ನವ ದೆಹಲಿ: ಕೇಂದ್ರ ಬಜೆಟ್ 2023-24ರಲ್ಲಿ (Union Budget 2023) ರಕ್ಷಣಾ ಇಲಾಖೆಗೆ 5.94 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕಳೆದ ಬಾರಿ 5.25 ಲಕ್ಷ ಕೋಟಿ ರೂಪಾಯಿಗೆ ಹೋಲಿಕೆ ಮಾಡಿದರೆ ಹಾಲಿ ಬಜೆಟ್ನಲ್ಲಿ ಶೇಕಡಾ 13ರಷ್ಟು ಏರಿಕೆ ಮಾಡಲಾಗಿದೆ. ರಕ್ಷಣಾ ವಲಯದ ಆಧುನೀಕರಣ ಹಾಗೂ ಹೊಸ ಫೈಟರ್ ಜೆಟ್, ಸಬ್ಮರಿನ್ ಹಾಗೂ ಟ್ಯಾಂಕ್ಗಳ ಖರೀದಿಯ ಉದ್ದೇಶದಿಂದ ಒಟ್ಟು ಮೊತ್ತವನ್ನು ಏರಿಕೆ ಮಾಡಲಾಗಿದೆ. ಅದೇ ರೀತಿ ಬಂಡವಾಳ ವೆಚ್ಚ 10 ಸಾವಿರ ಕೋಟಿ ರೂಪಾಯಿ ಏರಿಕೆ ಮಾಡಲಾಗಿದ್ದು ಒಟ್ಟು ಮೊತ್ತ 1.62 ಲಕ್ಷ ಕೋಟಿ ರೂಪಾಯಿ ತಲುಪಿದೆ.
ರಕ್ಷಣಾ ವಲಯದ ಆಧುನೀಕರಣಕ್ಕಾಗಿ 1.52 ಲಕ್ಷ ರೂಪಾಯಿಯಿಂದ 1.62 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಮೇಕ್ಇನ್ ಇಂಡಿಯಾ ಯೋಜನೆಯಡಿ ನಿಧಿ ಮೀಸಲಿಡಲಾಗಿದೆ. ಅದೇ ರೀತಿ ಸಂಬಳ ಹಾಗೂ ಕಂದಾಯ ವೆಚ್ಚಕ್ಕಾಗಿ 2.70 ಲಕ್ಷ ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಅದೇ ರೀತಿ ಸೇನಾ ಸಿಬ್ಬಂದಿಗಳ ಪಿಂಚಣಿಗೆ 1.38 ಲಕ್ಷ ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ.
ಏರ್ಪೋರ್ಸ್ ಹೊಸ ಪೀಳಿಗೆಯ ಏರ್ಕ್ರಾಫ್ಟ್ಗಳನ್ನು ಖರೀದಿ ಮಾಡುವ ಯೋಜನೆ ರೂಪಿಸಿಕೊಂಡಿದೆ. ಅದೇ ನೌಕಾ ಪಡೆಯೂ ತನ್ನ ತೆಕ್ಕೆಗೆ ಫ್ರಾನ್ಸ್ ಮೂಲದ ಫೈಟರ್ಜೆಟ್ಗಳನ್ನು ತೆಗೆದುಕೊಳ್ಳುವ ಯೋಜನೆ ರೂಪಿಸಿಕೊಂಡಿದೆ.
ಇದನ್ನೂ : Union Budget 2023: ಕೇಂದ್ರ ಬಜೆಟ್ನಲ್ಲಿ ಯಾವುದರ ಬೆಲೆ ಏರಿಕೆ, ಯಾವುದರ ಬೆಲೆ ಇಳಿಕೆ?
ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರು ಕೇಂದ್ರ ಬಜೆಟ್ ಅನ್ನು ಹೊಗಳಿ ಮಾತನಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ದೇಶವನ್ನು 5 ಟ್ರಿಲಿಯನ್ ಆರ್ಥಿಕತೆಯತ್ತ ಕೊಂಡೊಯ್ಯಲಿದೆ ಎಂದು ಹೇಳಿದ್ದಾರೆ.