Site icon Vistara News

CAG Report: ಕೇಳದೇ ಇದ್ದರೂ ಕೇಂದ್ರ ಸರ್ಕಾರವು ಎಸ್‌ಬಿಐಗೆ 8,800 ಕೋಟಿ ರೂ. ನೀಡಿದ್ದೇಕೆ?

SBI

SBI hikes FD interest rates by up to 50 bps; check latest fixed deposit rates here

ನವದೆಹಲಿ: ಸೋಮವಾರ ಸಂಸತ್ತಿನಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್-CAG(ನಿಯಂತ್ರಕರು ಮತ್ತು ಮಹಾಲೇಖಪಾಲರು) ವರದಿಯನ್ನು ಮಂಡಿಸಲಾಗಿದ್ದು, ಬೇಡಿಕೆ ಇಲ್ಲದೆಯೂ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ(SBI)ಗೆ 8800 ಕೋಟಿ ರೂ. ಹಣವನ್ನು ಭಾರತ ಸರ್ಕಾರ ನೀಡಿದೆ ಎಂದು ತಿಳಿಸಲಾಗಿದೆ. ಮರುಬಂಡವಾಳೀಕರಣದ ಭಾಗವಾಗಿ ಹಣಕಾಸು ಸೇವೆಗಳ ಇಲಾಖೆಯು 2018ರ ಆರ್ಥಿಕ ವಿತ್ತ ವರ್ಷದಲ್ಲಿ ಈ ಹಣವನ್ನು ನೀಡಿದೆ(CAG Report).

ಸರ್ಕಾರವು ಸಾಲದ ಬೆಳವಣಿಗೆಗಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮರುಬಂಡವಾಳವನ್ನು ನೀಡುತ್ತದೆ. ಆ ಮೂಲಕ ನಿಯಂತ್ರಕ ಬಂಡವಾಳದ ಅವಶ್ಯಕತೆಗಳನ್ನು ಪೂರೈಸುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ ಫ್ರೇಮ್‌ವರ್ಕ್ ಅಡಿಯಲ್ಲಿ ಉತ್ತಮ ಕಾರ್ಯಕ್ಷಮತೆಯ ಸಾಲದಾತರನ್ನು ಅದರಿಂದ ಹೊರಬರಲು ಮತ್ತು ವಿಲೀನದ ಖಾತೆಯಲ್ಲಿ ಬಂಡವಾಳದ ಅಗತ್ಯವನ್ನು ಈ ಮೂಲಕ ಪೂರೈಸುತ್ತದೆ.

ವರದಿಯ ಪ್ರಕಾರ, ಗಮನಿಸಬೇಕಾದ ಸಂಗತಿ ಏನೆಂದರೆ- ಬಂಡವಾಳದ ಅಗತ್ಯ ಕುರಿತಾದ ಮೌಲ್ಯಮಾಪನವನ್ನು ಕೈಗೊಳ್ಳದೇ ಹಣಕಾಸು ಇಲಾಖೆ ಈ ಹಣವನ್ನು ನೀಡಿದೆ. ಮರು ಬಂಡವಾಳೀಕರಣ ಭಾಗವಾಗಿ ಹಣ ನೀಡುವ ಮೊದಲು ಹಣಕಾಸು ಇಲಾಖೆಯು, ಹಣದ ಅಗತ್ಯಯ ಬಗ್ಗೆ ಪರಿಶೀಲನೆ ನಡೆಸುತ್ತದೆ. ಆದರೆ, ಎಸ್‌ಬಿಐಗೆ ಹಣ ನೀಡುವಾಗ ಈ ರೀತಿಯ ಯಾವುದೇ ಪರಿಶೀಲನೆಯನ್ನು ವಿತ್ತ ಸಚಿವಾಲಯವು ನಡೆಸಿಲ್ಲ.

ಇದನ್ನೂ ಓದಿ: Interest rate hike : ರಿಸರ್ವ್‌ ಬ್ಯಾಂಕ್‌ನಿಂದ ಏಪ್ರಿಲ್‌ನಲ್ಲಿ ಬಡ್ಡಿ ದರ ಏರಿಕೆಗೆ ಬ್ರೇಕ್‌ ಸಂಭವ : ಎಸ್‌ಬಿಐ ರಿಸರ್ಚ್

ಸಾಲದಾತ ಬ್ಯಾಂಕ್ ಎಸ್‌ಬಿನಿಂದ ಬೇಡಿಕೆ ಇಲ್ಲದಿದ್ದರೂ 2017-18 ಹಣಕಾಸು ವರ್ಷದಲ್ಲಿ ಎಸ್‌ಬಿಐಗೆ 8,800 ಕೋಟಿ ರೂ.ಗಳನ್ನು ಸಾಲದ ಬೆಳವಣಿಗೆಗಾಗಿ ನೀಡಲಾಗಿದೆ. ಮರುಬಂಡವಾಳೀಕರಣದ ಮೊದಲು ಹಣಕಾಸು ಸೇವೆಗಳ ಇಲಾಖೆಯು ತನ್ನದೇ ಆದ ಮಾನದಂಡದ ಅಭ್ಯಾಸದ ಪ್ರಕಾರ ಬಂಡವಾಳದ ಅಗತ್ಯತೆಯ ಮೌಲ್ಯಮಾಪನವನ್ನು ನಡೆಸಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ 2019-20ರ ಸಾಲಿನಲ್ಲಿ 798 ಕೋಟಿ ರೂ. ಮರು ಬಂಡವಾಳೀಕರಣದ ಬೇಡಿಕೆ ಇಟ್ಟಿತ್ತು. ಸರ್ಕಾರವು ಬೇಡಿಕೆಗಿಂತಲೂ ಹೆಚ್ಚು ಅಂದರೆ 831 ಕೋಟಿ ರೂ. ನೀಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Exit mobile version