Site icon Vistara News

ಬಾಯ್‌ಫ್ರೆಂಡ್‌ ಜತೆ ಸರಸವಾಡುತ್ತಿದ್ದ 15 ವರ್ಷದ ತಂಗಿಯ ಕೊಂದ ಅಣ್ಣ; ಕೊಲೆಗೆ ತಾಯಿ ಸಾಥ್‌

Physical Abuse

Brother Strangles Sister To Death After Catching Her With Boy, Mother Helps Him

ಭೊಪಾಲ್‌: ಹದಿ ಹರೆಯದ ವಯಸ್ಸಿನಲ್ಲಿ ಹುಡುಗ ಆಗಲಿ, ಹುಡುಗಿ ಆಗಲಿ ದುಡುಕುವುದು ಸಹಜ. ಮನದ ಕಾಮನೆಗಳಿಗೆ ಬೇಗನೆ ಸ್ಪಂದಿಸುವುದು 15-20ರ ಹರೆಯದಲ್ಲಿ ಸಾಮಾನ್ಯ. ಹಿರಿಯರಾದವರು ಈ ವಯಸ್ಸಿನಲ್ಲಿ ದುಡುಕಬಾರದು, ಯಾವುದು ಸರಿ, ಯಾವುದು ತಪ್ಪು ಎಂದು ಹುಡುಗ ಅಥವಾ ಹುಡುಗಿಗೆ ತಿಳಿಹೇಳಬೇಕು. ಆದರೆ, ಮಧ್ಯಪ್ರದೇಶದಲ್ಲಿ (Madhya Pradesh) 25 ವರ್ಷದ ಯುವಕನೊಬ್ಬ ತನ್ನ 15 ವರ್ಷದ ತಂಗಿಯು ಬಾಯ್‌ಫ್ರೆಂಡ್‌ ಜತೆ ಸರಸವಾಡುತ್ತಿದ್ದನ್ನು ಕಂಡವನೇ ಆಕೆಯ ಕತ್ತು ಹಿಸುಕಿ (Man Strangles Sister) ಕೊಲೆ ಮಾಡಿದ್ದಾನೆ.

ಜನವರಿ 31ರಂದು ಮಧ್ಯಪ್ರದೇಶದ ಪನ್ನಾ ಜಿಲ್ಲೆ ಗ್ರಾಮವೊಂದರಲ್ಲಿ ಬಾಲಕಿಯ ತಂದೆ, ತಾಯಿ ಹಾಗೂ ಸಹೋದರನು ಸಮಾರಂಭ ಒಂದಕ್ಕೆ ಹೋಗಿದ್ದರು. ಇದೇ ವೇಳೆ ಬಾಲಕಿಯು ತನ್ನ 16 ವರ್ಷದ ಬಾಯ್‌ಫ್ರೆಂಡ್‌ನನ್ನು ಮನೆಗೆ ಕರೆಸಿದ್ದಾರೆ. ಅವರಿಬ್ಬರು ಸರಸ ಸಲ್ಲಾಪದಲ್ಲಿ ತೊಡಗಿರುವಾಗಲೇ ಬಾಲಕಿಯ ಸಹೋದರನು ಮನೆಗೆ ಆಗಮಿಸಿದ್ದಾನೆ. ಇಬ್ಬರೂ ಸರಸವಾಡುತ್ತಿದ್ದನ್ನು ಕಂಡ ಆತನು ಆಕೆಯ ಬಾಯ್‌ಫ್ರೆಂಡ್‌ನನ್ನು ಹಿಡಿಯಲು ಯತ್ನಿಸಿದ್ದಾನೆ. ಆದರೆ, 16 ವರ್ಷದ ಬಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.

ಬಾಲಕನ ಜತೆ ಇದ್ದ ತಂಗಿಯ ಮೇಲೆ ಕೋಪಗೊಂಡ ಆತನು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸಮಾರಂಭ ಮುಗಿಸಿಕೊಂಡು ತಾಯಿ ಮನೆಗೆ ಬಂದ ಬಳಿಕ ನಡೆದ ವಿಷಯ ತಿಳಿಸಿದ್ದಾನೆ. ತಾಯಿ ಹಾಗೂ ಮಗ ಸೇರಿ ಬಾಲಕಿಯ ಶವವನ್ನು ಬಚ್ಚಿಟ್ಟಿದ್ದಾರೆ. ಇದಾದ ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕತೆ ಕಟ್ಟಿದ್ದಾರೆ. ಆದರೆ, ಪೊಲೀಸರು ವಿಚಾರಣೆ ನಡೆಸಿದ ಬಳಿಕ, ಬಾಲಕಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ. ನಂತರ, ತಾಯಿ ಹಾಗೂ ಮಗನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Physical Abuse : ಅತ್ಯಾಚಾರಕ್ಕೆ ಯತ್ನಿಸುವಾಗಲೇ ಸಿಕ್ಕಿ ಬಿದ್ದ ದುಷ್ಟ; ಬಾಲಕಿಯ ರಕ್ಷಿಸಿದ ದಾರಿ ಹೋಕರು

ಮರಣೋತ್ತರ ವರದಿ ಬಂದ ಬಳಿಕ, ಬಾಲಕಿಯು ಹತ್ಯೆಗೀಡಾಗಿದ್ದಾಳೆ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಆಗ, ತಾಯಿ-ಮಗ ಕಟ್ಟಿದ ಕತೆ ಬಯಲಾಗಿದೆ. ಬಾಲಕಿ ಜತೆ ಸಿಕ್ಕ ಬಾಲಕನ ಮೇಲೆ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತಮಿಳುನಾಡಿನಲ್ಲಿ ಕೂಡ ಕೆಲ ದಿನಗಳ ಹಿಂದೆ ಇಂತಹದ್ದೇ ಘಟನೆ ನಡೆದಿತ್ತು. ಯುವಕನೊಬ್ಬ ತನ್ನ ಸಹೋದರಿಯು ಬಾಯ್‌ಫ್ರೆಂಡ್‌ ಜತೆ ಇರುವುದನ್ನು ಕಂಡು ಬಾಯ್‌ಫ್ರೆಂಡ್‌ನ ರುಂಡ ಕತ್ತರಿಸಿದ್ದಲ್ಲದೆ, ಸಹೋದರಿಯನ್ನು ಕೊಲೆ ಮಾಡಿದ್ದ. ಜಗಳ ಬಿಡಿಸಲು ಬಂದ ತಾಯಿಯ ಕೈ ಕೂಡ ಕತ್ತರಿಸಿದ್ದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version