Site icon Vistara News

Caste Name on Vehicle : ಕಾರುಗಳ ಮೇಲೆ ಮಿಂಚುತ್ತಿವೆ ಜಾತಿ ಹೆಸರು; ಫೋಟೋ ಹಾಕಿ ತೆಗಳಿದ ವಕೀಲೆ

#image_title

ನವದೆಹಲಿ: ಸಂಚಾರ ಸುಲಭವಾಗಲೆಂದು ಕೊಂಡುಕೊಳ್ಳುವ ವಾಹನಗಳ ಮೇಲೆ ಜಾತಿ ಹೆಸರು (Caste Name on Vehicle) ಹಾಕಿಕೊಂಡು ಮೆರೆಯುವವರನ್ನು ನೀವು ನೋಡಿರುತ್ತೀರಿ. ಕರ್ನಾಟಕದಲ್ಲಿ ಇದು ಸಾಮಾನ್ಯವಾಗಿದೆಯಾದರೂ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಇದಕ್ಕೆ ಮನ್ನಣೆ ಇಲ್ಲ. ಜಾತಿ ಹೆಸರನ್ನು ಗಾಡಿ ಮೇಲೆ ಬರೆಸಿದರೆ ಅವರಿಗೆ ದಂಡವನ್ನೂ ಹಾಕಲಾಗುತ್ತದೆ. ಆದರೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ರೀತಿಯ ಯಾವುದೇ ಕ್ರಮ ಇಲ್ಲದ ಹಿನ್ನೆಲೆ ಅಲ್ಲಿನ ವಾಹನಗಳ ಮೇಲೆ ಜಾತಿ ಹೆಸರು ಕಾಣಬಹುದು. ಅಂತದ್ದೇ ಒಂದು ಪೋಸ್ಟ್‌ ಅನ್ನು ವಕೀಲೆ ಒಬ್ಬರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.‌

ಇದನ್ನೂ ಓದಿ: Brahmin cookies: ಬಿಸ್ಕಿಟ್​ ಮೇಲೆ ಬ್ರಾಹ್ಮಣ ವಟುವನ್ನು ಚಿತ್ರಿಸಿದ ಬೇಕರಿ; ಜಾತಿ ಇಲ್ಲೂ ಬಂತಾ ಎಂದು ನೆಟ್ಟಿಗರ ಅಸಮಾಧಾನ

ಒಂದು ಕಾರಿನ ಮೇಲೆ “ಬ್ರಾಹ್ಮಣ”, ಇನ್ನೊಂದು ಕಾರಿನ ಮೇಲೆ “ಜಾಟ್‌” ಎಂದು ಬರೆದಿರುವ ಎರಡು ಫೋಟೋಗಳನ್ನು ವಕೀಲೆ ಸ್ವಾತಿ ಖನ್ನಾ ಅವರು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಭಾರತೀಯರು ಮತ್ತು ಅವರ ನಿಷ್ಪ್ರಯೋಜಕ ಜಾತಿಯ ಗೀಳು. ಈ ಜನರಿಗೆ ಇನ್ನೂ ಯಾವುದೇ ದಂಡಗಳನ್ನು ಹಾಕುತ್ತಿಲ್ಲವೇ?” ಎಂದು ಆಕೆ ಕ್ಯಾಪ್ಶನ್‌ನಲ್ಲಿ ಪ್ರಶ್ನಿಸಿದ್ದಾರೆ.


ಸ್ವಾತಿ ಅವರ ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. “ಈ ರೀತಿ ಜಾತಿ ಹೆಸರು ಹಾಕುವ ಬದಲು ಅವರ ಕುಟುಂಬದಲ್ಲಿನ ಹೆಣ್ಣು ಮಕ್ಕಳು ಪಡೆದಿರುವ ಹೈಯಸ್ಟ್‌ ಡಿಗ್ರಿ ಯಾವುದೆಂದು ಹಾಕಿಸಿಕೊಂಡರೆ ಬೇರೆಯವರಿಗೂ ಅವರ ಮೌಲ್ಯ ತಿಳಿಯುತ್ತದೆ” ಎಂದು ಒಬ್ಬ ನೆಟ್ಟಿಗ ಹೇಳಿದ್ದಾನೆ. ಬೆಂಗಳೂರಿನ ಹಲವರು ಇಲ್ಲಿನ ಜಾತಿ ಹೆಸರು ಅಂಟಿಕೊಂಡಿರುವ ಹೋಟೆಲ್‌ಗಳ ಫೋಟೋಗಳನ್ನು ತೆಗೆದು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಅನೇಕರು ಅನೇಕ ರೀತಿಯ ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.

Exit mobile version