Site icon Vistara News

ಬ್ರಾಹ್ಮಣರು ಯಾರೂ ಭಾರತದವರಲ್ಲ, ಅವರನ್ನು ಇಲ್ಲಿಂದ ಓಡಿಸೋಣ; ವಿವಾದ ಸೃಷ್ಟಿಸಿದ ಆರ್​ಜೆಡಿ ನಾಯಕ

Brahmins Are not originally from India Says RJD leader Yaduvansh Kumar Yadav

#image_title

ಪಾಟ್ನಾ: ಆರ್​ಜೆಡಿ ನಾಯಕ, ಶಾಸಕ ಯದುವಂಶ ಕುಮಾರ್​​ (Yaduvansh Kumar Yadav) ಅವರ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ಬ್ರಾಹ್ಮಣರು ಭಾರತದವರಲ್ಲ, ಅವರು ರಷ್ಯಾದಿಂದ ಬಂದು ನೆಲೆಸಿದವರು ಎಂದು ಯದುವಂಶ ಕುಮಾರ್​ ಹೇಳಿದ ಮಾತುಗಳೀಗ ವ್ಯಾಪಕ ಟೀಕೆಗೆ ಗುರಿಯಾಗಿವೆ. ಇತ್ತೀಚೆಗೆ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯದುವಂಶ ಕುಮಾರ್​ ‘ಯಾವುದೇ ಬ್ರಾಹ್ಮಣರು ಭಾರತದವರಲ್ಲ, ರಷ್ಯಾ ಮತ್ತು ಇತರ ಕೆಲವು ಯುರೋಪಿಯನ್ ದೇಶಗಳಿಂದ ಇಲ್ಲಿಗೆ ಬಂದು ನೆಲೆಸಿದವರು ಎಂಬುದನ್ನು ಡಿಎನ್​ಎ ಟೆಸ್ಟ್ ಸಾಬೀತುಪಡಿಸುತ್ತದೆ. ಬ್ರಾಹ್ಮಣರು ನಮ್ಮನ್ನು ಒಡೆದು, ಆಳಲು ಯತ್ನಿಸುತ್ತಿದ್ದಾರೆ. ಇದನ್ನು ತಪ್ಪಿಸಬೇಕು ಎಂದರೆ ನಾವು ಬ್ರಾಹ್ಮಣರನ್ನು ಇಲ್ಲಿಂದ ಓಡಿಸಬೇಕು’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಯಾದವ ಸಮುದಾಯ ಮೂಲತಃ ಭಾರತದ್ದು ಎಂದಿದ್ದಾರೆ. ಆ ವಿಡಿಯೊ ವೈರಲ್ ಆದ ಬೆನ್ನಲ್ಲೇ ಆರ್​ಜೆಡಿ ನಾಯಕನ ವಿರುದ್ಧ ಕ್ರೋಧ ವ್ಯಕ್ತವಾಗಿದೆ.

ಯದುವಂಶ ಕುಮಾರ್​ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇಂಥ ಮಾತುಗಳನ್ನಾಡಲು ಅವರಿಗೆ ನಾಚಿಕೆಯಾಗಬೇಕು. ದೇಶದಲ್ಲಿ ನಡೆಯುವ ಕೋಮು ಗಲಭೆ ಹಿಂದೆ ಇರುವುದು ಇಂಥ ವ್ಯಕ್ತಿಗಳ ಕೈವಾಡವೇ ಆಗಿದೆ ಎಂದು ಬಿಜೆಪಿ ನಾಯಕ ರಕ್ಷಿತ್​ ಹೇಳಿದ್ದಾರೆ. ಬಿಜೆಪಿ ಶಾಸಕ ನೀರಜ್​ ಕುಮಾರ್​ ಬಬ್ಲು ಪ್ರತಿಕ್ರಿಯೆ ನೀಡಿ ‘ಆರ್​ಜೆಡಿ ನಾಯಕನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ತೋರುತ್ತದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಆರ್​ಜೆಡಿ ನಾಯಕ ಮನೋಜ್ ಕುಮಾರ್ ಝಾ ಮತ್ತು ಜನತಾ ದಳ (ಯುನೈಟೆಡ್​) ನಾಯಕ ಸಂಜಯ್ ಝಾ ಅವರು ಈ ಬಗ್ಗೆ ವಿವರಣೆ ನೀಡಬೇಕು. ಬ್ರಾಹ್ಮಣ ಸಮುದಾಯ ಭಾರತದ್ದೋ ಅಥವಾ ಬೇರೆ ದೇಶದ್ದೋ ಎಂದು ಅವರೇ ಹೇಳಬೇಕು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Land For Job Scam: ಆರ್​ಜೆಡಿ ನಾಯಕ ಲಾಲು ಪ್ರಸಾದ್ ಯಾದವ್​ ಮನೆಗೆ ಬಂದ ಸಿಬಿಐ ಅಧಿಕಾರಿಗಳು; ರಾಬ್ರಿ ದೇವಿ ವಿಚಾರಣೆ

ಜೆಡಿ(ಯು)ಗೆ ಇರುಸುಮುರುಸು
ಆರ್​ಜೆಡಿ ನಾಯಕ ಯದುವಂಶ ಕುಮಾರ್​​ ಅವರ ಈ ಬ್ರಾಹ್ಮಣ ವಿರೋಧಿ ಹೇಳಿಕೆ ಆ ಪಕ್ಷದ ಮಿತ್ರ ಪಕ್ಷ ಜನತಾ ದಳ (ಯುನೈಟೆಡ್​)ಕ್ಕೇ ಸರಿ ಹೋಗಲಿಲ್ಲ. ಪಕ್ಷದ ವಕ್ತಾರ ಅಭಿಷೇಕ್ ಕುಮಾರ್ ಝಾ ಅವರು ಪ್ರತಿಕ್ರಿಯೆ ನೀಡಿ, ‘ಆರ್​ಜೆಡಿ ನಾಯಕನ ಹೇಳಿಕೆ ಅಸಹ್ಯವಾಗಿದೆ. ಪರಶುರಾಮ ಏನು ರಷ್ಯಾದಿಂದ ಬಂದವರೇ? ಸುಮ್ಮನೆ ಮಾಧ್ಯಮದವರ ಎದುರು ಸುದ್ದಿಯಾಗಲು ಇಂಥ ಮಾತುಗಳನ್ನು ಆಡುತ್ತಾರೆ ಎಂದು ಹೇಳಿದ್ದಾರೆ.

Exit mobile version