ನವದೆಹಲಿ: ಪ್ರಸ್ತುತ ಲೋಕಸಭೆ(Lok Sabha Election 2024) ಅವಧಿ ಪೂರ್ಣಗೊಳ್ಳುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಇಂದು ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗೆ ಸಲಿಸಿದ್ದಾರೆ. ಇದಕ್ಕೂ ಮುನ್ನ ತಮ್ಮ ಸಚಿವ ಸಂಪುಟ ಸಭೆ(Cabinet Meeting) ನಡೆಸಿದ ಪ್ರಧಾನಿ ಮೋದಿ, ನಿರ್ಗಮಿತ ಸಚಿವರಿಗೆ ಕಿವಿಮಾತು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಇದ್ದಿದ್ದೆ. ಅದರ ಬಗ್ಗೆ ಜಾಸ್ತಿ ತಲೆಗೆಡಿಸಿಕೊಳ್ಳದೇ ಕರ್ತವ್ಯದ ಕಡೆ ಗಮನ ಹರಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ಮೊದಲ ಬಾರಿಗೆ ಕ್ಯಾಬಿನೆಟ್ ಮಂತ್ರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಂಬರ್ ಗೇಮ್ ರಾಜಕೀಯ ಜೀವನದ ಒಂದು ಭಾಗವಾಗಿದೆ. ಉತ್ತಮ ಕೆಲಸ ಮಾಡುವುದು ಮುಖ್ಯ. ಸಂಖ್ಯೆಗಳ ಆಟ ಮುಂದುವರಿಯುತ್ತದೆ. ರಾಜಕೀಯ ಅಂಕಿ-ಅಂಶಗಳ ಹೊರತಾಗಿಯೂ ನಾಯಕರು ದೇಶ ಮತ್ತು ಅದರ ನಾಗರಿಕರಿಗಾಗಿ ಕೆಲಸ ಮಾಡಬೇಕು. 10 ವರ್ಷಗಳಿಂದ ಉತ್ತಮ ಕೆಲಸ ಮಾಡಲಾಗಿದೆ. ಅದನ್ನು ಮುಂದಕ್ಕೆ ಕೊಂಡೊಯ್ಯಬೇಕು ಎಂದರು.
ಸೋಲು ಮತ್ತು ಗೆಲುವುಗಳು ರಾಜಕೀಯದ ಒಂದು ಭಾಗವಷ್ಟೇ ಎಂದ ಪ್ರಧಾನಿ, ನಾವು ಕಳೆದ 10 ವರ್ಷಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದೇವೆ. ಅದನ್ನು ನಾವು ಮುಂದುವರಿಸುತ್ತೇವೆ ಎಂದರು. ಸತತ ಮೂರನೇ ಅವಧಿಗೆ ಎನ್‌ಡಿಎ ಸರ್ಕಾರ ರಚನೆಗೆ ಅವಕಾಶ ನೀಡಿರುವ ಲೋಕಸಭೆ ಚುನಾವಣೆ ಫಲಿತಾಂಶವನ್ನು ಶ್ಲಾಘಿಸಿದ ಅವರು, ಇದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ದಿಗ್ವಿಜಯ ಎಂದು ಬಣ್ಣಿಸಿದರು.
ಕಳೆದ ಹತ್ತು ವರ್ಷಗಳಿಂದ ತಮ್ಮ ಶಕ್ತಿಮೀರಿ ಕೆಲಸ ಮಾಡಿದ ಕೇಂದ್ರ ಸಚಿವರಿಗೆ ಧನ್ಯವಾದ ಹೇಳಿದರು. “ಆಡಳಿತಾರೂಢ ಸರ್ಕಾರವು ಎಲ್ಲ ಕಡೆಯೂ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಿದೆ. ಇದನ್ನು ಭವಿಷ್ಯದಲ್ಲಿ ಕೂಡ ಮುಂದುವರಿಸುತ್ತೇವೆ. ನೀವೆಲ್ಲರೂ ಬಹಳ ಕಠಿಣ ಶ್ರಮಪಟ್ಟಿದ್ದೀರಿ” ಎಂದು ಹೊಗಳಿದರು.
The Cabinet, in its today's meeting, has advised the President to dissolve the 17th Lok Sabha with immediate effect. The President has accepted the advice of the Cabinet and signed the order dissolving the 17th Lok Sabha. pic.twitter.com/5FNUmiOTFS
— ANI (@ANI) June 5, 2024
ಲೋಕಸಭಾ ಚುನಾವಣೆ (Election Results 2024)ಯ ಅಚ್ಚರಿಯ ಫಲಿತಾಂಶ ಹಲವು ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಿದೆ. ಈಗಾಗಲೇ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸರ್ಕಾರ ರಚಿಸುವುದಾಗಿ ಘೋಷಿಸಿದ್ದು, ಇದಕ್ಕಾಗಿ ಸಿದ್ಧತೆ ಆರಂಭವಾಗಿದೆ. ಇದೀಗ ಕಿಂಗ್ ಮೇಕರ್ ಆಗಿ ಹೊರ ಹೊಮ್ಮಿರುವ ತೆಲುಗು ದೇಶಂ ಪಕ್ಷ (TDP)ದ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು (N Chandrababu Naidu) ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಪುನರುಚ್ಚರಿಸಿದ್ದಾರೆ. ಎನ್‌ಡಿಎ ಜತೆಗೆ ಕೆಲಸ ಮಾಡಿದ್ದರಿಂದ ಗೆಲುವು ಸಾಧಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:PM Narendra Modi: “ದೇವರೇ ನಿಮ್ಮನ್ನು ಆಯ್ಕೆ ಮಾಡಿದ್ದಾನೆ”- ಅಮೆರಿಕನ್ ಗಾಯಕಿ ಮೇರಿ ಮಿಲ್ಬೆನ್ ಅಭಿನಂದನೆ