Site icon Vistara News

Satish Kaushik: ಬಾಲಿವುಡ್‌ ನಟ ಸತೀಶ ಕೌಶಿಕ್‌ ನಿಧನ

satish kaushik

ಮುಂಬಯಿ: ಬಾಲಿವುಡ್‌ ನಟ, ನಿರ್ದೇಶಕ ಸತೀಶ್‌ ಕೌಶಿಕ್‌ ಮೃತಪಟ್ಟಿದ್ದಾರೆ. ಈ ಕುರಿತು ವರ್ತಮಾನವನ್ನು ನಟ ಅನುಪಮ್‌ ಖೇರ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ‌

ʼʼಈ ಜಗತ್ತಿನ ಅಂತಿಮ ಸತ್ಯವೆಂದರೆ ಸಾವು ಎಂಬುದು ನನಗೆ ಗೊತ್ತು. ಆದರೆ ನನ್ನ ಆತ್ಮೀಯ ಮಿತ್ರನ ಸಾವಿನ ಸುದ್ದಿ ಬರೆಯಬೇಕಾದೀತು ಎಂದು ಕನಸಿನಲ್ಲೂ ಊಹಿಸಿರಲಿಲ್ಲ. 45 ವರ್ಷಗಳ ಸ್ನೇಹಕ್ಕೆ ಹಠಾತ್‌ ಪೂರ್ಣವಿರಾಮ ಬಿದ್ದಿದೆ. ಸತೀಶ್‌ ಇಲ್ಲದೆ ಬದುಕು ಮೊದಲಿನಂತಿರುವುದಿಲ್ಲʼʼ ಎಂದು ಅನುಪಮ್‌ ಖೇರ್‌ ಟ್ವೀಟ್‌ ಮಾಡಿದ್ದಾರೆ. ನಟಿ ಕಂಗನಾ ರನೌತ್‌ ಅವರು ಕೂಡ ಸತೀಶ್‌ ಕೌಶಿಕ್‌ ಮರಣದ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

1965ರ ಏಪ್ರಿಲ್‌ 13ರಂದು ಹರ್ಯಾಣದಲ್ಲಿ ಜನಿಸಿದ ಸತೀಶ್‌ ಕೌಶಿಕ್‌, ಬಾಲಿವುಡ್‌ನ ಖ್ಯಾತ ನಟ, ಕಾಮೆಡಿಯನ್‌, ನಿರ್ದೇಶಕ ಹಾಗೂ ನಿರ್ಮಾಪಕ ಕೂಡ. ಬಾಲಿವುಡ್‌ಗೆ ಆಗಮಿಸುವ ಮುನ್ನ ಅವರು ಹಲವಾರು ನಾಟಕಗಳಲ್ಲಿ ನಟಿಸಿದ್ದರು.

ಮಿ.ಇಂಡಿಯಾ ಫಿಲಂನ ಕಲಂದರ್‌, ದೀವಾನಾ ಮಸ್ತಾನಾದ ಪಪ್ಪು ಪೇಗರ್‌, ಬ್ರಿಕ್‌ ಲೇನ್‌ನ ಚಾನು ಅಹ್ಮದ್‌ ಮುಂತಾದ ಪಾತ್ರಗಳಲ್ಲಿ ಅವರು ನಟಿಸಿದ್ದರು. 1990ರ ರಾಮ್‌ ಲಖನ್‌ ಹಾಗೂ 1997ರ ಸಾಜನ್‌ ಚಲೇ ಸಸುರಾಲ್‌ ಸಿನಿಮಾಗಳಲ್ಲಿನ ನಟನೆಗಳಿಗೆ ಫಿಲಂಫೇರ್‌ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿಯನ್ನೂ ಪಡೆದಿದ್ದರು. ಅವರಿಗೆ ಪತ್ನಿ ಹಾಗೂ ಮಗಳು ಇದ್ದಾರೆ.

ಇದನ್ನೂ ಓದಿ: ಪತ್ನಿ ಮತ್ತು ಮಕ್ಕಳನ್ನು ಮನೆಯಿಂದ ಹೊರಕ್ಕೆ ಹಾಕಿದ ಬಾಲಿವುಡ್ ನಟ ನವಾಜುದ್ದೀನ್​ ಸಿದ್ದಿಕಿ; ಆರೋಪ

Exit mobile version