Site icon Vistara News

ಬರೋಡಾ ಮಹಿಳೆಯರ ಕ್ರಿಕೆಟ್‌ ತಂಡ ಪ್ರಯಾಣಿಸುತ್ತಿದ್ದ ಬಸ್‌ ಅಪಘಾತ, ನಾಲ್ವರಿಗೆ ಗಾಯ

baroda

ವಿಶಾಖಪಟ್ಟಣ: ಬರೋಡಾದ ಮಹಿಳೆಯರ ಕ್ರಿಕೆಟ್‌ ತಂಡ ಪ್ರಯಾಣಿಸುತ್ತಿದ್ದ ಬಸ್‌ ಅಪಘಾತಕ್ಕೀಡಾಗಿದ್ದು, ನಾಲ್ವರು ಆಟಗಾರರು ಗಾಯಗೊಂಡಿದ್ದಾರೆ.

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ಅಪಘಾತ ಸಂಭವಿಸಿದೆ. ಬಸ್‌ಗೆ ಟ್ರಕ್ಕೊಂದು ಡಿಕ್ಕಿಯಾಗಿದೆ. ನಾಲ್ವರು ಆಟಗಾರರು ಹಾಗೂ ಟೀಮ್‌ ಮ್ಯಾನೇಜರ್‌ ಗಾಯಗೊಂಡಿದ್ದಾರೆ.

ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಇಂಡಿಯಾ ಸೀನಿಯರ್ಸ್‌ ಮಹಿಳಾ ಟಿ20 ಟ್ರೋಫಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಬರೋಡಾ ಮಹಿಳೆಯರ ತಂಡ, ಪಂದ್ಯಾಟ ಮುಗಿಸಿ ಏರ್‌ಪೋರ್ಟ್‌ನತ್ತ ತೆರಳುತ್ತಿತ್ತು. ಮುಂಬಯಿ ಮಹಿಳೆಯರ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಬರೋಡಾ ತಂಡ ಸೋತಿತ್ತು.

ಏರ್‌ಪೋರ್ಟ್‌ನತ್ತ ತೆರಳುವ ತಾಟಿಚೆಟ್ಲಪಾಲೆಂ ಹೈವೇಯಲ್ಲಿ ಲಾರಿಯೊಂದು ಬಸ್‌ಗೆ ಗುದ್ದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ | ಚಲಿಸುತ್ತಿದ್ದ ಕಾರಿಗೆ ಅಡ್ಡ ಬಂದ ಕುದುರೆ ಸಾವು: ಅಪಘಾತದಲ್ಲಿ ಕೃಷಿ ಅಧಿಕಾರಿಗೆ ಗಾಯ

Exit mobile version