ನವದೆಹಲಿ: ಗರ್ಭಕಂಠ ಕ್ಯಾನ್ಸರ್ ತಡೆಗಾಗಿ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡಿದೆ. ಗರ್ಭಕಂಠ ಕ್ಯಾನ್ಸರ್ ತಡೆಗಾಗಿ ದೇಶಾದ್ಯಂತ 9-14 ವರ್ಷದೊಳಗಿನ ಬಾಲಕಿಯರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು (Cervical Cancer Vaccine) ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್ (Budget 2024) ಮಂಡಿಸುವ ವೇಳೆ ಘೋಷಣೆ ಮಾಡಿದ್ದಾರೆ.
Welcome #government announcement for #freeCervicalCancerVaccine free for 9 to 14 years girls, All Cervical vaccines protect against at least HPV types 16 and 18, which cause the greatest risk of cervical cancer. It is estimated that HPV vaccines may prevent 70% of cervical… pic.twitter.com/3yxwYmJJQQ
— Dr D K GUPTA (@drdkgupta) February 1, 2024
ಈಗ ಗರ್ಭಕಂಠ ಕ್ಯಾನ್ಸರ್ ನಿರೋಧಕ ವ್ಯಾಕ್ಸಿನ್‌ಗೆ 3 ಸಾವಿರ ರೂ. ಇದೆ. ಇನ್ನುಮುಂದೆ ಶಾಲೆಗಳ ಮೂಲಕವೇ ಬಾಲಕಿಯರಿಗೆ ಉಚಿತವಾಗಿ ಕ್ಯಾನ್ಸರ್ ನಿರೋಧಕ ಲಸಿಕೆ ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರ ನೀಡುವ ಲಸಿಕೆಯು ಶೇ.70ರಷ್ಟು ಪರಿಣಾಮಕಾರಿಯಾಗಿದ್ದು, ಹೆಣ್ಣುಮಕ್ಕಳು ಗರ್ಭಕಂಠ ಕ್ಯಾನ್ಸರ್‌ಗೆ ತುತ್ತಾಗುವುದರಿಂದ ತಡೆಗಟ್ಟುತ್ತದೆ.
ಆರೋಗ್ಯ ಕ್ಷೇತ್ರಕ್ಕೆ ನೀಡಿದ ಪ್ರಮುಖ ಕೊಡುಗೆಗಳು…
- ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ
- ಈಗಿರುವ ಆಸ್ಪತ್ರೆ ಮೂಲ ಸೌಕರ್ಯಗಳನ್ನು, ವಿಭಾಗಗಳನ್ನು ಬಳಸಿಕೊಂಡು ಹೆಚ್ಚಿನ ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆ. ಇದಕ್ಕಾಗಿ ಹೊಸ ಸಮಿತಿ ರಚನೆ
- ಸಕ್ಷಮ ಅಂಗನವಾಡಿ ಹಾಗೂ ಪೋಷಣ್ 2.0 ಯೋಜನೆ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನ. ಮಕ್ಕಳಲ್ಲಿ ಪೌಷ್ಟಿಕಾಂಶ ವೃದ್ಧಿ, ಮಕ್ಕಳ ಆರೈಕೆಗೆ ಹೆಚ್ಚಿನ ಒತ್ತು.
- ಇಂದ್ರಧನುಷ್ ಯೋಜನೆ ಅಡಿಯಲ್ಲಿ ಪೌಷ್ಟಿಕಾಂಶ, ರೋಗ ನಿರೋಧಕ ವೃದ್ಧಿಗಾಗಿ ಯು-ವಿನ್ (U-Win) ವೇದಿಕೆ ರಚನೆ
ಇದನ್ನೂ ಓದಿ: LPG Price Hike: ಬಜೆಟ್ ದಿನವೇ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಶಾಕ್, ಬೆಂಗಳೂರಿನಲ್ಲಿ ಇಷ್ಟಾಗಿದೆ ದರ