ಲಂಡನ್: ಖ್ಯಾತ ಗಾಯಕಿ ಬಾಂಬೆ ಜಯಶ್ರೀ (Bombay Jayashree) ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬ್ರಿಟನ್ ದೇಶದ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು, ತಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದರು ಎಂದು ಹೇಳಲಾಗುತ್ತಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಇಂದು ಬೆಳಗ್ಗೆ ಉಪಹಾರ ಮತ್ತು ಊಟಕ್ಕೆ ಜಯಶ್ರೀ ಅವರು ಬಾರದೇ ಹೋದಾಗ, ಹೋಟೆಲ್ ಕೋಣೆಗೆ ಹೋಗಿ ನೋಡಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆಯ ನಂತರ ಅವರನ್ನು ಚೆನ್ನೈಗೆ ಕರೆತರಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಆಪ್ತ ಮೂಲಗಳ ಪ್ರಕಾರ ಬಾಂಬೆ ಜಯಶ್ರೀ ಅವರು ಶಸ್ತ್ರಚಿಕಿತ್ಸೆಗೆ ಒಳಲಾಗಿದ್ದರು. ನಿನ್ನೆ ರಾತ್ರಿ ಅವರು ಬಳಲಿಕೆ ಹಾಗೂ ತೀವ್ರ ಕುತ್ತಿಗೆ ನೋವಿನ ಬಗ್ಗೆಯೂ ಮಾತನಾಡಿದ್ದರು ಎಂದು ಆಪ್ತರು ತಿಳಿಸಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕಿಯಾಗಿರುವ ಜಯಶ್ರೀ ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಪದ್ಮಶ್ರೀ ಸೇರಿದಂತೆ ಹಲವು ಪುರಸ್ಕಾರಗಳು ಅವರಿಗೆ ದೊರೆತಿವೆ. ʼಲೈಫ್ ಆಫ್ ಪೈʼ ಮುಂತಾದ ಹಾಲಿವುಡ್ ಸಿನಿಮಾಗಳಲ್ಲೂ ಅವರು ಹಾಡಿದ್ದಾರೆ.
ಇದನ್ನೂ ಓದಿ: Viral Video: ಭಾರತದ 51 ನದಿ ಹೆಸರಿರುವ ಮ್ಯೂಸಿಕ್ ವಿಡಿಯೋ ಷೇರ್ ಮಾಡಿದ ಆನಂದ್ ಮಹೀಂದ್ರಾ, ನೆಟ್ಟಿಗರು ಫಿದಾ