Site icon Vistara News

Broadcast Bill: ಆನ್‌ಲೈನ್‌ನಲ್ಲಿ ಸುದ್ದಿ ಪ್ರಕಟಿಸುವವರೆಲ್ಲಾ ಇನ್ನು ʼಪ್ರಸಾರಕʼರೇ! ಹೊಸ ಪ್ರಸಾರ ಕಾಯಿದೆ ಹೀಗಿದೆ

ott

ott

ಹೊಸದಿಲ್ಲಿ: ಇನ್ನು ಮುಂದೆ ಸುದ್ದಿಗಳನ್ನು ಪ್ರಕಟಿಸುವ ಆನ್‌ಲೈನ್‌ನಲ್ಲಿ ಸುದ್ದಿ ಮತ್ತು ಪ್ರಚಲಿತ ವಿಷಯವನ್ನು ಪ್ರಕಟಿಸುವ ವ್ಯಕ್ತಿಗಳು ಸಹ ʼಪ್ರಸಾರಕರುʼ ಎಂದು ಪರಿಗಣಿಸಲ್ಪಡುತ್ತಾರೆ. ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳು, ವಾಟ್ಸ್ಯಾಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗಳು, ಆನ್ಲೈನ್‌ ಸುದ್ದಿತಾಣಗಳಲ್ಲಿ ಪ್ರಚಲಿತ ವಿಷಯಗಳನ್ನು ಪ್ರಕಟಿಸುವವರನ್ನು ʼಪ್ರಸಾರಕರುʼ ಎಂದು ದೇಶದ ನೂತನ ಪ್ರಸಾರ ವಿಧೇಯಕ (Broadcast Bill) ಪರಿಗಣಿಸಲು ಮುಂದಾಗಿದೆ.

ಪ್ರಸ್ತಾವಿತ ಬ್ರಾಡ್‌ಕಾಸ್ಟಿಂಗ್ ಸೇವೆಗಳ (ನಿಯಂತ್ರಣ) ವಿಧೇಯಕ- 2023, (Broadcasting Services (Regulation) Bill, 2023), ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ನಂತಹ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು, ಓವರ್-ದಿ-ಟಾಪ್ ಅಥವಾ OTTಗಳನ್ನು ಪ್ರಸಾರ ಸೇವೆಗಳಾಗಿ ನೇರವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತದೆ. ಈ ವಿಧೇಯಕದ ಅಡಿಯಲ್ಲಿ ಸುದ್ದಿ ಪ್ರಸಾರ ಮಾಡುವವರು ಮತ್ತು ಆನ್‌ಲೈನ್ ಪ್ರಚಲಿತ ವ್ಯವಹಾರಗಳ ಕಾರ್ಯಕ್ರಮಗಳು OTT ಸ್ಟ್ರೀಮಿಂಗ್ ಸೇವೆಗಳಂತೆಯೇ ಅದೇ ಬಾಧ್ಯತೆಗಳನ್ನು ಹೊಂದಿರುತ್ತಾರೆ. ಅಂದರೆ ಸಾಮಾಜಿಕ ಮಾಧ್ಯಮ (social media) ಪ್ಲಾಟ್‌ಫಾರ್ಮ್‌ಗಳಲ್ಲಿನ ಕೆಲವು ಖಾತೆಗಳು ಮತ್ತು ಬಳಕೆದಾರರನ್ನು ಸ್ವತಃ OTT ಪ್ರಸಾರಕರು ಎಂದು ಪರಿಗಣಿಸಬಹುದು.

ಈ ಕ್ರಮದಿಂದಾಗಿ, ಇದುವರೆಗೆ ಪ್ರಕಾಶಕರಾಗಿ ಗುರುತಿಸಲ್ಪಟ್ಟಿದ್ದ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು (streaming platforms) ಆನ್‌ಲೈನ್ ಸುದ್ದಿ ಸಂಸ್ಥೆಗಳು ಪ್ರಸಾರಕರ ವ್ಯಾಪ್ತಿಯಡಿಯಲ್ಲಿ ಬರಲಿದ್ದಾರೆ. ಇಲ್ಲಿಯವರೆಗೆ, ಮಾಹಿತಿ ತಂತ್ರಜ್ಞಾನ ನಿಯಮಗಳು- 2021, ಭಾಗ III (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ಸುದ್ದಿ ಮತ್ತು ಪ್ರಚಲಿತ ವ್ಯವಹಾರಗಳ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಆನ್‌ಲೈನ್ ಪ್ರಕಾಶಕರನ್ನು ನಿಯಂತ್ರಿಸುತ್ತಿತ್ತು.

ಇದರಿಂದಾಗಿ ಐಟಿ ನಿಯಮಗಳ ಭಾಗ III ಪ್ರಸ್ತುತತೆ ಕಳೆದುಕೊಳ್ಳಲಿದೆ. ನೂತನ ಪ್ರಸಾರ ಕಾಯಿದೆಯು ಐಟಿ ನಿಯಮಗಳ ಭಾಗ III ರದ್ದತಿಗೆ ಪ್ರಸ್ತಾಪಿಸಿಲ್ಲ. ವಿಧೇಯಕದ 20ನೇ ವಿಧಿಯು “ಯಾವುದೇ ವ್ಯಕ್ತಿ ಆನ್‌ಲೈನ್ ಪೇಪರ್, ನ್ಯೂಸ್ ಪೋರ್ಟಲ್, ವೆಬ್‌ಸೈಟ್, ಸಾಮಾಜಿಕ ಮಾಧ್ಯಮ ಅಥವಾ ಇತರ ರೀತಿಯ ಮಾಧ್ಯಮದ ಮೂಲಕ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ, ವ್ಯವಸ್ಥಿತ ವ್ಯಾಪಾರ, ವೃತ್ತಿಪರ ಅಥವಾ ವಾಣಿಜ್ಯ ಚಟುವಟಿಕೆಯ ವಿಭಾಗ 19ರಲ್ಲಿ ಉಲ್ಲೇಖಿಸಲಾದ ಪ್ರೋಗ್ರಾಂ ಕೋಡ್ ಮತ್ತು ಜಾಹೀರಾತು ಕೋಡ್‌ಗೆ ಬದ್ಧವಾಗಿರಬೇಕು.ʼʼ ಇದರಲ್ಲಿ ಪತ್ರಿಕೆಗಳ ಪ್ರಕಾಶಕರು, ಆ ಪತ್ರಿಕೆಗಳ ಇ-ಪೇಪರ್‌ಗಳು ಒಳಪಡುವುದಿಲ್ಲ.‌

OTT ಪ್ರಸಾರ ಸೇವೆಯ ವ್ಯಾಖ್ಯಾನದ ಪ್ರಕಾರ ಸಾಮಾಜಿಕ ಮಾಧ್ಯಮಗಳನ್ನು ಮತ್ತು ಅಂತಹ ಸಾಮಾಜಿಕ ಮಾಧ್ಯಮಗಳ ಬಳಕೆದಾರರನ್ನು ಹೊರತುಪಡಿಸಿದರೂ, ತಜ್ಞರು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಮತ್ತು ಪ್ರಚಲಿತ ವ್ಯವಹಾರಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ ಅವುಗಳನ್ನು ಸೇರಿಸಲು ಷರತ್ತು 20 ಅನುಮತಿಸುತ್ತದೆ ಎಂದು ಹೇಳುತ್ತಾರೆ. “ಪ್ರೋಗ್ರಾಮ್” ಮತ್ತು “ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳ” ವ್ಯಾಖ್ಯಾನಗಳ ಪ್ರಕಾರ ತಮ್ಮದೇ ಆದ YouTube ಚಾನಲ್‌ಗಳು ಮತ್ತು Instagram ಖಾತೆಗಳನ್ನು ಹೊಂದಿರುವ ಸ್ವತಂತ್ರ ಪತ್ರಕರ್ತರು ಕೂಡ ಇದೇ ವ್ಯಾಪ್ತಿಗೆ ಒಳಪಡುತ್ತಾರೆ.

ಸಿಟಿಜನ್‌ ಜರ್ನಲಿಸ್ಟುಗಳು ಸುದ್ದಿ ವಿಷಯವನ್ನು ಸಾಂದರ್ಭಿಕವಾಗಿ, ಸಾರ್ವಜನಿಕ ಹಿತಾಸಕ್ತಿ ವಿಷಯವನ್ನು ಪೋಸ್ಟ್ ಮಾಡಿದರೆ ಈ ವ್ಯಪ್ತಿಗೆ ಬರುವುದಿಲ್ಲ. ಇಲ್ಲಿನ ʼವೃತ್ತಿಪರ ಚಟುವಟಿಕೆʼಯು ಸುದ್ದಿ ಸಂಸ್ಥೆಗಳಲ್ಲಿ ಸಲಹೆಗಾರರಾಗಿ, ಉದ್ಯೋಗದಲ್ಲಿರುವ ಅಥವಾ ತೊಡಗಿಸಿಕೊಂಡಿರುವ ವೃತ್ತಿಪರ ಪತ್ರಕರ್ತರನ್ನು ಒಳಗೊಂಡಿರುತ್ತದೆ. YouTube ಅಥವಾ Instagram ಜಾಹೀರಾತುಗಳ ಮೂಲಕ ಹಣಗಳಿಕೆಯನ್ನು ವಾಣಿಜ್ಯ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಹಣಕಾಸಿನ ವಹಿವಾಟು ಸಹ OTT ಬ್ರಾಡ್‌ಕಾಸ್ಟರ್‌ನ ಬಾಧ್ಯತೆಗಳನ್ನು ಹೊಂದಬೇಕಾಗಬಹುದು.

WhatsApp ಚಾನೆಲ್‌ಗಳು, ಟೆಲಿಗ್ರಾಮ್ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿನ ಇಂಥ ಚಾನೆಲ್‌ಗಳು ಏಕ-ಮಾರ್ಗ ಸಂವಹನಕ್ಕೆ ಮಾತ್ರ ಅವಕಾಶ ನೀಡುವುದರಿಂದ ಇವು ʼಪ್ರಸಾರʼ ವ್ಯಾಪ್ತಯಲ್ಲಿ ಬರುತ್ತವೆ. ಹೀಗಾಗಿ, WhatsApp ಚಾನೆಲ್‌ಗಳಂತಹ ಪ್ರಸಾರ ಮಾಧ್ಯಮವನ್ನು ವಿಧೇಯಕದ ಅಡಿಯಲ್ಲಿ ತರಬಹುದು. “ಈ ಮಸೂದೆಯ ಅಡಿಯಲ್ಲಿ, ಪ್ರಧಾನ ಮಂತ್ರಿಯವರ ವಾಟ್ಸ್ಯಾಪ್ ಚಾನೆಲ್ ಕೂಡ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಂತೆಯೇ ಅದೇ ಬಾಧ್ಯತೆಗಳನ್ನು ಹೊಂದಬೇಕಾಗಬಹುದು” ಎಂದು ತಜ್ಞರು ಹೇಳುತ್ತಾರೆ. ಪ್ರಧಾನಿಯವರ ವಾಟ್ಸ್ಯಾಪ್ ಚಾನೆಲ್ ಪ್ರಸ್ತುತ 1.14 ಕೋಟಿ ಚಂದಾದಾರರನ್ನು ಹೊಂದಿದೆ.

ಇದನ್ನೂ ಓದಿ: 24,789 ಕೋಟಿಗೆ ವಿಶ್ವಕಪ್‌ ಪ್ರಸಾರ ಹಕ್ಕು ಪಡೆದಿದ್ದ ಡಿಸ್ನಿ; 2.2 ಲಕ್ಷ ಕೋಟಿ ರೂ. ಆದಾಯ!

Exit mobile version