Site icon Vistara News

​ ಕಾರನ್ನು ಹೆಲಿಕಾಪ್ಟರ್​ ಆಗಿ ಬದಲಾಯಿಸಿದ ಸಹೋದರರು; ಅರೆಸ್ಟ್​ ಮಾಡಿದ ಪೊಲೀಸರು! ಇಲ್ಲಿದೆ ವಿಡಿಯೊ

Maruti Wagon R

ಲಖನೌ: ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಇಬ್ಬರು ಸಹೋದರರು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರನ್ನು (Wagon R Car) ಅನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿ ಸುದ್ದಿಯಾಗಿದ್ದರು. ಆದಾಗ್ಯೂ, ಅವರು ತಮ್ಮ ಯೋಜನೆಯನ್ನು ಪೂರ್ಣಗೊಳಿಸಿ ಅದಕ್ಕೆ ಬಣ್ಣ ಹಚ್ಚುವ ಮೊದಲು ಪೊಲೀಸರು ಅವರನ್ನು ಹಿಡಿದು ವಾಹನವನ್ನು (Viral News) ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವ ವಾಹನದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅದಕ್ಕೆ ನೆಟ್ಟಿಗರಿಂದ ಸಾಕಷ್ಟು ಕಾಮೆಂಟ್​ಗಳು ಬಂದಿವೆ.

ಪತ್ರಕರ್ತೆ ಪ್ರಿಯಾ ಸಿಂಗ್ ಹಿಂದಿಯಲ್ಲಿ ಶೀರ್ಷಿಕೆಯೊಂದಿಗೆ ಎಕ್ಸ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ, ಇಬ್ಬರು ಸಹೋದರರು ಜುಗಾಡ್ ತಂತ್ರ ಬಳಸಿ ವ್ಯಾಗನ್ ಆರ್​ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದಾರೆ. ಪೊಲೀಸರು ಅವರನ್ನು ಹಿಡಿದು ಅದನ್ನು ವಶಪಡಿಸಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಹೆಲಿಕಾಪ್ಟರ್​ನ ರೋಟರ್ ಬ್ಲೇಡ್ ಅನ್ನು ಕಾರಿನ ಮೇಲ್ಛಾವಣಿಗೆ ವೆಲ್ಡ್ ಮಾಡಲಾಗಿದೆ ಮತ್ತು ಟೈಲ್ ರೋಟರ್ ಅನ್ನು ಕಾರಿನ ಬೂ ಟ್​ಗೆ ವೆಲ್ಡ್ ಮಾಡಿರುವುದು ವೀಡಿಯೊದಲ್ಲಿ ಕಾಣುತ್ತದೆ. ಅಂಬೇಡ್ಕರ್ ನಗರದ ಪೊಲೀಸ್ ಠಾಣೆಯ ಹೊರಗೆ ನಿಲ್ಲಿಸಿರುವ ವಾಹನದ ಸುತ್ತಲೂ ಜನರು ಸೇರುತ್ತಿದ್ದಾರೆ. ಹೀಗಾಗಿ ಅಲ್ಲಿಯೂ ಅದಕ್ಕೆ ಪೊಲೀಸರು ರಕ್ಷಣೆ ಕೊಡುವಂತಾಗಿದೆ.

ಇದನ್ನೂ ಓದಿ : Lok Sabha Election : ಶುಕ್ರವಾರ ಮತದಾನ ಬೇಡ, ಮುಸ್ಲಿಮರಿಗೆ ತೊಂದರೆಯಾಗುತ್ತದೆ; ಕಾಂಗ್ರೆಸ್​ನಿಂದ ಪತ್ರ

ವರದಿಗಳ ಪ್ರಕಾರ, ವಾಹನವು ಪೇಟಿಂಗ್​ಗಾಗಿ ಅಕ್ಬರ್​ಪುರಕ್ಕೆ ತೆರಳುತ್ತಿದ್ದಾಗ ಕೊಟ್ವಾಲಿ ಪ್ರದೇಶದಲ್ಲಿ ತಪಾಸಣೆ ಮಾಡುತ್ತಿದ್ದ ಪೊಲೀಸರು ಹಿಡಿದಿದ್ದಾರೆ. ಮಾರ್ಪಾಟು ಮಾಡಿರುವ ಕಾರನ್ನು ಬಸ್ ನಿಲ್ದಾಣದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಿಂಗ್ ಮಾರ್ಚ್ 17 ರಂದು ಎಕ್ಸ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಂದಿನಿಂದ ಇದು 68,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಹೆಚ್ಚುವರಿಯಾಗಿ, ರಿಟ್ವೀಟ್ ಕೂಡ ಆಗಿದೆ. ಅನೇಕರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಸೃಜನಶೀಲತೆಯನ್ನು ಗೌರವಿಸಿ


ನಾವು ಸೃಜನಶೀಲತೆಯನ್ನು ಗೌರವಿಸಬೇಕು. ಹೊಸ ಆವಿಷ್ಕಾರವು ಪ್ರಗತಿಯ ದ್ಯೋತಕ. ಸಮಾಜದ ಪ್ರತಿಯೊಂದು ಅಂಶದಲ್ಲೂ ವ್ಯಾಪ್ತಿ ಮೀರಿ ಸಾಗಬೇಕು. ಇಂಥವರನ್ನು ಗೌರವಿಸುವುದು ಮುಖ್ಯ ಎಂದು ಹೇಳಿದ್ದಾರೆ. ಇನ್ನೊಬ್ಬರು “ತುಂಬಾ ಆಸಕ್ತಿದಾಯಕ ಮತ್ತು ಅದ್ಭುತ. ನಂಬಲಾಗದ ಸಾಧನೆ ಎಂದು ಹೇಳಿದ್ದಾರೆ.

Exit mobile version