Site icon Vistara News

Neha Sharma : ಬಾಲಿವುಡ್ ನಟಿ ನೇಹಾ ಲೋಕಸಭಾ ಚುನಾವಣಾ ಕಣಕ್ಕೆ? ಅವರ ತಂದೆ ಹೇಳಿದ್ದೇನು?

Neha Sharma

ನವದೆಹಲಿ: ಬಾಲಿವುಡ್ ನಟಿ ನೇಹಾ ಶರ್ಮಾ (Neha Sharma) ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ರಾಜಕೀಯ ಅಖಾಡಕ್ಕೆ ಇಳಿಯಬಹುದು ಎಂದು ಅವರ ತಂದೆ, ಕಾಂಗ್ರೆಸ್ ಮುಖಂಡ ಅಜಯ್ ಶರ್ಮಾ (Ajay Sharma) ಸುಳಿವು ನೀಡಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಹಾರದ ಭಾಗಲ್ಪುರವನ್ನು ಪ್ರತಿನಿಧಿಸುವ ಶಾಸಕ ಅಜಯ್ ಶರ್ಮಾ ಅವರು, ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಭಾಗಲ್ಪುರ ಕ್ಷೇತ್ರ ಸಿಕ್ಕರೆ ತಮ್ಮ ಮಗಳೇ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ.

“ಕಾಂಗ್ರೆಸ್ ಭಾಗಲ್ಪುರ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು. ನಾವು ಹೋರಾಡಿ ಉಳಿಸಿಕೊಳ್ಳುತ್ತೇವೆ. ನಾನು ಈಗಾಗಲೇ ಶಾಸಕನಾಗಿರುವುದರಿಂದ ನನ್ನ ಮಗಳು ನೇಹಾ ಶರ್ಮಾ ಸ್ಪರ್ಧಿಸಬೇಕೆಂದು ನಾನು ಬಯಸುತ್ತೇನೆ. ಆದರೆ ನಾನು ನಿಲ್ಲಬೇಕು ಎಂದು ಪಕ್ಷ ಬಯಸಿದರೆ, ನಾನು ಅದನ್ನು ಮಾಡುತ್ತೇನೆ” ಎಂದು ಅಜಯ್ ಶರ್ಮಾ ಹೇಳಿದ್ದಾರೆ.

ಇಮ್ರಾನ್ ಹಶ್ಮಿ ಅವರೊಂದಿಗೆ ‘ಕ್ರೂಕ್’, ‘ತನ್ಹಾಜಿ: ದಿ ಅನ್ಸಂಗ್ ವಾರಿಯರ್’, ‘ಯಮಲಾ ಪಗ್ಲಾ ದೀವಾನಾ 2’, ‘ತುಮ್ ಬಿನ್ 2’, ಮತ್ತು ‘ಮುಬಾರಕನ್’ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ನೇಹಾ ಶರ್ಮಾ ಸೋಶಿಯಲ್​ ಮೀಡಿಯಾಗಳಲ್ಲಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು 2 ಕೋಟಿ 10 ಲಕ್ಷ ಪಾಲೋಯರ್​ಗಳನ್ನು ಹೊಂದಿದ್ದಾರೆ.

ಬಿಜೆಪಿ ನಿರ್ನಾಮ ಮಾಡುವೆ

ಈ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್​ ಬಿಹಾರದಿಂದ ಬಿಜೆಪಿಯನ್ನು ನಿರ್ಮೂಲನೆ ಮಾಡುತ್ತದೆ ಎಂದು ಅಜಯ್ ಶರ್ಮಾ ಹೇಳಿದರು. ನಾವು ಬಿಹಾರದಿಂದ ಎನ್​ಡಿಎಯನ್ನು ಓಡಿಸುತ್ತೇವೆ. ಈ ಬಾರಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಜವಾಬ್ದಾರಿಯನ್ನು ಬಿಹಾರ ತೆಗೆದುಕೊಳ್ಳಲಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ : Voter Id : ಮನೆಯಲ್ಲೇ ಕುಳಿತು ಮತಪಟ್ಟಿಗೆ ಈಗಲೂ ನಿಮ್ಮ ಹೆಸರು ಸೇರಿಸಬಹುದು; ನಾಳೆ ಕೊನೇ ದಿನ

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿ ಜನವರಿಯಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಸೀಟು ಹಂಚಿಕೆ ಮಾತುಕತೆ ಬಹುತೇಕ ಮುಗಿದಿದೆ ಮತ್ತು ಮುಂದಿನ ವಾರ ಅಧಿಕೃತ ಪ್ರಕಟಣೆ ಹೊರಬರಬಹುದು ಎಂದು ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ.

“ಎರಡು ಅಥವಾ ಮೂರು ದಿನಗಳಲ್ಲಿ ಎಲ್ಲವೂ ನಿರ್ಧಾರವಾಗಲಿದೆ. ಇದು ಅಂತಿಮ ಹಂತದಲ್ಲಿದೆ. ಒಂದು ಅಥವಾ ಎರಡು ಸ್ಥಾನಗಳ ಬಗ್ಗೆ ಕೆಲವು ಸಮಸ್ಯೆಗಳಿವೆ, ಆದರೆ ಎಲ್ಲವನ್ನೂ ಪರಿಹರಿಸಲಾಗುವುದು” ಎಂದು ಅವರು ಹೇಳಿದರು ಲೋಕಸಭಾ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ನಾಲ್ಕು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯೂ ನಡೆಯಲಿದೆ.

Exit mobile version