Site icon Vistara News

Boycott Maldives: ಮೋದಿ ವಿರುದ್ಧ ಟೀಕೆ; ಸಚಿವೆ ವಿರುದ್ಧ ಕ್ರಮಕ್ಕೆ ಹೆದರಲ್ಲ ಎಂದ ಮಾಲ್ಡೀವ್ಸ್ ಸರ್ಕಾರ

Pro india party won Male mayoral election of Maldives

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಮಾಲ್ಡೀವ್ಸ್ ಸಚಿವರು (Maldives Minister) ಆಡಿರುವ ಮಾತುಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ. ಪರಿಣಾಮ, ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ (Boycott Moldives) ಟ್ರೆಂಡ್ ಶುರುವಾಗಿದೆ. ಈ ಮಧ್ಯೆ, ಮಾಲ್ಡೀವ್ಸ್‌ನ ರಾಜಕೀಯ ನಾಯಕರು ಕೂಡ ಅಲ್ಲಿನ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಪರಿಣಾಮ, ಮಾಲ್ಡೀವ್ಸ್ ಸರ್ಕಾರವು(Maldives Government), ಸಚಿವೆ ಮರಿಯಮ್ ಶಿಯುನಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಅಲ್ಲದೇ, ಅಗತ್ಯ ಬಿದ್ದರೆ ಶಿಸ್ತು ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳಿದೆ.

ಸಚಿವರು ಹೇಳಿರುವ ಅಭಿಪ್ರಾಯಗಳು ವೈಯಕ್ತಿಕ ಮತ್ತು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಅವರು ಪ್ರತಿನಿಧಿಸುವುದಿಲ್ಲ ಎಂದು ಮಾಲೆ ಭಾನುವಾರ ಹೊರಡಿಸಿದ ಅಧಿಕೃತ ಹೇಳಿಕೆ ತಿಳಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು “ಪ್ರಜಾಸತ್ತಾತ್ಮಕ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ಚಲಾಯಿಸಬೇಕು” ಎಂದು ನಂಬುವುದಾಗಿ ಸರ್ಕಾರ ಪ್ರತಿಪಾದಿಸಿದೆ ಮತ್ತು ಅಂಥ ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಸರ್ಕಾರದ ಸಂಬಂಧಿತ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಇಂದು ಮುಂಜಾನೆ, ಮಾಲ್ಡೀವ್ಸ್ ಸಚಿವರ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ಗದ್ದಲಕ್ಕೆ ಕಾರಣವಾಯಿತು. ಇದರಲ್ಲಿ ಅವರು ಭಾರತವು ತಮ್ಮ ದೇಶವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದರು. ಬೀಚ್ ಪ್ರವಾಸೋದ್ಯಮದಲ್ಲಿ ಭಾರತವು ಮಾಲ್ಡೀವ್ಸ್‌ನೊಂದಿಗೆ ಸ್ಪರ್ಧಿಸುವಲ್ಲಿ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದರು.

ಮಾಲ್ಡೀವ್ಸ್ ಸರ್ಕಾರವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವಿದೇಶಿ ನಾಯಕರು ಮತ್ತು ಉನ್ನತ ಶ್ರೇಣಿಯ ವ್ಯಕ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ತಿಳಿದಿದೆ ಎಂದು ಹೇಳಿಕೆ ತಿಳಿಸಿದೆ. ಈ ಅಭಿಪ್ರಾಯಗಳು ವೈಯಕ್ತಿಕ ಮತ್ತು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು “ಪ್ರಜಾಸತ್ತಾತ್ಮಕ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ಮತ್ತು ದ್ವೇಷವನ್ನು ಹರಡದ ರೀತಿಯಲ್ಲಿ ಚಲಾಯಿಸಬೇಕು” ಎಂದು ಸರ್ಕಾರ ನಂಬುತ್ತದೆ. ನಕಾರಾತ್ಮಕತೆಯು ಮಾಲ್ಡೀವ್ಸ್ ಮತ್ತು ಅಂತರಾಷ್ಟ್ರೀಯ ಪಾಲುದಾರರ ನಡುವಿನ ನಿಕಟ ಸಂಬಂಧಗಳನ್ನು ತಡೆಯುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮೋದಿ ವಿರುದ್ಧ ಹೇಳಿಕೆ; ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಕೆಂಡ

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಲಕ್ಷದ್ವೀಪ (Lakshadweep) ಪ್ರವಾಸ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಮಾಲ್ಡೀವ್ಸ್‌ನ ಡೆಪ್ಯುಟಿ ಮಿನಿಸ್ಟರ್ ಮರಿಯಮ್ ಶಿಯುನಾ (Maldives Minister Mariyam Shiuna ) ಅವರಿಗೆ ಬಿಸಿ ಮುಟ್ಟಲಾರಂಭಿಸಿದೆ. ಒಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್(Boycott Maldives) ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದ್ದರೆ, ಅವರದ್ದೇ ದೇಶದ ರಾಜಕಾರಣಿಗಳು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್(Former Maldives President Mohamed Nasheed), ಮೋದಿ ವಿರುದ್ಧ ಸಚಿವರಾಡಿವ ಮಾತುಗಳನ್ನು ಒಪ್ಪಿಕೊಳ್ಳದಂತೆ ಹಾಲಿ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರಿಗೆ ಆಗ್ರಹಿಸಿದ್ದಾರೆ.

ಲಕ್ಷದ್ವೀಪ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಉದ್ವಿಗ್ನತೆ ಮುಂದುವರಿದಿರುವಾಗ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೇಶದ ಸಚಿವರೊಬ್ಬರು ಮಾಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿದ್ದಾರೆ.

ಮಾಲ್ಡೀವ್ಸ್ ಯುವ ಸಬಲೀಕರಣದ ಉಪ ಸಚಿವೆ ಮರಿಯಮ್ ಶಿಯುನಾ ಅವರು ಪ್ರಧಾನಿ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸಿದ್ದರು. ತೀವ್ರ ವಿರೋಧದ ಹಿನ್ನಲೆಯಲ್ಲಿ ಈ ಪೋಸ್ಟ್‌ಗಳನ್ನು ಅಳಿಸಿ ಹಾಕಲಾಗಿದೆ. ಭಾರತವು ತನ್ನ ಕಡಲತೀರದ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ದ್ವೀಪಸಮೂಹವನ್ನು ಗುರಿಯಾಗಿಸಿಕೊಂಡಿದೆ ಎಂದು ಇನ್ನೊಬ್ಬ ಸಚಿವರು ಆರೋಪಿಸಿದ ಗಂಟೆಗಳ ನಂತರ ಈ ಟೀಕೆ ಬಂದಿತ್ತು.

ಮಾಲ್ಡೀವ್ಸ್ ಸಚಿವರ ಹೇಳಿಕೆ ಕುರಿತು ವಿವಾದ ಭುಗಿಲೇಳುತ್ತಿದ್ದಂತೆ, ಭಾರತೀಯರು ಮಾಲ್ಡೀವ್ಸ್‌ನ ತಮ್ಮ ಟ್ರಿಪ್‌ಗಳನ್ನು ರದ್ದುಗೊಳಿಸುತ್ತಿದ್ದಾರೆಂದು ವರದಿಯಾಗಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ‘ಮಾಲ್ಡೀವ್ಸ್ ಅನ್ನು ಬಹಿಷ್ಕರಿಸಿ’ ಕೂಗಿಗೆ ಕಾರಣವಾಯಿತು ಎಂದು ತೋರುತ್ತದೆ. ಮಾಲ್ಡೀವ್ಸ್‍‌ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ಪ್ರತಿಬಿಂಬಿಸುತ್ತಿರುವ ಬೆನ್ನಲ್ಲೇ ಮಾಲ್ಡೀವ್ಸ್‌ನ ಕೆಲವು ಮಂತ್ರಿಗಳು ಲಕ್ಷದ್ವೀಪಕ್ಕೆ ಸಂಬಂಧಿಸಿದಂತೆ ತಮ್ಮ ಅಸೂಯೆನ್ನು ಹೊರ ಹಾಕುತ್ತಿದ್ದಾರೆ.

ಸಚಿವೆ ಶಿಯುನಾ ಹೇಳಿಕೆಯು ಭಯಭೀತಗೊಳಿಸುವಂತಿದ್ದು, ಭದ್ರತೆ ಮತ್ತು ಪ್ರಗತಿಗೆ ಸಂಬಂಧಿಸಿದಂತೆ ಭಾರತವು ಮಾಲ್ಡೀವ್ಸ್‌ನ ಪ್ರಮುಖ ಸ್ನೇಹಿತರಾಷ್ಟ್ರವಾಗಿದೆ. ಅಲ್ಲದೇ, ಶಿಯುನಾ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳುವಂತೆ ಮೊಹಮ್ಮದ್ ಮುಯಿಜ್ಜು ಅವರ ಸರ್ಕಾರಕ್ಕೆ ನಶೀದ್ ಅವರು ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: ಮೋದಿ ವಿರುದ್ಧ ಆರೋಪ; ಬಾಯ್ಕಾಟ್ ಮಾಲ್ಡೀವ್ಸ್‌ ಅಭಿಯಾನ ಶುರು, ಗಣ್ಯರ ಬೆಂಬಲ

Exit mobile version