Site icon Vistara News

Boycott Maldives ಟ್ರೆಂಡ್ ಆಗಿದ್ದೇಕೆ? ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ ಭಾರತೀಯರು!

Narendra Modi

Please be a part of Maldives tourism’: Minister's call to Indian tourists

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಲಕ್ಷದ್ವೀಪಕ್ಕೆ (Lakshadweep Visit) ಭೇಟಿ ನೀಡಿದ ಬೆನ್ನಲ್ಲೇ ಮಾಲ್ಡೀವ್ಸ್ ಸಚಿವರು (Maldives Ministers) ಮಾಡಿರುವ ಟ್ವೀಟ್‌ಗಳಿಗೆ ಭಾರೀ ವಿರೋಧ ವ್ಯಕ್ತವಾಗಿವೆ. ಪರಿಣಾಮ ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ (Boycott Maldives) ಎಂಬ ಹ್ಯಾಷ್ ಟ್ಯಾಗ್ ಕೂಡ ಟ್ರೆಂಡ್ ಆಗುತ್ತಿದೆ. ಇಷ್ಟು ಮಾತ್ರವಲ್ಲದೇ, ಅನೇಕ ಭಾರತೀಯರು, ಮಾಲ್ಡೀವ್ಸ್ ಸಚಿವರ ಹೇಳಿಕೆಗೆ ಪ್ರತಿಯಾಗಿ ತಮ್ಮ ಮಾಲ್ಡೀವ್ಸ್ ಪ್ರವಾಸಗಳನ್ನು (Maldives Trip Cancelled) ರದ್ದು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಬಾಯ್ಕಾಟ್ ಮಾಲ್ಡೀವ್ಸ್ ಟ್ರೆಂಡ್ ಪರಿಣಾಮವನ್ನು ಮಾಲ್ಡೀವ್ಸ್ ಎದುರಿಸುತ್ತಿದ್ದು, ಅಲ್ಲಿನ ಸರ್ಕಾರವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಮೂವರು ಸಚಿವರನ್ನು ಅಮಾನತು ಮಾಡಿ, ಡ್ಯಾಮೇಜಿಂಗ್ ಕಂಟ್ರೋಲ್‌ಗೆ ಮುಂದಾಗಿದೆ.

ಭಾರತವು ತಮ್ಮ ರಾಷ್ಟ್ರವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ ಮಾಲ್ಡೀವ್ಸ್ ಸಚಿವರ ಟ್ವೀಟ್‌ನಿಂದ ವಿವಾದವು ಉಲ್ಬಣಗೊಂಡಿತು. ಬೀಚ್ ಪ್ರವಾಸೋದ್ಯಮದಲ್ಲಿ ಭಾರತವು ಮಾಲ್ಡೀವ್ಸ್‌ನೊಂದಿಗೆ ಸ್ಪರ್ಧಿಸಲು ಸವಾಲುಗಳನ್ನು ಎದುರಿಸುತ್ತಿದೆ ಎಂದು ಟ್ವೀಟ್‌ನಲ್ಲಿ ಪ್ರತಿಪಾದಿಸಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಹಲವರು ತಮ್ಮ ರದ್ದಾದ ವಿಮಾನ ಪ್ರಯಾಣ ಮತ್ತು ಹೋಟೆಲ್ ಬುಕಿಂಗ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ‘#BoycottMaldives’ ಸಹ ಭಾರತದಲ್ಲಿ ಎಕ್ಸ್ ನಲ್ಲಿನ ಟಾಪ್ ಟ್ರೆಂಡ್‌ಗಳಲ್ಲಿ ಒಂದಾಗಿದೆ.

ಮಾಲ್ಡೀವ್ಸ್‌ನಲ್ಲಿ ಮೊಹಮ್ಮದ್ ಮುಯಿಜು ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಸಂಘರ್ಷಗಳು ಉಲ್ಬಣಗೊಂಡಿವೆ. ಹೊಸ ಅಧ್ಯಕ್ಷರು ತಮ್ಮ ವಿದೇಶಾಂಗ ನೀತಿಯನ್ನು ಪರಿಷ್ಕರಿಸಿದ್ದಾರೆ. ಮಾಲ್ಡೀವ್ಸ್ ಈ ಹಿಂದಿನಿಂದಲೂ ಇಂಡಿಯಾ ಫಸ್ಟ್ ಎಂಬ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿತ್ತು. ಆದರೆ, ಹೊಸ ಸರ್ಕಾರವು ಭಾರತದ ಬದಲಿಗೆ ಚೀನಾಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಇದಿರಂದಾಗಿ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧವು ಸಂಘರ್ಷದ ಹಾದಿಯನ್ನು ಹಿಡಿದಿದೆ.

ಮಾಲ್ಡೀವ್ಸ್ ಹಿಂದೂ ಮಹಾಸಾಗರದಲ್ಲಿ ಆಯಕಟ್ಟಿನ ಜಾಗದಲ್ಲಿದ್ದು, ಭಾರತದ ಪ್ರಾದೇಶಿಕ ಉಪಕ್ರಮಗಳಾದ ‘ಸಾಗರ್’ (ಪ್ರದೇಶದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ) ಮತ್ತು ‘ನೆರೆಹೊರೆಯ ಮೊದಲ ನೀತಿ’ಗಳಲ್ಲಿ ಪ್ರಮುಖ ಪ್ರಮುಖ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಈ ನಡುವೆ, ಮುಯಿಜು ಅವರು ಜನವರಿ 8 ಮತ್ತು 12ರಂದು ಚೀನಾಗೆ ಭೇಟಿ ನೀಡಲಿದ್ದು, ಇದು ಕೂಡ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದೆ.

ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ನಂತರದ ಮೊದಲ ರಾಜ್ಯ ಭೇಟಿ ಇದಾಗಿದ್ದು, ಚೀನಾದೊಂದಿಗಿನ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮವೆಂದು ಪರಿಗಣಿಸಲಾಗಿದೆ. ಭಾರತದೊಂದಿಗೆ ತೊಡಗಿಸಿಕೊಳ್ಳುವ ಮೊದಲು ಟರ್ಕಿ ಮತ್ತು ಯುಎಇಗೆ ಭೇಟಿ ನೀಡುವುದು ಸೇರಿದಂತೆ ಅಧ್ಯಕ್ಷರ ವಿದೇಶಿ ಸ್ಥಳಗಳ ಆಯ್ಕೆಯಲ್ಲಿ ಈ ಬದಲಾವಣೆಯು ಸ್ಪಷ್ಟವಾಗಿದೆ. ಇದರಿಂದ ಮಾಲ್ಡೀವ್ಸ್ ಭಾರತದ ಜತೆಗಿನ ವಿದೇಶಾಂಗ ನೀತಿಯನ್ನು ಸಂಪೂರ್ಣ ಕೈ ಬಿಟ್ಟು ಪರಿಷ್ಕರಿತ ನೀತಿಯನ್ನು ಅನುಸರಿಸುತ್ತಿದೆ.

ಸಸ್ಪೆಂಡ್ ಆದ ಮಾಲ್ಡೀವ್ಸ್‌ನ ಮೂವರು ಸಚಿವರು.

ಈ ಸುದ್ದಿಯನ್ನೂ ಓದಿ: Boycott Maldives: ಮೋದಿ ವಿರುದ್ಧ ಹೇಳಿಕೆ ನೀಡಿದ ಮಾಲ್ಡೀವ್ಸ್‌ನ 3 ಸಚಿವರು ಸಸ್ಪೆಂಡ್

Exit mobile version