Site icon Vistara News

ಸೆಕ್ಸ್‌ ಮಾಡಲು ಗಂಡ ಅಸಮರ್ಥ; ದಾಂಪತ್ಯದ 17 ದಿನದಲ್ಲೇ ಮದುವೆ ರದ್ದುಗೊಳಿಸಿದ ಕೋರ್ಟ್!

Marriage

Bombay High Court Annuls 17-day marriage on grounds of husband’s relative impotency

ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಯುವಕ-ಯುವತಿಯು ದಾಂಪತ್ಯ ಜೀವನಕ್ಕೆ ಕಾಲಿಟ್ಟ 17 ದಿನದಲ್ಲೇ ಮದುವೆ ರದ್ದಾಗಿದೆ. ನನ್ನ ಗಂಡನು ಸೆಕ್ಸ್‌ ಮಾಡಲು ಸಮರ್ಥ ಇಲ್ಲ ಎಂಬುದಾಗಿ ಮಹಿಳೆಯು ಕೋರ್ಟ್‌ ಮೊರೆಹೋಗಿದ್ದು, ಈಗ ಮದುವೆಯನ್ನು ರದ್ದುಗೊಳಿಸಿ ಬಾಂಬೆ ಹೈಕೋರ್ಟ್‌ (Bombay High Court) ಆದೇಶ ಹೊರಡಿಸಿದೆ. 27 ವರ್ಷದ ಯುವಕ ಹಾಗೂ 26 ವರ್ಷದ ಯುವತಿಯ ದಾಂಪತ್ಯವು ಎರಡೇ ವಾರದಲ್ಲಿ ಅಂತ್ಯಗೊಂಡಂತಾಗಿದೆ.

ಯುವಕ ಹಾಗೂ ಯುವತಿಯು 2023ರ ಮಾರ್ಚ್‌ 13ರಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಹಿಂದು ಸಂಪ್ರದಾಯದಂತೆ ಮದುವೆಯಾಗಿದ್ದರು. ವರನ ಮನೆಯು ಅಹ್ಮದ್‌ನಗರದಲ್ಲಿದ್ದು, ನೂರು ಕನಸು ಇಟ್ಟುಕೊಂಡು ಯುವತಿಯು ಗಂಡನ ಮನೆ ಪ್ರವೇಶಿಸಿದ್ದಳು. ಆದರೆ, ಮೊದಲ ರಾತ್ರಿಯಲ್ಲಿ ಗಂಡನು ಆಕೆ ಜತೆ ಸೆಕ್ಸ್‌ ಮಾಡಲು ಸಾಧ್ಯವಾಗಿಲ್ಲ. ಆರಂಭಿಕ ಆತಂಕ, ದುಗುಡ ಇರಬಹುದು ಎಂಬುದಾಗಿ ಯುವತಿಯೂ ಸುಮ್ಮನಿದ್ದಳು. ಆದರೆ, ಮದುವೆಯಾಗಿ 17 ದಿನ ಕಳೆದರೂ ಪತಿಯಾದವನಿಗೆ ಸೆಕ್ಸ್‌ ಮಾಡಲು ಸಾಧ್ಯವಾಗದ ಕಾರಣ ಯುವತಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾಳೆ.

ನನ್ನ ಗಂಡನು ರಿಲೆಟಿವ್ ಇಂಪೋಟನ್ಸಿಯಿಂದ (ಒಬ್ಬರ ಜತೆಗೆ ಅಂದರೆ ಮನಸಾರೆ ಪ್ರೀತಿಸುವವರು, ಇಷ್ಟಪಟ್ಟವರ ಜತೆಗೆ ಮಾತ್ರ ಸಂಭೋಗ ಮಾಡಲು ಸಾಧ್ಯವಾಗುವ. ಬೇರೆಯವರ ಜತೆ ಸೆಕ್ಸ್‌ ಮಾಡಲು ಆಗದ ಸ್ಥಿತಿಯನ್ನು ರಿಲೆಟಿವ್‌ ಇಂಪೋಟನ್ಸಿ ಎಂದು ಕರೆಯುತ್ತಾರೆ)‌ ಬಳಲುತ್ತಿದ್ದಾನೆ. ಆತನಿಗೆ ನನ್ನ ಜತೆ ಕಾಮದ ಸುಖ ಅನುಭವಿಸಲು ಆಗುವುದಿಲ್ಲ. ಹಾಗಾಗಿ, ಆತನ ಮನೆಯಲ್ಲಿ 17 ದಿನಕ್ಕಿಂತ ಜಾಸ್ತಿ ಸಮಯ ಇರಲು ಆಗಲಿಲ್ಲ. ಹಾಗಾಗಿ, ನಮ್ಮ ಮದುವೆಯನ್ನು ರದ್ದುಗೊಳಿಸಬೇಕು ಎಂಬುದಾಗಿ ಯುವತಿ ಮನವಿ ಮಾಡಿದ್ದಳು. ಆದರೆ, ಕೌಟುಂಬಿಕ ನ್ಯಾಯಾಲಯವು ಇವರ ಅರ್ಜಿಯನ್ನು ತಿರಸ್ಕರಿಸಿತ್ತು.

ಬೆಂಗಳೂರಿಗೆ ಹನಿಮೂನ್‌ಗೆ ಬಂದಿದ್ದರು

ಮದುವೆಯಾದ ಬಳಿಕ ಇಬ್ಬರೂ ಬೆಂಗಳೂರಿಗೆ ಹನಿಮೂನ್‌ಗೆಂದು ಆಗಮಿಸಿದ್ದರು. ಆಗಲೂ ಆಕೆಯ ಜತೆ ಆತನಿಗೆ ಸೆಕ್ಸ್‌ ಮಾಡಲು ಆಗಿರಲಿಲ್ಲ. ಇದನ್ನು ಪ್ರಶ್ನಿಸಿದಾಗ, ನನ್ನ ಬಿಟ್ಟು ಹೋಗು ಎಂದು ಆತನು ಗದರಿದ್ದಾನೆ. ಇದರಿಂದ ನೊಂದ ಯುವತಿಯು ಕುಟುಂಬಸ್ಥರನ್ನು ಕರೆಸಿ ಮಾತನಾಡಿದ್ದಾಳೆ. ಆಗಲೂ ಸಮಸ್ಯೆ ಬಗೆಹರಿಯದಿದ್ದಾಗ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಅಲ್ಲಿ ಅರ್ಜಿ ತಿರಸ್ಕೃತವಾದ ಕಾರಣ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾಳೆ.

“ನಾನು ಎಲ್ಲರಂತೆ ಸಾಮಾನ್ಯವಾಗಿದ್ದೇನೆ. ಆದರೆ, ಪತ್ನಿಯ ಜತೆ ಸೆಕ್ಸ್‌ ಮಾಡಲು ಆಗುವುದಿಲ್ಲ” ಎಂಬುದಾಗಿ ಆತನು ಕೋರ್ಟ್‌ಗೆ ತಿಳಿಸಿದ್ದಾರೆ. ಇನ್ನು ಈತನ ಜತೆ ಸಂಸಾರ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಆಕೆ ಹೇಳಿದ್ದಾಳೆ. ಕೊನೆಗೆ ನ್ಯಾಯಾಲಯವು 1955ರ ಹಿಂದು ವಿವಾಹ ಕಾಯ್ದೆ ಅಡಿಯಲ್ಲಿ ಇಬ್ಬರ ಮದುವೆಯನ್ನು ರದ್ದುಗೊಳಿಸಿದೆ. “ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿಯು ಅನ್ಯೂನ್ಯವಾಗಿ ಇರದಿದ್ದರೆ, ಅವರು ಸಂಭೋಗದಲ್ಲಿ ತೊಡಗಲು ಆಗದಿದ್ದರೆ, ಅದು ಮತ್ತೊಂದು ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ, ಈ ಮದುವೆಯನ್ನು ರದ್ದುಗೊಳಿಸಲಾಗುತ್ತಿದೆ” ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Love, Sex and Dokha: ಸಂಸದ ಪುತ್ರನ ಲವ್‌, ಸೆಕ್ಸ್‌, ದೋಖಾ ಪ್ರಕರಣ; ಮತ್ತೊಂದು ಆಡಿಯೊ ವೈರಲ್

Exit mobile version