Broadcast Bill: ಆನ್‌ಲೈನ್‌ನಲ್ಲಿ ಸುದ್ದಿ ಪ್ರಕಟಿಸುವವರೆಲ್ಲಾ ಇನ್ನು ʼಪ್ರಸಾರಕʼರೇ! ಹೊಸ ಪ್ರಸಾರ ಕಾಯಿದೆ ಹೀಗಿದೆ - Vistara News

ದೇಶ

Broadcast Bill: ಆನ್‌ಲೈನ್‌ನಲ್ಲಿ ಸುದ್ದಿ ಪ್ರಕಟಿಸುವವರೆಲ್ಲಾ ಇನ್ನು ʼಪ್ರಸಾರಕʼರೇ! ಹೊಸ ಪ್ರಸಾರ ಕಾಯಿದೆ ಹೀಗಿದೆ

ಈ ವಿಧೇಯಕದ (Broadcast Bill) ಅಡಿಯಲ್ಲಿ ಸುದ್ದಿ ಪ್ರಸಾರ ಮಾಡುವವರು ಮತ್ತು ಆನ್‌ಲೈನ್ ಪ್ರಚಲಿತ ವ್ಯವಹಾರಗಳ ಕಾರ್ಯಕ್ರಮಗಳು OTT ಸ್ಟ್ರೀಮಿಂಗ್ ಸೇವೆಗಳಂತೆಯೇ ಅದೇ ಬಾಧ್ಯತೆಗಳನ್ನು ಹೊಂದಿರುತ್ತಾರೆ.

VISTARANEWS.COM


on

ott
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಹೊಸದಿಲ್ಲಿ: ಇನ್ನು ಮುಂದೆ ಸುದ್ದಿಗಳನ್ನು ಪ್ರಕಟಿಸುವ ಆನ್‌ಲೈನ್‌ನಲ್ಲಿ ಸುದ್ದಿ ಮತ್ತು ಪ್ರಚಲಿತ ವಿಷಯವನ್ನು ಪ್ರಕಟಿಸುವ ವ್ಯಕ್ತಿಗಳು ಸಹ ʼಪ್ರಸಾರಕರುʼ ಎಂದು ಪರಿಗಣಿಸಲ್ಪಡುತ್ತಾರೆ. ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳು, ವಾಟ್ಸ್ಯಾಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗಳು, ಆನ್ಲೈನ್‌ ಸುದ್ದಿತಾಣಗಳಲ್ಲಿ ಪ್ರಚಲಿತ ವಿಷಯಗಳನ್ನು ಪ್ರಕಟಿಸುವವರನ್ನು ʼಪ್ರಸಾರಕರುʼ ಎಂದು ದೇಶದ ನೂತನ ಪ್ರಸಾರ ವಿಧೇಯಕ (Broadcast Bill) ಪರಿಗಣಿಸಲು ಮುಂದಾಗಿದೆ.

ಪ್ರಸ್ತಾವಿತ ಬ್ರಾಡ್‌ಕಾಸ್ಟಿಂಗ್ ಸೇವೆಗಳ (ನಿಯಂತ್ರಣ) ವಿಧೇಯಕ- 2023, (Broadcasting Services (Regulation) Bill, 2023), ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ನಂತಹ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು, ಓವರ್-ದಿ-ಟಾಪ್ ಅಥವಾ OTTಗಳನ್ನು ಪ್ರಸಾರ ಸೇವೆಗಳಾಗಿ ನೇರವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತದೆ. ಈ ವಿಧೇಯಕದ ಅಡಿಯಲ್ಲಿ ಸುದ್ದಿ ಪ್ರಸಾರ ಮಾಡುವವರು ಮತ್ತು ಆನ್‌ಲೈನ್ ಪ್ರಚಲಿತ ವ್ಯವಹಾರಗಳ ಕಾರ್ಯಕ್ರಮಗಳು OTT ಸ್ಟ್ರೀಮಿಂಗ್ ಸೇವೆಗಳಂತೆಯೇ ಅದೇ ಬಾಧ್ಯತೆಗಳನ್ನು ಹೊಂದಿರುತ್ತಾರೆ. ಅಂದರೆ ಸಾಮಾಜಿಕ ಮಾಧ್ಯಮ (social media) ಪ್ಲಾಟ್‌ಫಾರ್ಮ್‌ಗಳಲ್ಲಿನ ಕೆಲವು ಖಾತೆಗಳು ಮತ್ತು ಬಳಕೆದಾರರನ್ನು ಸ್ವತಃ OTT ಪ್ರಸಾರಕರು ಎಂದು ಪರಿಗಣಿಸಬಹುದು.

ಈ ಕ್ರಮದಿಂದಾಗಿ, ಇದುವರೆಗೆ ಪ್ರಕಾಶಕರಾಗಿ ಗುರುತಿಸಲ್ಪಟ್ಟಿದ್ದ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು (streaming platforms) ಆನ್‌ಲೈನ್ ಸುದ್ದಿ ಸಂಸ್ಥೆಗಳು ಪ್ರಸಾರಕರ ವ್ಯಾಪ್ತಿಯಡಿಯಲ್ಲಿ ಬರಲಿದ್ದಾರೆ. ಇಲ್ಲಿಯವರೆಗೆ, ಮಾಹಿತಿ ತಂತ್ರಜ್ಞಾನ ನಿಯಮಗಳು- 2021, ಭಾಗ III (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ಸುದ್ದಿ ಮತ್ತು ಪ್ರಚಲಿತ ವ್ಯವಹಾರಗಳ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಆನ್‌ಲೈನ್ ಪ್ರಕಾಶಕರನ್ನು ನಿಯಂತ್ರಿಸುತ್ತಿತ್ತು.

ಇದರಿಂದಾಗಿ ಐಟಿ ನಿಯಮಗಳ ಭಾಗ III ಪ್ರಸ್ತುತತೆ ಕಳೆದುಕೊಳ್ಳಲಿದೆ. ನೂತನ ಪ್ರಸಾರ ಕಾಯಿದೆಯು ಐಟಿ ನಿಯಮಗಳ ಭಾಗ III ರದ್ದತಿಗೆ ಪ್ರಸ್ತಾಪಿಸಿಲ್ಲ. ವಿಧೇಯಕದ 20ನೇ ವಿಧಿಯು “ಯಾವುದೇ ವ್ಯಕ್ತಿ ಆನ್‌ಲೈನ್ ಪೇಪರ್, ನ್ಯೂಸ್ ಪೋರ್ಟಲ್, ವೆಬ್‌ಸೈಟ್, ಸಾಮಾಜಿಕ ಮಾಧ್ಯಮ ಅಥವಾ ಇತರ ರೀತಿಯ ಮಾಧ್ಯಮದ ಮೂಲಕ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ, ವ್ಯವಸ್ಥಿತ ವ್ಯಾಪಾರ, ವೃತ್ತಿಪರ ಅಥವಾ ವಾಣಿಜ್ಯ ಚಟುವಟಿಕೆಯ ವಿಭಾಗ 19ರಲ್ಲಿ ಉಲ್ಲೇಖಿಸಲಾದ ಪ್ರೋಗ್ರಾಂ ಕೋಡ್ ಮತ್ತು ಜಾಹೀರಾತು ಕೋಡ್‌ಗೆ ಬದ್ಧವಾಗಿರಬೇಕು.ʼʼ ಇದರಲ್ಲಿ ಪತ್ರಿಕೆಗಳ ಪ್ರಕಾಶಕರು, ಆ ಪತ್ರಿಕೆಗಳ ಇ-ಪೇಪರ್‌ಗಳು ಒಳಪಡುವುದಿಲ್ಲ.‌

OTT ಪ್ರಸಾರ ಸೇವೆಯ ವ್ಯಾಖ್ಯಾನದ ಪ್ರಕಾರ ಸಾಮಾಜಿಕ ಮಾಧ್ಯಮಗಳನ್ನು ಮತ್ತು ಅಂತಹ ಸಾಮಾಜಿಕ ಮಾಧ್ಯಮಗಳ ಬಳಕೆದಾರರನ್ನು ಹೊರತುಪಡಿಸಿದರೂ, ತಜ್ಞರು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಮತ್ತು ಪ್ರಚಲಿತ ವ್ಯವಹಾರಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ ಅವುಗಳನ್ನು ಸೇರಿಸಲು ಷರತ್ತು 20 ಅನುಮತಿಸುತ್ತದೆ ಎಂದು ಹೇಳುತ್ತಾರೆ. “ಪ್ರೋಗ್ರಾಮ್” ಮತ್ತು “ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳ” ವ್ಯಾಖ್ಯಾನಗಳ ಪ್ರಕಾರ ತಮ್ಮದೇ ಆದ YouTube ಚಾನಲ್‌ಗಳು ಮತ್ತು Instagram ಖಾತೆಗಳನ್ನು ಹೊಂದಿರುವ ಸ್ವತಂತ್ರ ಪತ್ರಕರ್ತರು ಕೂಡ ಇದೇ ವ್ಯಾಪ್ತಿಗೆ ಒಳಪಡುತ್ತಾರೆ.

ಸಿಟಿಜನ್‌ ಜರ್ನಲಿಸ್ಟುಗಳು ಸುದ್ದಿ ವಿಷಯವನ್ನು ಸಾಂದರ್ಭಿಕವಾಗಿ, ಸಾರ್ವಜನಿಕ ಹಿತಾಸಕ್ತಿ ವಿಷಯವನ್ನು ಪೋಸ್ಟ್ ಮಾಡಿದರೆ ಈ ವ್ಯಪ್ತಿಗೆ ಬರುವುದಿಲ್ಲ. ಇಲ್ಲಿನ ʼವೃತ್ತಿಪರ ಚಟುವಟಿಕೆʼಯು ಸುದ್ದಿ ಸಂಸ್ಥೆಗಳಲ್ಲಿ ಸಲಹೆಗಾರರಾಗಿ, ಉದ್ಯೋಗದಲ್ಲಿರುವ ಅಥವಾ ತೊಡಗಿಸಿಕೊಂಡಿರುವ ವೃತ್ತಿಪರ ಪತ್ರಕರ್ತರನ್ನು ಒಳಗೊಂಡಿರುತ್ತದೆ. YouTube ಅಥವಾ Instagram ಜಾಹೀರಾತುಗಳ ಮೂಲಕ ಹಣಗಳಿಕೆಯನ್ನು ವಾಣಿಜ್ಯ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಹಣಕಾಸಿನ ವಹಿವಾಟು ಸಹ OTT ಬ್ರಾಡ್‌ಕಾಸ್ಟರ್‌ನ ಬಾಧ್ಯತೆಗಳನ್ನು ಹೊಂದಬೇಕಾಗಬಹುದು.

WhatsApp ಚಾನೆಲ್‌ಗಳು, ಟೆಲಿಗ್ರಾಮ್ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿನ ಇಂಥ ಚಾನೆಲ್‌ಗಳು ಏಕ-ಮಾರ್ಗ ಸಂವಹನಕ್ಕೆ ಮಾತ್ರ ಅವಕಾಶ ನೀಡುವುದರಿಂದ ಇವು ʼಪ್ರಸಾರʼ ವ್ಯಾಪ್ತಯಲ್ಲಿ ಬರುತ್ತವೆ. ಹೀಗಾಗಿ, WhatsApp ಚಾನೆಲ್‌ಗಳಂತಹ ಪ್ರಸಾರ ಮಾಧ್ಯಮವನ್ನು ವಿಧೇಯಕದ ಅಡಿಯಲ್ಲಿ ತರಬಹುದು. “ಈ ಮಸೂದೆಯ ಅಡಿಯಲ್ಲಿ, ಪ್ರಧಾನ ಮಂತ್ರಿಯವರ ವಾಟ್ಸ್ಯಾಪ್ ಚಾನೆಲ್ ಕೂಡ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಂತೆಯೇ ಅದೇ ಬಾಧ್ಯತೆಗಳನ್ನು ಹೊಂದಬೇಕಾಗಬಹುದು” ಎಂದು ತಜ್ಞರು ಹೇಳುತ್ತಾರೆ. ಪ್ರಧಾನಿಯವರ ವಾಟ್ಸ್ಯಾಪ್ ಚಾನೆಲ್ ಪ್ರಸ್ತುತ 1.14 ಕೋಟಿ ಚಂದಾದಾರರನ್ನು ಹೊಂದಿದೆ.

ಇದನ್ನೂ ಓದಿ: 24,789 ಕೋಟಿಗೆ ವಿಶ್ವಕಪ್‌ ಪ್ರಸಾರ ಹಕ್ಕು ಪಡೆದಿದ್ದ ಡಿಸ್ನಿ; 2.2 ಲಕ್ಷ ಕೋಟಿ ರೂ. ಆದಾಯ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಹಣ ಪಡೆಯಲು ಬ್ಯಾಂಕಿಗೆ ಸಹೋದರಿಯ ಅಸ್ಥಿಪಂಜರವನ್ನೇ ತಂದ ವ್ಯಕ್ತಿ!

VISTARANEWS.COM


on

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಮಾನವೀಯತೆ ಮರೆತ ಬ್ಯಾಂಕ್ ಸಿಬ್ಬಂದಿಯ ನಡೆಗೆ ಇಡೀ ದೇಶವೇ ಮರುಗುವಂತಾಗಿದೆ. ಮೃತ ಸಹೋದರಿಯ ಹೆಸರಿನಲ್ಲಿದ್ದ ಠೇವಣಿ ಹಣವನ್ನು ಹಿಂಪಡೆಯಲು ಹೋದ ಜೀತು ಮುಂಡಾ ಎಂಬ ಅನಕ್ಷರಸ್ಥ ಬುಡಕಟ್ಟು ವ್ಯಕ್ತಿಗೆ, ಬ್ಯಾಂಕ್ ಸಿಬ್ಬಂದಿ ಪದೇ ಪದೇ “ಖಾತೆದಾರಳನ್ನು ಕರೆತನ್ನಿ” ಎಂದು ಕಿರುಕುಳ ನೀಡಿದ್ದಾರೆ. ಆಕೆ ನಿಧನಳಾಗಿದ್ದಾಳೆ ಎಂದು ಹೇಳಿದರೂ ಕೇಳದ ಸಿಬ್ಬಂದಿಯ ವರ್ತನೆಯಿಂದ ಹತಾಶರಾದ ಜೀತು, ಸಾವಿನ ಪುರಾವೆ ತೋರಿಸಲು ಸಮಾಧಿಯನ್ನು ಅಗೆದು ಸಹೋದರಿಯ ಅಸ್ಥಿಪಂಜರವನ್ನೇ ಬ್ಯಾಂಕಿಗೆ ಹೊತ್ತು ತಂದಿದ್ದಾರೆ.

ಈ ವಿಚಿತ್ರ ಮತ್ತು ಆಘಾತಕಾರಿ ಘಟನೆಯಿಂದ ಎಚ್ಚೆತ್ತ ಪೊಲೀಸರು ಹಾಗೂ ಸ್ಥಳೀಯ ಆಡಳಿತವು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಜೀತು ಮುಂಡಾ ಅವರ ಸಹೋದರಿಯ ಖಾತೆಯಲ್ಲಿದ್ದ ನಾಮಿನಿ ಕೂಡ ಈಗಾಗಲೇ ಮೃತಪಟ್ಟಿದ್ದು, ಕಾನೂನಿನ ಪ್ರಕಾರ ಜೀತು ಅವರೇ ಈ ಹಣಕ್ಕೆ ಏಕೈಕ ಹಕ್ಕುದಾರರಾಗಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಮೃತ ವ್ಯಕ್ತಿಯ ಖಾತೆಯಿಂದ ಹಣ ಹಿಂಪಡೆಯುವ ಸರಳ ನಿಯಮಗಳನ್ನು ವಿವರಿಸುವಲ್ಲಿ ವಿಫಲರಾಗಿ, ಒಬ್ಬ ಅಮಾಯಕ ವ್ಯಕ್ತಿಯನ್ನು ಇಂತಹ ದಾರುಣ ಸ್ಥಿತಿಗೆ ತಳ್ಳಿದ್ದು ನಿಜಕ್ಕೂ ದುರದೃಷ್ಟಕರ.

ಸದ್ಯ ಪೊಲೀಸರ ಸಮ್ಮುಖದಲ್ಲಿ ಅಸ್ಥಿಪಂಜರವನ್ನು ಮರು ಅಂತ್ಯಕ್ರಿಯೆ ಮಾಡಲಾಗಿದ್ದು, ಜೀತು ಮುಂಡಾ ಅವರಿಗೆ ಬರಬೇಕಾದ ಹಣವನ್ನು ಶೀಘ್ರವಾಗಿ ವಿತರಿಸುವಂತೆ ಜಿಲ್ಲಾಡಳಿತವು ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಘಟನೆಯು ಸರ್ಕಾರಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಮಾನ್ಯ ಜನರಿಗೆ, ಅದರಲ್ಲೂ ವಿಶೇಷವಾಗಿ ಅನಕ್ಷರಸ್ಥರಿಗೆ ಸಿಗಬೇಕಾದ ಕನಿಷ್ಠ ಗೌರವ ಮತ್ತು ಮಾರ್ಗದರ್ಶನದ ಕೊರತೆಯನ್ನು ಎತ್ತಿ ತೋರಿಸಿದೆ.

Continue Reading

Latest

ದೆಹಲಿ ಏರ್‌ಪೋರ್ಟ್‌ನಲ್ಲಿ ಅಪಘಾತ: ಟೇಕಾಫ್ ಆಗುವಾಗ ಸ್ವಿಸ್ ಏರ್ ವಿಮಾನದ ಎಂಜಿನ್‌ನಲ್ಲಿ ಬೆಂಕಿ; ಆರು ಮಂದಿಗೆ ಗಾಯ!

VISTARANEWS.COM


on

ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ಭೀಕರ ವಿಮಾನ ಅಪಘಾತವೊಂದು ಸಂಭವಿಸಿದೆ. ಸ್ವಿಟ್ಜರ್‌ಲ್ಯಾಂಡ್‌ನ ಜ್ಯೂರಿಚ್‌ಗೆ ಹಾರಲು ಸಿದ್ಧವಾಗಿದ್ದ ಸ್ವಿಸ್ ಏರ್ ವಿಮಾನ (LX147) ರನ್‌ವೇನಲ್ಲಿ ಟೇಕಾಫ್ ಆಗಲು ವೇಗವಾಗಿ ಚಲಿಸುತ್ತಿದ್ದಾಗ, ಅದರ ಒಂದು ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಬೆಳಗಿನ ಜಾವ 1.08ರ ಸುಮಾರಿಗೆ ಸಂಭವಿಸಿದ ಈ ಘಟನೆಯಿಂದ ವಿಮಾನದಲ್ಲಿದ್ದ 228 ಪ್ರಯಾಣಿಕರು ಮತ್ತು ನಾಲ್ವರು ಶಿಶುಗಳು ಸೇರಿದಂತೆ ಒಟ್ಟು 232 ಮಂದಿ ಕೆಲಕಾಲ ಆತಂಕದ ಸುಳಿಯಲ್ಲಿ ಸಿಲುಕಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪೈಲಟ್ ಸಮಯಪ್ರಜ್ಞೆ ಮೆರೆದು ಟೇಕಾಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ನಿರ್ಗಮನ ಸ್ಲೈಡ್‌ಗಳನ್ನು (Emergency Slides) ಬಳಸಿ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಈ ಅವಸರದ ಸ್ಥಳಾಂತರ ಪ್ರಕ್ರಿಯೆಯಲ್ಲಿ ಆರು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ವಿಮಾನದ ಸಿಬ್ಬಂದಿ ವರ್ಗದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಸ್ಲೈಡ್‌ಗಳನ್ನು ಬಳಸಲು ಸಾಧ್ಯವಾಗದ ಕೆಲವು ಪ್ರಯಾಣಿಕರಿಗೆ ಪರ್ಯಾಯ ಮೆಟ್ಟಿಲುಗಳ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ಘಟನೆಗೆ ಸಂಬಂಧಿಸಿದಂತೆ ಸ್ವಿಸ್ ಏರ್ ಸಂಸ್ಥೆಯು ಈಗಾಗಲೇ ತನಿಖಾ ಕಾರ್ಯಪಡೆಯನ್ನು ರಚಿಸಿದೆ. ವಿಮಾನಯಾನ ಸಂಸ್ಥೆಯ ತಾಂತ್ರಿಕ ತಜ್ಞರು ದೆಹಲಿಗೆ ಆಗಮಿಸಿ ವಿಮಾನದ ಎಂಜಿನ್ ವಿಫಲವಾಗಲು ನಿಖರ ಕಾರಣವೇನು ಎಂಬುದನ್ನು ಪರಿಶೀಲಿಸಲಿದ್ದಾರೆ. ಸದ್ಯ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಸ್ಥಳೀಯ ತಂಡಗಳು ನೆರವು ನೀಡುತ್ತಿದ್ದು, ಅವರಿಗೆ ಹೋಟೆಲ್ ವಸತಿ ಮತ್ತು ಮರು ಬುಕಿಂಗ್ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದು ತಿಳಿಸಿರುವ ಸಂಸ್ಥೆಯು, ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದೆ.

Continue Reading

Latest

ಅಂಬಾನಿ ಮನೆ ಅಡುಗೆಮನೆ ಮೆನು ಹೇಗಿರುತ್ತೆ ಗೊತ್ತಾ? ಪ್ರತಿದಿನ 4000 ರೊಟ್ಟಿ ತಯಾರಾಗುವುದರ ಹಿಂದಿನ ಅಸಲಿ ಕಾರಣವೇನು?

VISTARANEWS.COM


on

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಅವರ ನಿವಾಸ ‘ಆಂಟಿಲಿಯಾ’ ಕೇವಲ ಐಷಾರಾಮಿ ಜೀವನಕ್ಕೆ ಮಾತ್ರವಲ್ಲ, ಅಲ್ಲಿನ ಶಿಸ್ತುಬದ್ಧ ಆಹಾರ ಪದ್ಧತಿಗೂ ಹೆಸರುವಾಸಿ. ಅಂಬಾನಿ ಕುಟುಂಬದ ಸದಸ್ಯರು ಅಪ್ಪಟ ಸಸ್ಯಾಹಾರಿಗಳಾಗಿದ್ದು, ಅತ್ಯಂತ ಸಾತ್ವಿಕ ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸುತ್ತಾರೆ. ಮುಖೇಶ್ ಅಂಬಾನಿ ಅವರ ದಿನಚರಿ ಬೆಳಿಗ್ಗೆ ಪಪ್ಪಾಯಿ ರಸ ಮತ್ತು ಇಡ್ಲಿ-ಸಾಂಬಾರ್‌ನೊಂದಿಗೆ ಆರಂಭವಾದರೆ, ನೀತಾ ಅಂಬಾನಿ ಅವರು ಹಣ್ಣುಗಳು ಹಾಗೂ ಡ್ರೈಫ್ರೂಟ್ಸ್ ಗೆ ಆದ್ಯತೆ ನೀಡುತ್ತಾರೆ. ಮಧ್ಯಾಹ್ನದ ಊಟದಲ್ಲಿ ಗುಜರಾತಿ ಶೈಲಿಯ ದಾಲ್, ಅನ್ನ, ರೊಟ್ಟಿ ಮತ್ತು ಸಲಾಡ್‌ಗಳಿದ್ದರೆ, ರಾತ್ರಿಯ ಭೋಜನದಲ್ಲಿ ಆರೋಗ್ಯಕ್ಕೆ ಪೂರಕವಾದ ರಾಗಿ ರೊಟ್ಟಿ ಮತ್ತು ಹಗುರವಾದ ತರಕಾರಿ ಖಾದ್ಯಗಳಿರುತ್ತವೆ.

ಆಂಟಿಲಿಯಾದಲ್ಲಿ ಪ್ರತಿದಿನ ಬರೋಬ್ಬರಿ 4,000 ರೊಟ್ಟಿಗಳು ತಯಾರಾಗುತ್ತವೆ ಎಂಬ ಸುದ್ದಿ ಕೇಳಲು ಅಚ್ಚರಿಯೆನಿಸಿದರೂ ಇದರ ಹಿಂದೆ ಒಂದು ಅಚ್ಚರಿಯ ಕಾರಣವಿದೆ. ಅಂಬಾನಿ ಕುಟುಂಬದ ಸದಸ್ಯರಿಗಾಗಿ ಮಾತ್ರವಲ್ಲದೆ, ಆ ಭವ್ಯ ಬಂಗಲೆಯಲ್ಲಿ ಹಗಲಿರುಳು ಕೆಲಸ ಮಾಡುವ ಸುಮಾರು 600ಕ್ಕೂ ಹೆಚ್ಚು ಸಿಬ್ಬಂದಿಗಳಿಗಾಗಿ ಈ ರೊಟ್ಟಿಗಳನ್ನು ತಯಾರಿಸಲಾಗುತ್ತದೆ. ಭದ್ರತಾ ಸಿಬ್ಬಂದಿ, ಚಾಲಕರು, ಅಡುಗೆಯವರು ಮತ್ತು ತಂತ್ರಜ್ಞರು ಸೇರಿದಂತೆ ಪ್ರತಿಯೊಬ್ಬರಿಗೂ ಮನೆಯ ಸದಸ್ಯರಂತೆಯೇ ಪೌಷ್ಟಿಕ ಮತ್ತು ರುಚಿಕರವಾದ ಊಟವನ್ನು ಇಲ್ಲಿ ನೀಡಲಾಗುತ್ತದೆ. ನೂರಾರು ರೊಟ್ಟಿಗಳನ್ನು ಕ್ಷಣಾರ್ಧದಲ್ಲಿ ತಯಾರಿಸುವ ಅತ್ಯಾಧುನಿಕ ಯಂತ್ರಗಳು ಅಲ್ಲಿವೆ, ಆದರೆ ರುಚಿ ಮತ್ತು ಗುಣಮಟ್ಟಕ್ಕೆ ಯಾವುದೇ ಕುಂದು ಬಾರದಂತೆ ಎಚ್ಚರಿಕೆ ವಹಿಸಲಾಗುತ್ತದೆ.

ಇನ್ನು ಈ ಬೃಹತ್ ಅಡುಗೆಮನೆಯನ್ನು ನಿರ್ವಹಿಸುವ ಅಡುಗೆಯವರ ಬಗ್ಗೆ ಹೇಳುವುದಾದರೆ, ಅವರ ಆಯ್ಕೆ ಪ್ರಕ್ರಿಯೆಯೇ ಒಂದು ರೋಚಕ ಕಥೆ. ದೇಶದ ಅತ್ಯುತ್ತಮ ಹೊಟೇಲ್‌ಗಳ ನುರಿತ ಅಡುಗೆಯವರನ್ನು ಇಲ್ಲಿ ನೇಮಿಸಿಕೊಳ್ಳಲಾಗುತ್ತಿದ್ದು, ಇವರ ಸಂಬಳ ಕೇಳಿದರೆ ಸಾಮಾನ್ಯರು ಬೆಚ್ಚಿಬೀಳುತ್ತಾರೆ. ವರದಿಗಳ ಪ್ರಕಾರ, ಇಲ್ಲಿನ ಮುಖ್ಯ ಅಡುಗೆಯವರು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಕೇವಲ ಹಣ ಮಾತ್ರವಲ್ಲದೆ, ಅವರಿಗೆ ವಿಮೆ ಮತ್ತು ಅವರ ಮಕ್ಕಳ ಶಿಕ್ಷಣಕ್ಕೂ ನೆರವು ನೀಡಲಾಗುತ್ತದೆ. ಹೀಗೆ ಅಂಬಾನಿ ಮನೆಯ ಅಡುಗೆಮನೆ ಕೇವಲ ಊಟ ತಯಾರಿಸುವ ಸ್ಥಳವಾಗಿರದೆ, ನೂರಾರು ಜನರಿಗೆ ಅನ್ನ ನೀಡುವ ಮತ್ತು ಅತ್ಯುತ್ತಮ ಕೆಲಸಗಾರರಿಗೆ ರಾಜಮರ್ಯಾದೆ ನೀಡುವ ತಾಣವಾಗಿದೆ.

Continue Reading

Latest

ಯುದ್ಧವಿರಾಮ ಅನಿರ್ದಿಷ್ಠಾವಧಿಗೆ ವಿಸ್ತರಣೆ: ಡೋನಾಲ್ಡ್ ಟ್ರಂಪ್‌ ಘೋಷಣೆ

VISTARANEWS.COM


on

Donald trump

ವಾಷಿಂಗ್ಟನ್‌: ಅಮೆರಿಕಾ-ಇಸ್ರೇಲ್‌- ಇರಾನ್‌ ನಡುವಿನ ಯುದ್ಧ ವಿರಾಮಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಅಷ್ಟರೊಳಗೆ ಯುದ್ಧ ವಿರಾಮ ಅನಿರ್ದಿಷ್ಠಾವಧಿಗೆ ವಿಸ್ತರಣೆಯಾಗಿದೆ.


ಈ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ ನಲ್ಲಿ ಈ ವಿಷಯ ತಿಳಿಸಿರುವ ಅಮೆರಿಕಾ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಇರಾನ್‌ ನಾಯಕರು ಮತ್ತು ಅವರ ಪ್ರತಿನಿಧಿಗಳು ಏಕರೂಪದ ಪ್ರಸ್ತಾವನೆಯೊಂದಿಗೆ ಬರುವವರೆಗೆ ಯುದ್ಧ ವಿರಾಮ ಮುಂದುವರಿಸುತ್ತೇನೆ ಎಂದಿದ್ದಾರೆ.


ಶಾಂತಿ ಮಾತುಕತೆಯ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ್‌ ಮನವಿಯನ್ನು ತಾನು ಒಪ್ಪಿಕೊಂಡಿರುವುದಾಗೆ ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ. ಇರಾನ್‌ ಸರ್ಕಾರ ಗಂಭೀರವಾಗಿ ಹಾನಿಗೀಡಾಗಿದೆ. ಹೀಗಾಗಿ ಯುದ್ಧ ವಿರಾಮ ವಿಸ್ತರಿಸುತ್ತಿದ್ದೇನೆ ಹೊರತು ಇದು ಅನಿರಿಕ್ಷಿತವಲ್ಲ ಎಂದು ಹೇಳಿಕೊಂಡಿದ್ದಾರೆ.
ಕಳೆದ ಫೆ.28 ಅಮೆರಿಕಾ-ಇಸ್ರೇಲ್‌ ಜಂಟಿಯಾಗಿ ಇರಾನ್‌ ವಿರುದ್ಧ ಯುದ್ಧ ಆರಂಭಿಸಿದ್ದವು. ಈ ಹಿಂದೆ ಇರಾನ್‌ ನ ವಿದ್ಯುತ್‌ ಸ್ಥಾವರಗಳು, ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ಬಾಂಬ್‌ ದಾಳಿ ನಡೆಸುವುದಾಗಿ ಟ್ರಂಪ್‌ ಗುಡುಗಿದ್ದರು. ಇದನ್ನು ಅಂತರ ರಾಷ್ಟ್ರೀಯ ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮತ್ತಿತರ ದೇಶಗಳ ಮುಖಂಡರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Continue Reading
Advertisement
bigbreaking16 hours ago

ಮೋದಿ ಅಥವಾ ದೀದಿ? ಪ.ಬಂಗಾಳದ ಭವಿಷ್ಯ ನಿರ್ಧರಿಸಲಿದೆ 142 ಸೀಟು

Latest16 hours ago

ಸಿದ್ದರಾಮಯ್ಯನವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ’: ಸಿಎಂ ಬದಲಾವಣೆ ಬಗ್ಗೆ ರಾಜಣ್ಣ ನೀಡಿದ ಹೇಳಿಕೆಯ ಮರ್ಮವೇನು?

ಕ್ರೀಡೆ18 hours ago

ಕಿಂಗ್ ಕೊಹ್ಲಿಗೆ ಟಕ್ಕರ್ ಕೊಟ್ಟ ಯುವ ಕಿಡಿ: ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಹಿಂದಿಕ್ಕಿದ ವೈಭವ್ ಸೂರ್ಯವಂಶಿ!

Latest18 hours ago

ಅಪ್ಪು ಸರ್ ಕೊಟ್ಟ ಆ ಪ್ರೋತ್ಸಾಹವೇ ನನ್ನ ಯಶಸ್ಸಿನ ಗುಟ್ಟು: ಕನ್ನಡಿಗರ ನೆಚ್ಚಿನ ‘ಅಂಜನಿಪುತ್ರ’ನ ಬಗ್ಗೆ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಹೇಳಿದ್ದೇನು?

bigbreaking18 hours ago

20 ಸಾವಿರ ಕೋಟಿ ಹಗರಣದ ಮೂಲ ದಾಖಲೆಗಳೇ ನಾಪತ್ತೆ. ಎನ್‌.ಆರ್‌.ರಮೇಶ್‌ ಗಂಭೀರ ಆರೋಪ.

Latest19 hours ago

ಕಿಂಗ್ ಕೊಹ್ಲಿಗಾಗಿ ಪುಟಾಣಿ ಫ್ಯಾನ್ ಹಠ: ಹೋಟೆಲ್ ಸಿಬ್ಬಂದಿ ತಡೆದಿದ್ದಕ್ಕೆ ಕಣ್ಣೀರು ಹಾಕಿದ ಬಾಲಕ

Latest19 hours ago

ಹಣ ಪಡೆಯಲು ಬ್ಯಾಂಕಿಗೆ ಸಹೋದರಿಯ ಅಸ್ಥಿಪಂಜರವನ್ನೇ ತಂದ ವ್ಯಕ್ತಿ!

Latest22 hours ago

ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರಾ? ಪರಮೇಶ್ವರ್ ಮೌನದ ಹಿಂದೆ ಅಡಗಿದೆಯೇ ದೊಡ್ಡ ರಹಸ್ಯ?

Latest23 hours ago

ಸಾಲದ ಸುಳಿಯಲ್ಲಿ ರಾಜ್ಯ ಸರ್ಕಾರ! ಆರ್ಥಿಕ ಶಿಸ್ತಿನ ಬಗ್ಗೆ ಹೆಚ್‌ಡಿಕೆ ಆತಂಕ

Latest23 hours ago

ರಿಷಬ್ ಶೆಟ್ಟಿ ಸಿನಿಮಾದ ತೆಲುಗು ವರ್ಷನ್ ರೆಡಿ: ಟಾಲಿವುಡ್‌ನಲ್ಲಿ ಬಿಡುಗಡೆಗೆ ದಿನಾಂಕ ನಿಗದಿ! ಯಾವುದು ಆ ಸಿನಿಮಾ?

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌