ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಲಕ್ಷದ್ವೀಪ (Lakshadweep) ಪ್ರವಾಸ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಮಾಲ್ಡೀವ್ಸ್‌ನ ಡೆಪ್ಯುಟಿ ಮಿನಿಸ್ಟರ್ ಮರಿಯಮ್ ಶಿಯುನಾ (Maldives Minister Mariyam Shiuna ) ಅವರಿಗೆ ಬಿಸಿ ಮುಟ್ಟಲಾರಂಭಿಸಿದೆ. ಒಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್(Boycott Maldives) ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದ್ದರೆ, ಅವರದ್ದೇ ದೇಶದ ರಾಜಕಾರಣಿಗಳು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್(Former Maldives President Mohamed Nasheed), ಮೋದಿ ವಿರುದ್ಧ ಸಚಿವರಾಡಿವ ಮಾತುಗಳನ್ನು ಒಪ್ಪಿಕೊಳ್ಳದಂತೆ ಹಾಲಿ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರಿಗೆ ಆಗ್ರಹಿಸಿದ್ದಾರೆ.
ಲಕ್ಷದ್ವೀಪ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಉದ್ವಿಗ್ನತೆ ಮುಂದುವರಿದಿರುವಾಗ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೇಶದ ಸಚಿವರೊಬ್ಬರು ಮಾಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿದ್ದಾರೆ.
What appalling language by Maldives Government official @shiuna_m towards the leader of a key ally, that is instrumental for Maldives’ security and prosperity. @MMuizzu gov must distance itself from these comments and give clear assurance to India they do not reflect gov policy.
— Mohamed Nasheed (@MohamedNasheed) January 7, 2024
ಮಾಲ್ಡೀವ್ಸ್ ಯುವ ಸಬಲೀಕರಣದ ಉಪ ಸಚಿವೆ ಮರಿಯಮ್ ಶಿಯುನಾ ಅವರು ಪ್ರಧಾನಿ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸಿದ್ದರು. ತೀವ್ರ ವಿರೋಧದ ಹಿನ್ನಲೆಯಲ್ಲಿ ಈ ಪೋಸ್ಟ್‌ಗಳನ್ನು ಅಳಿಸಿ ಹಾಕಲಾಗಿದೆ. ಭಾರತವು ತನ್ನ ಕಡಲತೀರದ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ದ್ವೀಪಸಮೂಹವನ್ನು ಗುರಿಯಾಗಿಸಿಕೊಂಡಿದೆ ಎಂದು ಇನ್ನೊಬ್ಬ ಸಚಿವರು ಆರೋಪಿಸಿದ ಗಂಟೆಗಳ ನಂತರ ಈ ಟೀಕೆ ಬಂದಿತ್ತು.
ಮಾಲ್ಡೀವ್ಸ್ ಸಚಿವರ ಹೇಳಿಕೆ ಕುರಿತು ವಿವಾದ ಭುಗಿಲೇಳುತ್ತಿದ್ದಂತೆ, ಭಾರತೀಯರು ಮಾಲ್ಡೀವ್ಸ್‌ನ ತಮ್ಮ ಟ್ರಿಪ್‌ಗಳನ್ನು ರದ್ದುಗೊಳಿಸುತ್ತಿದ್ದಾರೆಂದು ವರದಿಯಾಗಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ‘ಮಾಲ್ಡೀವ್ಸ್ ಅನ್ನು ಬಹಿಷ್ಕರಿಸಿ’ ಕೂಗಿಗೆ ಕಾರಣವಾಯಿತು ಎಂದು ತೋರುತ್ತದೆ. ಮಾಲ್ಡೀವ್ಸ್‍ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ಪ್ರತಿಬಿಂಬಿಸುತ್ತಿರುವ ಬೆನ್ನಲ್ಲೇ ಮಾಲ್ಡೀವ್ಸ್‌ನ ಕೆಲವು ಮಂತ್ರಿಗಳು ಲಕ್ಷದ್ವೀಪಕ್ಕೆ ಸಂಬಂಧಿಸಿದಂತೆ ತಮ್ಮ ಅಸೂಯೆನ್ನು ಹೊರ ಹಾಕುತ್ತಿದ್ದಾರೆ.
ಸಚಿವೆ ಶಿಯುನಾ ಹೇಳಿಕೆಯು ಭಯಭೀತಗೊಳಿಸುವಂತಿದ್ದು, ಭದ್ರತೆ ಮತ್ತು ಪ್ರಗತಿಗೆ ಸಂಬಂಧಿಸಿದಂತೆ ಭಾರತವು ಮಾಲ್ಡೀವ್ಸ್‌ನ ಪ್ರಮುಖ ಸ್ನೇಹಿತರಾಷ್ಟ್ರವಾಗಿದೆ. ಅಲ್ಲದೇ, ಶಿಯುನಾ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳುವಂತೆ ಮೊಹಮ್ಮದ್ ಮುಯಿಜ್ಜು ಅವರ ಸರ್ಕಾರಕ್ಕೆ ನಶೀದ್ ಅವರು ಸಲಹೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಮೋದಿ ವಿರುದ್ಧ ಆರೋಪ; ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಶುರು, ಗಣ್ಯರ ಬೆಂಬಲ