Site icon Vistara News

BSE Sensex: ಮೊದಲ ಬಾರಿಗೆ ಐತಿಹಾಸಿಕ 71,000 ಗಡಿ ದಾಟಿದ ಸೆನ್ಸೆಕ್ಸ್‌

bse sensex

ಮುಂಬಯಿ: ಶುಕ್ರವಾರದಂದು ಬಿಎಸ್‌ಇ ಸೆನ್ಸೆಕ್ಸ್ (BSE Sensex) ಮೊದಲ ಬಾರಿಗೆ 71,000 ಗಡಿ ದಾಟಿ ಇತಿಹಾಸ ಸೃಷ್ಟಿಸಿದೆ. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಬೆಳಗ್ಗಿನಿಂದೀಚೆಗೆ 569.88 ಪಾಯಿಂಟ್‌ಗಳ ಜಿಗಿತವನ್ನು ದಾಖಲಿಸಿತು. ಬೆಳಗಿನ ವಹಿವಾಟಿನ ಸಮಯದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 71,084.08 ತಲುಪಿದೆ.

ಬೆಳಗ್ಗಿನ ವಹಿವಾಟಿನಲ್ಲಿ ಇನ್ಫೋಸಿಸ್, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ವಿಪ್ರೋ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಪ್ರಮುಖ ಲಾಭ ಗಳಿಸಿದವು. ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ- ಲಿಸ್ಟೆಡ್ ಸಂಸ್ಥೆಗಳ ಮಾರುಕಟ್ಟೆ ಬಂಡವಾಳ (ಎಂ ಕ್ಯಾಪ್) ದಾಖಲೆಯ ಗರಿಷ್ಠ ₹357 ಲಕ್ಷ ಕೋಟಿ ತಲುಪಿದೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್ ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ. ಗುರುವಾರ ಅಮೆರಿಕದ ಮಾರುಕಟ್ಟೆ ಕೂಡ ಉನ್ನತ ಮಟ್ಟದಲ್ಲಿ ಕೊನೆಗೊಂಡಿತು.

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಮೊದಲ ಬಾರಿಗೆ 70,000 ಮಟ್ಟವನ್ನು ದಾಟಿತ್ತು. 30 ಷೇರುಗಳ BSE ಸೂಚ್ಯಂಕವು ಡಿಸೆಂಬರ್ 11ರಂದು 70,057 pts ಎತ್ತರವನ್ನು ತಲುಪಿತು. ಇದು ಸ್ವಲ್ಪ ಕುಸಿತ. ಸೋಮವಾರ 69,988ರಲ್ಲಿ ಕೊನೆಗೊಂಡಿತ್ತು.

ಸೆನ್ಸೆಕ್ಸ್ ಅನ್ನು ಜನವರಿ 2, 1986ರಂದು ಪ್ರಾರಂಭಿಸಲಾಯಿತು. ಇದು ಭಾರತೀಯ ಷೇರು ಮಾರುಕಟ್ಟೆಯನ್ನು ಪ್ರತಿನಿಧಿಸುವ 30 ಷೇರುಗಳನ್ನು ಒಳಗೊಂಡಿದೆ. ಇದು ಭಾರತದ ಆರ್ಥಿಕ ಆರೋಗ್ಯದ ಪ್ರಮುಖ ಸೂಚಕವಾಗಿದೆ. ಮಾರ್ಚ್‌ನಿಂದ ಆರಂಭಿಸಿ ನವೆಂಬರ್‌ವರೆಗಿನ ಎಂಟು ತಿಂಗಳಲ್ಲಿ ಸೆನ್ಸೆಕ್ಸ್ ಸುಮಾರು 12,400 ಅಂಕಗಳ ಜಿಗಿತವನ್ನು ಕಂಡಿದೆ. ಆಗ ಅದು 57,5271 ಇತ್ತು. ನವೆಂಬರ್ ಅಂತ್ಯದಲ್ಲಿ ನಿಫ್ಟಿ-50 ಸೂಚ್ಯಂಕ ಸಹ ಮೊದಲ ಬಾರಿಗೆ 20,000 ಮುಟ್ಟಿತು.

ಇದನ್ನೂ ಓದಿ: Sensex market crash : ಸೆನ್ಸೆಕ್ಸ್‌ 700 ಅಂಕ ಪತನ, ಹೂಡಿಕೆದಾರರಿಗೆ 4 ದಿನದಲ್ಲಿ 7 ಲಕ್ಷ ಕೋಟಿ ರೂ. ನಷ್ಟ, ಕಾರಣವೇನು?

Exit mobile version