ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು 2024-25ನೇ ಸಾಲಿಗೆ ಮಧ್ಯಂತರ ಬಜೆಟ್ (Interim Budget 2024) ಅನ್ನು ಫೆಬ್ರವರಿ 1ರಂದು ಮಂಡಿಸಲು ಅಣಿಯಾಗಿದ್ದಾರೆ. ಸಾರ್ವತ್ರಿಕ ಚುನಾವಣೆಯ (Lok Sabha Election) ವರ್ಷವಾಗಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಬಜೆಟ್ ಮಂಡಿಸದೇ ಕೇವಲ ಲೇಖಾನುದಾನವನ್ನು ಪಡೆದುಕೊಳ್ಳಲಾಗುತ್ತಿದೆ. ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಜುಲೈನಲ್ಲಿ ಪೂರ್ಣ ಪ್ರಮಾಣದಲ್ಲಿ ಬಜೆಟ್ ಮಂಡಿಸಲಾಗುತ್ತದೆ.
ಈ ಸಾಲಿನ ಮಧ್ಯಂತರ ಬಜೆಟ್ ಮಂಡಿಸುವ ಮೂಲಕ ನಿರ್ಮಲಾ ಸೀತಾರಾಮನ್ ಅವರು ಸತತ ಆರನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ದೇಶದ ಎರಡನೇ ವಿತ್ತ ಮಂತ್ರಿಯಾಗಲಿದ್ದಾರೆ. ಈ ಮೊದಲು ಮೊರಾರ್ಜಿ ದೇಸಾಯಿ ಅವರು ಸತತ 6 ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ್ದರು. ಈ ಬಜೆಟ್ ಮಂಡನೆ ಲೈವ್ ವೀಕ್ಷಣೆ ಮಾಡಬಹುದು(Live Telecast). ಆ ಬಗ್ಗೆ ಇಲ್ಲಿದೆ ಮಾಹಿತಿ.
ಮಧ್ಯಂತ ಬಜೆಟ್ ಮಂಡನೆ ಯಾವಾಗ?
2024-25ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು, ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
ಬಜೆಟ್ ಲೈವ್ ವೀಕ್ಷಣೆ ಹೇಗೆ?
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಿಸಲಿದ್ದು, ಅವರ ಭಾಷಣವನ್ನು ದೂರದರ್ಶನದಲ್ಲಿ ಲೈವ್ ಪ್ರಸಾರ ಮಾಡಲಾಗುತ್ತದೆ. ಅಧಿಕೃತ ಚಾನೆಲ್‌ಗಳಾದ ಸಂಸದ್ ಟಿವಿಯಲ್ಲೂ ಪ್ರಸಾರವಿರುತ್ತದೆ. ಹಾಗೆಯೇ ಈ ಟಿವಿಗಳ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲೂ ಲೈವ್ ಟೆಲಿಕಾಸ್ಟ್ ಇರುತ್ತದೆ. ಲೈವ್ ಟೆಲಿಕಾಸ್ಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬಜೆಟ್ ನಿಮ್ಮ ಕೈಯಲ್ಲಿ ಸಿಗಲಿದೆ
ನೀವು ಮಧ್ಯಂತರ ಬಜೆಟ್ ಅನ್ನು ದಾಖಲೆಗಳನ್ನು ಕಾಗದರಹಿತ ರೂಪದಲ್ಲಿ ಪಡೆದುಕೊಳ್ಳಬಹುದು. ಅಂದರೆ, ಯೂನಿಯನ್ ಬಜೆಟ್ ಮೊಬೈಲ್ ಆ್ಯಪ್ ಮೂಲಕ ಸಾಫ್ಟ್ ಕಾಪಿ ಪಡೆದುಕೊಳ್ಳಬಹುದು. ವಾರ್ಷಿಕ ಹಣಕಾಸು ಮುಂಗಡ ಪತ್ರ, ಅನುದಾನ ಬೇಡಿಕೆ, ಹಣಕಾಸು ವಿಧೇಯಕ ಸೇರಿದಂತೆ ಎಲ್ಲ ದಾಖಲೆ ಪತ್ರಗಳನ್ನು ಸಾಫ್ಟ್ ಕಾಪಿಯ ರೂಪದಲ್ಲಿ ಸಿಗುತ್ತದೆ. ಈ ಆ್ಯಪ್ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. www.indiabudget.gov.in ಮೂಲಕವು ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ, ಸಚಿವರ ಭಾಷಣ ಮುಗಿದ ಬಳಿಕಷವಷ್ಟೇ ಲಭ್ಯವಾಗಲಿವೆ.
ಈ ಸುದ್ದಿಯನ್ನೂ ಓದಿ: Budget 2024: ವಿತ್ತ ಸಚಿವೆ ಸೀತಾರಾಮನ್ ಬ್ರೀಫ್‌ಕೇಸ್ ಬಿಟ್ಟು ಕೆಂಪು ಬಣ್ಣದ ‘ವಹಿ ಖಾತಾ’ ಬಳಸಿದ್ದು ಏಕೆ?