ನವದೆಹಲಿ: ಭಾರತದಲ್ಲಿ ಲೈಂಗಿಕ ಮತ್ತು ಸಂಬಂಧಗಳ ಕುರಿತ ಶಿಕ್ಷಣವನ್ನು (Sex Education) ಪಠ್ಯದಲ್ಲಿ ಅಳವಡಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ದಶಕಗಳಿಂದ ಚರ್ಚಾ ವಿಷಯವಾಗಿದೆ(Text Books). ಈ ಕುರಿತೂ ಸ್ಪಷ್ಟವಾದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ, ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(CBSE)ಯ 9ನೇ ತರಗತಿಯ ಪಠ್ಯದಲ್ಲಿ ಡೇಟಿಂಗ್ ಆ್ಯಂಡ್ ರಿಲೇಷನ್‌ಶಿಪ್ಸ್ (Dating And Relationships) ಎಂಬ ಅಧ್ಯಾಯವನ್ನು ಸೇರಿಸಲಾಗಿದೆ! ಈ ಮೂಲಕ ಮಕ್ಕಳಲ್ಲಿ ಡೇಟಿಂಗ್ ಮತ್ತು ಸಂಬಂಧ ಕುರಿತು ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಈ ಚಾಪ್ಟರ್ ಕುರಿತಾದ ಮಾಹಿತಿಯು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ(Viral News).
9th class textbooks nowadays 🥰🙏🏻 pic.twitter.com/WcllP4vMn3
— khushi (@nashpateee) January 30, 2024
ಎಕ್ಸ್ ವೇದಿಕೆಯಲ್ಲಿ @nashpateee ಖಾತೆಯಲ್ಲಿ ಸಿಬಿಎಸ್‌ಇ 9ನೇ ತರಗತಿ ಡೇಟಿಂಗ್ ಆ್ಯಂಡ್ ರಿಲೇಷನ್‌ಶಿಪ್ಸ್ ಅಧ್ಯಾಯದ ಎರಡು ಪುಟಗಳ ಇರುವ ಫೋಟೋವನ್ನು ಷೇರ್ ಮಾಡಲಾಗಿದೆ. ಈ ಪೋಸ್ಟ್‌ಗೆ ಸಾಕಷ್ಟು ಲೈಕ್ಸ್ ಮತ್ತು ಕಮೆಂಟ್ಸ್ ಬಂದಿವೆ. ಕೆಲವರು ಸಿಬಿಎಸ್ಇ ಕ್ರಮವನ್ನು ಮೆಚ್ಚಿದ್ದಾರೆ. ಹಲವರು ವಿರೋಧಿಸಿದ್ದಾರೆ.
9 ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ಪುಸ್ತಕಗಳನ್ನು ಪರಿಚಯಿಸಿದ ಸಿಬಿಎಸ್‌ಇ ಪ್ರಗತಿಪರ ಹೆಜ್ಜೆಯನ್ನು ತೆಗೆದುಕೊಂಡಿದೆ. ಈ ಅಧ್ಯಾಯಗಳು ಸಂಪೂರ್ಣವಾಗಿ ಡೇಟಿಂಗ್ ಮತ್ತು ಸಂಬಂಧಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಚರ್ಚಿಸಲು ಮೀಸಲಾಗಿವೆ ಮತ್ತು ‘ಗೋಸ್ಟಿಂಗ್’, ‘ಕ್ಯಾಟ್‌ಫಿಶಿಂಗ್’ ಮತ್ತು ‘ಸೈಬರ್‌ಬುಲ್ಲಿಂಗ್’ ನಂತಹ ಜನಪ್ರಿಯ ಡೇಟಿಂಗ್ ಪದಗಳನ್ನು ಮಾಹಿತಿ ನೀಡಲಾಗಿದೆ. ಕ್ರಷ್‌ಗಳು ಮತ್ತು ”ವಿಶೇಷ” ಸ್ನೇಹಗಳಂತಹ ವಿಷಯಗಳನ್ನು ಸರಳ ಕಥೆಗಳು ಮತ್ತು ಉದಾಹರಣೆಗಳ ಮೂಲಕ ವಿವರಿಸಲಾಗಿದೆ.
ಪ್ರಖ್ಯಾತ ಡೇಟಿಂಗ್ ಆ್ಯಪ್ ಟಿಂಡರ್ ಇಂಡಿಯಾ ಕೂಡ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದೆ. ನೆಕ್ಸ್ಟ್ ಚಾಪ್ಟರ್, ಹೌ ಟು ಡೀಲ್ ವಿಥ್ ಬ್ರೇಕ್ಸ್‌ಅಪ್(ಮುಂದಿನ ಅಧ್ಯಾಯ; ಬ್ರೇಕ್‌ಅಪ್ಸ್ ನಿರ್ವಹಣೆ ಹೇಗೆ?) ಎಂಬ ಅಧ್ಯಾಯ ಎಂದು ಪೋಸ್ಟ್ ಮಾಡಿದ್ದು, ಸಾಕಷ್ಟು ಜನರು ಪ್ರತಿಕ್ರಿಯಿಸಿದ್ದಾರೆ.
next chapter : how to deal with breakups 😭
— Tinder India (@Tinder_India) January 31, 2024
ಈ ಸುದ್ದಿಯನ್ನೂ ಓದಿ: Viral News: ‘ಅಸ್ವಾಭಾವಿಕ ಲೈಂಗಿಕಕ್ರಿಯೆ’ಗೆ ಒತ್ತಾಯಿಸುತ್ತಿದ್ದ ಗಂಡನ ಶಿಶ್ನವನ್ನೇ ಬಾಯಿಂದ ಕತ್ತರಿಸಿದ ಹೆಂಡತಿ!