Site icon Vistara News

VISTARA TOP 10 NEWS : ಮತ್ತೆ ಕಾವೇರಿ ಜಲಾಘಾತ; ಸಿಎಂಗೆ 508 ಕೋಟಿ ರೂ. ಲಂಚ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Top news for tuesday

1. ರಾಜ್ಯಕ್ಕೆ ಮತ್ತೆ ಕಾವೇರಿ ಜಲಾಘಾತ; ಇನ್ನು 20 ದಿನ ನಿರಂತರ ನೀರು ಹರಿಸಲು ಪ್ರಾಧಿಕಾರ ಸೂಚನೆ
ನವದೆಹಲಿ: 
ಕಾವೇರಿ ಜಲ ವಿವಾದದಲ್ಲಿ (Cauvery Dispute) ರಾಜ್ಯಕ್ಕೆ ಮತ್ತೆ ಹೊಡೆತ ಬಿದ್ದಿದೆ. ರಾಜ್ಯದಲ್ಲಿ ನೀರಿಗೆ ಹಾಹಾಕಾರ ಕಾಣಿಸಿಕೊಂಡಿರುವ ನಡುವೆಯೇ ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery Water regulation Committee) ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಮತ್ತೆ 2600 ಕ್ಯೂಸೆಕ್ ನೀರು ಬಿಡಲು ಶಿಫಾರಸು ಮಾಡಿರುವ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority) ಎತ್ತಿ ಹಿಡಿದಿದೆ. ಪೂರ್ಣ ಸುದ್ದಿಗೆ ಈ ಸುದ್ದಿ ಲಿಂಕ್​ ಕ್ಲಿಕ್ ಮಾಡಿ.

2. ಬೆಟ್ಟಿಂಗ್‌ ಆ್ಯಪ್‌ನಿಂದ ಕಾಂಗ್ರೆಸ್‌ ಸಿಎಂಗೆ 508 ಕೋಟಿ ರೂ. ಲಂಚ; ಇ.ಡಿ ಸ್ಫೋಟಕ ಹೇಳಿಕೆ
ರಾಯ್‌ಪುರ: ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಗೆ (Chhattisgarh Polls) ಕೆಲವೇ ದಿನಗಳು ಬಾಕಿ ಇರುವ ಮಧ್ಯೆಯೇ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರಿಗೆ ಸಂಕಷ್ಟ ಎದುರಾಗಿದೆ. ಮಹಾದೇವ್‌ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್ ಪ್ರಮೋಟರ್‌ಗಳಿಂದ (Mahadev Betting App Promoters) ಇದುವರೆಗೆ ಭೂಪೇಶ್‌ ಬಘೇಲ್‌ (Bhupel Bhaghel) ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಹೇಳಿದ್ದಾರೆ. ಚುನಾವಣೆ ಹೊತ್ತಿನಲ್ಲೇ ಇ.ಡಿ ಪ್ರಸ್ತಾಪಿಸಿದ ವಿಷಯವೀಗ ಚರ್ಚೆಗೆ ಗ್ರಾಸವಾಗಿದೆ. ಪೂರ್ಣ ಸುದ್ದಿಗೆ ಈ ಸುದ್ದಿ ಲಿಂಕ್​ ಕ್ಲಿಕ್ ಮಾಡಿ.

3. ನಾಳೆ ವಿಸ್ತಾರ ಕನ್ನಡ ಸಂಭ್ರಮ; 15 ಗಂಟೆ ನಾನ್‌ಸ್ಟಾಪ್‌ ಕಾರ್ಯಕ್ರಮ
ಬೆಂಗಳೂರು: ಹೊಸತನಗಳ ಮೂಲಕ ಒಂದೇ ವರ್ಷದಲ್ಲಿ ಮನೆಮಾತಾದ ನಾಡಿನ ಜನಪ್ರಿಯ ಮಾಧ್ಯಮ ಸಂಸ್ಥೆ ವಿಸ್ತಾರ ನ್ಯೂಸ್‌ (Vistara News) ಆಯೋಜಿಸಿರುವ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮ (Vistara Kannada Sambhrama) ನವೆಂಬರ್‌ 4ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ (Ravindra Kalakshetra) ಅದ್ಧೂರಿಯಾಗಿ ನಡೆಯಲಿದೆ. ನಾಡಿನ ಎಲ್ಲ ಸಹೃದಯರನ್ನು ವಿಸ್ತಾರ ನ್ಯೂಸ್‌ ಆಡಳಿತ ಮಂಡಳಿ ಈ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಆಹ್ವಾನಿಸಿದೆ. ಪೂರ್ಣ ಸುದ್ದಿಗೆ ಈ ಸುದ್ದಿ ಲಿಂಕ್​ ಕ್ಲಿಕ್ ಮಾಡಿ.

4. ನಾನೇ 5 ವರ್ಷ ಸಿಎಂ ಹೇಳಿಕೆಗೆ ಯು ಟರ್ನ್‌ ಹೊಡೆದ ಸಿದ್ದರಾಮಯ್ಯ!
ಗದಗ: ಮುಂದಿನ ಐದು ವರ್ಷ ನಾನೇ ಸಿಎಂ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಯು ಟರ್ನ್ ಹೊಡೆದಿದ್ದಾರೆ. ನಾನು ನಿನ್ನೆ ಏನು ಹೇಳಿದ್ದೆ? ಹೈಕಮಾಂಡ್ ಹೇಳಿದರೆ ಅದಕ್ಕೆ ಬದ್ಧವಾಗಿರುತ್ತೇವೆ ಎಂದು ಹೇಳಿದ್ದೇನೆ. ಆದರೆ, ನೀವು (ಮಾಧ್ಯಮದವರು) ನಾನೊಂದು ಹೇಳಿದರೆ ನೀವೊಂದು ಬರೆಯುತ್ತೀರಿ ಎಂದು ಹರಿಹಾಯ್ದರು. ಗದಗಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದು ಹೈಕಮಾಂಡ್‌ (Congress High Command) ಪಕ್ಷವಾಗಿದೆ. ಹೈಕಮಾಂಡ್‌ ಹೇಳಿದ್ದಕ್ಕೆ ಬದ್ಧವಾಗಿರುತ್ತೇವೆ ಎಂದು ನಾನು ಹೇಳಿದ್ದು. ಆದರೆ, ನಾನೊಂದು ಹೇಳಿದರೆ ನೀವೊಂದು ಬರೆಯುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೂರ್ಣ ಸುದ್ದಿಗೆ ಈ ಸುದ್ದಿ ಲಿಂಕ್​ ಕ್ಲಿಕ್ ಮಾಡಿ.

5. ಹೈಕಮಾಂಡ್‌ ಸೂಚನೆ ಮೀರಿ ಮಾತನಾಡಿದವರಿಗೆಲ್ಲ ನೋಟಿಸ್: ಡಿ.ಕೆ. ಶಿವಕುಮಾರ್
ಬೆಂಗಳೂರು: ಈಗಾಗಲೇ ಪಕ್ಷಕ್ಕೆ (Congress Karnataka) ಹಾಗೂ ಅಧಿಕಾರಕ್ಕೆ ಸಂಬಂಧಪಟ್ಟಂತೆ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್‌ (Congress High Command) ನಾಯಕರು ಹೇಳಿದ್ದಾರೆ. ಈಗ ಯಾರು ಯಾರು ಪಕ್ಷದ ಸೂಚನೆ ಮೀರಿ ಮಾತನಾಡಿದ್ದಾರೋ ಅವರೆಲ್ಲರಿಗೂ ನೋಟಿಸ್ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ (KPCC president and Deputy CM DK Shivakumar) ಅವರು ಎಚ್ಚರಿಕೆಯ ಸಂದೇಶ ನೀಡಿದರು. ಕೆಲವು ಶಾಸಕರು ನಿಮ್ಮ ಪರವಾಗಿ ಲಾಬಿ ಮಾತುಗಳನ್ನಾಡುತ್ತಿದ್ದಾರೆ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ಯಾರು ಯಾರು ಮಾತನಾಡಿದ್ದಾರೋ ಅವರೆಲ್ಲರಿಗೂ ನೋಟಿಸ್‌ ನೀಡಲಾಗುವುದು ಎಂದು ಉತ್ತರಿಸಿದರು. ಪೂರ್ಣ ಸುದ್ದಿಗೆ ಈ ಸುದ್ದಿ ಲಿಂಕ್​ ಕ್ಲಿಕ್ ಮಾಡಿ.

6. ರಾಮನನ್ನು ಹೊತ್ತು ತಂದು ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಿದ್ದಾರೆ ಮೋದಿ!
ನವದೆಹಲಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗುತ್ತಿದೆ. ಜನವರಿ 22ರಂದು ರಾಮಮಂದಿರ ಲೋಕಾರ್ಪಣೆಯಾಗಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಇನ್ನು, ಇದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರೇ ತಾತ್ಕಾಲಿಕವಾಗಿ ನಿರ್ಮಿಸಿರುವ ದೇವಾಲಯದಿಂದ ರಾಮಮಂದಿರದವರೆಗೆ ರಾಮಲಲ್ಲಾ ಮೂರ್ತಿಯನ್ನು ಹೊತ್ತು ತಂದು, ಪ್ರತಿಷ್ಠಾಪನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಈ ಸುದ್ದಿ ಲಿಂಕ್​ ಕ್ಲಿಕ್ ಮಾಡಿ.

7. ಸ್ತ್ರೀಯರಿಗೆ 12 ಸಾವಿರ ರೂ., 500 ರೂ.ಗೆ ಎಲ್‌ಪಿಜಿ ಸಿಲಿಂಡರ್; ಇದು ‘ಮೋದಿ’ ಗ್ಯಾರಂಟಿ
ರಾಯ್‌ಪುರ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ (Chhattisgarh Polls) ದಿನಗಣನೆ ಆರಂಭವಾಗಿದ್ದು, ಎಲ್ಲ ಪಕ್ಷಗಳೂ ರಣತಂತ್ರ ರೂಪಿಸುತ್ತಿವೆ. ಅದರಲ್ಲೂ, ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ರಾಜ್ಯದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹಲವು ಭರವಸೆಗಳನ್ನು ನೀಡಿದ್ದಾರೆ. ಪ್ರಣಾಳಿಕೆಗೆ ‘ಮೋದಿ ಕಿ ಗ್ಯಾರಂಟಿ 2023’ (Modi ki Guarantee 2023) ಎಂದು ಕರೆದಿದ್ದು, ಮಹಿಳೆಯರಿಗೆ ವಾರ್ಷಿಕ 12 ಸಾವಿರ ರೂ., 18 ಲಕ್ಷ ಮನೆ ನಿರ್ಮಾಣ ಸೇರಿ ಹಲವು ಭರವಸೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಈ ಸುದ್ದಿ ಲಿಂಕ್​ ಕ್ಲಿಕ್ ಮಾಡಿ.

8. ಡಚ್ಚರನ್ನು ಮಣಿಸಿ ಪಾಕ್​ ಹಿಂದಿಕ್ಕಿದ ಆಫ್ಘನ್​​; ಸೆಮಿಗೆ ಇನ್ನೆರಡು ಹೆಜ್ಜೆ ಬಾಕಿ
ಲಕ್ನೋ: ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಅಫಘಾನಿಸ್ತಾನ(NED vs AFG) ತಂಡ ನೆದರ್ಲೆಂಡ್ಸ್​ ವಿರುದ್ಧ 7 ವಿಕೆಟ್​ಗಳ ಗೆಲುವು ಸಾಧಿಸಿ ಸೆಮಿಫೈನಲ್​ ಸನಿಹಕ್ಕೆ ಬಂದು ನಿಂತಿದೆ. ಇದು ಆಡಿದ 7 ಪಂದ್ಯಗಳಲ್ಲಿ ಆಫ್ಘನ್​ಗೆ ಒಲಿದ 4ನೇ ಗೆಲುವಾಗಿದೆ. ಈ ಗೆಲುವಿನೊಂದಿಗೆ ಆಫ್ಘನ್​ ಅಂಕಪಟ್ಟಿಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದೆ. ಇನ್ನುಳಿದ 2 ಪಂದ್ಯಗಳನ್ನು ಗೆದ್ದರೆ ಸೆಮಿ ಟಿಕೆಟ್​ ಖಾತ್ರಿಗೊಳ್ಳಲಿದೆ. ಪೂರ್ಣ ಸುದ್ದಿಗೆ ಈ ಸುದ್ದಿ ಲಿಂಕ್​ ಕ್ಲಿಕ್ ಮಾಡಿ.

9. ಗಾಜಾ ನಗರವನ್ನುಸುತ್ತುವರಿದ ಇಸ್ರೇಲ್ ಪಡೆ; ಆತಂಕ ಮೂಡಿಸಿದ ನಡೆ
ಗಾಜಾ: ಹಮಾಸ್ ನಿಯಂತ್ರಣದಲ್ಲಿರುವ ಗಾಜಾ ನಗರವನ್ನು (Gaza refugee camp) ತನ್ನ ಪಡೆಗಳು ಸಂಪೂರ್ಣವಾಗಿ ಸುತ್ತುವರೆದಿವೆ ಎಂದು ಇಸ್ರೇಲ್ ಮಿಲಿಟರಿ (Israeli military) ಹೇಳಿಕೊಂಡಿದೆ )Israel Palestine War). “ಹಮಾಸ್ ಭಯೋತ್ಪಾದಕ ಸಂಘಟನೆಯ ಕೇಂದ್ರವಾದ ಗಾಜಾ ನಗರವನ್ನು ಇಸ್ರೇಲ್ ಸೈನಿಕರು ಸುತ್ತುವರಿದಿದ್ದಾರೆ” ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ. “ಕದನ ವಿರಾಮದ ಪ್ರಸ್ತಾವ ಇಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಈ ಸುದ್ದಿ ಲಿಂಕ್​ ಕ್ಲಿಕ್ ಮಾಡಿ.

10. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ನಟ ಶಿವರಾಜ್ ಕುಮಾರ್
ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಅವರು (Shiva Rajkumar) ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದರಿಂದ ನಗರದ ವೈದೇಹಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪೂರ್ಣ ಸುದ್ದಿಗೆ ಈ ಸುದ್ದಿ ಲಿಂಕ್​ ಕ್ಲಿಕ್ ಮಾಡಿ.

Exit mobile version