡಳಿತದ ಅವಧಿಯಲ್ಲಿ ವೆಂಕಟೇಶ್ವರ ದೇವಾಲಯದ ಮೇಲ್ವಿಚಾರಣೆ ನಡೆಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಲ್ಲಿ ಅಕ್ರಮಗಳು ನಡೆದಿವೆ. ತಿರುಮಲದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಮತ್ತು ‘ಹಿಂದೂ ಧರ್ಮ’ವನ್ನು ರಕ್ಷಿಸಲು ತಾನು ಬದ್ಧನಾಗಿದ್ದೇನೆ ಎಂದು ಹೇಳಿದರು.

VISTARANEWS.COM


on

Tirupati Temple
Koo

ಬೆಂಗಳೂರು: ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಚಂದ್ರಬಾಬು ನಾಯ್ಡು ಅವರು ಗುರುವಾರ ವಿಶ್ವ ಪ್ರಸಿದ್ಧ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ (Tirupati Temple) ಭೇಟಿ ನೀಡಿದರು. ವಿಜಯವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು ಈ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥಿಸಿದಿರು. ಈ ವೇಳೆ ಅವಉ ತಿರುಪತಿ-ತಿರುಮಲ ಆಡಳಿತವನ್ನು ಹಿಂದೂಗಳ ನಂಬಿಕೆಯಂತೆ ಶುದ್ಧೀಕರಿಸುವ ಪ್ರತಿಜ್ಞೆ ಮಾಡಿದರು. ಮಾಜಿ ಸಿಎಂ ಜಗನ್ ಆಡಳಿತವನ್ನು ಅಪವಿತ್ರಗೊಳಿಸಿದ್ದರು ಎಂಬುದನ್ನು ಅವರು ಬೊಟ್ಟು ಮಾಡಿದರು.

ದೇವಸ್ಥಾನದಲ್ಲಿ ಪ್ರಾರ್ಥನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ನಾಯ್ಡು, ಹಿಂದಿನ ಜಗನ್ ಮೋಹನ್ ರೆಡ್ಡಿ ಆಡಳಿತದ ಅವಧಿಯಲ್ಲಿ ವೆಂಕಟೇಶ್ವರ ದೇವಾಲಯದ ಮೇಲ್ವಿಚಾರಣೆ ನಡೆಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಲ್ಲಿ ಅಕ್ರಮಗಳು ನಡೆದಿವೆ. ತಿರುಮಲದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಮತ್ತು ‘ಹಿಂದೂ ಧರ್ಮ’ವನ್ನು ರಕ್ಷಿಸಲು ತಾನು ಬದ್ಧನಾಗಿದ್ದೇನೆ ಎಂದು ಹೇಳಿದರು.

ನಾನು ತಿರುಮಲದ ಆಡಳಿತವನ್ನು ಸನಾತನ ಸಂಸ್ಕೃತಿ ಪ್ರಕಾರ ಶುದ್ಧೀಕರಣವನ್ನು ಪ್ರಾರಂಭಿಸುತ್ತೇನೆ. ತಿರುಮಲವನ್ನು ಅಪವಿತ್ರಗೊಳಿಸುವುದು ಸ್ವೀಕಾರಾರ್ಹವಲ್ಲ. ತಿರುಮಲದಲ್ಲಿ ಗೋವಿಂದನ ನಾಮ ಜಪ ಮಾತ್ರ ಉಳಿಯುತ್ತದೆ. ಅನ್ಯರ ನಂಬಿಕೆಗಳು ತೊಲಗುತ್ತವೆ ಎಂದು ಅವರು ಹೇಳಿದರು.

ವ್ಯಾಪಾರೀಕರಣ ಇಲ್ಲ

ತಿರುಪತಿ ದೇವಸ್ಥಾನ ಹಿಂದೂ ಧಾರ್ಮಿಕ ನಂಬಿಕೆ ಕೇಂದ್ರ. ಹಿಂದಿನ ರಾಜ್ಯ ಸರ್ಕಾರವು ತಿರುಮಲ ತಿರುಪತಿ ದೇವಸ್ಥಾನವವನ್ನು ವ್ಯಾಪಾರೀಕರಣಗೊಳಿಸುತ್ತು ಎಂದು ಅವರು ಆರೋಪಿಸಿದರು.

ಇಲ್ಲಿನ ಪ್ರಸಾದ ಉತ್ತಮ ಗುಣಮಟ್ಟದ್ದಾಗಿರಬೇಕು. ಅನಗತ್ಯವಾಗಿ ದರ ಹೆಚ್ಚಿಸಬಾರದು ಮತ್ತು ದರ್ಶನದ ಟಿಕೆಟ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಬಾರದು. ಹಿಂದಿನ ಆಡಳಿತ ಈ ಧಾರ್ಮಿಕ ಸ್ಥಳವನ್ನು ಗಾಂಜಾ, ಮದ್ಯ ಮತ್ತು ಮಾಂಸಾಹಾರಿ ಆಹಾರದ ಕೇಂದ್ರವನ್ನಾಗಿ ಪರಿವರ್ತಿಸಿದ್ದರು. ಹೀಗಾಗಿ ಶುದ್ಧೀಕರಣವು ಟಿಟಿಡಿಯಿಂದ ಪ್ರಾರಂಭವಾಗುತ್ತದೆ ಎಂದು ನಾಯ್ಡು ಪ್ರತಿಪಾದಿಸಿದರು.

ಇದನ್ನೂ ಓದಿ: Amit Shah: ತಮಿಳಿಸೈಗೆ ಅಮಿತ್ ಶಾ ಬೈಗುಳದ ವಿಡಿಯೋ; ವಿವಾದಕ್ಕೆ ತೆರೆ ಎಳೆದ ತಮಿಳುನಾಡು ಬಿಜೆಪಿ ನಾಯಕಿ

2047ರ ವೇಳೆಗೆ ತೆಲುಗು ಜನರು ವಿಶ್ವದಲ್ಲೇ ನಂಬರ್ ಒನ್ ಆಗಲಿದ್ದಾರೆ. ನಾನು ಆಂಧ್ರಪ್ರದೇಶವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡುತ್ತೇನೆ. ಅಪರಾಧವನ್ನು ಸಹಿಸುವುದಿಲ್ಲ. ಅಪರಾಧಗಳನ್ನು ಮಾಡಿದ ನಂತರ ಕೆಲವರು ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ರಾಜಕೀಯ ಪಿತೂರಿಗಳನ್ನು ಸಹಿಸುವುದಿಲ್ಲ. ನಾವು ಒಳ್ಳೆಯವರನ್ನು ರಕ್ಷಿಸುತ್ತೇವೆ” ಎಂದು ಟಿಡಿಪಿ ಮುಖ್ಯಸ್ಥರು ಹೇಳಿದರು.

ಪತ್ನಿ, ಮಗ ನಾರಾ ಲೋಕೇಶ್, ಸೊಸೆ ಮತ್ತು ಇತರ ಸಂಬಂಧಿಕರು ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಮುಖ್ಯಮಂತ್ರಿಗಳು ಗುರುವಾರ ಸಂಜೆ ವಿಶೇಷ ವಿಮಾನದಲ್ಲಿ ತಿರುಪತಿಗೆ ತೆರಳಿದರು. ನಂತರ ರಸ್ತೆ ಮಾರ್ಗ ಮೂಲಕ ತಿರುಮಲಕ್ಕೆ ಪ್ರಯಾಣಿಸಿದರು. ಅಲ್ಲಿ ಅವರು ರಾತ್ರಿ ಕಳೆದರು. ಗುರುವಾರ ಮುಂಜಾನೆ, ಅವರು ಪವಿತ್ರ ಬೆಟ್ಟದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.

Continue Reading
Advertisement
Actor Darshan Assistant Malli missing case
ಸ್ಯಾಂಡಲ್ ವುಡ್5 mins ago

Actor Darshan: ಹಲವು ವರ್ಷಗಳಿಂದ ದರ್ಶನ್ ಆಪ್ತ ʻಮಲ್ಲಿʼನಾಪತ್ತೆ; ರೇಣುಕಾ ಸ್ವಾಮಿಯ ಗತಿಯೇ ಆಯ್ತಾ?

V Somanna
ಪ್ರಮುಖ ಸುದ್ದಿ16 mins ago

V Somanna : ತಮ್ಮನ್ನು ಕಡೆಗಣಿಸಿದ ಜಿಲ್ಲಾಧಿಕಾರಿ, ಸಿಇಒಗೆ ಕೇಂದ್ರ ಸಚಿವ ಸೋಮಣ್ಣ ತರಾಟೆ

Self Harming
ಉತ್ತರ ಕನ್ನಡ19 mins ago

Self Harming : ಪಿಎಸ್‌ಐ ಕಿರುಕುಳ; ಕುಡಿದ ಅಮಲಿನಲ್ಲಿ ಠಾಣೆ ಎದುರೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡ

Shakib Al Hasan
ಕ್ರೀಡೆ37 mins ago

Shakib Al Hasan: ನಿವೃತ್ತಿಯಾಗಿ ಎಂದು ಲೇವಡಿ ಮಾಡಿದ ಸೆಹವಾಗ್​ಗೆ ತಕ್ಕ ತಿರುಗೇಟು ನೀಡಿದ ಬಾಂಗ್ಲಾ ನಾಯಕ

Farmer Death
ಮೈಸೂರು46 mins ago

Farmer Death : ಸಾಲದ ಶೂಲಕ್ಕೆ ಮನನೊಂದ ರೈತ; ಕೆರೆಗೆ ಹಾರಿ ಆತ್ಮಹತ್ಯೆ

Gold Rate Today
ಚಿನ್ನದ ದರ47 mins ago

Gold Rate Today: ಆಭರಣ ಖರೀದಿಸಲು ಇದು ಸಕಾಲ; ಚಿನ್ನದ ಬೆಲೆ ಇಳಿಕೆ

Duniya Vijay wife Nagarathna Facebook Post After Court Order
ಸ್ಯಾಂಡಲ್ ವುಡ್1 hour ago

Duniya Vijay: ಗಂಡ ಕೈಬಿಟ್ರೂ, ನಂಬಿದ ದೇವರು ಕೈ ಬಿಡಲಿಲ್ಲ: ದುನಿಯಾ ವಿಜಯ್ ಪತ್ನಿ ನಾಗರತ್ನ

Actress Bbk 10 Siri Marriage Video Goes Viral
ಬಿಗ್ ಬಾಸ್1 hour ago

Actress Siri: ಸಿಂಪಲ್‌ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ `ಬಿಗ್‌ ಬಾಸ್‌ ಕನ್ನಡ 10′ ಸ್ಪರ್ಧಿ, ನಟಿ ಸಿರಿ!

Self Harming
ಕ್ರೈಂ1 hour ago

Self Harming : ಒಂದೇ ದಿನ ನಾಲ್ವರು ಗೃಹಿಣಿಯರ ಆತ್ಮಹತ್ಯೆ; ಅವರಲ್ಲಿಬ್ಬರು ಯೋಧರ ಪತ್ನಿಯರು

Euro Cup 2024
ಕ್ರೀಡೆ1 hour ago

Euro Cup 2024: ಇಂದಿನಿಂದ ಯುರೋ ಕಪ್ ಟೂರ್ನಿ; ಜರ್ಮನಿ-ಸ್ಕಾಟ್ಲೆಂಡ್ ನಡುವೆ ಮೊದಲ ಪಂದ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ7 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ7 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌