ನವದೆಹಲಿ: ಮುಟ್ಟು (menstrual) ಎಂಬುದು ಅಂಗವೈಕಲ್ಯ ಅಲ್ಲ. ಹಾಗಾಗಿ ಅದು ದುಡಿಯುವ ಮಹಿಳೆಗೆ ವೇತನ ಸಹಿತ ರಜೆಗೆ ನೀತಿಯಾಗಬಾರದು(paid menstrual leave) ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ(Smriti Irani) ಹೇಳಿದ್ದರು. ಈ ಹೇಳಿಕೆಗೆ ದನಿಗೂಡಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut), ಮಹಿಳೆಯರು ಯಾವಾಗಲೂ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಕುಟುಂಬ ಅಥವಾ ಸಮುದಾಯ ಅಥವಾ ರಾಷ್ಟ್ರಕ್ಕೆ ಅವರ ಬದ್ಧತೆಯ ದಾರಿಯಲ್ಲಿ ಇದಾವುದೂ ಅಡ್ಡ ಬಂದಿಲ್ಲ. ಕೆಲಸ ಮಾಡುತ್ತಿರುವ ಮಹಿಳೆ ಎನ್ನುದವುದೇ ಒಂದು ದೊಡ್ಡು ಸುಳ್ಳು(Working woman is a myth). ವೇತನ ಸಹಿತ ಮಟ್ಟಿನ ರಜೆ ನೀಡುವ ಅಗತ್ಯ ಇಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ವರ್ಕಿಂಗ್ ವುಮನ್ ಎನ್ನುವುದೇ ದೊಡ್ಡ ಸುಳ್ಳು. ಪುರಾಣ, ಮನುಕುಲದ ಇತಿಹಾಸದಲ್ಲಿ ಒಬ್ಬ ಕೆಲಸ ಮಾಡದ ಮಹಿಳೆಯನ್ನು ತೋರಿಸಿ ನೋಡೋಣ. ಬೇಸಾಯದಿಂದ ಹಿಡಿದು ಮನೆಕೆಲಸಗಳವರೆಗೆ ಮಕ್ಕಳನ್ನು ಬೆಳೆಸುವವರೆಗೆ, ಮಹಿಳೆಯರು ಯಾವಾಗಲೂ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬಗಳು ಅಥವಾ ಸಮುದಾಯ ಅಥವಾ ರಾಷ್ಟ್ರಕ್ಕೆ ಅವರ ಬದ್ಧತೆಗೆ ಏನೂ ಅಡ್ಡಿಯಾಗುವುದಿಲ್ಲ. ಇದು ಕೆಲವು ನಿರ್ದಿಷ್ಟ ವೈದ್ಯಕೀಯ ಸ್ಥಿತಿಯ ಹೊರತು, ಮಹಿಳೆಯರಿಗೆ ಪಿರಿಯಡ್ಸ್‌ಗಾಗಿ ಪಾವತಿಸಿದ ರಜೆಗಳ ಅಗತ್ಯವಿಲ್ಲ, ದಯವಿಟ್ಟು ಅರ್ಥಮಾಡಿಕೊಳ್ಳಿ. ಇದು ಮುಟ್ಟು ಅಷ್ಟೇ.ಕೆಲವು ಅನಾರೋಗ್ಯ ಅಥವಾ ಅಂಗವೈಕಲ್ಯವಲ್ಲ ಎಂದು ನಟಿ ಕಂಗನಾ ರಣಾವತ್ ಹೇಳಿದ್ದಾರೆ.
ಸಚಿವ ಸ್ಮೃತಿ ಇರಾನಿ ಹೇಳಿದ್ದೇನು?
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, ಋತುಸ್ರಾವದ ಮಹಿಳೆಯಾಗಿ ನಾನು ಹೇಳುತ್ತಿದ್ದೇನೆ, ಮಟ್ಟು ಮತ್ತು ಋತುಚಕ್ರವು ಅಂಗವೈಕಲ್ಯವಲ್ಲ, ಇದು ಮಹಿಳೆಯರ ಜೀವನ ಪಯಣದ ಸಹಜ ಭಾಗವಾಗಿದೆ. ಮಹಿಳೆಯರಿಗೆ ಸಮಾನತೆಯನ್ನು ನಿರಾಕರಿಸುವ ವಿಷಯಗಳನ್ನು ನಾವು ಪ್ರಸ್ತಾಪಿಸಬಾರದು. ಋತುಸ್ರಾವವಾಗದ ಯಾರಾದರೂ ಮುಟ್ಟಿನ ಬಗ್ಗೆ ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆಂದು ಮಾತ್ರಕ್ಕೆ ವಿರೋಧಿಸುವುದು ಸರಿಯಲ್ಲ ಎಂದು ಹೇಳಿದ್ದರು.
ಕಳೆದ ಐದಾರು ಸಿನಿಮಾಗಳ ಮೂಲಕ ಸಾಕಷ್ಟು ನಷ್ಟ ಅನುಭವಿಸಿರುವ ನಟಿ ಕಂಗನಾ ರಣಾವತ್ ಅವರು ಆಗಾಗ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ವಿಶೇಷವಾಗಿ ಅವರು ಬಿಜೆಪಿ ಹಾಗೂ ಸರ್ಕಾರದ ಪರವಾಗಿ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಕೆಲವು ಅತಿರೇಕದ ಹೇಳಿಕೆಗಳನ್ನು ನೀಡಿದ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ.
ಈ ಸುದ್ದಿಯನ್ನೂ ಓದಿ: Kangana Ranaut: ಲೋಕಸಭೆ ಚುನಾವಣೆಯಲ್ಲಿ ಕಂಗನಾ ರಣಾವತ್ ಸ್ಪರ್ಧೆ; ಯಾವ ಪಕ್ಷ?