Site icon Vistara News

Trinamool Congress: ಮಮತಾ ಬ್ಯಾನರ್ಜಿಯನ್ನು ಅರೆಸ್ಟ್‌ ಮಾಡಿ; ಟಿಎಂಸಿ ಉಗ್ರ ಸಂಘಟನೆ ಎಂದು ಘೋಷಿಸಿ-ಬಿಜೆಪಿ ಆಗ್ರಹ

ಪಶ್ಚಿಮ ಬಂಗಾಳ: ಸಂದೇಶ್‌ಖಲಿಯಲ್ಲಿ ತೃಣಮೂಲ ಕಾಂಗ್ರೆಸ್‌(Trinamool Congress)ನ ಉಚ್ಛಾಟಿತ ನಾಯಕ ಶೇಖ್‌ ಶಹಜಾನ್‌ (Sheikh Shahajan) ನಿವಾಸದಲ್ಲಿ ವಿದೇಶಿ ನಿರ್ಮಿತ ಪಿಸ್ತೂಲ್‌ ಸೇರಿದಂತೆ ಅನೇಕ ಶಸ್ತ್ರಾಸ್ತ್ರ ಪತ್ತೆಯಾಗಿರುವ ಬೆನ್ನಲ್ಲೇ ಬಿಜೆಪಿ (BJP) ಇದೇ ವಿಚಾರವನ್ನಿಟ್ಟುಕೊಂಡು ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamatha Banarjee)ಯವರನ್ನು ತಕ್ಷಣ ಅರೆಸ್ಟ್‌ ಮಾಡಿ, ತೃಣಮೂಲ ಕಾಂಗ್ರೆಸ್‌ ಅನ್ನು ಉಗ್ರ ಸಂಘಟನೆ ಎಂದು ಘೋಷಿಸುವಂತೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ಮುಖಂಡ ಸುವೆಂದು ಅಧಿಕಾರಿ ಒತ್ತಾಯಿಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸ್ವಪಕ್ಷ ನಾಯಕರು ಸ್ಫೋಟಕ, ಶಸ್ತ್ರಾಸ್ತ್ರಗಳ ಹೊಂದಿದ್ದು, ದೇಶ ವಿರೋಧಿ ಚಟುವಟಿಕೆಗೆ ಕುಮ್ಮಕ್ಕೂ ನೀಡುತ್ತಿರುವುದು ಸಾಬೀತಾಗಿರುವಾಗ ಮಮತಾ ಬ್ಯಾನರ್ಜಿಯವರು ಸಿಎಂ ಆಗಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ. ಅಲ್ಲದೇ ಸ್ವತಃ ಮಮತಾ ಅವರೇ ಶೇಖ್‌ ನಂತಹ ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತಿದ್ದಾರೆ. ಸಂದೇಶ್‌ಖಲಿಯಲ್ಲಿ ಸಿಕ್ಕಿರುವ ಎಲ್ಲಾ ಶಸ್ತ್ರಾಸ್ತ್ರಗಳು ವಿದೇಶಿ ನಿರ್ಮಿತ. ಅಲ್ಲದೇ ಇವೆಲ್ಲಾ ಅಂತಾರಾಷ್ಟ್ರೀಯ ಉಗ್ರರು ಬಳಸುವಂತ ಶಸ್ತ್ರಾಸ್ತ್ರಗಳಾಗಿವೆ. ಹೀಗಾಗಿ ಇಡೀ ತೃಣಮೂಲ ಕಾಂಗ್ರೆಸ್‌ ಪಕ್ಷವನ್ನೇ ಉರಗ ಸಂಘಟನೆ ಎಂದು ಘೋಷಿಸಬೇಕೆಂದು ಅವರು ಆಗ್ರಹಿಸಿದರು.

ಪಶ್ಚಿಮ ಬಂಗಾಳ ಉಗ್ರರಿಗೆ ಸ್ವರ್ಗತಾಣವಾಗಿದೆ. ಖಾದಿಕುಲ್‌, ಈಗ್ರಾಗಳಲ್ಲಿ ನಡೆದ ಹಿಂಸಾಚಾರದ ಮೂಲಕ ಜನ ಟ್ರೈಲರ್‌ ಅಷ್ಟೇ ನೋಡಿದ್ದರು. ಆದರೆ ಈ ಸಂದೇಶ್‌ಖಲಿಯಲ್ಲಿ ದೊರೆತಿರುವ ಆರ್‌ಡಿಎಕ್ಸ್‌ ಮತ್ತು ಮಾರಣಾಂತಿಕ ಸಾಧನಗಳನ್ನು ಪೂರ್ತಿ ಸಿನಿಮಾವನ್ನೇ ಜನರಿಗೆ ತೋರಿಸುತ್ತಿದೆ. ಈ ಘಟನೆಗೆ ಸಂಪೂರ್ಣವಾಗಿ ಮಮತಾ ಬ್ಯಾನರ್ಜಿಯವರೇ ಜವಾಬ್ದಾರರು. ಅವರನ್ನು ಮೊದಲು ಬಂಧಿಸಿ ನಂತರ ಅವರ ಪಕ್ಷವನ್ನು ಉಗ್ರ ಸಂಘಟನೆ ಎಂದು ಘೋಷಿಸಬೇಕು ಎಂದು ಅಧಿಕಾರಿ ಕಿಡಿ ಕಾರಿದರು.

ಸಿಬಿಐ ದಾಳಿ ಏನು ಸಿಕ್ಕಿತ್ತು?

ಸಂದೇಶ್‌ಖಲಿಯಲ್ಲಿ ಶೇಖ್‌ ಶಹಜಾನ್‌ಗೆ ಸೇರಿದ ಎರಡು ಕಟ್ಟಡಗಳ ಮೇಲೆ ಶುಕ್ರವಾರ ಸಿಬಿಐ ದಾಳಿ ನಡೆಸಿತ್ತು. ಕಳೆದ ಜನವರಿಯಲ್ಲಿ ಇಡಿ ಅಧಿಕಾರಿಗಳ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಹಿನ್ನೆಲೆ ಶಹಜಾನ್‌ ಮೇಲೆ ಈ ರೇಡ್‌ ನಡೆಸಲಾಗಿತ್ತು. ದಾಳಿ ವೇಳೆ ಸಿಬಿಐ ಮೂರು ವಿದೇಶಿ ನಿರ್ಮಿತ ಬಂದೂಕು, ಒಂದು ಪಿಸ್ತೂಲ್‌, ಒಂದು ಸ್ವದೇಶಿ ನಿರ್ಮಿತ ಪಿಸ್ತೂಲ್‌, ಪೊಲೀಸ್‌ ಪಿಸ್ತೂಲ್‌, ಒಂದು ನಾಡ ಬಂದೂಕು, 120 ಬುಲೆಟ್ಸ್ ಸೇರದಂತೆ ಅನೇಕ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ಅಧಿಕಾರಿಗಳು ಸೀಜ್‌ ಮಾಡಿದ್ದರು.

ಇದನ್ನೂ ಓದಿ: Vampire Facial: ಹೆಣ್ಣುಮಕ್ಕಳೇ ಎಚ್ಚರ; ಫೇಶಿಯಲ್‌ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ!

ಟಿಎಂಸಿ ಏನು ಹೇಳಿತ್ತು?

ಶೇಖ್‌ ಶಹಜಾನ್‌ ನಿವಾಸದಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗುತ್ತಿದ್ದಂತೆ ಸ್ಪಷ್ಟನೆ ಕೊಟ್ಟಿರುವ ಟಿಎಂಸಿ ಮುಖಂಡ ಕುನಾಲ್‌ ಘೋಷ್‌, ಇದು ಪ್ರತಿಪಕ್ಷ ನಾಯಕರ ಸಂಚು. ಇದುವರೆಗೆ ಸಿಬಿಐ ದಾಳಿಯಲ್ಲಿ ಸೀಜ್‌ ಮಾಡಿರುವ ವಸ್ತುಗಳ ಬಗ್ಗೆ ಅಧಿಕೃತವಾಗಿ ಮಾಹಿತಿ ಕೊಟ್ಟಿಲ್ಲ. ಇದು ರಾಜಕೀಯ ಲಾಭಕ್ಕಾಗಿ ಪ್ರತಿಪಕ್ಷ ಮಾಡುತ್ತಿರುವ ಸುಳ್ಳು ಆರೋಪ ಎಂದಿದ್ದಾರೆ.

Exit mobile version