Site icon Vistara News

Budget 2023-24 | 10 ಟ್ರೇಡ್‌ ಯೂನಿಯನ್‌ಗಳಿಂದ ಇಂದು ಬಜೆಟ್‌ ಪೂರ್ವ ಸಮಾಲೋಚನಾ ಸಭೆಗೆ ಬಹಿಷ್ಕಾರ

Union Finance Minister Nirmala Sitharaman hits Back to Congress Over Corruption

ನವ ದೆಹಲಿ: ಒಟ್ಟು 10 ಟ್ರೇಡ್‌ ಯೂನಿಯನ್‌ಗಳ ಒಕ್ಕೂಟವು ಕೇಂದ್ರ ಹಣಕಾಸು ಸಚಿವರ ಜತೆಗಿನ ವರ್ಚುವಲ್ ಬಜೆಟ್‌ ಪೂರ್ವ ಸಮಾಲೋಚನಾ ಸಭೆಯನ್ನು ಬಹಿಷ್ಕರಿಸಲು‌ (Budget 2023-24) ನಿರ್ಧರಿಸಿವೆ.‌

ನವೆಂಬರ್‌ 28ರಂದು ಆಯೋಜಿಸಿರುವ ವರ್ಚುವಲ್‌ ಸಮಾಲೋಚನೆಯ ಬದಲಿಗೆ ಮುಖಾಮುಖಿ ಸಭೆಯನ್ನು ಏರ್ಪಡಿಸಬೇಕು . ಜತೆಗೆ ವಿತ್ತ ಸಚಿವರ ಜತೆಗೆ ಮಾತುಕತೆಗೆ ಸಾಕಷ್ಟು ಕಾಲಾವಕಾಶವನ್ನೂ ನೀಡಬೇಕು ಎಂದು ಕಾರ್ಮಿಕ ಒಕ್ಕೂಟಗಳು ಒತ್ತಾಯಿಸಿವೆ.

ಬಜೆಟ್‌ ಪೂರ್ವ ಸಮಾಲೋಚನೆ ಸಭೆಗಳಲ್ಲಿ ನಾನಾ ವಲಯಗಳ ಪ್ರತಿನಿಧಿಗಳ ಜತೆಗೆ ಹಣಕಾಸು ಸಚಿವರು ಮಾತುಕತೆ ನಡೆಸಿ, ಆಯಾ ವಲಯಗಳ ಬೇಡಿಕೆ ಮತ್ತು ನಿರೀಕ್ಷೆಗಳನ್ನು ತಿಳಿದುಕೊಳ್ಳುವುದು ವಾಡಿಕೆಯಾಗಿದೆ. ಅವುಗಳನ್ನು ಬಜೆಟ್‌ನಲ್ಲಿ ಪರಿಶೀಲಿಸಲಾಗುತ್ತದೆ. ಕೆಲ ಬೇಡಿಕೆಗಳನ್ನು ಬಜೆಟ್‌ನಲ್ಲಿ ಸೇರಿಸುವುದೂ ಸಾಮಾನ್ಯ. ಹೀಗಾಗಿ ಇಂಥ ಸಭೆಗಳಿಗೆ ಅದರದ್ದೇ ದ ಮಹತ್ವ ಇದೆ.

ಆದರೆ ಟ್ರೇಡ್‌ ಯೂನಿಯನ್‌ಗಳು ಶುಕ್ರವಾರ ಬರೆದ ಪತ್ರದಲ್ಲಿ, ಇಲಾಖೆಯು ಪ್ರತಿ ಯೂನಿಯನ್‌ಗೆ ಮೂರು ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗಿದೆ. ಇದೊಂದು ಜೋಕ್‌ಗೆ ಸಮಾನ. ಇಂಥ ಗಿಮಿಕ್‌ಗಳನ್ನು ನಾವು ಒಪ್ಪುವುದಿಲ್ಲ. ಕಾಟಾಚಾರಕ್ಕೆ ಇಂಥ ಸಭೆಯ ಅವಶ್ಯಕತೆ ಇಲ್ಲ. ನಾವು ವೀಡಿಯೊ ಕಾನ್ಫರೆನ್ಸ್‌ಗೆ ಹಾಜರಾಗುವುದಿಲ್ಲ ಎಂದು ಹೇಳಿವೆ. ಆದರೆ ಭಾರತೀಯ ಮಜ್ದೂರ್‌ ಸಂಘ (ಬಿಎಂಎಸ್) ಈ ಬಹಿಷ್ಕಾರಕ್ಕೆ ಬೆಂಬಲಿಸಿಲ್ಲ.

ಐಎನ್‌ಟಿಯುಸಿ, ಎಐಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲ್ಯುಎ, ಎಚ್‌ಎಂಎಸ್, ಸಿಐಟಿಯು, ಎಐಸಿಸಿಟಿಯು, ಎಲ್‌ಪಿಎಫ್‌, ಎಐಯುಟಿಯುಸಿ, ಯುಟಿಯುಸಿ ಈ ಸಭೆಗೆ ಬಹಿಷ್ಕಾರ ಹಾಕಿವೆ.

Exit mobile version