ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)(CPI-M) ನಾಯಕ ಬುದ್ಧದೇವ್ ಭಟ್ಟಾಚಾರ್ಯ(Buddhadeb Bhattacharjee) ಅವರು ಇಂದು ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ಬೆಳಿಗ್ಗೆ ತಮ್ಮ ಕೋಲ್ಕತ್ತಾದ ಮನೆಯಲ್ಲಿ ನಿಧನರಾಗಿದ್ದು, ಅವರಿಗೆ 80 ವರ್ಷ ವಯಸ್ಸಾಗಿತ್ತು.
This man tried to change Bengal though failed for various reasons.
— Sourav Dutta (@souravduttahere) August 8, 2024
For last few years had to keep distance from public life for health issues. But as a true Communist, he always kept his eyes & ears wide open.
Red Salute Former CM Comrade Buddhadeb Bhattacharjee!✊@cpimspeak pic.twitter.com/PXzspn9mN5
ಬಂಗಾಳದಲ್ಲಿ ಎಡಪಕ್ಷದ 34 ವರ್ಷಗಳ ಆಡಳಿತದಲ್ಲಿ, ಭಟ್ಟಾಚಾರ್ಯ ಅವರು 2000 ರಿಂದ 2011 ರವರೆಗೆ ಸತತ 11 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಎರಡನೇ ಮತ್ತು ಕೊನೆಯ ಸಿಪಿಎಂ ಮುಖ್ಯಮಂತ್ರಿಯಾಗಿದ್ದರು. ಭಟ್ಟಾಚಾರ್ಯ ಅವರು 2011 ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ TMC ಪಕ್ಷದ ವಿರುದ್ಧ ಸೋಲುಂಡಿದ್ದರು. ಆ ಮೂಲಕ ರಾಜ್ಯದಲ್ಲಿ ಎಡರಂಗದ 34 ವರ್ಷಗಳ ಆಳ್ವಿಕೆ ಕೊನೆಗೊಂಡಿತು.
I am saddened by the demise of Former Chief Minister of West Bengal, Shri Buddhadeb Bhattacharjee. His vast tenure of over five decades as an MLA, Minister, and eventually as Chief Minister has left a lasting legacy. Renowned for his humility, significant contributions to Bengali… pic.twitter.com/FjLFufSP0o
— Pema Khandu པདྨ་མཁའ་འགྲོ་། (@PemaKhanduBJP) August 8, 2024
ಕ್ಷೀಣಿಸುತ್ತಿರುವ ಆರೋಗ್ಯದಿಂದಾಗಿ ಅವರು ರಾಜಕೀಯ ರಂಗದಿಂದ ದೂರ ಉಳಿದಿದ್ದರು. ಅವರು ಬಹಳ ಸಮಯದಿಂದಲೂ ತಮ್ಮ ಪಾಮ್ ಅವೆನ್ಯೂ ಅಪಾರ್ಟ್‌ಮೆಂಟ್‌ನಲ್ಲೇ ಉಳಿದಿದ್ದರು. ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ಇಂದು ಭಾರೀ ಏರುಪೇರಾಗಿತ್ತು. ಹೀಗಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಇನ್ನು ಭಟ್ಟಾಚಾರ್ಯ ಅವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: NEET: ಕರ್ನಾಟಕ ಬಳಿಕ ಪಶ್ಚಿಮ ಬಂಗಾಳದಲ್ಲೂ ನೀಟ್ ಪರೀಕ್ಷೆ ವಿರುದ್ಧ ನಿರ್ಣಯ; ಹೆಚ್ಚಾಯ್ತು ಆಕ್ರೋಶ