Site icon Vistara News

Israel Palestine war: ಗಾಜಾ ಪಟ್ಟಿಯಿಂದ ಭಾರತೀಯರನ್ನು ವಾಪಸ್ ಕರೆ ತರುವುದು ಕಷ್ಟ! ಕೇಂದ್ರ ಸರ್ಕಾರ ಅಸಹಾಯಕ

Arindam Bagchi

ನವದೆಹಲಿ: ಆಪರೇಷನ್ ಅಜಯ್ (Operation Ajay) ಹೆಸರಿನಲ್ಲಿ ಇಸ್ರೇಲ್‌ನಲ್ಲಿರುವ ಭಾರತೀಯ ಪ್ರಜೆಗಳನ್ನು (Indian Citizens) ಕೇಂದ್ರ ಸರ್ಕಾರವು (Central Government) ಯಶಸ್ವಿಯಾಗಿ ತಾಯ್ನಾಡಿಗೆ ಯಶಸ್ವಿಯಾಗಿ ಕರೆ ತರುತ್ತಿದೆ. ಆದರೆ, ಅದೇ ಪ್ಯಾಲೆಸ್ತೀನ್‌ಲ್ಲಿರುವ ಭಾರತೀಯರನ್ನು ಸದ್ಯಕ್ಕೆ ಕರೆ ತರುವುದು ಕಷ್ಟ ಎಂದು ಸರ್ಕಾರ ಕೈ ಚೆಲ್ಲಿದೆ. ಯುದ್ಧಪೀಡಿತ ಗಾಜಾ ಪಟ್ಟಿಯಲ್ಲಿ (Gaza Strip) ಸದ್ಯಕ್ಕೆ ನಾಲ್ವರು ಭಾರತೀಯರಿದ್ದಾರೆ. ಆದರೆ, ಅವರ ಸ್ಥಳಾಂತರಕ್ಕೆ ಕಾಲ ಇನ್ನೂ ಪಕ್ವವಾಗಿಲ್ಲ. ಹಾಗಿದ್ದೂ ದೊರೆಯುವ ಮೊದಲ ಅವಕಾಶದಲ್ಲೇ ಅವರನ್ನು ಕರೆ ತರಲಾಗುವುದು ಎಂದ ವಿದೇಶಾಂಗ ಸಚಿವಾಲಯವು ತಿಳಿಸಿದೆ(Israel Palestine War).

ಗಾಜಾದಲ್ಲಿನ ಪರಿಸ್ಥಿತಿಯು ಯಾವುದೇ ಸ್ಥಳಾಂತರಕ್ಕೆ ಪೂರಕವಾಗಿಲ್ಲ, ಪರಿಸ್ಥಿತಿ ಗಂಭೀರವಾಗಿದೆ. ಆದರೆ ನಮಗೆ ಅವಕಾಶ ಸಿಕ್ಕರೆ, ನಾವು ಅಲ್ಲಿರುವ ಭಾರತೀಯ ಪ್ರಜೆಗಳನ್ನು ಕರೆ ತರುತ್ತೇವೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಭರವಸೆ ನೀಡಿದ್ದಾರೆ.

ಪ್ಯಾಲೆಸ್ತೀನ್‌ನಲ್ಲಿರುವ ನಾಲ್ವರು ಭಾರತೀಯರ ಪೈಕಿ ಒಬ್ಬರು ವೆಸ್ಟ್‌ ಬ್ಯಾಂಕ್‌ನಲ್ಲಿದ್ದಾರೆ. ಅಲ್ಲದೇ, ಇಸ್ರೇಲ್-ಹಮಾಸ್ ನಡುವಿನ ಸೇನಾ ಸಂಘರ್ಷದಲ್ಲೇ ಭಾರತೀಯರು ಮೃತಪಟ್ಟ ಯಾವುದೇ ವರದಿಗಳಿಲ್ಲ. ಅಲ್ಲದೇ, ಇಸ್ರೇಲ್‌ ಮೇಲಿನ ದಾಳಿಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: ಇಸ್ರೇಲ್ ವೈಮಾನಿಕ ದಾಳಿ; ಹಮಾಸ್ ನಾಯಕ, ಪ್ಯಾಲೆಸ್ತೀನ್ ಭದ್ರತಾ ಪಡೆ ಕಮಾಂಡರ್ ಜೆಹಾದ್ ಮೈಸೆನ್ ಸಾವು

ದಕ್ಷಿಣ ಇಸ್ರೇಲ್‌ನ ಅಶ್ಕೆಲೋನ್‌ನಲ್ಲಿರುವ ಒಬ್ಬ ಭಾರತೀಯ ಮಹಿಳೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಗಾಯಗೊಂಡಿದ್ದಾರೆ ಎಂಬ ವರದಿ ಇದೆ. ಸಬ್ಬತ್ ಮತ್ತು ಯಹೂದಿಗಳ ರಜಾದಿನವಾದ ಅಕ್ಟೋಬರ್ 7 ರಂದು ಹಮಾಸ್ ರಾಕೆಟ್‌ಗಳ ಸುರಿಮಳೆಗೈಯುವಾಗ ಈ ಮಹಿಳೆ ತನ್ನ ಪತಿಯೊಂದಿಗೆ ವೀಡಿಯೊ ಕರೆಯಲ್ಲಿದ್ದಳು ಎಂದು ತಿಳಿದು ಬಂದಿದೆ.

ನೀವು ಪ್ರಧಾನಿಯವರ ಟ್ವೀಟ್ ನೋಡಿದ್ದೀರಿ. ಪ್ರಧಾನಿ ನಾಗರಿಕರ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಭಾರತವು ಎಲ್ಲಾ ರೀತಿಯ ಹಿಂಸಾಚಾರವನ್ನು ಖಂಡಿಸುತ್ತದೆ. ಪ್ಯಾಲೆಸ್ತೀನ್ ವಿಷಯದ ಬಗ್ಗೆ ಭಾರತದ ನಿಲವು ಸ್ಪಷ್ಟವಿದೆ. ಪರಿಹಾರಕ್ಕಾಗಿ ಎರಡು ಕಡೆಯಿಂದಲೇ ನೇರ ಮಾತುಕತೆ ನಡೆಸಬೇಕು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ವಕ್ತಾರರು ತಿಳಿಸಿದರು. ಇದೇ ವೇಳೆ, ಯಾವುದೇ ರೂಪದ ಭಯೋತ್ಪಾದನೆಯನ್ನು ಮಟ್ಟ ಹಾಕಲು ಅಂತಾರಾಷ್ಟ್ರೀಯ ಸಮುದಾಯ ಒಂದಾಗಬೇಕು ಎಂದು ಅವರು ಒತ್ತಾಯಿಸಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version