Site icon Vistara News

Rahul Gandhi In UK: ಬಿಜೆಪಿ, ಆರೆಸ್ಸೆಸ್‌ನವರು ಹೇಡಿಗಳು, ಬ್ರಿಟನ್‌ನಲ್ಲಿ ರಾಹುಲ್‌ ಗಾಂಧಿ ವಾಗ್ದಾಳಿ, ಸಾವರ್ಕರ್‌ ಹೆಸರೂ ಪ್ರಸ್ತಾಪ

BJP-RSS are cowards, Rahul Gandhi attacks In UK

ರಾಹುಲ್‌ ಗಾಂಧಿ

ಲಂಡನ್‌: ಬ್ರಿಟನ್‌ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi In UK) ಅವರು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಬ್ರಿಟನ್‌ನ ಹೌನ್‌ಸ್ಲೋನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, “ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರನ್ನು ಹೇಡಿಗಳು” ಎಂದು ಟೀಕಿಸಿದ್ದಾರೆ.

“ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಹಿಂಸೆ ಹಾಗೂ ದ್ವೇಷವನ್ನು ಪಸರಿಸುತ್ತಾರೆ. ತಮ್ಮ ವಿರುದ್ಧದ ತತ್ವಗಳನ್ನು ಹೊಂದಿದವರ ಮೇಲೆ ಅವರು ದಾಳಿ ನಡೆಸುತ್ತಾರೆ. ಅಗೌರವದಿಂದ ನಡೆದುಕೊಳ್ಳುತ್ತಾರೆ. ಸೈದ್ಧಾಂತಿಕವಾಗಿ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯವರು ಹೃದಯದಲ್ಲಿ ಹೇಡಿಗಳೇ ಆಗಿರುತ್ತಾರೆ” ಎಂದು ಕುಟುಕಿದರು.

ರಾಹುಲ್‌ ಗಾಂಧಿ ಭಾಷಣ

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರನ್ನು ಹೇಡಿಗಳು ಎನ್ನುತ್ತಲೇ ಅವರು ಚೀನಾ ವಿಷಯ ಪ್ರಸ್ತಾಪಿಸಿದರು. “ಚೀನಾ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಅವರ ಹೇಳಿಕೆಯನ್ನು ನಾವು ಗಮನಿಸಬೇಕು. ಭಾರತಕ್ಕಿಂತ ಚೀನಾ ಬಲಿಷ್ಠವಾಗಿದೆ ಎಂದು ಜೈಶಂಕರ್‌ ಹೇಳಿದ್ದಾರೆ. ನಮಗಿಂತ ಚೀನಾದವರು ಬಲಿಷ್ಠ ಎಂದಾದರೆ, ನಾವು ಹೇಗೆ ಅವರ ವಿರುದ್ಧ ಸಂಘರ್ಷಕ್ಕಿಳಿಯಲು ಸಾಧ್ಯ? ಇದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಹೇಡಿತನವನ್ನು ಸಾರುತ್ತದೆ” ಎಂದು ಹೇಳಿದರು.

ಸಾವರ್ಕರ್‌ ಹೆಸರೂ ಪ್ರಸ್ತಾಪ

ಬಿಜೆಪಿ, ಆರ್‌ಎಸ್‌ಎಸ್‌ ಜತೆಗೆ ರಾಹುಲ್‌ ಗಾಂಧಿ ಅವರು ವೀರ ಸಾವರ್ಕರ್‌ ಹೆಸರನ್ನೂ ಪ್ರಸ್ತಾಪಿಸಿದರು. “ವೀರ ಸಾವರ್ಕರ್‌ ಅವರು ಒಂದು ಪುಸ್ತಕದಲ್ಲಿ ಬರೆದಿದ್ದಾರೆ. ಸಾವರ್ಕರ್‌ ಹಾಗೂ ಅವರ ಗೆಳೆಯರು ಸೇರಿ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಕ್ಕೆ ನನಗೆ ಖುಷಿಯಾಯಿತು ಎಂಬುದಾಗಿ ಅವರು ಬರೆದಿದ್ದಾರೆ. ಐವರು ಒಬ್ಬ ವ್ಯಕ್ತಿಗೆ ಹೊಡೆದು, ಇದರಿಂದ ಐವರಲ್ಲಿ ಒಬ್ಬನಿಗೆ ಖುಷಿಯಾಗುತ್ತದೆ ಎಂದರೆ, ಆ ತತ್ವವು ಹೇಡಿತನದಿಂದಲೇ ಕೂಡಿರುತ್ತದೆ” ಎಂದು ಟೀಕಿಸಿದರು.

ಇದನ್ನೂ ಓದಿ: Rahul Gandhi In London: ಲಂಡನ್‌ನಲ್ಲಿ ಬಸವಣ್ಣನ ಪುತ್ಥಳಿಗೆ ರಾಹುಲ್‌ ಗಾಂಧಿ ನಮನ

Exit mobile version