Site icon Vistara News

Boat Capsizes: ದೋಣಿ ಮುಳುಗಿ ಇಬ್ಬರು ಜಲಸಮಾಧಿ; ಏಳು ಮಂದಿ ನಾಪತ್ತೆ

Boat Capsizes

Boat Capsizes

ಭುವನೇಶ್ವರ:‌ ಒಡಿಶಾದ ಜಾರ್ಸುಗುಡ ಜಿಲ್ಲೆಯ ಮಹಾನದಿ ನದಿ (Mahanadi River)ಯಲ್ಲಿ ಶುಕ್ರವಾರ (ಏಪ್ರಿಲ್‌ 19) ದುರಂತವೊಂದು ಸಂಭವಿಸಿದೆ. ದೋಣಿ ಮಗುಚಿ ಬಿದ್ದ (Boat Capsizes) ಪರಿಣಾಮ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 50 ಪ್ರಯಾಣಿಕರನ್ನು ಹೊತ್ತ ದೋಣಿ ಪಥರ್ಸೇನಿ ಕುಡಾದಿಂದ ಬಾರ್ಗರ್ ಜಿಲ್ಲೆಯ ಬಂಜಿಪಲ್ಲಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಜಾರ್ಸುಗುಡ ಜಿಲ್ಲೆಯ ರೆಂಗಲಿ ಪೊಲೀಸ್ ಠಾಣೆಯ ಶಾರದಾ ಘಾಟ್ ತಲುಪುತ್ತಿದ್ದಾಗ ದೋಣಿ ಮಗುಚಿ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಮೀನುಗಾರರು 35 ಪ್ರಯಾಣಿಕರನ್ನು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನಂತರ ಪೊಲೀಸರು ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಇನ್ನೂ ಏಳು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಇತರ ಏಳು ಪ್ರಯಾಣಿಕರು ಇನ್ನೂ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪರಿಹಾರ ಘೋಷಣೆ

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮೃತರ ಕುಟುಂಬಕ್ಕೆ 4 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ಘೋಷಿಸಿದ್ದಾರೆ. ಜತೆಗೆ ಐದು ಡೈವರ್‌ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಜಮ್ಮು-ಕಾಶ್ಮೀರದ ಜೇಲಂ ನದಿಯಲ್ಲಿ ದೋಣಿಯೊಂದು ಮುಳುಗಿ, ನಾಲ್ವರು ಶಾಲಾ ಮಕ್ಕಳು ಜಲಸಮಾಧಿಯಾಗಿದ್ದರು. ಈ ಘಟನೆ ಹಸಿಯಾಗಿರುವಾಗಲೇ ಇಂದೂ ಅಂತಹದ್ದೇ ದುರಂತ ಸಂಭವಿಸಿದೆ. ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜೇಲಂ ನದಿಯು ಉಕ್ಕಿ ಹರಿಯುತ್ತಿತ್ತು. ಶಾಲಾ ಮಕ್ಕಳು ಸೇರಿ ಹಲವರು ಇದ್ದ ದೋಣಿಯು ತುಂಬಿದ ನದಿಯಲ್ಲಿ ಶ್ರೀನಗರದ ಗಂಡ್ಬಾಲ್‌ನಿಂದ ಬಟ್ವಾರದವರೆಗೆ ಚಲಿಸುತ್ತಿತ್ತು. ಇದೇ ವೇಳೆ ದೋಣಿ ಮಗುಚಿತ್ತು.

ಇದನ್ನೂ ಓದಿ: ಹಡಗು ಮುಳುಗಿ 94 ಜನರ ದುರ್ಮರಣ, 26 ಮಂದಿ ನಾಪತ್ತೆ; ಕಾಲರಾ ಭೀತಿ ತೆಗೆಯಿತು ಪ್ರಾಣ!

Exit mobile version