Site icon Vistara News

GST: ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮೇಲೆ ಗರಿಷ್ಠ ಜಿಎಸ್‌ಟಿ ಸೆಸ್ ಮಿತಿ ನಿಗದಿ

Center Caps Maximum GST Cess On Pan Masala And Tobacco products

ನವದೆಹಲಿ: ಪಾನ್ ಮಸಾಲಾ, ಸಿಗರೇಟ್ಸ್ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ವಿಧಿಸಲಾಗುವ ಜಿಎಸ್‌ಟಿ(GST) ಪರಿಹಾರ ಸೆಸ್ ಗರಿಷ್ಠ ದರವನ್ನು ಸರ್ಕಾರವು ಮಿತಿಗೊಳಿಸಿದೆ ಮತ್ತು ಅವುಗಳ ರಿಟೇಲ್ ಮಾರಾಟ ಹೆಚ್ಚಿನ ಬೆಲೆಗೆ ಲಿಂಕ್ ಮಾಡಿದೆ. 2013ರ ಹಣಕಾಸು ವಿಧೇಯಕದ ಭಾಗವಾಗಿಯೇ ಸೆಸ್ ಮಿತಿಗೊಳಿಸಲಾಗಿದೆ. ಕಳೆದ ಶುಕ್ರವಾರ ಈ ಹಣಕಾಸು ವಿಧೇಯಕಕ್ಕೆ ಲೋಕಸಭೆ ತನ್ನ ಒಪ್ಪಿಗೆಯನ್ನು ನೀಡಿದೆ.

ಈಗ ಸರ್ಕಾರ ಮಾಡಿರುವ ತಿದ್ದುಪಡಿಯ ಪ್ರಕಾರ, ಪಾನ್ ಮಸಾಲಾಗೆ ಗರಿಷ್ಠ ಜಿಎಸ್‌ಟಿ ಪರಿಹಾರ ಸೆಸ್ ದರವು ಪ್ರತಿ ಯೂನಿಟ್‌ಗೆ ಚಿಲ್ಲರೆ ಮಾರಾಟದ ಬೆಲೆಯ ಶೇ.51 ಆಗಿರಲಿದೆ. ಪ್ರಸಕ್ತ ಈ ಮಿತಿ, ಅದರ ಮೌಲ್ಯಕ್ಕೆ ಶೇ.135 ವಿಧಿಸಲಾಗುತ್ತಿತ್ತು.

ತಂಬಾಕು ದರವನ್ನು ಪ್ರತಿ ಸಾವಿರ ಕಡ್ಡಿಗಳಿಗೆ ರೂ. 4,170 ಜತೆಗೆ, 290 ಪ್ರತಿಶತ ಮೌಲ್ಯಕ್ಕೆ ತಕ್ಕಂತೆ ಅಥವಾ ಪ್ರತಿ ಯೂನಿಟ್‌ಗೆ ಚಿಲ್ಲರೆ ಮಾರಾಟದ ಬೆಲೆಯ ಶೇ.100ಕ್ಕೆ ನಿಗದಿಪಡಿಸಲಾಗಿದೆ. ಇಲ್ಲಿಯವರೆಗೆ, ಗರಿಷ್ಠ ದರವು ಪ್ರತಿ ಸಾವಿರ ಕಡ್ಡಿಗಳಿಗೆ ರೂ. 4,170 ರೂ. ಜತೆಗೆ ಅದರ ಮೌಲ್ಯಕ್ಕೆ ಅನುಗುಣವಾಗಿ 290 ಪ್ರತಿಶತವಿತ್ತು. ಸೆಸ್ ಅನ್ನು ಅತ್ಯಧಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವಾದ 28 ಪ್ರತಿಶತಕ್ಕಿಂತ ಹೆಚ್ಚಾಗಿ ವಿಧಿಸಲಾಗುತ್ತದೆ.

ಇದನ್ನೂ ಓದಿ: GST Collection : ಫೆಬ್ರವರಿಯಲ್ಲಿ 1.50 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, 12% ಹೆಚ್ಚಳ

ಹಣಕಾಸು ವಿಧೇಯಕ ತಿದ್ದುಪಡಿಯ ಮೂಲಕ ಜಿಎಸ್‌ಟಿ ಪಹಿರಾ ಸೆಸ್ ಕಾಯ್ದೆಯ ಶೆಡ್ಯೂಲ್ 1ರಲ್ಲಿ ಬದಲಾವಣೆ ಮಾಡಲಾಗಿದೆ. ಆ ಮೂಲಕ ಪಾನ್ ಮಸಾಲಾ ಮತ್ತು ಇತರ ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ಗರಿಷ್ಠ ಸೆಸ್ ಮಿತಿಯನ್ನುಗೊಳಿಸಬಹುದಾಗಿದೆ. ಈಗ ಬದಲಾವಣೆ ಮಾಡಲಾಗಿರುವ ಸೆಸ್ ಮಿತಿಯು, ಜಿಎಸ್‌ಟಿ ಕೌನ್ಸಿಲ್ ನೋಟಿಫಿಕೇಷನ್ ಹೊರಡಿಸಿದ ಮೇಲಷ್ಟೇ ಅನ್ವಯವಾಗಲಿದೆ.

Exit mobile version